ಬರ್ಮಾ – ಮಯನ್ಮಾರ್

ಜಗದ್ಗುರು ಭಾರತ ; ಲೇಖನಗಳು - 0 Comment
Issue Date : 30.04.2015

  •  ಬ್ರಿಟಿಷ್ ಅತಿಕ್ರಮಣಕ್ಕೆ ಮುನ್ನ ಭಾರತೀಯ ರಾಜವಂಶಗಳು ಬ್ರಹ್ಮದೇಶದಲ್ಲಿ ಆಳ್ವಿಕೆ ನಡೆಸುತ್ತಿದ್ದ ಉಲ್ಲೇಖಗಳಿವೆ.
  •  ಇಲ್ಲಿನ ಪ್ರಪ್ರಾಚೀನ ವಿಷ್ಣು ಮಂದಿರದಲ್ಲಿ ದೊರೆತ ಶಾಸನದಲ್ಲಿ ದಕ್ಷಿಣ ಭಾರತದ ಸಂತಕವಿ ಕುಲಶೇಖರರ ಮುಕುಂದಮಾಲಾ ಸ್ತೋತ್ರ ಕಂಡುಬರುತ್ತದೆ.
  •  ಪ್ಯು, ಮೋನ್ ಮತ್ತು ಭ್ರಮ್ಮ ಇಲ್ಲಿಯ ಮೂರು ಮುಖ್ಯ ಜನಜಾತಿಗಳು. ಈ ಮೂರೂ ಜಾತಿಗಳು ಭಾರತೀಯ ಸಂಸ್ಕೃತಿಯಿಂದ ಪ್ರೇರಿತವಾಗಿದ್ದವು.
  •  ಭ್ರಮ್ಮ ಕುಲದವರ ಪ್ರಭಾವದಿಂದಲೇ ಭ್ರಮ್ಮದೇಶ (ಬ್ರಹ್ಮದೇಶ) ಎಂಬ ಹೆಸರು ಪಡೆದಿತ್ತು. ಈ ಜಾತಿಯವರು ಅಕ್ಷರಶಃ ಭಾರತೀಯ ಸಂಸ್ಕೃತಿಯ ಅನುಚರರಾಗಿದ್ದರು.
  •  ಪ್ಯು ಜಾತೀಯರು ಭಾರತ ಹಾಗೂ ಚೀನಾ ದೇಶಗಳೆರಡೂ ಸಂಸ್ಕೃತಿಯಿಂದ ಪ್ರೇರಿತರಾಗಿದ್ದರೂ ಬಹುತೇಕ ಅನುಸರಿಸಿದ್ದು ಭಾರತೀಯ ಸಂಸ್ಕೃತಿಯನ್ನೇ.
  •  ಮೋನ್ ಜನಾಂಗೀಯರ ಮೂಲ ಪುರುಷರು ಆಂಧ್ರದ ತೆಲಂಗಾಣದಿಂದ ವಲಸೆ ಹೋದವರು.
  •  ಬ್ರಹ್ಮಪುತ್ರ ನದಿಯು ಭಾರತದ ಅಸೋಮ್‌ನಿಂದ ಬ್ರಹ್ಮದೇಶವನ್ನು ಪ್ರವೇಶಿಸುತ್ತದೆ.
  •  ಮಾಯನ್ಮಾರಿನ (ಅಂದಿನ ಬರ್ಮಾ) ರಾಜಧಾನಿಯಾಗಿದ್ದ ರಂಗೂನ್ ಪ್ರಾಚೀನ ಕಾಲದಲ್ಲಿ ಉತ್ಕಲ ಎಂದು ಕರೆಯಲ್ಪಡುತ್ತಿತ್ತು.
  •  ಪ್ರಾಚೀನ ಕಾಲದಲ್ಲಿ ಇಲ್ಲಿನ ಪೆಗೂ ನಗರವನ್ನು ಹಂಸಾವತಿ ಎಂದೂ ಮೋಲ್ ಮೀನ್ ನಗರವನ್ನು ರಾಮಪುರ ಎಂದೂ ಕರೆಯಲಾಗುತ್ತಿತ್ತು.
  •  ಕಪಿಲವಸ್ತುವನ್ನು ಆಳುತ್ತಿದ್ದ ಬುದ್ಧನ ಕುಲವಾದ ಶಾಕ್ಯ ವಂಶ ಬ್ರಹ್ಮದೇಶವನ್ನು ಆಳಿದ ಪ್ರಮುಖ ರಾಜವಂಶವಾಗಿತ್ತು.
  •  ಶಾಕ್ಯ ಅರಸ ಅಭಿರಾಜ ಬ್ರಹ್ಮದೇಶವನ್ನು ಉತ್ತರ ದಿಕ್ಕಿನ ಮೂಲಕ ಪ್ರವೇಶಿಸಿ ತನ್ನ ಆಡಳಿತ ಸ್ಥಾಪಿಸಿದ ಮತ್ತು ಪ್ರಖ್ಯಾತ ಸಂಕಿಸಾ (ಟಗೌ) ನಗರ ನಿರ್ಮಿಸಿದ.
  •  ಮಾಯನ್ಮಾರ್ ಅಸಾ ಟಗೌ ಗಾ, ಟಗೌ ಅಸಾ ಇಂಡಿಯಾ ಗಾ ಎಂಬ ಮಾತು ಇಲ್ಲಿ ಪ್ರಚಲಿತದಲ್ಲಿದೆ. ಇದರರ್ಥ: ಮಾಯನ್ಮಾರ್ ಆರಂಭ ಟಗೌನಿಂದ, ಟಗೌ ಆರಂಭ ಭಾರತದಿಂದ ಎಂದು.
  •  ಮುಂದೆ ವೈಷ್ಣವ ಪಂಥದ ದಾಸ ವಂಶದ ಅರಸರು ಮಾಯನ್ಮಾರ್ ಅನ್ನು ದೀರ್ಘಕಾಲ ಆಳಿದರು. ಇಲ್ಲಿ ವೈಷ್ಣವ, ಶೈವ ಹಾಗೂ ಶಾಕ್ತ ಸಂಪ್ರದಾಯಗಳು ಸಮನಾಗಿ ಅಸ್ತಿತ್ವದಲ್ಲಿವೆ.
  •  ಸಾಮ್ರಾಟ ಅಶೋಕನ ಕಾಲದಲ್ಲಿ ಮಾಯನ್ಮಾರ್‌ಗೆ ಬೌದ್ಧ ಧರ್ಮದ ಪರಿಚಯವಾಯ್ತು. ಇಂದು ಅಲ್ಲಿನ ಜನಸಂಖ್ಯೆಯ ಬಹುದೊಡ್ಡ ಪಾಲು ಬೌದ್ಧ
    ಧರ್ಮೀಯರದ್ದೇ !
  •  ಬ್ರಹ್ಮದೇಶದಲ್ಲಿ ಬೌದ್ಧರ ಶ್ರದ್ಧಾ ಕೇಂದ್ರವಾದ ಪಗೋಡಾಗಳು ಲಕ್ಷಲಕ್ಷ ಸಂಖ್ಯೆಯಲ್ಲಿವೆ. ರಂಗೂನಿನಲ್ಲಿ ವಿಶಾಲವಾದ ಹಿಂದೂ ದೇಗುಲವಿದೆ.
  •  ಬುದ್ಧಾನುಯಾಯಿ ಅರಸ ರಾಜಾ ಧಮ್ಮ ಜೀವಿ ಕಟ್ಟಿಸಿದ ಪಗೋಡ ಎಲ್ಲಕ್ಕಿಂತ ವಿಶಿಷ್ಟವಾಗಿದ್ದು ವಿಶಿಷ್ಟ ಕಂಪನದಿಂದ ಕೂಡಿದೆ.
  •  ಬ್ರಹ್ಮದೇಶೀಯರ ಬಹುಪಾಲು ತೀರ್ಥಕ್ಷೇತ್ರಗಳು ಭಾರತದಲ್ಲಿವೆ. ತಲತಲಾಂತರದಿಂದಲೂ ಅಲ್ಲಿನವರು ಇಲ್ಲಿಗೆ ತೀರ್ಥಯಾತ್ರೆಗೆಂದು ಬರುವ ಪರಿಪಾಠ ಚಾಲ್ತಿಯಲ್ಲಿದೆ.
  •  ಈ ರಾಷ್ಟ್ರದ ರಾಜನೀತಿ ಹಾಗೂ ಕಾನೂ ಧಮ್ಮಪಥ ಎಂಬ ಗ್ರಂಥವನ್ನು ಆಧರಿಸಿದ್ದು, ಧಾರ್ಮಿಕ ಮೌಲ್ಯಗಳಿಂದ ಕೂಡಿವೆ.
  •  ಧರ್ಮಪಥ ಮನು, ನಾರದ, ಯಾಜ್ಞವಲ್ಕ್ಯರೇ ಮೊದಲಾದ ಸ್ಮತಿಕಾರರ ಬೋಧನೆಗಳನ್ನಾಧರಿಸಿ ಪಾಲಿ ಭಾಷೆಯಲ್ಲಿ ರಚಿತವಾದ ಒಂದು ಶಾಸ್ತ್ರಗ್ರಂಥ.
  •  ಮನುಸ್ಮತಿ ಆಧರಿತ ಮನುಸಾರವನ್ನೂ ಅವರು ವಿವಿಧ ಸಂದರ್ಭಗಳಲ್ಲಿ ಅನುಸರಿಸುತ್ತಾರೆ.
  •  ಇಲ್ಲಿನ ಬೌದ್ಧ ಧರ್ಮವೂ ಹಿಂದೂ ಧರ್ಮದ ಸಾರವನ್ನು ಹೀರಿಕೊಂಡೇ ಬೆಳೆದು ಹಬ್ಬಿದೆ. ಇದರ ಹಲವು ಆಚರಣೆಗಳಲ್ಲಿ ಸನಾತನ ಸಂಸ್ಕೃತಿಯ ಕುರುಹುಗಳು ಕಾಣಿಸುತ್ತವೆ.
  •  ಸನಾತನ ಭಾರತೀಯ ಪದ್ಧತಿಯಂತೆ ಪಂಚಭೂತಗಳ ಆರಾಧನೆ, ಶಾಂತಿಮಂತ್ರವನ್ನು ಹೋಲುವ ಪ್ರಾರ್ಥನೆಗಳನ್ನು ಇಲ್ಲಿನ ಬೌದ್ಧ ಧರ್ಮವು ಅಳವಡಿಸಿಕೊಂಡಿದೆ.
  •  ಭಾರತೀಯ ಪರಂಪರೆಯಂತೆ ಬ್ರಹ್ಮದೇಶದಲ್ಲೂ ಪ್ರಕೃತಿ ಆರಾಧನೆಗೆ ಮಹತ್ವವಿದೆ. ಮರ, ನದಿ, ಪಶುಪಕ್ಷಿಗಳ ಪೂಜೆಯನ್ನು ಇಲ್ಲಿ ಯಥೇಚ್ಛವಾಗಿ ಕಾಣಬಹುದಾಗಿದೆ.
  •  ಬುದ್ಧ, ಈಶ್ವರ, ವಿಷ್ಣು, ರಾಮ, ಕೃಷ್ಣ, ಗಣಪತಿ ಹಾಗೂ ದುರ್ಗೆ ಇಲ್ಲಿ ಹೆಚ್ಚು ಪೂಜೆಗೊಳ್ಳುವ ದಂಪತಿಗಳು. ಕಾರ್ತಿಕೋತ್ಸವ, ದೀಪಾವಳಿ, ಯುಗಾದಿ, ದುರ್ಗಾಪೂಜೆ ಮುಂತಾದವು ಸಂಭ್ರಮದ ಹಬ್ಬಗಳು.
  •  ನಮ್ಮ ರಾಮಾಯಣ ಇಲ್ಲಿ ಯಾಮ ಝೆತ್ ದಾವ್ (ಯಾಮಾಯನ) ಎಂದು ಪರಿಚಿತ. ರಾಜಾ ಅನಾವರ್ತ ಇದನ್ನು ತನ್ನ ನಾಡಿನಾದ್ಯಂತ ಜನಪ್ರಿಯಗೊಳಿಸಿದ್ದ.
  •  ಬರ್ಮೀ ಭಾಷೆ ಸಂಸ್ಕೃತ ಹಾಗೂ ಪಾಳಿಯಿಂದ ಸಾಕಷ್ಟು ಪ್ರಭಾವಿತವಾಗಿರುವುದನ್ನು ಗುರುತಿಸಬಹುದು. ಭಾಷೆಯೊಂದಿಗೆ ಅದರ ಸಂಸ್ಕೃತಿಯ ಪ್ರಭಾವವೂ ಆಗುತ್ತದೆ ಎನ್ನುವುದಕ್ಕೆ ಇದು ಉತ್ತಮ ಉದಾಹರಣೆ.
  •  ಮೆಸೋ-ಕೊಲಂಬಿಯನ್ ಅಮೆರಿಕಾದ (ಮೆಕ್ಸಿಕೋ ಪ್ರಾಂತ್ಯ) ತ್ರಿವಳಿ ಸಂಸ್ಕೃತಿಗಳು ಎಂದು ಕರೆಸಿಕೊಳ್ಳುವ ಮಾಯಾ, ಇಂಕಾ ಹಾಗೂ ಅಜ್‌ಟೆಕ್ ಸಂಸ್ಕೃತಿಗಳು ನೂರಾರು ವರ್ಷಗಳ ಕಾಲ ವೈಭವ ಮೆರೆದಿದ್ದವು. ಇವುಗಳಲ್ಲಿ ಮಾಯನ್ನರ ಸಂಸ್ಕೃತಿ ಅತ್ಯಂತ ಪ್ರಾಚೀನವಾದದ್ದು.
  •  ಈ ತ್ರಿವಳಿ ಸಂಸ್ಕೃತಿಗಳನ್ನು ಇತಿಹಾಸಕಾರರು ಇಂಡಿಯನ್ ಕ್ರೇಡಲ್ಸ್ ಆಫ್ ಸಿವಿಲೈಸೇಷನ್ ಎಂದು ಕರೆಯುತ್ತಾರೆ. ಅಮೆರಿಕಾ ನಾಗರಿಕತೆಯ ಭಾರತೀಯ ತೊಟ್ಟಿಲುಗಳೆಂದು ಅವು ಗುರುತಿಸಿಕೊಳ್ಳುತ್ತವೆ.

 

   

Leave a Reply