ಬಂತು ನೈಸರ್ಗಿಕ ಕೀಟನಾಶಕ!

ಪ್ರಚಲಿತ - 0 Comment
Issue Date : 07.05.2015

ಯಾವುದೇ ಕಾಯಿಲೆ ಇರಲಿ, ವೈದ್ಯರ ಸಲಹೆ ಮಾತ್ರ ಒಂದೇ. ತಾಜಾ- ಹಣ್ಣು ತರಕಾರಿಗಳನ್ನು ತಿನ್ನಿ. ಸ್ವಸ್ಥವಾಗಿರಿ. ಆದರೆ ಈಗೀಗ ತಾಜಾ ಹಣ್ಣು ತರಕಾರಿಗಳೇ ಸಿಗದಿರುವಾಗ ಆರೋಗ್ಯ ಹೇಗೆ ಸ್ವಾಸ್ಥ್ಯಪೂರ್ಣವಾಗಿರುತ್ತದೆ? ಎಲ್ಲ ಆಹಾರ ಪದಾರ್ಥಗಳ ಮೇಲೂ ಕೀಟ ನಾಶಕ ಸಿಂಪಡಿಸುವುದಲ್ಲದೆ, ಭೂಮಿಗೂ ರಾಸಾಯನಿಕ ಗೊಬ್ಬರಗಳನ್ನು ಹಾಕುವುದರಿಂದ ತಿನ್ನುವ ಆಹಾರವೇ ವಿಷಯುಕ್ತವಾಗುತ್ತಿದೆ. ಹೀಗಿರುವಾಗ ಲಂಡನ್ನಿನ ಕೆಲ ವಿಜ್ಞಾನಿಗಳ ನೈಸರ್ಗಿಕ ಕೀಟನಾಶಕಗಳನ್ನು ಸಿದ್ಧಪಡಿಸುವುದಕ್ಕೆ ತೊಡಗಿದ್ದಾರೆ.
ಸಸ್ಯಗಳ ಮೇಲೆ ದಾಳಿ ನಡೆಸುವ ಕೀಟಗಳು ಸಾಮಾನ್ಯವಾಗಿ ಅವುಗಳ ವಾಸನೆಯನ್ನು ಗುರುತು ಹಿಡಿದು ದಾಳಿ ನಡೆಸುತ್ತವೆ. ಕೀಟನಾಶಕಗಳು ಸಸ್ಯಗಳ ವಾಸನೆಯನ್ನು ಮರೆಮಾಚುವುದಲ್ಲದೆ, ಕೀಟಗಳು ಸಾಯುವಂಥ ವಿಷಪದಾರ್ಥಗಳನ್ನು ಹೊಂದಿರುತ್ತವೆ. ಆದರೆ ಈ ನೈಸರ್ಗಿಕ ಕೀಟನಾಶಕ ಕೀಟಗಳ ದಾಳಿಯನ್ನು ಸಮರ್ಥವಾಗಿ ಎದುರಿಸಬಲ್ಲದು. ಆದರೆ ವಿಷಪೂರಿತವಾಗಿರುವುದಿಲ್ಲವಾದ್ದರಿಂದ ಆ ಬೆಳೆಯನ್ನು ಸೇವಿಸುವುದರಿಂದ ಮನುಷ್ಯನ ಆರೋಗ್ಯದ ಮೇಲೆ ಯಾವುದೇ ರೀತಿಯ ವ್ಯತಿರಿಕ್ತ ಪರಿಣಾಮ ಉಂಟಾಗುವುದಿಲ್ಲ. 
ಇದು ಕೀಟಾಣುಗಳು ದಾಳಿ ಮಾಡುವುದಕ್ಕೆ ಮುಖ್ಯ ಕಾರಣವಾದ ಸಸ್ಯಗಳ ವಾಸನೆಯನ್ನು ಮರೆಮಾಚುತ್ತದೆ. ಇದರಿಂದಾಗಿ ಕೀಟಾಣುಗಳು ದಾಳಿ ಮಾಡಲಾರವು. ದಾಳಿ ಮಾಡಿದರೂ ಕೀಟಾಣುಗಳನ್ನು ನಾಶಮಾಡಬಲ್ಲ ನೈಸರ್ಗಿಕ ಪ್ರತಿರೋಧಕವನ್ನೂ ಇದು ಹೊಂದಿದೆ.

   

Leave a Reply