ಪ್ರವಾಸ

ಪ್ರವಾಸ - 0 Comment
Issue Date : 18.10.2013

ದೇಶಗಳನ್ನು ಸಂಚರಿಸಿ ಬಂದರೆ ಕೌತುಕದಿಂದ ನಾವು ಅದ್ಭುತಗಳನ್ನು ಕಾಣಲೂಬಹುದು.  ಇದರಿಂದ ಒದಗುವ ಜ್ಞಾನಾರ್ಜನೆ ಅಪರಿಮಿತವಾದದ್ದು ಹಾಗೂ ದೇಶವು ಸಿರಿಸಂಪದ್ಭರಿತವಾಗುತ್ತದೆ.  ‘ದೇಶ ಸುತ್ತು ಕೋಶ ಓದು’ ಎಂಬ ನಾಣ್ಣುಡಿಯ ಅರ್ಥವೂ ಇದೇ ಆಗಿದೆ.  ಆಧುನಿಕ ಜಗತ್ತಿನ ಪ್ರವಾಸವು ಒಂದು ಉದ್ಯಮವಾಗಿ ಪರಿಣಮಿಸಿದೆ.  ಯಾರು ದೇಶ ಸಂಚರಿಸುವರೋ, ಪಂಡಿತರ ಸಹವಾಸ ಇಟ್ಟುಕೊಳ್ಳುವರೋ ಅವರ ಬುದ್ಧಿ ಪ್ರಸರಣ ಹೊಂದುತ್ತಾ ಪಕ್ವಗೊಳ್ಳುತ್ತಾ ಹೋಗುತ್ತದೆ.  ಮನುಷ್ಯನಿಗೆ ಪ್ರವಾಸ ಮನಸ್ಸಿನ ಉಲ್ಲಾಸ ತರುವಂತಹದು.  ಜೀವನದಲ್ಲಿ ಉತ್ಸಾಹದಿಂದಿರಲು ಚೈತನ್ಯ ತಂದುಕೊಡುತ್ತದೆ.  ವೈವಿಧ್ಯಮಯ ಜನಜೀವನ , ಹಲವು ಭಾಷಾ ಮತ್ತು ವೈವಿಧ್ಯತೆಗಳನ್ನು ತಿಳಿಸಲು ಪ್ರವಾಸ ಒಂದು ಸಾಧನ.

 ಪ್ರವಾಸದ ಉದ್ದೇಶ ಸಂತೋಷ. ವಿರಾಮ ವೇಳೆಯನ್ನು ಸಂತೋಷದಿಂದ ಕಳೆಯುವುದೇ ಆಗಿದೆ.  ಜತೆಗೆ ಜ್ಞಾನ ಸಂಪಾದನೆ. ಯಾವುದು ಹೇಗೆ ಇರಲಿ ಪ್ರವಾಸ ಮನೋರಂಜನೆ ನೀಡುತ್ತದೆ.  ವಿವಿಧ ಭಾಷೆಗಳ ಪರಿಚಯವಾಗುತ್ತದೆ.  ಪ್ರದೇಶದಿಂದ ಪ್ರದೇಶಕ್ಕೆ ಇರುವ ವ್ಯತ್ಯಾಸಗಳು ಗಮನಕ್ಕೆ ಬರುತ್ತದೆ. 

 ರಜಾದಿನಗಳಲ್ಲಿ, ವಾರಾಂತ್ಯ ದಿನಗಳಲ್ಲಿ ಮನುಷ್ಯ ಪ್ರವಾಸ ಹೋಗಿ ಬರುವ ಪರಿಪಾಠ ರೂಢಿಸಿಕೊಳ್ಳಬೇಕು.  ಇದ್ದಲ್ಲೇ ಇರುತ್ತೇನೆ ಎಂದು ಹೇಳಿಕೊಂಡು ಕೂಪ ಮಂಡೂಕವಾಗಬಾರದು.  ಪ್ರವಾಸಗಳ ಮೂಲಕ ದೇಶವೊಂದರ ಹಬ್ಬಗಳು – ಉತ್ಸವಗಳು, ಕರಕುಶಲ ಕಲೆಗಳು, ಭಾಷೆ ಎಲ್ಲವನ್ನು ಪರಿಚಯ ಮಾಡಿಕೊಳ್ಳಲು ಹೇರಳ  ಅವಕಾಶಗಳಿರುತ್ತವೆ.

 ಉತ್ತಮ ಪ್ರವಾಸದಿಂದ ಉತ್ತಮ ನೆಲೆ, ಆರೋಗ್ಯ ಕಂಡುಕೊಳ್ಳಬಹುದು.  ಪ್ರವಾಸ ಪ್ರಯಾಸವಾಗದಂತೆಯೂ ನೋಡಿಕೊಳ್ಳಬೇಕು.

 

 

 

   

Leave a Reply