ಬೆಂಗಳೂರಿನಿಂದ ವಿಶೇಷ ಪ್ರವಾಸಿ ರೈಲು

ಜಿಲ್ಲೆಗಳು - 0 Comment
Issue Date : 18.9.2014

ಬೆಂಗಳೂರು: ಭಾರತೀಯ ರೈಲ್ವೆ ಕರ್ನಾಟಕ ಮತ್ತು ಮಹಾರಾಷ್ಟ್ರ ರಾಜ್ಯಗಳ ಪ್ರೇಕ್ಷಣೀಯ ಸ್ಥಳಗಳನ್ನು ವೀಕ್ಷಿಸಲು ಹೊಸ ಪ್ರವಾಸಿ ಯೋಜನೆಯನ್ನು ತಯಾರಿಸಿದೆ. ಭಾರತೀಯ ರೈಲ್ವೆ ಆಹಾರ ಪೂರೈಕೆ ಮತ್ತು ಪ್ರವಾಸೋದ್ಯಮ ನಿಗಮದ ವತಿಯಿಂದ ಬೆಂಗಳೂರಿನಿಂದ ವಿಶೇಷ ರೈಲು ಹೊರಡಲಿದ್ದು, ಪ್ರವಾಸಿ ಸ್ಥಳಗಳನ್ನು ವೀಕ್ಷಿಸಲು ಅವಕಾಶ ಕಲ್ಪಿಸಲಾಗಿದೆ. ಕೇಂದ್ರ ರೈಲ್ವೆ ಬಜೆಟ್‌ನಲ್ಲಿ ಘೋಷಿಸಿದಂತೆ ಪ್ರವಾಸೋದ್ಯಮಕ್ಕೆ ಆದ್ಯತೆ ನೀಡಲು ಈ ವಿಶೇಷ ರೈಲು ವ್ಯವಸ್ಥೆಯನ್ನು ಮಾಡಲಾಗಿದೆ. ಈ ಹೊಸ ಪ್ರವಾಸ ಪ್ಯಾಕೇಜ್ ಮೊಟ್ಟ ಮೊದಲ ಬಾರಿಗೆ ಎಲ್ಲಾ ವರ್ಗದ ಪ್ರಯಾಣಿಕರಗೂ ಲಭ್ಯವಾಗುವಂತೆ ಕಡಿಮೆ ವೆಚ್ಚದಲ್ಲಿ ರೂಪಿಸಲಾಗಿದೆ. ಈ ಯೋಜನೆಯನ್ನು ಭಾರತೀಯ ರೈಲ್ವೆ ಆಹಾರ ಪೂರೈಕೆ ಮತ್ತು ಪ್ರವಾಸೋದ್ಯಮ ನಿಗಮ ರೂಪಿಸಿದೆ. ಸುಖ ಮಂಗಳಂ ಎಕ್ಸ್‌ಪ್ರೆಸ್ ಬೆಂಗಳೂರು ಎಂಬ ವಿಶೇಷ ರೈಲು ಇದಾಗಿದ್ದು, ಈ ಯೋಜನೆಗಾಗಿ ವಿಶೇಷವಾಗಿ ನವೀಕರಣಗೊಂಡಿರುವ ಬೋಗಿಗಳನ್ನು ಸಿದ್ಧಪಡಿಸಲಾಗುತ್ತಿದೆ.

 ಈ ಪ್ರವಾಸಿ ರೈಲಿನಲ್ಲಿ ಪ್ರವಾಸಿಗರಿಗೆ ವಸತಿ, ರಸ್ತೆ ಪ್ರಯಾಣ, ಸೈಟ್ ಸೀಯಿಂಗ್ ಮತ್ತು ಊಟದ ವ್ಯವಸ್ಥೆಯನ್ನು ನೀಡುವ ಜೊತೆಗೆ ಪ್ರವಾಸಿ ಮಾರ್ಗದರ್ಶಕರ ಮೂಲಕ ಪ್ರೇಕ್ಷಣೀಯ ಸ್ಥಳಗಳ ಪರಿಚಯವನ್ನು ನೀಡಲಾಗುತ್ತದೆ. ಪ್ರವಾಸದಲ್ಲಿ ಪ್ರಯಾಣಿಕರಿಗೆ ಆಹಾರ ಒದಗಿಸಲು ಪ್ರತ್ಯೇಕ ಆಹಾರ ತಯಾರಿಕೆ ಬೋಗಿಯನ್ನು ಈ ರೈಲು ಒಳಗೊಂಡಿದೆ. 

   

Leave a Reply