ಬೆಂಗಳೂರಿನಲ್ಲಿ ‘ವೈಫೈ’ ಸೇವೆ ಆರಂಭ

ಬೆಂಗಳೂರಿನ ಸುದ್ದಿಗಳು - 0 Comment
Issue Date : 25.01.2014

ಸಿಲಿಕಾನ್‌ಸಿಟಿ ಎಂದೇ ಪ್ರಸಿದ್ದವಾಗಿರುವ ಬೆಂಗಳೂರಿಗೆ ಮತ್ತೊಂದು ಕಿರೀಟ ಸಿಕ್ಕಿದೆ. ನಗರದ ಬ್ರಿಗೇಡ್‌ ರೋಡ್‌ ಮತ್ತು ಎಂಜಿ ರೋಡ್‌ನಲ್ಲಿ ಫ್ರೀ ವೈಫೈ ಹಾಟ್‌ಸ್ಪಾಟ್‌ ನಿರ್ಮಿಸಲು ಯೋಜನೆ ರೂಪಿಸಿದ್ದು, ಈ ಮೂಲಕ ಉಚಿತ ವೈಫೈ ಹಾಟ್‌ಸ್ಪಾಟ್‌ ಸಂಪರ್ಕ ಪಡೆದ ದೇಶದ ಮೊದಲ ನಗರ ಎಂಬ ಪ್ರಖ್ಯಾತಿ ಬೆಂಗಳೂರಿಗೆ…

ರಾಜ್ಯ ಐಟಿ-ಬಿಟಿ, ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆ, ಐಸಿಟಿ ಸಂಸ್ಥೆಯು ಡಿ- ವೋಸ್ ಬ್ರಾಡ್‌ಬ್ಯಾಂಡ್ ಸಂಸ್ಥೆ ಸಹಯೋಗದಲ್ಲಿ ಏರ್ಪಡಿಸಿದ್ದ ಸಮಾರಂಭದಲ್ಲಿ ಐಟಿ-ಬಿಟಿ ಖಾತೆ ಸಚಿವ ಎಸ್.ಆರ್.ಪಾಟೀಲ್ `ನಮ್ಮ ವೈಫೈ` ಎಂಬ ಉಚಿತ ವೈಫೈ ಸೇವೆಗೆ ಚಾಲನೆ ನೀಡಿದರು. ಮೊದಲ ಹಂತದಲ್ಲಿ ಎಂ.ಜಿ.ರಸ್ತೆ, ಬ್ರಿಗೇಡ್ ರಸ್ತೆ, ಸಿಎಂಎಚ್ ರಸ್ತೆ, ಶಾಂತಿನಗರ ಟಿಟಿಎಂಸಿ, ಯಶವಂತಪುರ ಟಿಟಿಎಂಸಿ, ಕೋರಮಂಗಲ ಟಿಟಿಎಂಸಿಯಲ್ಲಿ ಈ ಸೇವೆ ಲಭ್ಯವಿದೆ ಎಂದು ಹೇಳಿದರು. ಉಚಿತ ವೈಫೈ ಸೇವೆಯನ್ನು ಮುಂದಿನ ದಿನಗಳಲ್ಲಿ ಬೆಂಗಳೂರಿನ 10 ಸ್ಥಳಗಳಿಗೆ ವಿಸ್ತರಿಸಲಾಗುವುದು. ಹುಬ್ಬಳ್ಳಿ- ಧಾರವಾಡ, ಮಂಗಳೂರು, ಬೆಳಗಾವಿ, ಮಂಗಳೂರು ಮುಂತಾದ ನಗರಗಳಿಗೆ ವಿಸ್ತರಿಸುವ ಚಿಂತನೆಯೂ ಸರ್ಕಾರದ ಮುಂದಿದೆ ಎಂದು ತಿಳಿಸಿದರು.

ಬಳಕೆ ಹೇಗೆ : ಸದ್ಯ ಉಚಿತ ವೈಫೈ ಸೇವೆ ಪ್ರತಿ ಸೆಕೆಂಡ್‌ಗೆ 512 ಕೆಬಿ ವೇಗದಲ್ಲಿ ಕಾರ್ಯ ನಿರ್ವಹಿಸಲಿದೆ. ಮೂರು ಗಂಟೆ ನಿರಂತರವಾಗಿ ಉಪಯೋಗಿಸಬಹುದಾಗಿದ್ದು, 50 ಎಂಬಿ ಡೇಟಾ ಬಳಸಬಹುದು. ಎಂ.ಜಿ.ರಸ್ತೆ ಹಾಗೂ ಬ್ರಿಗೇಡ್ ರಸ್ತೆಯಲ್ಲಿ ಒಮ್ಮೆಗೆ 2,500 ಮಂದಿ ವೈಫೈ ಬಳಸಬಹುದಾಗಿದೆ.

ದುರ್ಬಳಕೆ ಮಾಡಿದರೆ ಪತ್ತೆ : ಐಟಿ-ಬಿಟಿ, ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆ ಕಾರ್ಯದರ್ಶಿ ಶ್ರೀವತ್ಸ ಕೃಷ್ಣ, ಮಾತನಾಡಿ ಈ ಸೇವೆ ಬಳಸುವವರ ಮಾಹಿತಿ, ಯಾವ ವೆಬ್‌ಸೈಟ್ ವೀಕ್ಷಿಸಿದರು, ಏನು ಡೌನ್‌ಲೋಡ್ ಮಾಡಿದ್ದಾರೆ ಎಂಬ ವಿವರಗಳು ದಾಖಲಾಗುತ್ತದೆ. ಅಲ್ಲದೇ ದುರ್ಬಳಕೆಯಾದರೆ ಆ ಮಾಹಿತಿಯೂ ದಾಖಲಾಗುತ್ತದೆ. ಇದರಿಂದ ದುರ್ಬಳಕೆ ಮಾಡಿಕೊಂಡವರನ್ನು ಸುಲಭವಾಗಿ ಪತ್ತೆ ಹಚ್ಚಬಹುದು ಎಂದು ಹೇಳಿದರು. ವೈಫೈ ಸೇವೆಯನ್ನು ಆರಂಭಿಸಿರುವ ಡಿ-ವೋಸ್ ಬ್ರಾಡ್‌ಬ್ಯಾಂಡ್ ಸಂಸ್ಥೆಯ ನಿರ್ದೇಶಕ ರಮೇಶ್ ಸತ್ಯ ಮಾತನಾಡಿ, ಉಚಿತ ವೈ ಫೈ ಸೇವೆಯಲ್ಲಿ ಸಕಾಲ, ಜಲಮಂಡಳಿ ಸೇರಿದಂತೆ ಸರ್ಕಾರದ ನಾನಾ ಇಲಾಖೆಗಳ ಸೇವೆಯನ್ನು ಬಳಸಬಹುದಾಗಿದೆ. ಭವಿಷ್ಯದಲ್ಲಿ ಪಾರ್ಕಿಂಗ್ ನಿರ್ವಹಣೆ ಹಾಗೂ ತ್ಯಾಜ್ಯ ವಿಲೇವಾರಿಗೂ ಈ ತಂತ್ರಜ್ಞಾನ ಬಳಸಬಹುದಾಗಿದೆ ಎಂದರು.

   

Leave a Reply