ಪ್ರತ್ಯೇಕ ರಿಲಿಜನ್ ಹೆಸರಿನಲ್ಲಿ ಪರಿಶಿಷ್ಟರಿಗೆ ಮೋಸ?

ಲೇಖನಗಳು - 0 Comment
Issue Date :

-ಶ್ರೀಧರ ಪ್ರಭು

 ಬಸವ ಕಲ್ಯಾಣದಿಂದ ಮೈಸೂರಿನವರೆಗೂ ರಾಜ್ಯದಾದ್ಯಂತ ಉರಿಲಿಂಗ ಪೆದ್ದಿ ಸಂಸ್ಥಾನ ಮಠಗಳಿವೆ. ದಲಿತ ಸಮುದಾಯದ ಪೆದ್ದಣ್ಣ ಮತ್ತವರ ಸತಿ, ಸುಪ್ರಸಿದ್ಧ ಶರಣೆ ಹಾಗೂ ವಚನಕಾರ್ತಿಯಾದ ಕಾಳವ್ವೆ ಗುರು ಉರಿಲಿಂಗರಿಂದ ವೀರಶೈವ ದೀಕ್ಷೆ ಪಡೆದು ಸ್ಥಾಪಿಸಿದ ಮಠವಿದು. ದಲಿತ ಸಮುದಾಯಕ್ಕೆ ಸೇರಿದ ಸತಿ-ಶರಣರನ್ನು ಮಠಾಧಿಪತಿಗಳನ್ನಾಗಿ ನೇಮಿಸಿದ ಕ್ರಾಂತಿಕಾರಿ ಸಂಪ್ರದಾಯದ ಈ ಮಠಕ್ಕೆ ನಡೆದುಕೊಳ್ಳುವ ಮತ್ತಿತರ ದಲಿತ ಸಮುದಾಯದ ಲಿಂಗಾಯತರು ಕರ್ನಾಟಕದಾದ್ಯಂತ ಲಕ್ಷಾಂತರ ಸಂಖ್ಯೆಯಲ್ಲಿದ್ದಾರೆ.  ಒಂದು ಅಂದಾಜಿನ ಪ್ರಕಾರ ಲಿಂಗಾಯತರ 99 ಜಾತಿಗಳಲ್ಲಿ ಸುಮಾರು 20 ಜಾತಿಗಳು ದಲಿತ ಸಮುದಾಯಕ್ಕೆ ಸೇರಿವೆ. ಇವರನ್ನು ಒಟ್ಟು ಸೇರಿಸಿದರೆ ಲಿಂಗಾಯತರ ಜನಸಂಖ್ಯೆಯ ಸುಮಾರು 7%-8%  ಸಂಖ್ಯೆಯಷ್ಟಾಗುತ್ತಾರೆ. ಸಧ್ಯಕ್ಕೆ ಇವರಿಗೆ ಪರಿಶಿಷ್ಟ ಜಾತಿಯಡಿ ಮೀಸಲಾತಿ ಸೌಲಭ್ಯ ಸಿಗುತ್ತಿದೆ.

 ಒಂದು ವೇಳೆ ಸಿದ್ದರಾಮಯ್ಯ ಸರಕಾರದ ಪ್ರಸ್ತಾವನೆಯನ್ನು ಕೇಂದ್ರ ಸರಕಾರ ಒಪ್ಪಿಕೊಂಡರೆ ತಕ್ಷಣದಿಂದಲೇ ಇವರುಗಳೆಲ್ಲರೂ ಮೀಸಲಾತಿ ಸೌಲಭ್ಯದಿಂದ ವಂಚಿತರಾಗುತ್ತಾರೆ. ಇವರು ಲಿಂಗಾಯತ ’ಧರ್ಮ’ದಿಂದ ಮತ್ತೆ ಹಿಂದುಗಳಾದಲ್ಲಿ ಮಾತ್ರ ಮತ್ತೆ ಮೀಸಲಾತಿ ಸೌಲಭ್ಯ ದೊರೆಯುತ್ತದೆ.

 ಬಾಬಾ ಸಾಹೇಬ್ ಅಂಬೇಡ್ಕರ್ ಸಂರಚಿತ ನಮ್ಮ ಸಂವಿಧಾನದ 341 ನೇ ಪರಿಚ್ಚೇದದಡಿಯಲ್ಲಿ ರಚಿಸಿದ ಸಂವಿಧಾನ (ಪರಿಶಿಷ್ಟ ಜಾತಿಗಳ) ಆದೇಶ, 1950 ರ ಪ್ರಕಾರ ಪರಿಶಿಷ್ಟ ಜಾತಿಗೆ ಸೇರಿದ ಹಿಂದೂಗಳಿಗೆ ಮಾತ್ರ ಮೀಸಲಾತಿ ಸೌಲಭ್ಯ ಕಲ್ಪಿಸಲಾಗಿತ್ತು. ಆದರೆ 1990 ರಲ್ಲಿ ಬೌದ್ಧ ಮತ್ತು ಸಿಖ್ಖರಲ್ಲಿನ ಪರಿಶಿಷ್ಟ ಜಾತಿಗಳವರಿಗೂ ಮೀಸಲಾತಿ  ಕಲ್ಪಿಸಲಾಯಿತು. ಸಧ್ಯಕ್ಕೆ ಬೇರೆ ಯಾವ ಧರ್ಮದಲ್ಲಿರುವ ಪರಿಶಿಷ್ಟ ಜಾತಿಗಳವರಿಗೆ ಮೀಸಲಾತಿ ಸೌಲಭ್ಯ ಕಲ್ಪಿಸಲು ಸಂವಿಧಾನದಲ್ಲಿ ಅವಕಾಶವಿಲ್ಲ.

 ದಲಿತ ಕ್ರೈಸ್ತರನ್ನು ಪರಿಶಿಷ್ಟ ಜಾತಿಗೆ ಸೇರಿಸಬೇಕೆಂದು ಸುಪ್ರೀಂ ಕೋರ್ಟಿನಲ್ಲಿ ಮೊಕದ್ದಮೆ ಹೂಡಲಾಗಿದೆಯಾದರೂ ಇಂದಿನವರೆಗೂ ತೀರ್ಪು ಬಂದಿಲ್ಲ. ಈಗಿರುವ ಕಾನೂನಿನ ಪ್ರಕಾರ ಹಿಂದು, ಬೌದ್ಧ ಮತ್ತು ಸಿಖ್ಖರನ್ನು ಹೊರತುಪಡಿಸಿ ಬೇರೆ ಯಾವ ಧರ್ಮದವರನ್ನೂ ಪರಿಶಿಷ್ಟ ಜಾತಿಗೆ ಸೇರಿಸುವಂತಿಲ್ಲ. ಹಾಗಾಗಿ ದಲಿತ ಕ್ರೈಸ್ತರನ್ನು ಒಬಿಸಿ ಪಟ್ಟಿಗೆ ಸೇರಿಸಲಾಗಿದೆ. ಹಾಗೆಯೇ ಮುಸಲ್ಮಾನರಲ್ಲಿನ ಹಿಂದುಳಿದ ವರ್ಗದವರನ್ನೂ ಒಬಿಸಿ ಪಂಗಡಕ್ಕೇ ಸೇರಿಸಲಾಗಿದೆ. ಒಂದು ವೇಳೆ ದಲಿತ ಕ್ರೈಸ್ತರಾಗಲಿ, ದಲಿತ ಮುಸಲ್ಮಾನರಾಗಲಿ ಹಿಂದು ಧರ್ಮಕ್ಕೆ ಮರಳಿ ತಮ್ಮ ಪೂರ್ವಜರ ಜಾತಿಗೆ ಸೇರಿಕೊಂಡರೆ ಅವರಿಗೆ ಪರಿಶಿಷ್ಟ ಜಾತಿಯಡಿ ಮೀಸಲಾತಿ ಕಲ್ಪಿಸಬಹುದೆಂದು ಸುಪ್ರೀಂ ಕೋರ್ಟ್ 2015 ರಲ್ಲಿ ತೀರ್ಪಿತ್ತಿದೆ. ಹಿಂದೊಮ್ಮೆ ಒಂದು ತಲೆಮಾರಿನ ಹಿಂದೆ ಹಿಂದುಗಳಾಗಿದ್ದವರಿಗೆ ಮಾತ್ರ ಮೀಸಲಾತಿ ಕಲ್ಪಿಸಬಹುದೆಂದು ತೀರ್ಪಿತ್ತಿದ್ದ ಸುಪ್ರೀಂ ಕೋರ್ಟ್ 2015 ರ ತೀರ್ಪಿನಲ್ಲಿ ಎಷ್ಟೋ ತಲೆಮಾರುಗಳ ಹಿಂದೆ ಮತಾಂತರವಾದವರೂ ಸಹ ಹಿಂದೂಧರ್ಮಕ್ಕೆ ಮರಳಿದರೆ  ಅವರನ್ನು ಪರಿಶಿಷ್ಟ ಜಾತಿಯಡಿ ಮೀಸಲಾತಿಗೆ ಪರಿಗಣಿಸಬೇಕೆಂದು ತೀರ್ಪಿತ್ತಿದೆ. ಸೆಕ್ಯುಲರ್ ವಾದಿಗಳಿಗೆ ಗೊತ್ತಿರಲಿ, ನ್ಯಾಯಮೂರ್ತಿಗಳಾದ ದೀಪಕ್ ಮಿಶ್ರ ಮತ್ತು ಗೋಪಾಲಗೌಡರ ಪೀಠ ನೀಡಿದ ಈ  ತೀರ್ಪಿನಲ್ಲಿ ಬಾಬಾ ಸಾಹೇಬ್ ಅಂಬೇಡ್ಕರ್ ಸಮಗ್ರ ಬರಹ ಶ್ರೇಣಿ,  ಜೇಮ್ಸ್ ಮೆಸ್ಸಿ ಲೇಖನಗಳು, ಮಂಡಲ್ ಆಯೋಗ ಮತ್ತು ಚಿನ್ನಪ್ಪ ರೆಡ್ಡಿ ಆಯೋಗದ ವರದಿಗಳನ್ನು ಸವಿಸ್ತಾರವಾಗಿ ಉಲ್ಲೇಖಿಸಲಾಗಿದೆ.

 ಲಿಂಗಾಯತರಲ್ಲಿರುವ ಪರಿಶಿಷ್ಠರನ್ನು ಮಾತ್ರವಲ್ಲ ಒಬಿಸಿ ಸಮುದಾಯದವರನ್ನೂ ಸೌಲಭ್ಯ ವಂಚಿತರನ್ನಾಗಿ ಮಾಡುವ ಹುನ್ನಾರ ಇನ್ನೂ ಜನರಿಗೆ ಅರ್ಥವಾದಂತಿಲ್ಲ. ಒಬಿಸಿ ಸಮುದಾಯದಲ್ಲಿರುವ ಅನೇಕ ಹಿಂದೂ ಮತ್ತು ಲಿಂಗಾಯತ ಜಾತಿಗಳು ತಮ್ಮನ್ನು ಮರುವರ್ಗಿಕರಣ ಮಾಡಿ ಪರಿಶಿಷ್ಟ ಜಾತಿಗೆ ಸೇರಿಸಬೇಕೆಂಬ ಬೇಡಿಕೆಯನ್ನಿಟ್ಟಿವೆ. ಉದಾಹರಣೆಗೆ, ಹಡಪದ ಅಪ್ಪಣ್ಣ ಮತ್ತು ಮಡಿವಾಳ ಮಾಚಯ್ಯ ಸಂಪ್ರದಾಯ ಪಾಲಿಸುವ ಲಿಂಗಾಯತ ಸಮುದಾಯದ ಸವಿತಾ ಸಮಾಜ ಮತ್ತು ಮಡಿವಾಳ ಸಮಾಜದವರು ಸೇರಿದಂತೆ ಅನೇಕ ಒಬಿಸಿ ಸಮುದಾಯಗಳು ರಾಜ್ಯ ಸರಕಾರಕ್ಕೆ ಸಂವಿಧಾನ ರಚನೆಯ ವೇಳೆಯಲ್ಲಿದ್ದ ಅಲ್ಪಸಂಖ್ಯಾತರನ್ನು ಸಂರಕ್ಷಿಸುವ ಜವಾಬ್ದಾರಿ ಇರುವುದಲ್ಲದೇ, ಧರ್ಮಗಳನ್ನು ಸ್ಥಾಪಿಸುವ, ಅಥವಾ ಹಳೆಯ ಧರ್ಮಗಳಿಂದ ಜಾತಿ-ಮತಗಳನ್ನು ಒಡೆದು ಇನ್ನೊಂದು ಧರ್ಮಕ್ಕೆ ಸೇರಿಸುವ ಅಧಿಕಾರವಿಲ್ಲ. ಇಂದು ’ಅಲ್ಪಸಂಖ್ಯಾತ’ ಧರ್ಮವೊಂದನ್ನು ಹುಟ್ಟು ಹಾಕಿರುವ ಸಿದ್ದು ಸರಕಾರ, ಹಿಂದೂ ಧರ್ಮದ ಜಾತಿಯೊಂದನ್ನು ಮುಸ್ಲಿಂ ಅಥವಾ ಕ್ರೈಸ್ತ ಧರ್ಮಕ್ಕೆ ಸೇರಿದ್ದೆಂದು ಘೋಷಿಸಲೂಬಹುದು. ಪ್ರತಿ ಆರಾಧನಾ ಪದ್ಧತಿಯೂ ಒಂದು ಪ್ರತ್ಯೇಕ ಧರ್ಮವೆಂದು ಘೋಷಿಸುವ ಯಾವುದೇ ಅಧಿಕಾರ ಸರಕಾರಕ್ಕಿಲ್ಲ.

 ಲಿಂಗಾಯತ ಧರ್ಮ ಹಿಂದೂ ಧರ್ಮದಿಂದ ಬೇರೆಯೇ ಎಂದಿಟ್ಟುಕೊಳ್ಳೋಣ. ಆದರೆ, ಸಿದ್ದು ಸರಕಾರಕ್ಕೆ ಶೈಕ್ಷಣಿಕ ಮತ್ತು ಉದ್ಯೋಗದಲ್ಲಿ ಪ್ರಾತಿನಿಧ್ಯದ  ದೃಷ್ಟಿಯಿಂದ ಲಿಂಗಾಯತರಿಗೆ ಅನ್ಯಾಯ ಮಾಡುವ ಅಗತ್ಯತೆ ಏನಿತ್ತು? ಬೌದ್ಧರು ಸಂವಿಧಾನದ ದೃಷ್ಟಿಯಲ್ಲಿ ಹಿಂದುಗಳೇ ಎಂಬುದನ್ನು ಸ್ವತಃ ಬಾಬಾ ಸಾಹೇಬರೇ ಒಪ್ಪಿಕೊಂಡಿರುವಾಗ, ಲಿಂಗಾಯತರನ್ನು ಪ್ರತ್ಯೇಕಿಸಿ ಸೌಲಭ್ಯವಂಚಿತರನ್ನಾಗಿಸುವ  ಅಗತ್ಯತೆ ಏನಿತ್ತು? ಇದನ್ನೆಲ್ಲಾ ನೋಡಿದರೆ, ಸಿದ್ದು ಸರಕಾರದ ಉದ್ದೇಶಶುದ್ಧಿಯ ಬಗ್ಗೆಯೇ ಅನುಮಾನಗಳೇಳುತ್ತವೆ.

 ಬೇರೆ ಅಲ್ಪಸಂಖ್ಯಾತರಿಗೆ ತೊಂದರೆಯಾಗದಂತೆ ಲಿಂಗಾಯತ ಧರ್ಮವನ್ನು ಪ್ರತ್ಯೇಕಗೊಳಿಸಲಾಗಿದೆಯೆಂದು ಸರಕಾರ ಹೇಳಿಕೊಳ್ಳುತ್ತಿದೆ. ಅಲ್ಪ ಸಂಖ್ಯಾತರ ಇಲಾಖೆಯಲ್ಲಿರುವ ಆರ್ಥಿಕ ನೆರವು, ಮೀಸಲಾತಿ ಪ್ರಮಾಣ ಹೆಚ್ಚಳ, ಲಿಂಗಾಯತರಲ್ಲಿನ ಪರಿಶಿಷ್ಟರಿಗೆ ಮೀಸಲಾತಿ ಇವ್ಯಾವುದೂ ಲಿಂಗಾಯತರಿಗೆ ದಕ್ಕಲಾರವು  ಎಂದಾದರೆ ಲಿಂಗಾಯತರಿಗೆ ಪ್ರತ್ಯೇಕ ಧರ್ಮ ಘೋಷಣೆಯಿಂದ ಬಂದ ಭಾಗ್ಯವೇನು? ಒಟ್ಟಾರೆ ಸಮಾಜವನ್ನು ಮತ್ತು ಲಿಂಗಾಯತ ವೀರಶೈವ ಸಮುದಾಯವನ್ನು ನುಚ್ಚುನೂರು ಮಾಡುವ ಒಂದೇ ಒಂದು ಉದ್ದೇಶದಿಂದ ಮಾಡಿದ ಕ್ರಮವೆಂಬುದು ಇದರಿಂದ ಸ್ಪಷ್ಟ. ಸಿದ್ದು ಸರಕಾರದ ಈ ಕ್ರಮದಿಂದಾಗಿ ರಾಜ್ಯದಲ್ಲಿ ಮಾತ್ರವಲ್ಲ ಇಡೀ ದೇಶದ ಬೇರೆ ಭಾಗಗಳಲ್ಲಿ ಪ್ರತ್ಯೇಕತೆಯ ಕೂಗು ಕೇಳಿಬರುತ್ತಿದೆ. ವಿಶ್ವಗುರು ಬಸವಣ್ಣ ಒಡೆದುಹೋಗಿದ್ದ ಎಲ್ಲಾ ಮತ ಪಂಥಗಳನ್ನೂ ಒಂದುಗೂಡಿಸಿದರೆ, ಮುಖ್ಯಮಂತ್ರಿ ಸಿದ್ದಣ್ಣ ಸಮಾಜದ ಹೃದಯಭಾಗದಲ್ಲಿ ಎಂದೂ ಮಾಯದ ಗಾಯವೊಂದನ್ನು ಮಾಡಿದ್ದಾರೆ.  ಚುನಾವಣೆಗಳು ಬರಬಹುದು ಹೋಗಬಹುದು ಆದರೆ, ನಾಡು ಈ ವಿಭಜನೆಯನ್ನು ಎಂದಿಗೂ ಕ್ಷಮಿಸದು.

 ತಮ್ಮನ್ನು ಪರಿಶಿಷ್ಟ ಜಾತಿಗೆ ಸೇರಿಸಬೇಕೆಂಬ ಬೇಡಿಕೆಯನ್ನಿಟ್ಟಿವೆ. ಉತ್ತರ ಪ್ರದೇಶ ಸೇರಿದಂತೆ ಅನೇಕ ರಾಜ್ಯಗಳಲ್ಲಿ ಮಡಿವಾಳ ಮತ್ತು ಸವಿತಾ ಸಮಾಜದವರು ಪರಿಶಿಷ್ಟ ಜಾತಿಯ ಪಟ್ಟಿಯಲ್ಲಿದ್ದಾರೆ. ಆದರೆ ಕರ್ನಾಟಕ ಮತ್ತಿತರ ಅನೇಕ ರಾಜ್ಯಗಳಲ್ಲಿ ಇವರು ಒಬಿಸಿ ಪಟ್ಟಿಯಲ್ಲಿದ್ದಾರೆ.  ಅನೇಕ ವರ್ಷಗಳಿಂದ ಈ ಸಮುದಾಯಗಳನ್ನೂ ಪರಿಶಿಷ್ಟ ಜಾತಿಗೆ ಸೇರಿಸಬೇಕೆಂಬ ಕೂಗು ಕೇಳಿಬರುತ್ತಿದೆ. ಆದರೆ, ಸಿದ್ದರಾಮಯ್ಯನವರ ಪ್ರತ್ಯೇಕ ಲಿಂಗಾಯತ ಧರ್ಮದ ಕ್ರಮವನ್ನು ಕೇಂದ್ರ ಒಪ್ಪಿಕೊಂಡರೆ ಮಡಿವಾಳ ಮತ್ತು ಸವಿತಾ ಸಮಾಜ ಇತ್ಯಾದಿ ಸಮುದಾಯಗಳು ಎಂದೆಂದೂ ಪರಿಶಿಷ್ಟ ಜಾತಿಯ ಪಟ್ಟಿಗೆ ಸೇರಲಾರವು.

 ಸಿಖ್ಖ ಮತ್ತು ಬೌದ್ಧ ಮತಗಳು ಹಿಂದು ಧರ್ಮದ ಅವಿಭಾಜ್ಯ

 ಸಿಖ್ಖ ಮತ್ತು ಬೌದ್ಧ ಮತಗಳು ಹಿಂದೂ ಸಾಂಸ್ಕೃತಿಕ ಅಸ್ಮಿತೆಯ ಅವಿಭಾಜ್ಯ ಅಂಗ ಎಂಬ ಬಲವಾದ ಕಾರಣಕ್ಕೆ ಸಂವಿಧಾನ ಜಾರಿಯಾಗಿ ನಲವತ್ತು ವರ್ಷಗಳ ನಂತರದಲ್ಲಿಯಾದರೂ ಈ ಮತಗಳ ಪರಿಶಿಷ್ಟರಿಗೆ ಮೀಸಲಾತಿ ದೊರೆತಿದೆ. ಆದರೆ, ಹಿಂದೂ ಧರ್ಮಕ್ಕೂ ಲಿಂಗಾಯತರಿಗೂ ಸಂಬಂಧವೇ ಇಲ್ಲ, ಹಿಂದು ಧರ್ಮ ಬಸವ ತತ್ವಕ್ಕೆ ತದ್ವಿರುದ್ದ, ಹಿಂದುಗಳಿಗೂ ನಮಗೂ ಯಾವುದೇ ಸಂಬಂಧವೇ ಇರಕೂಡದು, ಹಿಂದು ಸಂಪ್ರದಾಯ ಮತ್ತು ಹಬ್ಬಗಳನ್ನೂ ಆಚರಿಸಬಾರದು ಎಂದು ಕಟ್ಟಪ್ಪಣೆ ಮಾಡಿರುವ ಕೆಲ ಜಗದ್ಗುರುಗಳು ಮತ್ತು ರಾಜಕಾರಣಿಗಳು, ಬೌದ್ಧ ಮತ್ತು ಸಿಖ್ಖರಿಗೆ ದೊರೆತಂತೆ ಲಿಂಗಾಯತರಲ್ಲಿರುವ ತಳಸಮುದಾಯಗಳಿಗೆ ಎಂದೆಂದಿಗೂ ಮೀಸಲಾತಿ ಸೌಲಭ್ಯ ದೊರಕಿಸಲೇಬಾರದೆಂದು ನಿಶ್ಚಯಿಸಿ ಬಿಟ್ಟಿರುವಂತಿದೆ.   ಲಿಂಗಾಯತರನ್ನು ಸಮಾಜದ ಮುಖ್ಯವಾಹಿನಿಯಿಂದ ಬೇರ್ಪಡಿಸಿದ್ದಲ್ಲದೇ ಬಸವ ತತ್ವದ ಸಾರ್ವತ್ರಿಕತೆಯನ್ನು ಕೇವಲ ಒಂದು ಗುಂಪಿಗೆ ಸೀಮಿತಗೊಳಿಸುವ ಹುನ್ನಾರ ಇದಾಗಿದೆ. ಇಷ್ಟೇ ಅಲ್ಲ, ಯಾವ ತಳಸಮುದಾಯಗಳನ್ನು ಬಸವಣ್ಣ ತಬ್ಬಿದ್ದರೋ ಅದೇ ಸಮುದಾಯಗಳನ್ನು ಸೌಲಭ್ಯಗಳಿಂದ ವಂಚಿಸಲು, ಸಾಮಾಜಿಕವಾಗಿ ಮತ್ತಷ್ಟು ತುಳಿಯಲು ಸಿದ್ದು ಸರಕಾರ ಹವಣಿಸಿದೆ. ಹಾಗೆಯೇ ಸಧ್ಯಕ್ಕೆ ಒಬಿಸಿ ಪಟ್ಟಿಯಲ್ಲಿರುವವರನ್ನು ಪರಿಷ್ಕರಿಸಿ ಅವರಿಗೆ ಭವಿಷ್ಯದಲ್ಲಾದರೂ ಸಾಮಾಜಿಕ ನ್ಯಾಯವನ್ನೊದಗಿಸುವ ಎಲ್ಲಾ ಅವಕಾಶಗಳನ್ನೂ ತುಳಿದುಹಾಕಿದೆ.

 ಸಿದ್ದರಾಮಯ್ಯನವರಿಗೆ ಲಿಂಗಾಯಿತ ಮತ್ತು ಪರಿಶಿಷ್ಟರ ಮೇಲೆ ದ್ವೇಷವೇ?

 ಸಧ್ಯದಲ್ಲಿ ಜಾರಿಯಲ್ಲಿರುವ ಈ ನೆಲದ ಕಾನೂನಿನಡಿಯಲ್ಲಿ ಲಿಂಗಾಯತರಲ್ಲಿರುವ ಪರಿಶಿಷ್ಟ ಜಾತಿಗಳವರಿಗೆ ಮೀಸಲಾತಿ ಸೌಲಭ್ಯ ಸಿಗುವುದಿಲ್ಲವೆಂಬ ಸ್ಪಷ್ಟವಾಗಿ  ಗೊತ್ತಿದ್ದರೂ ಸಿದ್ದರಾಮಯ್ಯ ಸರಕಾರ ಈ ಕೆಲಸ ಮಾಡಿದೆಯೆಂದರೆ, ಇದನ್ನು ಪರಿಶಿಷ್ಟರ ಮತ್ತು ಲಿಂಗಾಯತರ ಮೇಲಿನ ಬದ್ಧ ದ್ವೇಷವೆನ್ನದೇ ಬೇರೇನೂ ಹೇಳಲು ಸಾಧ್ಯವಿಲ್ಲ.  ಕೇಂದ್ರ ಸರಕಾರಕ್ಕೆ ಪರಿಶಿಷ್ಟರ ಮೇಲೆ ಕಾಳಜಿಯಿದ್ದರೆ ಸಿದ್ದು ಸರಕಾರದ ಕ್ರಮವನ್ನು ಯಾವುದೇ ಕಾರಣಕ್ಕೂ ಒಪ್ಪಿಕೊಳ್ಳಬಾರದು.  ಪರಿಶಿಷ್ಟರ ಶಿಕ್ಷಣ ಮತ್ತು ಉದ್ಯೋಗವನ್ನು ಸಂಕಷ್ಟಕ್ಕೆ  ಗುರಿಮಾಡಿರುವ ಸಿದ್ದು ಸರ್ಕಾರಕ್ಕೆ ಪರಿಶಿಷ್ಟರು ಮತ್ತು ಲಿಂಗಾಯತರು ಒಟ್ಟಾಗಿ ಬುದ್ಧಿಕಲಿಸಬೇಕಿದೆ.

 

   

Leave a Reply