ಬಸವನ ಬಾಗೇವಾಡಿಯಲ್ಲಿ ಗೋಕುಲಾಷ್ಟಮಿ

ಜಿಲ್ಲೆಗಳು - 0 Comment
Issue Date : 19.09.2014

ಬಸವನಬಾಗೇವಾಡಿ: ರಾಷ್ಟ್ರೀಯ ಹಬ್ಬಗಳ ಜೊತೆಗೆ ವರ್ಷಪೂರ್ತಿಯಾಗಿ ಹಿಂದೂ ಧರ್ಮದಲ್ಲಿ ವಿವಿಧ ವಿಶಿಷ್ಟವಾದ ಹಬ್ಬ-ಆಚರಣೆಗಳು ಐತಿಹಾಸಿ ಹಿನ್ನೆಲೆ ಪರಿಚಯಿಸುವ ಜೊತೆಗೆ ಹೆಮ್ಮೆಯ ಪ್ರತೀಕವಾಗಿವೆ ಎಂದು ನ್ಯಾಯವಾದಿ ಮಲ್ಲಿಕಾರ್ಜುನ ಗೊಳಸಂಗಿ ಹೇಳಿದರು.
ಸ್ಥಳೀಯ ಶ್ರೀ ಗುರುಕೃಪಾ ವಿದ್ಯಾಸಂಸ್ಥೆಯ ಶ್ರೀ ಗುರು ಕೃಪಾ ಹಿರಿಯ ಪ್ರಾಥಮಿಕ ಶಾಲೆ ಹಾಗೂ ಚಾಣಕ್ಯ ಶಿಶುವಿಹಾರ ಮತ್ತು ಚಾಣಕ್ಯ ಶಿಶುನಿಕೇತನ ಆಂಗ್ಲ ಮಾಧ್ಯಮ ಶಾಲೆಗಳ ಸಂಯುಕ್ತಾಶ್ರಯದಲ್ಲಿ ಹಮ್ಮಿಕೊಂಡ ಕೃಷ್ಣಗೋಕುಲಾಷ್ಠಮಿ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ನಮ್ಮ ದೇಶದ ಇತಿಹಾಸವನ್ನು ಮುಂದಿನ ಪೀಳಿಗೆಗೆ ತಲುಪಿಸುವ ಕಾರ‌್ಯ ಶ್ಲಾಘನೀಯವಾಗಿದ್ದು ಮಕ್ಕಳಲ್ಲಿ ದೇಶದ ಪರಂಪರೆ ಹಾಗೂ ದೇಶಭಕ್ತಿಯನ್ನು ಇಮ್ಮಡಿಗೊಳಿಸುತ್ತದೆ ಎಂದು ಹೇಳಿದರು.
ಅಧ್ಯಕ್ಷತೆ ವಹಿಸಿದ ಶಾಲೆಯ ಮುಖ್ಯಗುರುಗಳಾದ ಬಿ.ಎಂ.ಬಿದರಕುಂದಿ ಮಾತನಾಡಿ ಶ್ರೀಕೃಷ್ಣ ಪರಮಾತ್ಮನು ಭಗವದ್ಗೀತೆಯಲ್ಲಿ ಧರ್ಮವನ್ನು ರಕ್ಷಿಸಲು ಶಿಷ್ಟರನ್ನು ರಕ್ಷಿಸಿ ದುಷ್ಟರನ್ನು ಶಿಕ್ಷಿಸಲು ಅವತರಿಸುತ್ತೇನೆ ಎಂದು ಹೇಳಿದ್ದು ಭಾರತ ದೇಶದಲ್ಲಿ ಹಲವಾರು ಮಹಾಪುರುಷರು ಅವತರಿಸಿದ್ದು ಅವರ ಆದರ್ಶ ವಿಚಾರಧಾರೆಗಳನ್ನು ಜೀವನದಲ್ಲಿ ಅಳವಡಿಸಿಕೊಂಡು ನೆಮ್ಮದಿ ಜೀವನ ಸಾಗಿಸಬೇಕೆಂದು ಹೇಳಿದರು.
ಶಿಕ್ಷಕ ರಮೇಶ ಅರಸನಾಳ ಸ್ವಾಗತಿಸಿದರು, ಅರ್ಜುನ ಹರಿಜನ ನಿರೂಪಿಸಿದರು, ಎಸ್.ಆಯ್.ಬಿರಾದಾರ ವಂದಿಸಿದರು. ಇದೇ ಸಂದರ್ಭದಲ್ಲಿ ಕೃಷ್ಣ-ರಾಧೆ ವೇಷಧಾರಿ ಮಕ್ಕಳಿಗೆ ಬಹುಮಾನ ನೀಡಿ ಗೌರವಿಸಲಾಯಿತು. ನೂರಾರು ಸಂಖ್ಯೆಯಲ್ಲಿ ಪಾಲಕರು ಪಾಲ್ಗೊಂಡಿದ್ದರು.
ಕಾರ್ಯಕ್ರಮಕ್ಕೂ ಮುಂಚೆ ಶ್ರೀಕೃಷ್ಣನ ತೊಟ್ಟಿಲು ಕಾರ್ಯಕ್ರಮವು ನಡೆಯಿತು, ಮಾತೆಯರು ಶ್ರೀಕೃಷ್ಣನಿಗೆ ತೊಟ್ಟಿಲು ಪೂಜೆ ಸಲ್ಲಿಸಿ ಬಾಲಕೃಷ್ಣನನ್ನು ತೊಟ್ಟಿಲಿನಲ್ಲಿ ಹಾಕಿ ಗೀತೆ ಹೇಳಿದರು, ನಂತರ ನಡೆದ ಕೃಷ್ಣ-ರಾಧೆ ವೇಷಧಾರೆ ಮಕ್ಕಳ ಆಕರ್ಷಕ ಶೋಭಾಯಾತ್ರೆಯು ಪಟ್ಟಣದ ಪ್ರಮುಖ ಬೀದಿಗಳಲ್ಲಿ ಜರುಗಿತು, ಮೆರವಣಿಗೆಯಲ್ಲಿ 165ಮಕ್ಕಳು ಪಾಲ್ಗೊಂಡಿದ್ದರು, ಇದೇ ವೇಳೆಯಲ್ಲಿ ಕೃಷ್ಣ ಮೊಸರಿನ ಗಡಿಗೆಯನ್ನು ಒಡೆದು ಶ್ರೀಕೃಷ್ಣ ಗೋಕುಲಾಷ್ಟಮಿಯನ್ನು ಸಂಭ್ರಮದಿಂದ ಆಚರಿಸಲಾಯಿತು.

   

Leave a Reply