ಭವಿಷ್ಯದ ಭಾರತ ಕುರಿತಂತೆ ಗೀತ ಕಥನ

ದಕ್ಷಿಣ ಕನ್ನಡ - 0 Comment
Issue Date : 02.01.2013

 ನಮೋ ಬ್ರಿಗೇಡ್ ನೇತೃತ್ವದಲ್ಲಿ ನಮೋ ಬ್ರದರ್ಸ್, ಬಂಟ್ವಾಳ ಇದರ ಸಹಕಾರದೊಂದಿಗೆ ನಮೋ ಭಾರತ್ ಸ್ವಾತಂತ್ಯ ನಂತರದ ಭಾರತ, ನರೇಂದ್ರ ಮೋದಿ ಹಾಗೂ ಭವಿಷ್ಯದ ಭಾರತ ಕುರಿತಂತೆ ಗೀತ ಕಥನದಲ್ಲಿ ಅವರು ಉಪನ್ಯಾಸ ನೀಡಿದರು.

ಬ್ರಿಟಿಷರ ಹೊಡೆದು ಆಳುವ ನೀತಿಯನ್ನು ಕಾಂಗ್ರೆಸ್ ಶಿರಸಾವಹಿಸುತ್ತಿದೆ ಎಂದ ಸೂಲಿಬೆಲೆ, ಪ್ರಸಕ್ತ ಯುಪಿಎ ಸರಕಾರ ಶೇಕಡಾವಾರು ಬಡತನವನ್ನು ಇಳಿಸಿದ್ದೇವೆ ಎಂದು ಹೇಳಿಕೊಳ್ಳುತ್ತಿದೆ. ನೈಜವಾಗಿ ಅವರು ಇಳಿಸಿದ್ದು ಬಡತನವನ್ನಲ್ಲ. ಬಡತನದ ಬೆಂಚು ಮಾರ್ಕನ್ನು ಮಾತ್ರ ಎಂದು ವಿವರಿಸಿದರು. ಕಾಂಗ್ರೆಸ್ ನೇತೃತ್ವದ ಯುಪಿಎ ಸರಕಾರದ ಲೂಟಿ ಯಾವ ಹಂತ ತಲುಪಿದೆ ಎಂದರೆ 1952ನೇ ಇಸವಿಯಿಂದ 1947 ರ ವರೆಗೆ 60 ವರ್ಷಗಳ ಕಾಲ ಆಳಿದ ಬ್ರಿಟಿಷರು ಕೊಳ್ಳೆ ಹೊಡೆದ ರೀತಿಯ ಕೆಲಸವನ್ನು ಇದೀಗ ಕಾಂಗ್ರೆಸ್ ಮಾಡುತ್ತಿದೆ. 1 ಲಕ್ಷ 76  ಸಾವಿರ ಕೋಟಿ ರೂ. 2 ಜಿ ಸ್ಪೆಕ್ಟ್ರಂ ಹಗರಣ, 10  ಲಕ್ಷ ಕೋಟಿ ರೂ. ಕಲ್ಲಿದ್ದಲು ಹಗರಣ, ಕಾಮನ್‌ವೆಲ್ತ್ ಹಗರಣದಿಂದಾಗಿ ದೇಶದ ಸಂಪತ್ತನ್ನು ಕೊಳ್ಳೆ ಹೊಡೆಯುವ ಪರಿಸ್ಥಿತಿಗೆ ಘನ ಸರಕಾರ ತಲುಪಿದೆ ಎಂದರು.

ನಿವೃತ್ತ ಸೇನಾನಿ ರಮಾನಾಥ್, ಉದ್ಯಮಿ ಭಾಮಿ ಲಕ್ಷ್ಮಣ ಶೆಣೈ, ಜನಸಂಘದ ಹಿರಿಯ ಕಾರ್ಯಕರ್ತ ದಾಸ್ ಶೆಣೈ, ನಮೋ ಬ್ರಿಗೇಡ್ ನ ರಾಜ್ಯ ಸಂಚಾಲಕ ನರೇಶ್ ಶೆಣೈ ರವರು ದೀಪ ಬೆಳಗಿಸುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಕೊನೆಯಲ್ಲಿ ನಮೋ ಬ್ರದರ್‍ಸ್ ಬಂಟ್ವಾಳ ಸಂಘಟನೆ ವತಿಯಿಂದ ಚಕ್ರವರ್ತಿ ಸೂಲಿಬೆಲೆಯವರನ್ನು ಸನ್ಮಾನಿಸಲಾಯಿತು. ನಮೋ ಬ್ರದರ್‍ಸ್ ಬಂಟ್ವಾಳ ಇದರ ಪ್ರಮುಖರು ಹಾಗೂ ಬಿಜೆಪಿ ಮುಖಂಡರು ಹಾಜರಿದ್ದರು. ಪುರಸಭಾ ಸದಸ್ಯ ದೇವದಾಸ ಶೆಟ್ಟಿ ಸ್ವಾಗತಿಸಿ, ವಂದಿಸಿದರು.

   

Leave a Reply