ಬೆಂಗಳೂರಿನಲ್ಲಿ ನಮೋ ಮಂತ್ರ

ಚುನಾವಣೆಗಳು ; ಭಾರತ - 0 Comment
Issue Date : 18.11.2013

ಬೆಂಗಳೂರಿನಲ್ಲಿ ನ.17 ರಂದು ಐತಿಹಾಸಿಕ ‘ಭಾರತ ಗೆಲ್ಲಿಸಿ’ ಬೃಹತ್ ಸಮಾವೇಶದಲ್ಲಿ ಪಾಲ್ಗೊಂಡ ಲಕ್ಷೋಪಲಕ್ಷ ಜನರನ್ನು ನೋಡಿದ ಶ್ರೀ ನರೇಂದ್ರ ಮೋದಿಯವರು

ಪುಳಕಿತರಾದರು. ” ಬೆಂಗಳೂರಿನ ಬಂಧು, ಭಗಿನಿಯರೇ, ನಿಮಗೆಲ್ಲಾ ನನ್ನ ನಮಸ್ಕಾರಗಳು, ಬೆಂಗಳೂರು ನಿರ್ಮಾತೃ ಕೆಂಪೇಗೌಡ, ಸಂತ ಬಸವೇಶ್ವರ, ಕನಕದಾಸ, ಕಿತ್ತೂರು ರಾಣಿ ಚೆನ್ನಮ್ಮ ಎಲ್ಲರಿಗೂ ನನ್ನ ಸತ್ಪ್ರಮಾಣಗಳು” ಎಂದು ತಮ್ಮ ಭಾಷಣವನ್ನು ಆರಂಭಿಸಿದ ಮೋದಿಯವರು  ದೇಶದ ವಿಕಾಸಯಾತ್ರೆಯ ಹಾದಿಯಲ್ಲಿ ಬೆಂಗಳೂರು ಮೈಲಿಗಲ್ಲು ಸಾಧಿಸಿದ್ದು, ಕರ್ನಾಟಕ ಮತ್ತು ಬೆಂಗಳೂರಿನ ಹೆಸರನ್ನಷ್ಟೇ ಅಲ್ಲದೆ ಇಡೀ ದೇಶದ ಹೆಸರನ್ನು ಜಗದ್ವಿಖ್ಯಾತಗೊಳಿಸಿದೆ ಎಂದು ಸಂತಸ ವ್ಯಕ್ತಪಡಿಸಿದರು. ಬೆಂಗಳೂರು ಕೇವಲ ವಿಜ್ಞಾನ, ಮಾಹಿತಿ ತಂತ್ರಜ್ಞಾನ ಕ್ಷೇತ್ರದಲ್ಲಿ ಮಾತ್ರವಲ್ಲ ಜ್ಞಾನಕ್ಞೇತ್ರದಲ್ಲಿಯೂ ಸಾಕಷ್ಟು ಅಭಿವೃದ್ಧಿ ಮಾಡಿದೆ.  ಅದರಲ್ಲೂ ಉನ್ನತ ಶಿಕ್ಷಣದಲ್ಲಿ ಬೆಂಗಳೂರು ನಗರ ಭಾರೀ ಪ್ರಗತಿ ಸಾಧಿಸಿದೆ ಎಂದು ಶ್ಲಾಘಿಸಿದರು.  ಈ ಮೂಲಕ ಬೆಂಗಳೂರು ಜ್ಞಾನದ ನಗರ ಎಂಬುದು ಜಗಜ್ಜಾಹೀರಾಗಿದೆ ಎಂದು ತಿಳಿಸಿದರು.  

ಕೇಂದ್ರದಲ್ಲಿ ಯುಪಿಎ ಸರ್ಕಾರ ಬಂದಾಗಿನಿಂದಲೂ ಅಭಿವೃದ್ಧಿ ಹೊಡೆತ ಬೀಳುತ್ತಲೇ ಇದೆ.  ಯುಪಿಎ-1 ಅಧಿಕಾರಕ್ಕೆ ಬಂದು ನಿರುದ್ಯೋಗ ಸಮಸ್ಯೆ ಎದ್ದು ಕಾಡಲಾರಂಭಿಸಿತು.  ವಾಜಪೇಯಿ ಅವರ ಕಾಲದಲ್ಲಿ ಶೇಕಡಾ 40 ರಷ್ಟಿದ್ದ  ಅಭಿವೃದ್ಧಿ ದರ ಶೇ.25ಕ್ಕೆ ಕುಸಿಯಿತು.  ಯುಪಿಎ-2 ಅಧಿಕಾರಕ್ಕೆ ಬಂದಾಗ ಅಭಿವೃದ್ಧಿ ದರ  ಶೇ.9ಕ್ಕೆ  ಇಳಿದಿದೆ.  ಸಾಫ್ಟವೇರ್ ಉತ್ಪನ್ನಗಳ ರಫ್ತು ನಿಂತಿದೆ.  ಹೀಗಿರುವಾಗ ಉದ್ಯೋಗ ತಾನೆ ಎಲ್ಲಿಂದ ಸಿಕ್ಕೀತು.  ದೇಶದ ಆರ್ಥಿಕ ಸ್ಥಿತಿ ಸಂಕಷ್ಟದಲ್ಲಿದೆ.  ರೂಪಾಯಿ ಮೌಲ್ಯ ಕಳೆದುಕೊಂಡಂತೆ, ಇಡೀ ರಾಷ್ಟ್ರದಲ್ಲಿ ಯುಪಿಎ ಸರ್ಕಾರ ಬೆಲೆಕಳೆದುಕೊಳ್ಳುತ್ತಿದೆ.  ಯುಪಿಎ ಸರ್ಕಾರ ಅಧಿಕಾರಕ್ಕೆ ಬಂದು ದೇಶದ ರೂಪಾಯಿಯನ್ನು ಐಸಿಯುನಲ್ಲಿಟ್ಟಿದೆ ಎಂದು ಕೇಂದ್ರ ಸರ್ಕಾರವನ್ನು ಟೀಕಿಸಿದರು.    

ಸಮಾವೇಶಕ್ಕೆ ಸಂಗ್ರಹಿಸಿದ ನೋಂದಣಿ ಶುಲ್ಕ ರೂ. 35 ಲಕ್ಷ  ಹಣವನ್ನು ಗುಜರಾತ್‍ನಲ್ಲಿ ಸರದಾರ್ ವಲ್ಲಭಬಾಯಿ ಪಟೇಲ್ ಅವರ ಲೋಹದ ಪುತ್ಥಳಿ ನಿರ್ಮಾಣದ  ಸಲುವಾಗಿ ಚೆಕ್ ನ್ನು ಪಕ್ಷದ ರಾಜಾಧ್ಯಕ್ಷ ಪ್ರಹ್ಲಾದ ಜೋಶಿಯವರು ನರೇಂದ್ರ ಮೋದಿ ಅವರಿಗೆ ಹಸ್ತಾಂತರಿಸಿದರು.

ಸಮಾವೇಶದಲ್ಲಿ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷರಾದ ರಾಜನಾಥ್ ಸಿಂಗ್, ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಅನಂತಕುಮಾರ್, ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ನಿರ್ಮಲ್ ಕುಮಾರ್ ಸುರಾನ,  ಬಿಜೆಪಿ ರಾಜಾಧ್ಯಕ್ಷರು   ಮೊದಲಾದ ಗಣ್ಯರು ವೇದಿಕೆಯಲ್ಲಿ ಉಪಸ್ಥಿತರಿದ್ದರು.  

   

Leave a Reply