ಪ್ರೀತಿ, ಮಮತೆಯನ್ನು ಕೊಡಿ, ನಿರೀಕ್ಷಿಸಬೇಡಿ!

ಯುವ - 0 Comment
Issue Date : 14.06.2015

‘ಉತ್ಸಾಹ’ ಮನಸ್ಸಿನ ಒಂದು ಸ್ಥಿತಿ. ಮನುಷ್ಯ ಸದಾ ಉತ್ಸಾಹಿಯಾಗಿರಬೇಕು. ಉತ್ಸಾಹ ಮನಸ್ಸಿನಲ್ಲಿ ಗುಣಾತ್ಮಕ ಶಕ್ತಿಯನ್ನು ತುಂಬುತ್ತದೆ. ಉತ್ಸಾಹ ಎನ್ನುವುದು ಕೇವಲ ಕಲ್ಪನೆಯಲ್ಲ ಅದು ನಿರ್ಮಾಣ . ಉತ್ಸಾಹವನ್ನು ನಾವೇ ನಿರ್ಮಿಸಿಕೊಳ್ಳಬೇಕು. ಹಾಗಾದರೆ ಉತ್ಸಾಹವನ್ನು ನಿರ್ಮಿಸಿಕೊಳ್ಳುವ ಬಗೆ ಹೇಗೆ? ಉತ್ಸಾಹ ಮನಸ್ಸಿನ ಸ್ಥಿತಿಯಾದ್ದರಿಂದ ಅದನ್ನು ಪ್ರಯತ್ನಪೂರ್ವಕವಾಗಿ ಪಡೆಯಲು ಸಾಧ್ಯವಿಲ್ಲ.
ಒಮ್ಮೊಮ್ಮೆ ಅನಿಸುತ್ತದೆ ಎಷ್ಟೋ ಮಂದಿ ಅಂಗವಿಕಲರು, ಮುದುಕರು ಬಡ ಬಗ್ಗರು, ಕೈಲಾಗದವರು ಈ ಜಗತ್ತಿನ ಇತಿಹಾಸದಲ್ಲಿ ತಮಗಾಗೇ ಒಂದು ಪುಟವನ್ನು ಮೀಸಲಿಟ್ಟಿರುವಾಗ ಎಲ್ಲಾ ಇದ್ದೂ ಕೆಲವರು ಏನೂ ಕೈಲಾಗದ ಸೋಮಾರಿಗಳ ತರಹ ಜೀವನ ಸಾಗಿಸುತ್ತಿರುತ್ತಾರೆ. ಗುಣಾತ್ಮಕ ಚಿಂತನೆಗಳೊಂದಿಗೆ ಜೀವನ ನಡೆಸಿದರೆ ಎಲ್ಲೆಯನ್ನು ಅನಾಯಾಸವಾಗಿ ಮುಟ್ಟಬಹುದೆನ್ನುವುದರಲ್ಲಿ ಎರಡು ಮಾತಿಲ್ಲ. ಒಂದು ಉದಾಹರಣೆ ನೋಡಿದರೆ, ಎನ್‌ಡಿಎ ನೇತೃತ್ವದ ಸರ್ಕಾರ ಇಷ್ಟು ಬಹುಮತದಿಂದ ಸರ್ಕಾರದ ಚುಕ್ಕಾಣಿ ಹಿಡಿಯುತ್ತದೆಂದು ಯಾರೂ ಊಹಿಸಿರಲಿಲ್ಲ. ಆದರೆ ಆ ಪಕ್ಷದ ಪಕ್ಕಾ ಪ್ರಣಾಳಿಕೆ, ಮುಖಂಡರ ಗುಣಾತ್ಮಕ ಭಾಷಣ ಎಲ್ಲರನ್ನೂ ಆಕರ್ಷಿಸಿ ಯಾರ ಮೈತ್ರಿಯೂ ಇಲ್ಲದಂತೆ ಸ್ವಂತ ಬಲದ ಮೇಲೆ ಹಿಂದೂಸ್ತಾನದ ಚುಕ್ಕಾಣಿ ಹಿಡಿಯುವಂತೆ ಮಾಡಿತು.
ಸಮಾಜವನ್ನು ಪ್ರೀತಿಸಿ, ಸಮಾಜ ತನ್ನಿಂತಾನೆಯೇ ನಿಮ್ಮನ್ನು ಪ್ರೀತಿಸುತ್ತದೆ ಹಾಗೆಂದು ಅಪಾರವಾದ ನಿರೀಕ್ಷೆ ಎಷ್ಟೋ ಭಾರಿ ಬರೀ ಕಣ್ಣೀರನ್ನು ಮಿಗಿಲಿಸಿದ ಉದಾಹರಣೆಗಳು ಸಾವಿರ. ಪ್ರೀತಿಯನ್ನು ಕೊಡಿ, ಎದುರಿಗಿರುವ ವ್ಯಕ್ತಿ ಮನುಷ್ಯನಾಗಿದ್ದರೆ ಪ್ರೀತಿಯನ್ನು ಆಸ್ವಾದಿಸುತ್ತಾನೆ, ನಿಮಗೆ ಅದಕ್ಕಿಂತಲೂ ಹತ್ತು ಪಟ್ಟು ಪ್ರೀತಿಯನ್ನು ಸಾಲವಾಗಿ ನೀಡುವಂತಹ ವನಾಗಿರುತ್ತಾನೆ. ಮೃಗಗಳಿಗೆ ಪ್ರೀತಿಯ ಬೆಲೆ ಗೊತ್ತಿರುವುದಿಲ್ಲ ಅದಕ್ಕಾಗಿ ಅವುಗಳಿಗೆ ಪ್ರೀತಿಯನ್ನು ಆಸ್ವಾದಿಸುವುದೂ ಗೊತ್ತಿಲ್ಲ, ಹಿಂದಿರುಗಿಸುವುದಂತೂ ಕನಸಿನ ಮಾತೇ ಸರಿ! ಎಂದುಕೊಂಡಿದ್ದೇವೆ. ಆದರೆ ವಾಸ್ತವ ಹಾಗಿಲ್ಲ.
ಮನುಷ್ಯ ಹುಟ್ಟಿದಾಗಿನಿಂದ ಫ್ರೌಢಾವಸ್ತೆಗೆ ತಲುಪುವವರೆಗೂ ಸುಮಾರು 1, 48000 ಘೆಛಿಜಛಿಠಿಜಿಛಿ ಡಿಟ್ಟ ಕೇಳಿರುತ್ತಾನೆ. ನಿಮ್ಮನ್ನು ಇಷ್ಟಪಡದವರಿಂದ ನಿಮ್ಮ ಬಗ್ಗೆ ಋಣಾತ್ಮಕ ವಾಗಿ ಮಾತಾಡುವವರಿಂದ ಆದಷ್ಟೂ ದೂರ ಇರಲು, ಇಡಲೂ ಪ್ರಯತ್ನಿಸಿ!!.
ಒಂದು ಚಿಕ್ಕ ಕಥೆ ನೆನಪಾಗುತ್ತದೆ. ಒಮ್ಮೆ ಒಬ್ಬ ವ್ಯಕ್ತಿಯು ತಕರಾರಿದ್ದ ಜಮೀನನ್ನು ಕೊಂಡ ನಂತರ ಜಮೀನಿಗೆ ಬೇಲಿ ಹಾಕುತ್ತಿರುವಾಗ ಪಕ್ಕದ ಹೊಲದವನು ಮತ್ತದೇ ಒಂದಿಂಚಿಗಾಗಿ ಜಗಳ ಪ್ರಾರಂಭಿಸಿದ. ಆಗ ಹೊಸದಾಗಿ ಕೊಂಡವನು ನಿನ್ನ ಒಂದಿಚಿಗೆ ಮತ್ತ್ತೊಂದನ್ನು ಸೇರಿಸಿ ಒಟ್ಟಾಗಿ ಎರಡಿಂಚನ್ನು ಕೊಡುತ್ತೇನೆಂದು ಉತ್ತರವಿತ್ತ. ಬರೀ ತಕರಾರಿನ ಜಮೀನು ಕೊಟ್ಟರೆ ಸುಮ್ಮನೆ ಮನಸ್ತಾಪ ಅದಕ್ಕಾಗಿ ಅದಕ್ಕೆ ಮತ್ತೊಂದನ್ನು ಸೇರಿಸಿ ಕೊಟ್ಟರೆ ನನಗೂ ದಾನ ಮಾಡಿದ ತೃಪ್ತಿ ಸಿಗುತ್ತದೆಂದಾಗ ತಕಾರಾರಿನ ಮನುಷ್ಯ ನನಗ್ಯಾವುದೂ ಬೆಡವೆಂದುಕೊಂಡು ಸುಮ್ಮನಾದನು. ಮನಸ್ಸಿಗೆ ತೃಪ್ತಿ, ನೆಮ್ಮದಿಯಿರುವ ಕೆಲಸಗಳನ್ನು ಮಾಡಬೇಕೇ ಹೊರೆತು ಸದಾ ಮನಸ್ಸಿಗೆ ನೋವಾಗುವ ಕೆಲಸಗಳನ್ನಲ್ಲ .
ನಿಜ, ಮನುಷ್ಯನಿಗೆ ದುಡ್ಡು ಖಂಡಿತಾ ಬೇಕು . ಆದರೆ ದುಡ್ಡೇ ಜೀವನವಾಗಬಾರದಲ್ಲವೇ? ಸ್ನೇಹಿತರೇ, ದುಡ್ಡನ್ನು ಸಂಪಾದಿಸುವವರೂ ನಾವೇ, ಕಳೆದುಕೊಳ್ಳುವವರೂ ನಾವೇ. ಅಂದರೆ ಒಮ್ಮೆ ಇರುತ್ತದೆ ಒಮ್ಮ ಹೋಗಿಬರುತ್ತದೆ. ಅದಕ್ಕಾಗಿ ಹುಟ್ಟಿನಿಂದ ಸಾವಿನವರೆಗೂ ಸದಾ ನಮ್ಮ ಜೊತೆಯಲ್ಲಿರುವ ಮನಸ್ಸನ್ನು ಹಾಳು ಮಾಡಿಕೊಳ್ಳುವುದು ಎಷ್ಟು ಸರಿ? ಎಂಬುದು ನನ್ನ ಮಿಲಿಯನ್ ಡಾಲರ್ ಪ್ರಶ್ನೆ. ಮನಸ್ಸು ದೇಹದ ಪ್ರತಿಬಿಂಬವಿದ್ದಂತೆ. ಮನಸ್ಸು ಹಾಳಾದರೆ ಅದರಿಂದ ಸುಮ್ಮನೆ ಒತ್ತಡ ಹೆಚ್ಚಾಗಿ ಬಿಪಿ, ಶೂಗರ್ ನಂಥಾ ಕಾಯಿಲೆಗಳು ಹೆಚ್ಚಾಗುವ ಸಾಧ್ಯತೆಗಳನ್ನು ತಳ್ಳಿಹಾಕುವಂತಿಲ್ಲ.
ಎಲ್ಲರನ್ನೂ ನಗುತ್ತಾ ಮಾತನಾಡಿಸೋಣ. ಸತ್ತ ಮೇಲೆ ನಾವೆಷ್ಟು ಸಂಪಾದಿಸಿದ್ದೇವೆಂದು ಯಾರೊಬ್ಬರೂ ಕೇಳುವುದಿಲ್ಲ. ಆದರೆ ನಮ್ಮ – ಇತರರ ನಡುವಿನ ಸಂಬಂಧ ನಮ್ಮ ಮಾತು, ನಡವಳಿಕೆ ನಮ್ಮನ್ನು ಇನ್ನೂ ನೂರು ವರ್ಷಗಳ ಕಾಲ ನೆನಪಿಟ್ಟುಕೊಳ್ಳುವಂತೆ ಮಾಡುತ್ತದೆ. ಮುಖ ಮನಸ್ಸಿನ ಕನ್ನಡಿಯಿದ್ದಂತೆ. ಮನಸ್ಸು ಸ್ವಚ್ಚವಾಗಿ, ಆನಂದದಿಂದ ತೃಪ್ತಿಯಾಗಿದ್ದರೆ ಅದರ ಪ್ರತಿಬಿಂಬ ಮುಖದ ಮೇಲೆ ಗೋಚರಿಸುತ್ತದೆ.
ಅನಿವಾರ್ಯ ಇಲ್ಲದಿದ್ದಲ್ಲಿ ಮಕ್ಕಳನ್ನು ದಯವಿಟ್ಟು ಹಾಸ್ಟೆಲ್‌ಗಳಲ್ಲಿ ಬಿಡದಿರಿ. ಅವುಗಳಿಗೆ ಒಂದು ತುತ್ತು ಅನ್ನ ಕಡಿಮೆ ಹಾಕಿ, ಆದರೆ ಪ್ರೀತಿಯಲ್ಲಿ ಮಾತ್ರ ಕೊರತೆ ಸಿಗದಿರಲಿ.
ಉತ್ಸಾಹದಿಂದ ಪ್ರೀತಿಯ ಸೇತುವೆ ಒಡೆಯುತ್ತದೆ. ಆತ್ಮೀಯ ಗಂಗೆ ಹರಿಯುತ್ತದೆ. ಹಾಗಾದರೆ ಸದಾ ಉತ್ಸಾಹದಿಂದಿರಲು ನೀವೂ ಹೀಗೆ ಮಾಡಬಹುದಲ್ವೇ?
• ನಿಮ್ಮ ಮನಸ್ಸಿಗೆ ಹತ್ತಿರವಾದವರ ಜೊತೆ ಹೆಚ್ಚು ಸಮಯವನ್ನು ಕಳೆಯಿರಿ. ಈ ಹಿಂದೆ ನಿಮ್ಮಲ್ಲಿ ಭಿನ್ನಾಭಿಪ್ರಾಯವಿದ್ದರೂ ಅದನ್ನೆಲ್ಲಾ ಮರೆತು ಪ್ರೀತಿಯಿಂದ ಮಾತಾಡಿಸಿ, ಸಮಾಜವೇ ನಿಮ್ಮ ಕಡೆ ವಾಲುತ್ತದೆ.
• ಸ್ನೇಹಿತರೇ ಘೆಛಿಜಛಿಠಿಜಿಛಿ ಡಿಟ್ಟ ಅಂದರೆ, ಯಾವಾಗಲೂ ನಿಮ್ಮನ್ನು ಮತ್ತು ನಿಮ್ಮ ವ್ಯಕ್ತಿತ್ವವನ್ನು ಟೀಕಿಸುವವರಿಂದ ಸದಾ ದೂರವಿರಿ. ಇದು ನಮ್ಮ ಮಾನಸಿಕ ಅಭಿವೃದ್ದಿಗೆ ಸಹಾಯಕಾರಿ.
• ಆದಷ್ಟೂ ಟಜಿಠಿಜಿಛಿ ಞಛ್ಞಿಠಿಚ್ಝಜಿಠಿಯವರ ಜೊತೆ ಹೆಚ್ಚಾಗಿ ಬೆರೆಯಿರಿ.ಕೆಲವೊಮ್ಮೆ ಇಂತಹವರು ನಿಮ್ಮನ್ನು ವಿಮರ್ಷಿಸಬಹುದು. ಅಂತಹ ವಿಮರ್ಷೆಗಳನ್ನು ಸಲಹೆಗಳಂತೆ ಸ್ವೀಕರಿಸಿ. ಇದರಿಂದ ನಿಮ್ಮ ವ್ಯಕ್ತಿತ್ವದಲ್ಲಿ ಹೊಸ ಚೈತನ್ಯ ಉದ್ಭವವಾಗುತ್ತದೆ.
• ಯಾವುದಾದರೊಂದು ಶಕ್ತಿಯನ್ನು ನಂಬಿ, ಶಕ್ತಿಯ ಅರ್ಥ ದೇವರು. ಸದಾ ನಿಮ್ಮ ಆಗುಹೋಗುಗಳಿಗೆಲ್ಲಾ ಆ ಶಕ್ತಿಯೇ ಪ್ರೇರಕವೆಂದು ಗಟ್ಟಿಯಾಗಿ ನಂಬಿ.
• ತಪ್ಪು ಮಾಡುವುದು ಮಾನವ ಸಹಜ ಗುಣ. ಒಮ್ಮೆ ಮಾಡಿದ ತಪ್ಪು ಆದಷ್ಟೂ ಪುನರಾವರ್ತನೆ ಆಗದಂತೆ ಎಚ್ಚರವಹಿಸಿ.ನಿಮ್ಮ ಕೆಲಸ ತಪ್ಪೆಂದು ನಿಮಗೆ ಅನಿಸಿದರೆ ಯಾವುದೇ ಆತ್ಮಪ್ರಶಂಸೆ (ಉಜಟಜಿಞ)ಗೆ ಬೆಲೆ ಕೊಡದೆ ಕ್ಷಮೆ ಕೋರಿ. ನಂತರ ನಿಮ್ಮ ಮನಸ್ಸು ಇಂತಹವುಗಳನ್ನು ಪುನರಾವರ್ತಿಸುವುದಿಲ್ಲ.
• ಮನಸ್ಸಿಗೆ ಮುದವನ್ನು ನೀಡುವ ಸಂಗೀತವನ್ನು ಕೇಳಿ. ನಿಮಗೆ ಹಾಡಬೇಕನಿಸಿದಾಗಿ ಹಾಡಿ, ಕುಣಿಯಬೇಕೆನಿಸಿದಾಗ ಕುಣಿಯಿರಿ. ಇದರಿಂದ ಮನಸ್ಸಿಗೆ ನೆಮ್ಮದಿ ಸಿಗುತ್ತದೆ, ನೆಮ್ಮದಿ ಎಂದರೆ ಅದೇ ಸ್ವರ್ಗ.
ಉದಾ: ನಾವು ನೋಡಿರಬಹುದು. ಅನೇಕ ಆಧ್ಯಾತ್ಮಿಕ ಪ್ರವಚನಗಳಲ್ಲಿ ಆಧ್ಯಾತ್ಮಿಕ ಚಿಂತಕರು, ಸಂಗೀತ ಮತ್ತು ಭಾಷಣ ಎರಡನ್ನ್ನೂ ಮಾಡುತ್ತಾರೆ. ಕಾರಣ ಇಷ್ಟೇ ಸ್ನೇಹಿತರೇ, ಕೇಳುವ ಸಂಗೀತವು ಮನಸ್ಸಿಗೆ ಇಂಪನ್ನು – ನೀತಿ ಶ್ರವಣ ಶಕ್ತಿಯನ್ನು ದ್ವಿಗುಣಗೊಳಿಸುತ್ತದೆ. ಇದರಿಂದ ಜನರು ಸಭೆಯಲ್ಲಿ ಕುಣಿದು ಕುಪ್ಪಳಿಸುತ್ತಾರೆ.
• ಆದಷ್ಟೂ ನಿಮ್ಮ ನೆರೆಯವರಿಗೆ, ಸಹಾಯ ಕೋರಿ ಬಂದವರಿಗೆ ನಿಮ್ಮ ಕೈಲಾಗುವ ಸಹಾಯ ಮಾಡಿ. ಆಗ ನಿಮ್ಮ ಮನಸ್ಸು ನೆಮ್ಮದಿಯ ಭಾವ ಅನುಭವಿಸುತ್ತದೆ. ನೆಮ್ಮದಿಯೇ ಉತ್ಸಾಹದ ಮೊದಲ ಮೆಟ್ಟಿಲು, ನೆಮ್ಮದಿಯಿರುವ ಕಡೆ ಪ್ರೀತಿ ಇರುತ್ತದೆ.
ಬನ್ನಿ ಕೈಲಾದರೆ ಪ್ರೀತಿಸೋಣ, ನಗುನಗುತಾ ಮಾತಾಡೋಣ. ಕಳೆದುಕೊಳ್ಳುವುದೇನೂ ಇರುವುದಿಲ್ಲ. ನಾನಂತೂ ಹಾಗೇ, ಮತ್ತೆ ನೀವೂ!?

-ನಾಗೇಂದ್ರ ಸಿಂಹ

   

Leave a Reply