ಬೇಸಿಗೆಗಿರಲಿ ಈ ಆಹಾರ

ಆರೋಗ್ಯ ; ಲೇಖನಗಳು - 0 Comment
Issue Date : 7.5.2016

-ಶಾಂತಲಾ

ಬಿಸಿಲ ಧಗೆಯಂತೂ ದಿನೇ ದಿನೇ ಹೆಚ್ಚುತ್ತಲೇ ಇದೆಯೇ ಹೊರತು ಕಡಿಮೆಯಂತೂ ಆಗುತ್ತಿಲ್ಲ. ಹೀಗಿರುವಾಗ ನಮ್ಮ ಆರೋಗ್ಯದ ಕುರಿತು ಎಷ್ಟೇ ಕಾಳಜಿ ತೆಗೆದುಕೊಂಡರೂ ಕಡಿಮೆಯೇ. ಒಮ್ಮೆ ಮಳೆ ಬಂದು ಭೂಮಿ ತಂಪಾದರೆ ಸಾಕಪ್ಪಾ ಎಂದು ಮಳೆಗಾಗಿ ಆಕಾಶ ದಿಟ್ಟಿಸುತ್ತಿರುವವರ ಸಂಖ್ಯೆಗೇನೂ ಕಡಿಮೆಯಿಲ್ಲ. ಇದೂ ಸಾಲದೆಂಬಂತೆ ಬಿಸಿಲು ತಾಳಲಾರದ ಸಾಯುತ್ತಿರುವವರ ಸಂಖ್ಯೆಯೂ ದಿನೇ ದಿನೇ ಏರುತ್ತಿದೆ. ಹೀಟ್ ವೇವ್ ದೇಹದ ಬಾಹ್ಯಚರ್ಮಕ್ಕೆ ಬಿಸಿ ತಗಲಿಸುವ ಮೂಲಕ ಮನುಷ್ಯನನ್ನು ಸಾಯಿಸುತ್ತದೆ ಎಂಬ ತಪ್ಪುತಿಳಿವಳಿಕೆ ಕೆಲವರಲ್ಲಿರಬಹುದು. ಬಿಸಿಲ ಬೇಗೆ ತಡೆಯಲಾರದೆ ಸಾಯುವುದಕ್ಕೆ ಪ್ರಮುಖ ಕಾರಣ ಬಿಸಿಲು ದೇಹದಲ್ಲಿನ ನೀರಿನಂಶವನ್ನೆಲ್ಲವನ್ನೂ ಆವಿಯಾಗಿಸಿ ದೇಹ ನಿರ್ಜಲೀಕರಣಕ್ಕೊಳಗಾಗುವಂತೆ ಮಾಡುವುದು. ಹೀಗಾಗುವುದರಿಂದ ವ್ಯಕ್ತಿ ಸಾಯುತ್ತಾನೆ ಅಥವಾ ಹಲವಾರು ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ಆದ್ದರಿಂದ ಬೇಸಿಗೆಯ ಸಮಯದಲ್ಲಿ ದೇಹ ನಿರ್ಜಲೀಕರಣಕ್ಕೊಳಗಾಗದಂತೆ ತಡೆಯುವುದು ಬಹಳ ಮುಖ್ಯ. 

ಅಷ್ಟೇ ಅಲ್ಲ ಸುಲಭವಾಗಿ ದೇಹ ಜೀರ್ಣಿಸಿಕೊಳ್ಳಬಲ್ಲಂಥ ಆಹಾರಗಳನ್ನೇ ಹೆಚ್ಚು ಸೇವಿಸಿ.
ಬೇಸಿಗೆಯಲ್ಲಿ ಸೇವಿಸಲೇಬೇಕಾದ ಕೆಲವು ಮಹತ್ವದ ತರಕಾರಿ ಮತ್ತು ಹಣ್ಣುಗಳು ಇಲ್ಲಿವೆ.

  • ಹಸಿರು ಸೊಪ್ಪುಗಳು: ಹಸಿರು ಸೊಪ್ಪುಗಳನ್ನು ಹೆಚ್ಚು ಹೆಚ್ಚು ಸೇವಿಸುವುದರಿಂದ ದೇಹಕ್ಕೆ ಬೇಸಿಗೆಯಲ್ಲಿ ಅಗತ್ಯವಿರುವ ಪೌಷ್ಟಿಕಾಂಶಗಳು ಸಿಗುತ್ತವೆ. ಮತ್ತು ಹಸಿರು ಸೊಪ್ಪುಗಳು ಸುಲಭವಾಗಿ ಜೀರ್ಣವಾಗುವುದರಿಂದ ಅವುಗಳನ್ನೇ ಹೆಚ್ಚು ಬಳಸುವುದಕ್ಕೆ ವೈದ್ಯರೂ ಸಲಹೆ ನೀಡುತ್ತಾರೆ. ಅದೂ ಅಲ್ಲದೆ ಹಸಿರು ಸೊಪ್ಪುಗಳು 80-90 ಪ್ರತಿಶತ ನೀರನ್ನು ಒಳಗೊಂಡಿರುತ್ತವೆ. ಇದು ದೇಹ ನಿರ್ಜಲೀಕರಣದಿಂದ ಬಳಲದಂತೆ ನೋಡಿಕೊಳ್ಳುತ್ತದೆ. 
  •  ಟೊಮ್ಯಾಟೋ: ಆ್ಯಂಟಿ ಆಕ್ಸಿಡೆಂಟ್‌ನ ತವರಾದ ಟೊಮ್ಯಾಟೋ ತನ್ನೊಳಗೆ 94 ಪ್ರತಿಶತ ನೀರನ್ನು ಹೊಂದಿರುತ್ತದೆ. ಆದ್ದರಿಂದ ಟೊಮ್ಯಾಟೋ ಸೇವನೆ ಒಳ್ಳೆಯದು. 
  •  ಸಿಟ್ರಸ್ ಆಮ್ಲ ಹೇರಳವಾಗಿರುವ ನಿಂಬೆ ಹಣ್ಣನ್ನು ಸೇವಿಸಿ. ಇದು ದೇಹವನ್ನು ತಂಪಾಗಿಡುವುದಲ್ಲದೆ, ನೀರಿನಂಶವನ್ನೂ ಕಾಪಾಡುತ್ತದೆ. 
  •  ಕಲ್ಲಂಗಡಿ ಹಣ್ಣನ್ನು ನಿಯಮಿತವಾಗಿ ಸೇವಿಸಿ. ಇದು ದೇಹದ ಆಂತರಿಕ ಎಸಿಯಂತೇ ಕೆಲಸ ನಿರ್ವಹಿಸಿ ದೇಹ ತಂಪಾಗಿರುವಂತೆ ಮಾಡುತ್ತದೆ. 
  •  ಬೇಸಿಗೆಯಲ್ಲಿ ಪ್ರತಿದಿನವೂ ಎಳನೀರನ್ನು ಸೇವಿಸುತ್ತಿದ್ದರೆ ದೇಹಕ್ಕೆ ಬಹಳ ಒಳ್ಳೆಯದು. ದೇಹದ ಉಷ್ಣತೆಯನ್ನು ಇದು ತಗ್ಗಿಸುತ್ತದೆ.
   

Leave a Reply