ಬಿಜೆಪಿ ಅಧಿಕೃತ ವಿಪಕ್ಷ

ರಾಜ್ಯ ರಾಜಕೀಯ - 0 Comment
Issue Date : 22.01.2014

ವಿಧಾನಸಭೆಯ ಪ್ರತಿಪಕ್ಷ ಸ್ಥಾನವನ್ನು ಬಿಜೆಪಿ ವಹಿಸಿಕೊಳ್ಳಲಿದೆ. ಈ ಸಂಬಂಧ ವಿಧಾನಸಭೆ ಸಭಾಧ್ಯಕ್ಷ ಕಾಗೋಡು ತಿಮ್ಮಪ್ಪ ಅವರು ಜ. 22ರಂದು ( ಬುಧವಾರ) ಅಧಿಕೃತವಾಗಿ ಪ್ರಕಟಿಸಲಿದ್ದಾರೆ. 

ಬೆಂಗಳೂರಿನಲ್ಲಿ ಜ. 21ರಂದು ಸುದ್ಧಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕೆಜೆಪಿಯ ಆರು ಶಾಸಕರ ಪೈಕಿ ನಾಲ್ವರು ಬಿಜೆಪಿಗೆ ಸೇರುವುದಾಗಿ ಪತ್ರ ನೀಡಿದ್ದು,  ಈ ನಾಲ್ವರನ್ನು ಪಕ್ಷಕ್ಕೆ ಸೇರಿಸಿಕೊಳ್ಳುವುದಾಗಿ ಬಿಜೆಪಿಯೂ ಒಪ್ಪಿಗೆ ಪತ್ರ ನೀಡಿದೆ. ಹೀಗಾಗಿ ಇದು ಪಕ್ಷಾಂತರ ನಿಷೇಧ ಕಾಯ್ದೆಯಡಿ ಬರುವುದಿಲ್ಲ ಎಂದು ತಿಳಿಸಿದರು. 

ಎಲ್ಲವೂ ಕಾನೂನಾತ್ಮಕವಾಗಿರುವುದರಿಂದ ಹಾಗೂ ಜೆಡಿಎಸ್‍ಗಿಂತ ಹೆಚ್ಚಿನ ಸದಸ್ಯ ಬಲ ಬಿಜೆಪಿಗೆ ಸಿಗುವುದರಿಂದ ಬಿಜೆಪಿಯೇ ಅಧಿಕೃತ ಪ್ರತಿಪಕ್ಷ ಸ್ಥಾನ ಅಲಕಂರಿಸಲಿದೆ. ಆದರೆ, ಮೊದಲ ದಿನ ರಾಜ್ಯಪಾಲರ ಭಾಷಣಕ್ಕೆ ಸೀಮಿತವಾದ್ದರಿಂದ ಪ್ರತಿಪಕ್ಷ ಸ್ಥಾನದ ಘೋಷಣೆಯನ್ನು ಬುಧವಾರ ಮಾಡಲಿದ್ದು, ಸ್ಥಾನ ಸಂಚಿಕೆ ಪ್ರಕ್ರಿಯರಯನ್ನು  ಗುರುವಾರ ಮಾಡುವುದಾಗಿ ಸ್ಪಷ್ಟಪಡಿಸಿದರು.

ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ಮತ್ತು ಜೆಡಿಎಸ್ ತಲಾ 40 ಸ್ಥಾನ ಪಡೆದಿದ್ದವು. ಜೆಡಿಎಸ್‍ಗೆ ಶೇಕಡಾವಾರು ಮತಗಳು ಹೆಚ್ಚು ಬಂದಿದ್ದರಿಂದ ಪ್ರತಿಪಕ್ಷ ಸ್ಥಾನವನ್ನು ಆ ಪಕ್ಷಕ್ಕೆ ನೀಡಲಾಗಿತ್ತು. ಇದೀಗ ತನ್ನ ಸಂಖ್ಯೆಯನ್ನು ಬಿಜೆಪಿ 44 ಕ್ಕೆ ಏರಿಕೆ ಮಾಡಿಕೊಂಡಿರುವುದರಿಂದ ಕಳೆದ ಆರೇಳು ತಿಂಗಳಿಂದ ಅಧಿಕೃತ ಪ್ರತಿಪಕ್ಷವಾಗಿದ್ದ ಜೆಡಿಎಸ್ ಆ  ಸ್ಥಾನವನ್ನು ಕಳೆದುಕೊಳ್ಳಲಿದೆ.

   

Leave a Reply