ನೇಪಾಳ ಸಂತ್ರಸ್ತರಿಗೆ ಬೀದರ್‌ನ ಬ್ರಿಮ್ಸು ಕಾಲೇಜಿನ ವಿದ್ಯಾರ್ಥಿಗಳ ನೆರವು

ಸುದ್ದಿಗಳು - 0 Comment
Issue Date : 12.05.2015

ಬೀದರ: ಬೀದರ್‌ನ ಬ್ರಿಮ್ಸು ಕಾಲೇಜಿನ ಸ್ವಯಂಸೇವಕ ವಿದ್ಯಾರ್ಥಿಗಳು ನೇಪಾಳದ ಭೂಕಂಪ ಸಂತ್ರಸ್ತರ ನೆರವಿಗಾಗಿ ತಮ್ಮ ಕಾಲೇಜು ಮತ್ತು ಹಾಸ್ಟೆಲ್‌ನಲ್ಲಿ ವಿದ್ಯಾರ್ಥಿ ಮತ್ತು ವಿದ್ಯಾರ್ಥಿನಿಯರಿಂದ ನಿಧಿ ಸಂಗ್ರಹ ಮಾಡಿದರು.
ಕಾರ್ಯಕ್ರಮದಲ್ಲಿ ನಗರ ಕಾಲೇಜು ವಿದ್ಯಾರ್ಥಿ ಪ್ರಮುಖ ದತ್ತಾತ್ರೆಯ ತುಪ್ಪದ ಉಪಸ್ಥಿತ ಹಿರಿಯರ ಪರಿಚಯ ಮಾಡಿಕೊಟ್ಟರು. ನಗರ ಸೇವಾ ಪ್ರಮುಖ ವೆಂಕಟ ಪಾಟೀಲ ವೈಯಕ್ತಿಕ ಗೀತೆ ಹೇಳಿದರು. ಆರೆಸ್ಸೆಸ್ ವಿಭಾಗ ಸಹಕಾರ್ಯ ವಾಹ ಹನುಮಂತರಾವ ಪಾಟೀಲ ಸಂಘದ ಸೇವಾ ಕಾರ್ಯ ಕ್ರಮಗಳ ಕುರಿತು ಮತ್ತು ನೇಪಾಳದಲ್ಲಿ ಭೀಕರ ಭೂಕಂಪ ದಿಂದುಂಟಾದ ಶೋಚನಿಯ ಸ್ಥಿತಿಯ ಕುರಿತು ಮಾಹಿತಿ ಯನ್ನು ನೀಡುತ್ತ ‘ಸಂಘದ ಸ್ವಯಂಸೇವಕರು ಕೈಗೊಂಡ ಪರಿಹಾರ ಕಾರ್ಯವು ಶ್ಲಾಘನೀಯವಾಗಿದೆ. ಸಾಮಾಜಿಕ ಚಟುವ ಟಿಕೆಗಳಷ್ಟೆ ಅಲ್ಲದೆ ರಾಷ್ಟ್ರೀಯ ವಿಪತ್ತುಗಳು ಮತ್ತು ಪ್ರಕತಿ ಕೋಪದಂತಹ ಸಂದರ್ಭದಲ್ಲಿ ತಕ್ಷಣವೇ ಸ್ವಯಂಸೇವಕರು ಸ್ಪಂದಿಸುತ್ತಾರೆ. ವೈದ್ಯಕೀಯ ಕಾಲೇಜು ವಿದ್ಯಾರ್ಥಿಗಳು ನಿಧಿ ಸಂಗ್ರಹದ ಯೋಜನೆಯನ್ನು ಹಾಕಿಕೊಂಡು ಕಾರ್ಯಕ್ರಮ ಯಶಸ್ವಿಗೊಳಿಸಿದ್ದೀರಿ. ಇದು ದೇಶದ ಪ್ರತಿ ಸ್ವಯಂಸೇವಕ ತೋರುವ ಕರ್ತವ್ಯ’ ಎಂದರು.
ನೇಪಾಳದ ಸಂತ್ರಸ್ತರಿಗಾಗಿ ನಡೆದಿರುವ ಸೇವಾಕಾರ್ಯದ ಕುರಿತು ವಿವರಿಸಿದರು. ಕಲಬುರ್ಗಿ ವಿಭಾಗ ವ್ಯವಸ್ಥಾ ಪ್ರಮುಖ ರಾದ ಎನ್.ಕಷ್ಣರೆಡ್ಡಿ ಯವರಿಗೆ ಬ್ರಿಮ್ಸ ವಿದ್ಯಾರ್ಥಿಗಳು ಸಂಗ್ರಹಿತ ನಿಧಿ ರೂ. 17500.00ಗಳನ್ನು ಸಮರ್ಪಿಸಿದರು.

   

Leave a Reply