ಪರಿವರ್ತನೆಯತ್ತ ಕರ್ನಾಟಕ

ಲೇಖನಗಳು - 0 Comment
Issue Date :

-ವೃಷಾಂಕ

1952ರ ಲೋಕಸಭೆ ಮತ್ತು ವಿಧಾನಸಭಾ ಚುನಾವಣೆಯಲ್ಲಿ ಕರ್ನಾಟಕದಲ್ಲಿ ಜನಸಂಘಕ್ಕೆ ದಕ್ಕಿದ್ದ ಮತ ಕೇವಲ 4.2% ಮತ್ತು 2.3%. 2008ರ ವಿಧಾನಸಭಾ ಚುನಾವಣೆಯಲ್ಲಿ 33.86% ಹಾಗೂ 2009ರ ಲೋಕಸಭಾ ಚುನಾವಣೆಯಲ್ಲಿ 41.63% ಮತಗಳನ್ನು ಬಿಜೆಪಿ ಗಳಿಸಿತ್ತು. 2014ರ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಗಳಿಸಿದ್ದು 43.29% ಮತಗಳನ್ನು. 1999ರ ಚುನಾವಣೆಯಲ್ಲಿ ಬಿಜೆಪಿ ಗೆದ್ದು ಅಟಲ್ ಬಿಹಾರಿ ವಾಜಪೇಯಿ ಪ್ರಧಾನಮಂತ್ರಿಯಾದಾಗಲೂ ಕರ್ನಾಟಕದಲ್ಲಿ ಬಿಜೆಪಿಗೆ ದೊರೆತದ್ದು 27% ಮತಗಳು ಮಾತ್ರ. ಅದಾದ ನಂತರ ನಡೆದ ಮೂರೂ ಚುನಾವಣೆಗಳಲ್ಲಿ ಬಿಜೆಪಿ ತನ್ನ ಪಾಲನ್ನು ಹೆಚ್ಚಿಸಿಕೊಂಡಿದೆ. ಅಂದರೆ, 2004 ಲೋಕಸಭಾ ಚುನಾವಣೆಯಲ್ಲಿ  34.75%, 2009ರಲ್ಲಿ 41.63% ಮತ್ತು 2014ರಲ್ಲಿ 43.29%.

ಕೇಂದ್ರದಲ್ಲಿ ಬಿಜೆಪಿಯೇ ಅಧಿಕಾರದಲ್ಲಿರಬೇಕು ಎಂದು ರಾಜ್ಯದ ಜನತೆ ಆಶಿಸುತ್ತಿರುವಂತೆ ಮೇಲ್ನೋಟಕ್ಕೆ ಕಾಣುತ್ತದಾದರೂ, ಮತದಾರ ಹೆಡ್ಡನಲ್ಲ ಎಂಬುದನ್ನೂ ಇದು ಪ್ರತಿನಿಧಿಸುತ್ತದೆ. ಯಾವುದೇ ರಾಜಕೀಯ ಪಕ್ಷ ಜಾತಿ, ಹಣದ ಮೂಲಕ ಮತಗಳನ್ನು ಪಡೆಯಬಹುದಾದರೂ, ಎಲ್ಲಾ ಮತಗಳನ್ನೂ ಖರೀದಿಸಲು ಸಾಧ್ಯವಿಲ್ಲ. ಖರೀದಿಸಲು ಸಾಧ್ಯವಿಲ್ಲದ ಮತಗಳೇ ಅಭ್ಯರ್ಥಿಯ ಸೋಲು-ಗೆಲುವನ್ನು ನಿರ್ಧರಿಸುತ್ತವೆ. ವಿಧಾಸಭಾ ಮತ್ತು ಲೋಕಸಭಾ ಚುನಾವಣೆಯಲ್ಲಿ ಬೀಳುವ ಮತಗಳೇ ಈ ವಾದವನ್ನು ಒಪ್ಪುತ್ತವೆ.

 ರಾಜ್ಯದ ಎಲ್ಲಾ ವಿಧಾನಸಭಾ ಕ್ಷೇತ್ರಗಳಲ್ಲಿ ಬಿಜೆಪಿ ನಡೆಸುತ್ತಿರುವ ಪರಿವರ್ತನಾ ಯಾತ್ರೆಯು ಬಿಜೆಪಿಗೆ 38% ರಷ್ಟು ಮತಗಳನ್ನು ಪಡೆಯುವಂತೆ ಮಾಡಿದರೆ ಪಕ್ಷ ಗೆಲುವು ಕಷ್ಟವಲ್ಲ. 2014ರ ಚುನಾವಣೆಯಲ್ಲಿ ಪಕ್ಷವು 43.29% ಮತಗಳನ್ನು ಪಡೆದಿರುವ ಕಾರಣ ಈ ಬಾರಿಯ ಚುನಾವಣೆಯಲ್ಲಿ 38% ಗಡಿ ದಾಟುವುದು ಕಷ್ಟವಾಗಲಿಕ್ಕಿಲ್ಲ. 2013ರ ವಿಧಾನಸಭಾ ಚುನಾವಣೆಯಲ್ಲಿ ಪಕ್ಷ ಪಡೆದದ್ದು 19.89% ಮತಗಳನ್ನು ಮಾತ್ರ. ಏಕೆಂದರೆ ಆ ಹೊತ್ತಿಗೆ ಪಕ್ಷವು ಮೂರು ಹೋಳಾಗಿತ್ತು. ಮೂಲ ಪಕ್ಷದಿಂದ ಸಿಡಿದು ಪ್ರತ್ಯೇಕ ಅಸ್ಥಿತ್ವವನ್ನು ಕಂಡುಕೊಂಡಿದ್ದ ಕೆಜೆಪಿ ಮತ್ತು ಬಿಎಸ್‌ಆರ್‌ಸಿ ತಾಯಿಯನ್ನು ಹುಡುಕಿಕೊಂಡು ಬಂದಿವೆ. 2013ರಲ್ಲಿ ಬಹಳಷ್ಟು ಕ್ಷೇತ್ರಗಳು ಅತ್ಯಂತ ಕಡಿಮೆ ಮತಗಳ ಅಂತರದಲ್ಲಿ ಕೈತಪ್ಪಿಹೋಗಿತ್ತು. ಒಂದುವೇಳೆ ಬಿಜೆಪಿ ಚೂರಾಗದೇ ಇದ್ದಿದ್ದಲ್ಲಿ ಕಾಂಗ್ರೆಸ್ ಬಹುಮತ ಪಡೆಯದೆ ತ್ರಿಶಂಕು ಸ್ಥಿತಿ ಏರ್ಪಡುತ್ತಿತ್ತು. ಬಿಜೆಪಿ ಹೊಳಾದದ್ದೇ ಕಾಂಗ್ರೆಸ್ ಗೆಲುವಿಗೆ ಕಾರಣವಾಯಿತೇ ಹೊರತು ವೈಯಕ್ತಿಕ ಸಾಧನೆಯೇನಿಲ್ಲ.

 ಹಲವು ಚುನಾವಣಾ ಸಮೀಕ್ಷೆಗಳು ಮುಂಬರುವ ಚುನಾವಣೆಯಲ್ಲಿ ಬಿಜೆಪಿಯ ಗೆಲುವನ್ನು ಅಲ್ಲಗಳೆಯುತ್ತವಾದರೂ, ಸರಿಯಾದ ತಂತ್ರಗಾರಿಕೆ ಹೆಣೆದದ್ದೇ ಆದಲ್ಲಿ ಬಿಜೆಪಿಯ ಗೆಲುವು ಖಚಿತ. ಚುನಾವಣೆಯ ಹಿಂದಿನ ದಿನ ನಡೆಸುವ ಕೋಟ್ಯಾಂತರ ರೂ. ಶಂಕುಸ್ಥಾಪನೆಯನ್ನು ಕಾಂಗ್ರೆಸ್ ನಡೆಸುತ್ತಿದೆ. ರಸ್ತೆ ದುರಸ್ಥಿಯನ್ನು ಕಂಡು 4 ವರ್ಷಗಳಾಗಿದ್ದ ಗ್ರಾಮೀಣ ಪ್ರದೇಶಗಳಲ್ಲಿ ಗುತ್ತಿಗೆದಾರರು ಕೆಲಸಕ್ಕಿಳಿದ್ದಾರೆ. ಸರ್ಕಾರದ ಈ ಕಪಟವನ್ನು ಅರಿಯದಷ್ಟು ದಡ್ಡ ಮತದಾರನಲ್ಲ.

 

   

Leave a Reply