ಬದರಿಕಾಶ್ರಮ ವಿದ್ಯಾಶಾಲಾ ನೂತನ ಕಟ್ಟಡ ಉದ್ಘಾಟನೆ

ತುಮಕೂರು - 0 Comment
Issue Date : 26.02.2014


ತುರುವೇಕೆರೆ: ಇಲ್ಲಿಗೆ ಸಮೀಪದ ಮಡಿಹಳ್ಳಿ ಬದರಿಕಾಶ್ರಮ ವಿದ್ಯಾಶಾಲೆಯ ನೂತನ ಕಟ್ಟಡವನ್ನು ಊಟಿಯ ಶ್ರೀರಾಮಕೃಷ್ಣ ಆಶ್ರಮದ ಅಧ್ಯಕ್ಷ ಶ್ರೀ ಸ್ವಾಮಿ ರಾಘವೇಶಾನಂದಜೀ ಉದ್ಘಾಟಿಸಿದರು.
ಬದರಿಕಾಶ್ರಮದ ಸಂಸ್ಥಾಪಕ ಅಧ್ಯಕ್ಷ ಶ್ರೀ ಸ್ವಾಮಿ ಓಂಕಾರನಂದಜೀ ಮಹಾರಾಜ್, ಮೈಸೂರು ಶ್ರೀ ರಾಮಕೃಷ್ಣ ಆಶ್ರಮದ ಅಧ್ಯಕ್ಷ ಶ್ರೀ ಸ್ವಾಮಿ ಮುಕ್ತಿದಾನಂದಜೀ ಮಹಾರಾಜ್, ಬದರಿಕಾಶ್ರಮ ಕ್ಯಾಲಿಫೋರ್ನಿಯಾ (ಯು.ಎಸ್.ಎ) ಕೇಂದ್ರದ ಮಾತಾ ಮಂಗಳಾನಂದಜೀ, ಶೇಷಾದ್ರಿಪುರಂ ಶಿಕ್ಷಣ ದತ್ತಿ ಗೌರವ ಕಾರ್ಯದರ್ಶಿ ಡಾ. ವೂಡೇ ಪಿ. ಕೃಷ್ಣ ಮತ್ತು ಆಶ್ರಮದ ಸಾವಿರಾರು ಭಕ್ತರು ಹಾಜರಿದ್ದರು. ಉದ್ಘಾಟನಾ ಭಾಷಣ ಮಾಡಿದ ಶ್ರೀ ಸ್ವಾಮಿ ರಾಘವೇಶಾನಂದಜೀ ಮಹಾರಾಜ್, ಬದರಿಕಾಶ್ರಮ ವಿದ್ಯಾಶಾಲೆಯು ಗ್ರಾಮೀಣ ಮಕ್ಕಳಿಗಾಗಿ ನಿರ್ಮಿತವಾದ ಒಂದು ಸಂಸ್ಥೆ. ಪ್ರಾಥಮಿಕ ಶಾಲೆಗೆ ಸುಮಾರು 5 ಕೋಟಿ ವೆಚ್ಚ ಮಾಡಿ ಎಲ್ಲ ಮೂಲಭೂತ ಸೌಕರ್ಯವನ್ನು ಒದಗಿಸಿರುವ ರಾಜ್ಯದ ಏಕೈಕ ಸಂಸ್ಥೆಯಾಗಿದ್ದು ಅದನ್ನು ಸಮರ್ಪಕವಾಗಿ ಬಳಸಿಕೊಳ್ಳುವುದು ಈ ಭಾಗದ ಗ್ರಾಮೀಣ ಜನರ ಆದ್ಯಕರ್ತವ್ಯ ಹಾಗೂ ಇದು ಸ್ವಾಮಿ ಓಂಕಾರಾನಂದಜೀರವರ ಒಂದು ಅದ್ಭುತ ಸಾಧನೆಯಾಗಿದೆ ಎಂದು ಶ್ಲಾಘಿಸಿದರು. ಶ್ರೀ ಸ್ವಾಮಿ ಮುಕ್ತಿದಾನಂದಜೀ ಮಾತನಾಡಿ ಪ್ರಾಥಮಿಕ ಶಿಕ್ಷಣವು ಅತ್ಯಂತ ಶಿಸ್ತು ಮತ್ತು ಉತ್ತಮ ರೀತಿಯಲ್ಲಿ ನೀಡಿದಾಗ ಮಾತ್ರ ದೇಶಕ್ಕೆ ಉತ್ತಮ ಪ್ರಜೆಗಳನ್ನು ನೀಡಲು ಸಾಧ್ಯ. ಅಂತಹ ಶಿಕ್ಷಣವನ್ನು ನೀಡುವ ಉದ್ದೇಶದಿಂದಲೇ ಈ ಶಾಲೆಯು ನಿರ್ಮಿತವಾಗಿದೆ ಎಂದು ನುಡಿದರು. ಸಚಿವ ಟಿ.ಬಿ. ಜಯಚಂದ್ರ ಅವರೂ ಮಾತನಾಡಿದರು.

   

Leave a Reply