ಬೇಲಿಯೇ ಹೊಲ ಮೇದಲ್ಲಿ ಕಾಯುವವರಾರು?

ಚಂದ್ರಶೇಖರ ಭಂಡಾರಿ - 0 Comment
Issue Date : 30.4.2016

ಸತ್ಯಾಗ್ರಹಿಗಳು ತಾವು ಜುಲ್ಮಾನೆ ಕಟ್ಟಬಾರದು ಎಂಬುದು ಸರ್ವಸಾಮಾನ್ಯವಾಗಿ ನಿರ್ಧಾರಿತವಾಗಿದ್ದ ನೀತಿ. ಜುಲ್ಮಾನೆಯ ಬದಲಿಗೆ ಹೆಚ್ಚಿನ ಶಿಕ್ಷೆ ಅನುಭವಿಸುವುದು ಎಲ್ಲರೂ ಅನುಸರಿಸುತ್ತಿದ್ದ ಕ್ರಮ. ಆದರೆ ಈ ರೀತಿ ಹೆಚ್ಚಿನ ಶಿಕ್ಷೆ ಅನುಭವಿಸಿದರೂ ಪೊಲೀಸರು ಜುಲ್ಮಾನೆ ಹಣವನ್ನು ವಸೂಲು ಮಾಡಲು ಬಲಾತ್ಕರಿಸುತ್ತಿದ್ದರು. ವಾಸ್ತವಿಕವಾಗಿ ಅದು ಅನ್ಯಾಯವಷ್ಟೇ ಅಲ್ಲ, ನ್ಯಾಯಾಲಯದ ನಿಂದನೆಯೂ ಆಗುತ್ತದೆ. ಆದರೆ ಕಾನೂನು ಪಾಲಕರಾದ ಪೊಲೀಸರೇ ಅನ್ಯಾಯ ಮಾಡುತ್ತಿರಬೇಕಾದಲ್ಲಿ ಅವರನ್ನು ಪ್ರಶ್ನಿಸುವವರಾರು? ಬೇಲಿಯೇ ಹೊಲ ಮೇಯುತ್ತಿರಬೇಕಾದಲ್ಲಿ ಕಾವಲು ಮಾಡುವವರು ಯಾರು?
ನನ್ನನ್ನೇ ಹರಾಜು ಹಾಕಿ
ವಿದರ್ಭ ಪ್ರದೇಶದ ಬರಾರ್ ಪ್ರಾಂತದಲ್ಲಿನ ಮೆಹಕರ್ ತಾಲೂಕಿನಲ್ಲಿ ಸತ್ಯಾಗ್ರಹಿಗಳಿಗೆ ವಿಧಿಸಲಾಗಿದ್ದ ಜುಲ್ಮಾನೆಯ ಹಣವನ್ನು ವಸೂಲು ಮಾಡುವ ಸಲುವಾಗಿ ಪೊಲೀಸರು ಅವರ ಆಭರಣಗಳನ್ನೂ ಜಪ್ತುಗೊಳಿಸಿ ಹರಾಜು ಹಾಕಿದ್ದರು. ಅಕೋಲಾದ ದೇವರಾಜ ಲೋಟೆ ಎಂಬೋರ್ವ ಸತ್ಯಾಗ್ರಹ ಮಾಡಿದ ಮೇಲೆ, ಮನೆಯಲ್ಲಿ ಉಳಿದಿದ್ದವಳು ಬಡ ವೃದ್ಧ ವಿಧವೆ ತಾಯಿ ಮಾತ್ರ. ಪೊಲೀಸರು ಜುಲ್ಮಾನೆ ಹಣದ ವಸೂಲಿ ಸಲುವಾಗಿ ಮೇಲಿಂದ ಮೇಲೆ ಮನೆಗೆ ಬಂದು ಆಕೆಯನ್ನೇ ಪೀಡಿಸತೊಡಗಿದರು. ಅವರ ಕಾಟ ಸಹಿಸಲಾಗದೆ ಕೊನೆಯಲ್ಲಿ ಆಕೆ-‘‘ಜುಲ್ಮಾನೆ ಸಹ ಇಲ್ಲ, ಅಷ್ಟಾದರೂ ನೀವು ಹೇಳಿದುದೇ ಆಗಬೇಕಾದಲ್ಲಿ ತೊಗೊಳ್ಳಿ, ನನ್ನನ್ನೇ ಹರಾಜು ಹಾಕಿ, ನಿಮಗೆಷ್ಟು ಬೇಕೋ ಅಷ್ಟು ತುಂಬಿಸಿಕೊಳ್ಳಿ’’ ಎಂದಿದ್ದಳು.
n ವರ್ಧಾ ಜಿಲ್ಲೆಯಲ್ಲಿನ 100ಕ್ಕಿಂತ ಅಧಿಕ ಸತ್ಯಾಗ್ರಹಿಗಳ ಮನೆಗಳಲ್ಲಿನ ವಸ್ತುಗಳನ್ನು ಜಪ್ತುಗೊಳಿಸಿ ಮುಟ್ಟುಗೋಲು ಹಾಕಲಾಗಿತ್ತು. ಈ ಕ್ರಮ ಸಂಘದ ಮೇಲಿನ ನಿಷೇಧವನ್ನು ಹಿಂತೆಗೆದುಕೊಂಡು ಸತ್ಯಾಗ್ರಹಿಗಳ ಶಿಕ್ಷೆಯನ್ನೇ ರದ್ದುಪಡಿಸಿದ ನಂತರವೂ ಮುಂದುವರಿದಿತ್ತು. ಉಮರೇಡ ತಾಲೂಕಿನ ದಾಣೆ ಮತ್ತು ಕಾಳೆ ಎಂಬ ಇಬ್ಬರು ಸತ್ಯಾಗ್ರಹಿಗಳು ಜುಲ್ಮಾನೆ ಬದಲಿಗೆ ಅಧಿಕ ಶಿಕ್ಷೆ ಅನುಭವಿಸಿದ್ದರು. ಅಷ್ಟಾದರೂ ಅವರ ಮನೆಗಳಲ್ಲಿನ ವಸ್ತುಗಳ ಜಪ್ತು ಮಾಡುವುದನ್ನೂ ಪೊಲೀಸರು ಬಿಡಲಿಲ್ಲ.
ಹಸು, ಎತ್ತು ಮುಟ್ಟುಗೋಲು
ಪಂಜಾಬಿನ ನಾದೋಣ ಎಂಬಲ್ಲಿನ ಓರ್ವ ಸತ್ಯಾಗ್ರಹಿ ಕೈದಿಯ ಹಸು, ಎತ್ತುಗಳನ್ನು ಸಹ ಪೊಲೀಸರು ಮನೆಯಿಂದ ಬಿಚ್ಚಿಕೊಂಡು ಒಯ್ದಿದ್ದರು. ಹೀಗಾಗಿ ಕೊನೆಯಲ್ಲಿ ನಿರುಪಾಯವಾಗಿ ಮನೆಯವರು ಜುಲ್ಮಾನೆ ಹಣ ತುಂಬಿಸಬೇಕಾಯಿತು. ವಾಸ್ತವಿಕವಾಗಿ ಅವರು ಹಣ ಕಟ್ಟಬೇಕಾದ ಅಗತ್ಯವೇ ಇರಲಿಲ್ಲ. ಅದರ ವಸೂಲಿಗಾಗಿ ಪೊಲೀಸರು ಕೈಗೊಂಡಿದ್ದ ಕ್ರಮವಂತೂ ತೀರಾ ಅನ್ಯಾಯದ್ದೇ.
n ಪಂಜಾಬಿನಲ್ಲಿ ಇಂತಹ ಘಟನೆಗಳು ಆಗಿರುವುದು ಅನೇಕ. ಅಮೃತಸರದಲ್ಲಿ 200 ಸತ್ಯಾಗ್ರಹಿಗಳ ಮನೆಗಳನ್ನು ಮುಟ್ಟುಗೋಲು ಹಾಕಲಾಗಿತ್ತು. ಅಂಬಾಲಾದಲ್ಲಿ ಕೇವಲ ಐದು ಮನೆಗಳನ್ನು ಹೊರತುಪಡಿಸಿ (ಕಾರಣವೆಂದರೆ ಅವರು ಜುಲ್ಮಾನೆ ಹಣ ಪಾವತಿ ಮಾಡಿದ್ದರು) ಮಿಕ್ಕೆಲ್ಲ ಸತ್ಯಾಗ್ರಹಿಗಳ ಮನೆಗಳಲ್ಲಿನ ಎಲ್ಲ ವಸ್ತುಗಳನ್ನು ಪೋಲಿಸರು ಕಿತ್ತುಕೊಂಡು ಹೋಗಿದ್ದರು. ಮುಟ್ಟುಗೋಲು ಹಾಕುವುದರಲ್ಲಿ ಅಡುಗೆಯ ಪಾತ್ರೆಗಳನ್ನೂ ಬಿಟ್ಟಿರಲಿಲ್ಲ.ಜಾಲಂಧರ ಹಾಗೂ ಇನ್ನೂ ಕೆಲವು ಊರುಗಳದ್ದೂ ಇದೇ ಕತೆ. ಪೊಲೀಸರು ಇದೆಲ್ಲ ಮಾಡುತಿದ್ದುದು ಸತ್ಯಗ್ರಹಿಗಳಾಗಬಯಸುವ ಕಾರ್ಯಕರ್ತರ ಮನೋಬಲ ಮುರಿಯುವ ಉದ್ದೇಶದಿಂದಲೇ.
n ಬಿಹಾರದ ಬಾಂಕಾ ನಗರದ ಸಮೀಪ ಕೃಷ್ಣಡೀಹ ಎಂಬುದೊಂದು ಸಣ್ಣ ಗ್ರಾಮ. ಅಲ್ಲಿನ 13 ಮಂದಿ ರೈತ ಸ್ವಯಂಸೇವಕರು ಸತ್ಯಾಗ್ರಹದಲ್ಲಿ ಪಾಲ್ಗೊಂಡಿದ್ದರು. ಅವರಲ್ಲಿ ಪ್ರತಿಯೊಬ್ಬರಿಗೂ ಸೆರೆಮನೆ ವಾಸದ ಶಿಕ್ಷೆಯ ಜತೆ ರೂ.200/- ಜುಲ್ಮಾನೆ ವಿಧಿಸಲಾಗಿತ್ತು. ಅದರ ವಸೂಲಿಗಾಗಿ ಪೊಲೀಸರು ಅವರ ಮನೆಗಳಿಗೆ ತಲಪಿದರು. ಹಣ ವಸೂಲು ಮಾಡುವ ಕೋಪದ ಭರದಲ್ಲಿ ಆ ಉನ್ಮತ್ತ ಪೊಲೀಸರು ಅವರ ಗುಡಿಸಲುಗಳ ಮೇಲ್ಛಾವಣಿಯ ಗಳಗಳನ್ನು ಕಿತ್ತರು; ಕೆಲವು ಮನೆಗಳಲ್ಲಿ ಮಹಿಳೆಯರ ವಸ್ತ್ರ, ಹಾಸಿಗೆ ಇತ್ಯಾದಿ ಎತ್ತಿಕೊಂಡರು. ಇನ್ನು ಹಸು, ಎತ್ತು ಇತ್ಯಾದಿ ಬಿಚ್ಚಿಕೊಂಡು ಹೋಗುವುದಂತೂ ಅವರಿಗೆ ಕಷ್ಟದ ಕೆಲಸವೇ ಆಗಿರಲಿಲ್ಲ.
n ಡಿಲ್ಲಿಯ ಆರ್ಯಪುರಾ ಸಬ್ಜಿ ಮಂಡಿಯಲ್ಲಿ ಸತ್ಯಾಗ್ರಹಿಯಾಗಿದ್ದ ಶೇಷಗಿರಿ ಎಂಬೋರ್ವ ಕಾರ್ಯಕರ್ತ ತನ್ನ ದೂರದ ಸಂಬಂಧಿಯೊಬ್ಬರ ಮನೆಯಲ್ಲಿರುತ್ತಿದ್ದ. ಅವನಿಗೆ ವಿಧಿಸಲಾಗಿದ್ದ ಜುಲ್ಮಾನೆಯ ಹಣ ವಸೂಲು ಮಾಡಲು ಪೊಲೀಸರು ಆ ಮನೆಗೆ ಬಂದರು. ಆ ಮನೆಯ ಬಡಪಾಯಿ ಸ್ವತಃ ಓರ್ವ ನಿರಾಶ್ರಿತರು. ಪಶ್ಚಿಮ ಪಂಜಾಬಿನಲ್ಲಿನ ತನ್ನ ಆಸ್ತಿಪಾಸಿ್ತ ಇತ್ಯಾದಿ ಕಳೆದುಕೊಂಡು ವಿಭಜನೆ ನಂತರ ದಿಲ್ಲಿಗೆ ಬಂದು ನೆಲೆಸಿದವರು. ಇನ್ನೂ ಹೊಸದಾಗಿ ಜೀವನ ಆರಂಭಿಸುವ ಸ್ಥಿತಿಯಲ್ಲಿದ್ದವರು ಅವರು. ಅಂತಹವರ ಬಳಿ ಹಣ ಎಲ್ಲಿಂದ ಬರಬೇಕು ? ಆದರೆ ಪೊಲೀಸರಿಗೂ ಕರುಣೆ ಎಲ್ಲಿಂದ ಸಾಧ್ಯ ? ಅವರು ಕೊಡಲಾರರು, ಇವರು ಬಿಡಲಾರರು ಎಂಬಂತಹ ಸನ್ನಿವೇಶ ಏರ್ಪಟ್ಟಿತು. ಕಠೋರ ವಾಸ್ತವಿಕತೆಯನ್ನೇ ಅರಿಯಲಾರದ ಪೊಲೀಸರ ಹೃದಯ ಕಲ್ಲಾಗಿತ್ತು. ಕೊನೆಯಲ್ಲಿ ನಿರುಪಾಯವಾಗಿ ಆ ವ್ಯಕ್ತಿ ತನ್ನ ಮನೆಯ ಮಹಿಳೆಯ ಆಭರಣವನ್ನು ನೆರೆಯವರ ಬಳಿ ಗಿರವಿ ಇಟ್ಟು ಹಣ ತರಬೇಕಾಯಿತು. ಅವರಿಂದ ರೂ.500/- ವಸೂಲು ಮಾಡಿ ಪೊಲೀಸರು ತಮ್ಮ ಜೇಬು ತುಂಬಿಸಿಕೊಂಡರು.
ಸತ್ಯಾಗ್ರಹದಲ್ಲಿ ಕಾಂಗ್ರೆಸ್ಸಿಗರ ಸಹಕಾರ
ಸತ್ಯಾಗ್ರಹಕ್ಕೆ ಸಂಬಂಧಿಸಿ ಸಂಘ ಕೈಗೊಂಡಿದ್ದ ನಿರ್ಧಾರ ಸಂಪೂರ್ಣವಾಗಿ ಸ್ವಸಾಮರ್ಥ್ಯದ ಮೇಲೆಯೇ ನಿರ್ಭರವಾಗಿದ್ದುದು. ಆದರೂ ಅಲ್ಲಲ್ಲಿ ಕೆಲವು ಕಡೆಗಳಲ್ಲಿ ಸ್ವಯಂಸೇವಕರಲ್ಲದೆಯೂ ಸ್ಥಾನೀಯ ನಾಗರಿಕರು, ಅಷ್ಟೇಕೆ ಕಾಂಗ್ರೆಸ್ಸಿಗರು ಸಹ, ಸತ್ಯಾಗ್ರಹದಲ್ಲಿ ಸಹಭಾಗಿಯಾಗಿರುವ ಉದಾಹರಣೆಗಳೂ ಇಲ್ಲದಿಲ್ಲ.
ಸೋಲಾಪುರ ಕಾಂಗ್ರೆಸ್ ಸಮಿತಿಯ ಓರ್ವ ಪ್ರಮುಖ
ಕಾರ್ಯಕರ್ತ ಗಣೇಶ ಬಾಪೂಜಿ ಶಿನಕರ್ ಅವರು ಡಿಸೆಂಬರ್ 12ರಂದು ಒಂದು ಕಟು ಭಾಷೆಯ ಹೇಳಿಕೆಯನ್ನು ಪ್ರಕಟಿಸಿ, ಕಾಂಗ್ರೆಸಿನ ಪ್ರಾಥಮಿಕ ಸದಸ್ಯತ್ವಕ್ಕೂ ರಾಜಿನಾಮೆ ನೀಡಿ ಸತ್ಯಾಗ್ರಹದಲ್ಲಿ ಭಾಗವಹಿಸಿದರು. ತಮ್ಮ ಹೇಳಿಕೆಯಲ್ಲಿ ಅವರು, ‘‘1942ರ ಭಾರತ ಬಿಟ್ಟು ತೊಲಗಿ (ಕ್ಠಿಜಿಠಿ
ಐ್ಞಜಿ) ಆಂದೋಲನದಲ್ಲಿ ನಾನು ಸ್ವತಃ ಭಾಗಿಯಾಗಿದ್ದೆ. ಆ ದಿನಗಳಲ್ಲಿ ಬಂಡವಾಳವಾದಿಗಳಿಗೆ ಮತ್ತು ರೈತರಿಗೆ ಸರಕಾರದ ಹೆದರಿಕೆ ಇತ್ತು. ಹೀಗಾಗಿ ಆಗ ನಮಗೆ ಆಶ್ರಯ ನೀಡುವವರು ಯಾರೂ ಇರಲಿಲ್ಲ. ಅದಕ್ಕಾಗಿ ಆಗ ನಾವು ಸಂಘದ ಕಾರ್ಯಕರ್ತರನ್ನೇ ಆಶ್ರಯಕ್ಕ್ಕಾಗಿ ನೆಚ್ಚಿಕೊಂಡಿದ್ದೆವು ಹಾಗೂ ಅವರು ಸಂತೋಷದಿಂದ ಆಶ್ರಯ ನೀಡುತ್ತಲೂ ಇದ್ದರು. ನಮಗಾಗಿ ಎಲ್ಲ ವಿಧ ಅನುಕೂಲತೆಗಳನ್ನು ಒದಗಿಸುತಿದ್ದವರು ಅವರೇ. ಅಷ್ಟೇ ಅಲ್ಲ, ನಮ್ಮಲ್ಲಿ ಯಾರಾದರೂ ಅಸೌಖ್ಯಗೊಂಡಲ್ಲಿ, ಸ್ವಯಂಸೇವಕರಾಗಿರುವ ವೈದ್ಯರು ನಮಗೆ ಔಷಧಿ-ಚಿಕಿತ್ಸೆಗಾಗಿಯೂ ಸರ್ವವಿಧ ವ್ಯವಸ್ಥೆ ಮಾಡುತಿದ್ದರು. ವಕೀಲರಾಗಿರುವ ಸ್ವಯಂಸೇವಕರಿಂದ ನಮಗಗತ್ಯವಿರುವ ಕಾನೂನಿನ ನೆರವು ಲಭಿಸುತ್ತಿತ್ತು. ಅವರ ತತ್ವನಿಷ್ಠೆ ಮತ್ತು ದೇಶಭಕ್ತಿ ಪ್ರಶಂಸನೀಯ ಮತ್ತು ಪ್ರಶ್ನಾತೀತವಾದುದು… ಎಲ್ಲ ಕಾಂಗ್ರೆಸ್ಸಿಗರು ಅನ್ಯಾಯದ ಮತ್ತು ಪೂರಾ ನಿರಾಧಾರವಾದ ಆರೋಪಗಳನ್ನು ಸಂಘದ ಮೇಲೆ ಹೇರಿ ನಿಷೇಧವನ್ನು ಮುಂದುವರಿಸಲು ಠರಾವು ಸ್ವೀಕರಿಸಿದ್ದಾರೆ ಮತ್ತು ಕಾಂಗ್ರೆಸ್‌ನ ಪತ್ರಿಕೆಗಳು ಸಹ ಅಂತಹ ಲೇಖನಗಳನ್ನು ಪ್ರಕಟಿಸಿವೆ. ಕೇಂದ್ರ ಸರಕಾರವೂ ಯಾವುದೇ ವಿಚಾರಣೆಯಿಲ್ಲದೆ ಶ್ರೀ ಗೋಲ್ವಲಕರ್ ಅವರನ್ನು 1818ರ ಗುಲಾಮೀ ದಿನಗಳಲ್ಲಿ ವಿದೇಶಿ ಆಳರಸರು ಮಾಡಿದ್ದ ಒಂದು ಕರಾಳ ಕಾನೂನಿನ್ವಯ ಬಂಧಿಸಿದೆ… ಈ ಅನ್ಯಾಯವನ್ನು ವಿರೋಧಿಸಲು ಮತ್ತು ಅಂತಹ ಪಾಪದ ಪರಿಮಾರ್ಜನೆಗೋಸುಗ ಕಾಂಗ್ರೆಸ್‌ನಿಂದ ರಾಜಿನಾಮೆ ನೀಡುವುದು ನನಗೀಗ ಅನಿವಾರ್ಯವೆನಿಸಿದೆ’’ ಎಂದಿದ್ದಾರೆ.
ಮುಂಬಯಿಯ ಗೋಸ್ವಾಮಿ ಜೀವನ ಜಿ ಮಹಾರಾಜ್ ಅವರು ಸಹ ಡಿಸೆಂಬರ್ 15ರಂದು ಸಂಘದ ಮೇಲೆ ವಿಧಿಸಲಾದ ನಿಷೇಧ ಭಾರತಕ್ಕೊಂದು ಕಳಂಕ ಎಂಬ ಹೇಳಿಕೆ ನೀಡಿ ಸತ್ಯಾಗ್ರಹದಲ್ಲಿ ಭಾಗವಹಿಸಿದ್ದರು.

ವಿದರ್ಭ ಪ್ರಾಂತದ ಅಕೋಲಾ ವಿಭಾಗದಲ್ಲಿ ಸತ್ಯಾಗ್ರಹದಲ್ಲಿ ಪಾಲ್ಗೊಂಡಿದ್ದ ಕಾಂಗ್ರೆಸ್ಸಿಗರ ಮತ್ತು ಯಾವುದೇ ಪಕ್ಷಕ್ಕೆ ಸೇರಿರದ ಹಲವು ಪ್ರಬುದ್ಧ ಜನನಾಯಕರ ಪಟ್ಟಿಯನ್ನು ಪುಣೆಯ ದೈನಿಕ ‘ಭಾರತ’ವು ತನ್ನ ಜನವರಿ 12ರ ಸಂಚಿಕೆಯಲ್ಲಿ ಪ್ರಕಟಿಸಿತ್ತು. ಈ ಪಟ್ಟಿಯಲ್ಲಿ ಬಹು ದೀರ್ಘಕಾಲ ಕಾಂಗ್ರೆಸಿನಲ್ಲಿ ಕ್ರಿಯಾಶೀಲರಾಗಿದ್ದು 1942ರ ಆಂದೋಲನದಲ್ಲಿ ಭಾಗವಹಿಸಿ ಸೆರೆಮನೆ ವಾಸವನ್ನೂ ಅನುಭವಿಸಿದ್ದ ಸುವಿಖ್ಯಾತ ಕಾಂಗ್ರೆಸ್ ನಾಯಕ ದಾದಾ ಸಾಹೇಬ ಸೋಮಣ್, ಚಿಖಲಿ ತಾಲೂಕು ಕಾಂಗ್ರೆಸ್ ಸಮಿತಿಯ ಪೂರ್ವ ಕಾರ್ಯದರ್ಶಿ ಡಾ॥ದೇವಕಾಳೆ, ಚಿಖಲಿ ತಾಲೂಕು ಕಿಸಾನ ಸಂಘದ ಅಧ್ಯಕ್ಷ ನಾರಾಯಣರಾವ್ ದೇಶ್‌ಮುಖ್, ಮಲ್ಯಾಪುರ ತಾಲೂಕು ಕಿಸಾನ ಸಂಘದ ಅಧ್ಯಕ್ಷ ಅಪ್ಪಾ ಸಾಹೇಬ ಮೇತ್ಕರ್,ಬುಲ್ಡಾನಾ ಜಿಲ್ಲಾ ಕಿಸಾನ ಸಂಘದ ಉಪಾಧ್ಯಕ್ಷ ಶ್ರೀ ಅವಸ್ಥಿ ಮತ್ತು ಶ್ರೀಸಂಪತ್‌ರಾವ್ ಚೋಪಡೆ, ವಿದರ್ಭ ಕಾಂಗ್ರೆಸ್ ಸಮಿತಿಯ ಕಾರ್ಯದರ್ಶಿ ಶ್ರೀ ಗೋಖಲೆಯವರ ಸುಪುತ್ರ ವಿದ್ಯಾಧರರಾವ್ ಗೋಖಲೆ, ಖಾಮಗಾಂವ್ ನಗರಪಾಲಿಕೆಯ ಅಧ್ಯಕ್ಷ ಶ್ರೀ ಬಾಳಾಸಾಹೇಬ ಸಾಠೆ, ಸಾರೋಲ್‌ನ ಶ್ರೀ ಬೆಲ್‌ಸಿಂಹ ಪಾಟೀಲ, ಲಖನವಾಡಾದ ಶ್ರೀ ಭಗವಾನ್ ಪಾಟೀಲ ಮೊದಲಾದವರು ಒಳಗೊಂಡಿದ್ದರು. ಹರದಾ ತಾಲೂಕು ಕಾಂಗ್ರೆಸ್‌ನ ಮಂಡಲ ಅಧ್ಯಕ್ಷ ಶ್ರೀ ಛೋಟು ಭೈಯ್ಯಾ ಸಹಸ್ರಬುದ್ಧೆ ಅವರಂತೂ ಎರಡು ಬಾರಿ ಸತ್ಯಾಗ್ರಹ ಮಾಡಿದವರು.
ವಿದೇಶಗಳಿಂದ ಸಹಕಾರ
ಆ ದಿನಗಳಲ್ಲಿ ಸಂಘದ ಬಗ್ಗೆ ಕಾಳಜಿ ಹೊಂದಿರುವಂತಹ ಯಾವುದೇ ಹಿಂದು ಸಂಘಟನೆಗಳು ವಿದೇಶಗಳಲ್ಲಿರಲಿಲ್ಲ ಎನ್ನ್ನುವುದೇ ಹೆಚ್ಚು ಸಮಂಜಸ. ಹೀಗಾಗಿ ವಿದೇಶಗಳಿಂದ ಸತ್ಯಾಗ್ರಹಕ್ಕೆ ಸಂಬಂಧಿಸಿ ಯಾವುದೇ ವಿಧದ ಸಹಕಾರವನ್ನು ಸಂಘವೂ ಅಪೇಕ್ಷಿಸಿರಲಿಲ್ಲ. ಆದರೆ ಸಂಘದ ಹಿತೈಷಿಗಳಾದವರು ಮತ್ತು ಹಿಂದೊಮ್ಮೆ ಸ್ವಯಂಸೇವಕರಾಗಿದ್ದು ಮುಂದೆ ವಿದೇಶಗಳಿಗೆ ಹೋಗಿ ನೆಲೆಸಿದಂತಹವರು ಅನೇಕರು ಹೊರದೇಶಗಳಲ್ಲಿದ್ದರು. ಅಂತಹವರು ಈ ಸತ್ಯಾಗ್ರಹ ಯಜ್ಞದಲ್ಲಿ ತಮ್ಮ ಪಾಲಿನ ಸಮಿಧೆ ಸಮರ್ಪಿಸಿ, ಅದರ ಸುಗಂಧವನ್ನು ವಿಶ್ವವ್ಯಾಪಿಯಾಗಿ ಮಾಡಿರುವ ಸಂದರ್ಭಗಳೂ ಇವೆ.
ಈ ನಿಟ್ಟಿನಲ್ಲಿ ಬಟ್ಟೆಯ ಮಳಿಗೆ ಇರಿಸಿರುವ ಸಂಘ ಹಿತೈಷಿ
ರಾಮಚಂದ್ರ ಕುಮಾರ ಅವರ ಉದಾಹರಣೆ ಉಲ್ಲೇಖನೀಯ
ವಾದುದು. ಸಂಘವು ಸತ್ಯಾಗ್ರಹ ನಡೆಸಲಿರುವ ಮಾಹಿತಿ ದೊರೆತಂತೆಯೇ ಅವರು ತಾವೂ ಪಾಲ್ಗೊಳ್ಳಬೇಕೆಂದು ನಿರ್ಧರಿಸಿ ಅಲ್ಲಿಂದ ಹೊರಟರು. ಅವರ ಜತೆ ಇನ್ನೂ ಕೆಲವು ಸಂಘ ಹಿತೈಷಿಗಳೂ ಸತ್ಯಾಗ್ರಹಿಗಳಾಗಲು ಬಯಸಿ ಹೊರಟಿದ್ದರು. ಆದರೆ ಪಾಸ್‌ಪೋರ್ಟ್ ಸಿಗದ ಕಾರಣ ಅವರಿಗೆ ಅನುಕೂಲವಾಗಲಿಲ್ಲ. ಆದರೆ ರಾಮಚಂದ್ರ ಅವರು ಅಮೃತಸರದ ಒಂದು ತಂಡದಲ್ಲಿ ಸೇರಿ ಸತ್ಯಾಗ್ರಹದಲ್ಲಿ ಭಾಗವಹಿಸಿದ್ದರು.
ಪೂರ್ವ ಆಫ್ರಿಕಾದ ಕೆಲವು ಸಂಘ ಹಿತೈಷಿಗಳು ಭಾರತದಲ್ಲಿ ಪ್ರಕಾಶಿತವಾಗುತ್ತಿದ್ದ ಸಂಘ ಸಾಹಿತ್ಯದಂತಹ ರೀತಿಯಲ್ಲೇ ‘ಹಿಂದು ಸಂದೇಶ’ ಎಂಬ ಮಾಸಿಕವೊಂದನ್ನು ತಾವೂ ಪ್ರಕಟಿಸಲು ಆರಂಭಿಸಿದ್ದರು. ಅದರ ಸಾವಿರ ಪ್ರತಿಗಳು ಆಗ ವಿತರಿತವಾಗುತಿದ್ದವು. ಚಕ್ರಮುದ್ರಣದ (ಸೈಕ್ಲೊಸ್ಟೈಲ್) ಈ ಪತ್ರಿಕೆಯಲ್ಲಿ ಸಂಘದ ಪರವಾದ ನಿಲುವನ್ನು ಪ್ರತಿಪಾದಿಸಲಾಗುತ್ತಿತ್ತು. ಸಂಘದ ವಿರುದ್ಧ ಎಸಗಲಾಗಿರುವ ಅನ್ಯಾಯವನ್ನು ಸರಿಪಡಿಸುವಂತೆ ಭಾರತ ಸರಕಾರವನ್ನು ಒತ್ತಾಯಿಸಬೇಕೆಂದು ಅದು ಅಲ್ಲಿನ ಭಾರತೀಯರನ್ನು ವಿನಂತಿಸುತ್ತಿತ್ತು. ಕಾಶ್ಮೀರದಲ್ಲಿ ಹಿಂದೆ ಪ್ರಚಾರಕರಾಗಿದ್ದ ಶ್ರೀ ಬಲರಾಜ್ ಮಧೋಕ್ ಅವರು ಬರೆದಿದ್ದ ‘ಎ ಪ್ಲೀ ಟು ಪೋಸ್ ಅಂಡ್ ಪೋಂಡರ್-ಮಿಸ್‌ಅಂಡರ್‌ಸ್ಟ್ಯಾಂಡಿಂಗ್ಸ್ ಅಬೌಟ್ ಆರ್.ಎಸ್.ಎಸ್.ಕ್ಲಾರಿಫೈಡ್ (ಅ ಟ್ಝಛಿ ಠಿಟ ಚ್ಠಛಿ ಚ್ಞ ಟ್ಞಛ್ಟಿ ್ಫ ಜಿಠ್ಠ್ಞಛ್ಟಿಠಿಚ್ಞಜ್ಞಿಜ ಚಿಟ್ಠಠಿ ್ಕಖಖ ್ಚ್ಝಚ್ಟಜ್ಛಿಜಿಛಿ)’ ಎಂಬ ಹೊತ್ತಿಗೆಯ ಸಾವಿರಾರು ಪ್ರತಿಗಳನ್ನು ಮುದ್ರಿಸಿ ಪೂರ್ವ ಆಫ್ರಿಕಾದಲ್ಲಿ ನೆಲೆಸಿದ್ದ ಭಾರತೀಯರಿಗೆ ವಿತರಿಸಲಾಗಿತ್ತು. ಭಾರತದಲ್ಲಾದಂತೆ ಅಲ್ಲೂ ಸಣ್ಣ ಸಣ್ಣ ಕರಪತ್ರಗಳನ್ನು ಆಗಾಗ ತಯಾರಿಸಿ ಅಲ್ಲಿನವರಿಗೆ ತಲಪಿಸಲಾಗುತ್ತಿತ್ತು. ಕಾರಣವೆಂದರೆ ಭಾರತ ಸರಕಾರ ಮಾಡುತ್ತಿದ್ದ ಸಂಘವಿರೋಧಿಯಾದ ವಿಷಾಕ್ತ ಅಪಪ್ರಚಾರದ ಪ್ರಭಾವದಿಂದಾಗಿ ಅಲ್ಲಿದ್ದ ಭಾರತೀಯರಲ್ಲಿ ಸಂಘದ ಬಗ್ಗೆ ಹಲವು ವಿಧ ತಪ್ಪು ಕಲ್ಪನೆಗಳು ಉಂಟಾಗುತಿದ್ದುದು ಸಹಜ. ಅದನ್ನು ದೂರಗೊಳಿಸುವ ಕೆಲಸ ಈ ಕರಪತ್ರಗಳು ಮಾಡುತ್ತಿದ್ದವು.

   

Leave a Reply