ಬೇಸಗೆಯ ಧಗೆಗೆ ಪರಿಹಾರ

ಪ್ರಚಲಿತ - 0 Comment
Issue Date : 07.05.2015

ಬೇಸಗೆಯ ಧಗೆಯಂತೂ ಇತ್ತೀಚೆಗೆ ಏರುತ್ತಿರುವ ವೇಗವನ್ನು ನೋಡಿದರೆ ನಿಜಕ್ಕೂ ಭಯವಾಗುತ್ತದೆ. ಜಾಗತಿಕ ತಾಪಮಾನ ದಲ್ಲಿ ಗಣನೀಯ ಪ್ರಮಾಣದಲ್ಲಾದ ಏರಿಕೆ ಹಲವು ಸಮಸ್ಯೆಗಳನ್ನು ತಂದೊಡ್ಡಿದೆ. ಮನುಷ್ಯ ರೇನೋ ಧಗೆ ನೀಗಿಸಲು ಬೇರೆ ಬೇರೆ ಪರಿಹಾರ ಕಂಡುಕೊಳ್ಳಬಹುದು. ಆದರೆ ಪ್ರಾಣಿಗಳ ಕತೆ ಯೇನು? ಅವಕ್ಕೆಲ್ಲಿಂದ ಎಸಿ ಸೌಲಭ್ಯ ಸಿಕ್ಕೀತು?! ಆದರೆ ದೆಹಲಿಯ ವನ್ಯಧಾಮವೊಂದು ಪ್ರಾಣಿಗಳಿಗೆ ತಂಪು ನೀಡಲು ಮುಂದಾಗಿದೆ.
ವನ್ಯಧಾಮದಲ್ಲಿ ಮಧ್ಯೆ ಮಧ್ಯೆ ನೀರಿನ ಕಾರಂಜಿಯನ್ನು ನಿರ್ಮಿಸಿ ನೀರು ನಿರಂತರವಾಗಿ ಚಿಮ್ಮುತ್ತಲೇ ಇರುವಂತೆ ನೋಡಿಕೊಳ್ಳಲಾಗುತ್ತಿರುವುದರಿಂದ ಸಂಪೂರ್ಣ ವನ್ಯಧಾಮವೂ ತಂಪಾಗಿರುತ್ತದೆ. ಅಲ್ಲದೆ ಪ್ರಾಣಿಗಳಿಗೆ ನೀರು ಕುಡಿಯು ವುದಕ್ಕೆ ಅಗತ್ಯ ವ್ಯವಸ್ಥೆಗಳನ್ನೂ ಕೈಗೊಳ್ಳಲಾಗಿದೆ. ಡೆಸರ್ಟ್ ಕೂಲರ್‌ಗಳು ಸಹ ಪ್ರಾಣಿಗಳು ಉಷ್ಣತೆಯಿಂದ ಪಾರಾಗುವಂತೆ ಮಾಡಿವೆ.
ಕಾಡನ್ನೆಲ್ಲ ಕೊಳ್ಳೆಹೊಡೆದು ಬಯಲಾಗಿಸಿರುವ ಮನುಷ್ಯ ಇಂದು ತನ್ನ ತಪ್ಪಿನ್ನು ಅರಿತಿದ್ದಾನೆ. ಏಕೆಂದರೆ ಅಂತರ್ಜಲಗಳು ಬತ್ತಿ ಹೋಗಿ ಎಲ್ಲೆಲ್ಲೂ ನೀರಿಲ್ಲದಂಥ ಪರಿಸ್ಥಿತಿಯನ್ನು ಇಂದು ಬಹುಪಾಲು ನಗರಗಳು ಮಾತ್ರವಲ್ಲ, ಹಳ್ಳಿಗಳೂ ಎದುರಿಸುತ್ತಿವೆ. ಮನುಷ್ಯನೇನೋ ಉಷ್ಣತೆಯ ಪ್ರಭಾವ ತನ್ನಮೇಲೆ ಆಗದಂತೆ ಸಾಕಷ್ಟು ಸೌಲಭ್ಯಗಳನ್ನು ಕಂಡುಕೊಂಡಿದ್ದಾನೆ. ಆದರೆ ವನ್ಯಪ್ರಾಣಿ-ಪಕ್ಷಿಗಳ ಬಗ್ಗೆಯೂ ಯೋಚಿಸಬೇಕಲ್ಲವೇ? ಈ ನಿಟ್ಟಿನಲ್ಲಿ ದೆಹಲಿಯ ವನ್ಯಧಾಮದ ಕೆಲಸ ನಿಜಕ್ಕೂ ಶ್ಲಾಘನೀಯ.

   

Leave a Reply