ಪ್ರವಾದಿ ಚಿತ್ರ ಬರೆದಿದ್ದಕ್ಗಿಕಾಗಿ ಮರಣ ದಂಡನೆ!

ವಿದೇಶ - 0 Comment
Issue Date : 07.01.2014

ಮುಲ್ತಾನ್‌ನಲ್ಲಿ ನಡೆದ ಘಟನೆ ಇದು. 63 ವರ್ಷದ ಹರೂನಾಬಾದ್ ನಿವಾಸಿ ಇಮಾಮ್ ಅಲಿ ಪ್ರವಾದಿ ಮಹಮ್ಮದ್‌ರ ಭಕ್ತನಾಗಿದ್ದ. ತನ್ನ ಕೋಣೆಯ ಗೋಡೆಯ ಮೇಲೆ ಪ್ರವಾದಿಯ ಚಿತ್ರವನ್ನು ಬರೆದುಕೊಂಡಿದ್ದ. ಆದರೀಗ ಆತನಿಗೆ ಇಲ್ಲಿನ ನ್ಯಾಯಾಲಯ ಮರಣ ದಂಡನೆ ವಿಧಿಸಿದೆ. ಕಾರಣ ಆತ ಬರೆದುಕೊಂಡ ಪ್ರವಾದಿಯ ಚಿತ್ರ! ಅಚ್ಚರಿಯಾದರೂ ನಿಜ. ಹೀಗೆ ಎಲ್ಲೆಂದರಲ್ಲಿ ಪ್ರವಾದಿಯವರ ಚಿತ್ರವನ್ನು ಬಿಡಿಸುವುದು ಆ ಮತದಲ್ಲಿ ಅಪರಾಧ. ಆದ್ದರಿಂದ ದೇವದೂಷಣೆಯ ಆರೋಪದ ಮೇಲೆ ಬಂಧಿತನಾದ ಈತನಿಗೆ ಇಲ್ಲಿನ ನ್ಯಾಯಾಲಯ ಅತ್ಯುಗ್ರ ಶಿಕ್ಷೆಯಾದ ಮರಣ ದಂಡನೆಯನ್ನು ವಿಧಿಸಿದೆ. ಇದರೊಂದಿಗೆ ಒಂದು ಲಕ್ಷ ರೂಪಾಯಿ ದಂಡವನ್ನೂ ವಿಧಿಸಲಾಗಿದೆ. ಬಡವರಿಗೆ ಈ ದೇಶದಲ್ಲಿ ನ್ಯಾಯವಿಲ್ಲ ಎನ್ನುತ್ತಿದ್ದಾರೆ ಇಮಾಮ್ ಅಲಿ. ಪ್ರವಾದಿಯವರ ಕಟ್ಟರ್ ಭಕ್ತನಿಗೆ ಇಂಥ ಶಿಕ್ಷೆ ನ್ಯಾಯವೇ? ದೇವನೊಬ್ಬನೇ… ಎಂಬ ಮತದಲ್ಲಿ, ಅದೇ ಒಬ್ಬ ದೇವನ ಚಿತ್ರವನ್ನೇ ಭಕ್ತ ಬರೆದರೆ ಇಂಥ ಅತ್ಯುಗ್ರ ಶಿಕ್ಷೆಗೆ ಈಡಾಗುವುದು ಎಂಥ ವಿಪರ್ಯಾಸ ಎನ್ನುತ್ತಿದೆ ಪ್ರಜ್ಞಾವಂತ ಜನತೆ.

   

Leave a Reply