ಪ್ರಚಂಡ ಭಾರತ

ಪ್ರಚಂಡ ಭಾರತ - 0 Comment
Issue Date : 05.10.2013

ಸಂಸ್ಕೃತಿ, ಭಾಷೆ, ಕಲೆ, ಧಾರ್ಮಿಕ ಆಚರಣೆಗಳು,ವೇಷ-ಭೂಷಣ,ಆಹಾರವೈವಿಧ್ಯತೆಗಳು, ಹವಾಮಾನ, ಎಲ್ಲ ವಿಷಯಗಳಲ್ಲಿಯೂ ನಮ್ಮ ದೇಶವು ಕಾಶ್ಮೀರದಿಂದ ಕನ್ಯಾಕುಮಾರಿವರೆಗೂ ವ್ಯಾಪಿಸಿದ ವಿಶಾಲ ಭೂ ಪ್ರದೇಶದಲ್ಲಿ  ಅನೇಕ ವೈವಿಧ್ಯತೆಗಳನ್ನು ತನ್ನ ಒಡಲಲ್ಲಿ ಹುದುಗಿಸಿಕೊಂಡಿದೆ. ಸುಮಾರು 5000 ವರ್ಷಗಳಷ್ಟು ಪುರಾತನ ಇತಿಹಾಸ ಹೊಂದಿದೆ.  ತನ್ನ ಇತಿಹಾಸದಲ್ಲಿ ಒಮ್ಮೆಯೂ ಕೂಡ ಯಾವ ದೇಶದ ಮೇಲೂ ತಾನಾಗಿಯೇ ಆಕ್ರಮಣ ಮಾಡಿಲ್ಲ. ಯುದ್ಧವನ್ನೇ ತ್ಯಜಿಸಿದ ಅಶೋಕನಂತಹ ಮಹಾರಾಜರುಗಳು ನಮ್ಮ ನೆಲವನ್ನು ಆಳಿದ್ದಾರೆ. ಜಗತ್ತಿಗೆ ಸೊನ್ನೆಯನ್ನು ಕೊಟ್ಟವರು ನಾವು. ರಾಮಾಯಣ, ಮಹಾಭಾರತ,ಕಾವ್ಯಗಳು, ಭಗವದ್ಗೀತೆ,ವೇದಗಳು, ಉಪನಿಷದ್ ಗಳ ಮೂಲಕ ಆಧ್ಯಾತ್ಮಿಕ ಜ್ಞಾನವನ್ನು ಅದರ ಜೊತೆಗೆ ಉನ್ನತ ಜೀವನಾದರ್ಶವನ್ನು ಜಗತ್ತಿಗೆ ಕೊಟ್ಟ ಭವ್ಯ ಪರಂಪರೆ ನಮ್ಮದು. ಇಂತಹ ಪ್ರಚಂಡ ಭಾರತವನ್ನು ಭಾರತೀಯರಿಗೆ ಪರಿಚಯ ಮಾಡಿಕೊಡುವ ಪ್ರಯತ್ನ ವೇ ಈ ಅಂಕಣ.

 

   

Leave a Reply