ಭಾರತದ ಕುರಿತ ಆಸಕ್ತಿದಾಯಕ ವಿಷಯಗಳು

ಪ್ರಚಂಡ ಭಾರತ - 0 Comment
Issue Date : 18.12.2013

ನಾವು ಭಾರತೀಯರಾಗಿರುವುದಕ್ಕೆ ಹೆಮ್ಮೆಪಡಲು ಕೆಲವು ಆಸಕ್ತಿದಾಯಕ ವಿಷಯಗಳು.

1. ಜನಸಂಖ್ಯೆ: 1.2 ಬಿಲಿಯನ್ ಜನಸಂಖ್ಯೆ ಹೊಂದಿರುವ ನಾವು ಜಗತ್ತಿನ 2ನೇ ಅತ್ಯಂತ ಹೆಚ್ಚು ಜನಸಂಖ್ಯೆ ಹೊಂದಿದ ರಾಷ್ಷ್ರದ ಪ್ರಜೆಗಳಾಗಿದ್ದೇವೆ. ಸಮರ್ಥ ಮಾನವಶಕ್ತಿ ಎಲ್ಲ ರೀತಿಯ ಅಭಿವೃದ್ಧಿಗೂ ಮೂಲ ಅದು ನಾವೆಲ್ಲ ಹೆಮ್ಮೆ ಪಡಬೇಕಾದ ವಿಷಯ.

2. ಭೂ ವಿಸ್ತೀರ್ಣ: ಜಗತ್ತಿನಲ್ಲಿ ವಿಸ್ತೀರ್ಣದಲ್ಲಿ 7ನೇ ಅತೀ ದೊಡ್ಡ ರಾಷ್ಟ್ರ ನಮ್ಮದು.

3. ಉದ್ಯೋಗಿಗಳಲ್ಲಿ1/4 ರಷ್ಷು ಜನ ಸಮೀಕ್ಷೆಯೊಂದರ ಪ್ರಕಾರ ಮುಂಬರುವ 2-3 ವರ್ಷಗಳಲ್ಲಿ ಜಗತ್ತಿನ ಒಟ್ಟು ಉದ್ಯೋಗಿಗಳಲ್ಲಿ ಶೇ. 25ರಷ್ಟು ಜನ ಭಾರತೀಯರಾಗಿರುತ್ತಾರಂತೆ.

4.  ಮಿಲೆನಿಯರ್ : ಬಡವರು ಮತ್ತು ಶ್ರೀಮಂತರ ನಡುವಿನ ಅಂತರ ಹೆಚ್ಚಿದೆ. ಆದರೂ ಹೆಮ್ಮೆ ಪಡಬೇಕಾದ ವಿಷಯ ಎಂದರೆ ಜಗತ್ತಿನ ಒಟ್ಟು ಮಿಲೆನಿಯರುಗಳಲ್ಲಿ 1ಮಿಲಿಯನ್ ಜನರು ಭಾರತೀಯರಾಗಿದ್ದಾರೆ.

5. ಭಾಷೆ: ಭಾರತದಲ್ಲಿ ಹಿಂದಿ ರಾಷ್ಟ್ರ ಭಾಷೆ. ಇಂಗ್ಲೀಷ್ ನ್ನು ಆಡಳಿತದ ಅನೂಕೂಲಕ್ಕಾಗಿ ಬಳಸುತ್ತೇವೆ. ಆದರೆ ನಮ್ಮ ದೇಶದಲ್ಲಿ ಪ್ರತಿಯೊಂದು ರಾಜ್ಯವು ತನ್ನದೇ ಆದ ಪ್ರಾದೇಶಿಕ ಭಾಷೆ ಹೊಂದಿವೆ. ಭಾಷಾ ವೈವಿಧ್ಯತೆ ನಮ್ಮ ದೇಶದ ಬಹುಮುಖಿ ಸಂಸ್ಕ್ರತಿಯ ಪ್ರತೀಕ. ಸಂವಿಧಾನದಲ್ಲಿ ಒಟ್ಟು 22 ಭಾಷೆಗಳಿಗೆ ಮಾನ್ಯತೆ ದೊರೆತಿದೆ.

6. ಪೈ ಬೆಲೆ: ಭಾರತೀಯ ಗಣಿತ ಶಾಸ್ತ್ರಜ್ಞ  ಬುಧಾಯಣ ಪೈ ಬೆಲೆಯನ್ನು ಪಾಶ್ಚ್ಯಾತ್ಯರಿಗಿಂತ ಮುಂಚೆ ಕಂಡು ಹಿಡಿದಿದ್ದರು.

7. ಜಗತ್ತಿನ ಮೊದಲ ವಿಶ್ವವಿದ್ಯಾಲಯ: ಕ್ರಿ.ಪೂ 700 ಶತಮಾನದಲ್ಲಿ ಭಾರತದಲ್ಲಿ ಜಗತ್ತಿನ ಮೊದಲ ವಿಶ್ವವಿದ್ಯಾಲಯ ಸ್ಥಾಪನೆಯಾಯಿತೆಂದೂ ಅದರಲ್ಲಿ ಜಗತ್ತಿನ ವಿವಿಧ ಭಾಗಗಳಿಂದ ಬಂದ ವಿಧ್ಯಾರ್ಥಿಗಳು ವಿವಿಧ ವಿಷಯಗಳನ್ನು ಅಧ್ಯಯನ ಮಾಡುತ್ತಿದ್ದರೆಂದೂ ಇತಿಹಾಸ ಹೇಳುತ್ತದೆ.

8. ಅತೀ ದೊಡ್ಡ ಅಂಚೆ ವ್ಯವಸ್ಥೆ: ಭಾರತವು ಜಗತ್ತಿನಲ್ಲಿಯೇ ಅತೀ ದೊಡ್ಡ ಅಂಚೆ  ಸಂಪರ್ಕ ಜಾಲ ಹೊಂದಿದೆ. ಅಂಚೆಯಣ್ಣ ಇಂದಿಗೂ ನಮ್ಮ ಗ್ರಾಮ ಭಾರತದಲ್ಲಿ ಗುಡ್ಡಗಾಡು ಪ್ರದೇಶಗಳಲ್ಲಿ ಯಂತೂ ಅತೀ ಮುಖ್ಯ ಸಂಪರ್ಕದ ಕೊಂಡಿಯಾಗಿ ಉಳಿದಿದ್ದಾನೆ.

9.  ಜಗತ್ತಿನ 2ನೇ ಅತೀ ದೊಡ್ಡ ರೈಲ್ವೇ ಜಾಲ: ಭಾರತದಲ್ಲಿ ರೈಲು ಅತೀ ಮುಖ್ಯವಾದ ಸಾರಿಗೆ ಮಾಧ್ಯಮ. ಜಗತ್ತಿನ 2ನೇ ಅತೀ ದೊಡ್ಡ ರೈಲ್ವೇ ಜಾಲವನ್ನು ಭಾರತ ಹೊಂದಿದೆ. ಅತೀ ಹೆಚ್ಚು ನೌಕರರನ್ನು ಹೊಂದಿರುವುದು ಕೂಡ ರೈಲ್ವೇ ಇಲಾಖೆಯ ಹೆಗ್ಗಳಿಕೆ.

10. ವಾರಣಾಸಿ: ಕ್ರಿ.ಪೂ. 500ರಲ್ಲಿ ಗೌತಮ ಬುದ್ಧನಿಂದ ಭೇಟಿಕೊಟ್ಟಂತಹ ಸ್ಥಳವಾದ ವಾರಣಾಸಿಯು ಜಗತ್ತಿನಲ್ಲಿ ಅತೀ ಪುರಾತನ ಕಾಲದಿಂದಲೂ ನಿರಂತರವಾಗಿ ಜನವಸತಿ ಇರುವ ನಗರ ಸ್ಥಳವಾಗಿದೆ.

11. ಆಹಾರ ಪದ್ಧತಿ: ಭಾರತೀಯರಲ್ಲಿ ಕಾಶ್ಮೀರದಿಂದ ಕನ್ಯಾಕುಮಾರಿಯವರೆಗೆ ಹರಡಿದ ಭೂ ಪ್ರದೇಶದಲ್ಲಿ ಅಸಂಖ್ಯ ರೀತಿಯ ಆಹಾರ ವೈವಿಧ್ಯತೆ ಕಂಡು ಬರುತ್ತದೆ. ಬಹುಪಾಲು ಭಾರತೀಯರು ಸಸ್ಯಾಹಾರಿಗಳು. ಕೆಲವು ಹಬ್ಬಗಳಲ್ಲಿ ವಿಷಿಷ್ಟವಾದ ಖಾದ್ಯಗಳನ್ನೇ ತಯಾರಿಸಿ ದೇವರಿಗೆ ನೈವೆದ್ಯವಾಗಿ ಅರ್ಪಿಸಲಾಗುತ್ತದೆ. ಭಾರತೀಯರು ಖಾದ್ಯ ಪ್ರಿಯರು.

12.  ರಸ್ತೆಗಳು: ಜಗತ್ತಿನ ಅತೀ ದೊಡ್ಡ ರಸ್ತೆ ಜಾಲವನ್ನು ಭಾರತ ಹೊಂದಿದೆ. 1.9 ಮಿಲಿಯನ್ ಕೀ.ಮಿ ಉದ್ದದ ರಸ್ತೆ ಜಾಲವನ್ನು ಭಾರತ ಹೊಂದಿದೆ.

13.  ಚದುರಂಗ: ಚದುರಂಗವು ವಿಶ್ವದ ಕ್ರೀಡಾ ಕ್ಷೇತ್ರಕ್ಕೆ ಭಾರತದ ಕೊಡುಗೆ. ಚದುರಂಗ ಎಂದರೇ ಸಂಸ್ಕ್ರತದಲ್ಲಿ ಸೈನ್ಯದಲ್ಲಿರಬೇಕಾದ 4 ಬಗೆಯ ಬಲಗಳು. ಭಾರತದ ಮೊದಲ ಗ್ರ್ಯಾಂಡ್ ಮಾಸ್ಟರ್ ವಿಶ್ವನಾಥನ್ ಆನಂದ್.

14. ಜಗತ್ತಿನ ಅತೀ ದೊಡ್ಡ ಪ್ರಜಾಪ್ರಭುತ್ವ ರಾಷ್ಟ್ರ:  ಭಾರತವು ಸಂಸದೀಯ ಮಾದರಿ ಪ್ರಜಾಪ್ರಭುತ್ವ. ಅತೀ ದೊಡ್ಡ  ಪ್ರಜಾಪ್ರಭುತ್ವ ರಾಷ್ಟ್ರ. 28 ರಾಜ್ಯಗಳು 7 ಕೇಂದ್ರಾಡಳಿತ ಪ್ರದೇಶಗಳು 694 ಜಿಲ್ಲೆಗಳನ್ನು ಭಾರತ ಗಣರಾಜ್ಯ ಒಳಗೊಂಡಿದೆ.

15. ರಾಜ್ಯಧಾನಿ: ದೆಹಲಿಯು ಸಂಸತ್ತು ಭವನ ಹೊಂದಿದ್ದು ಕೇಂದ್ರ ಸರ್ಕಾರದ ಕಾರ್ಯ ಕಲಾಪಗಳು ಅಲ್ಲಿಂದ ನಡೆಯುತ್ತವೆ. ಅಲ್ಲದೇ ದೆಹಲಿಯು ಯುನೆಸ್ಕೊ ಪಾರಂಪರಿಕ ತಾಣಗಳ ಪಟ್ಟಿಯಲ್ಲಿ ಹೆಸರು ಪಡೆದಿದೆ.

16. ಬಹು ಭಾಷೀಯತೆ:  ಪ್ರತಿಯೊಬ್ಬ ಭಾರತೀಯನು ಸರಾಸರಿ 2-3 ಭಾಷೆ ಮಾತನಾಡುವುದು ಸಾಮಾನ್ಯ  ಸಂಗತಿ.

17. ತಿರುಪತಿ ದೇವಾಲಯ: ಜಗತ್ತಿನ ಅತೀ ಹೆಚ್ಚು ಯಾತ್ರಿಕರು ಭೇಟಿ ನೀಡುವ ಸ್ಥಳ. ಮಕ್ಕಾ ಅಥವಾ ವ್ಯಾಟಿಕನ್ ಗಿಂತಲೂ ಕೂಡ.

18. ಯುವ ಜನಸಂಖ್ಯೆ: ಶೇ. 50ರಷ್ಟು ಭಾರತೀಯರು 25 ವರ್ಷಕ್ಕಿಂತ ಕಿರಿಯರು ಮತ್ತು ಶೇ. 65 ಜನ 35 ವರ್ಷಕ್ಕಿಂತ ಕಡಿಮೆ ವಯಸ್ಸಿನವರು. ಜಗತ್ತಿನ ಇತರ ರಾಷ್ಟ್ರಗಳಿಗೆ ಹೋಲಿಸಿದಾಗ ಭಾರತದಲ್ಲಿ ಯುವ ಜನಸಂಖ್ಯೆ ಹೆಚ್ಚು.

19 . ಜಗತ್ತಿನ ಅತೀ ಪುರಾತನ ನಾಗರೀಕತೆ: ಭಾರತವು ಜಗತ್ತಿನ ಅತೀ ಪುರಾತನ ನಾಗರೀಕತೆಯ ನೆಲೆ ಆಗಿತ್ತು. ಸಿಂಧೂ ಬಯಲಿನ ನಾಗರೀಕತೆ ಎಂದು ಹೆಸರುವಾಸಿಯಾಗಿತ್ತು.

20. ಶಾಂತಿಪ್ರಿಯ ರಾಷ್ಟ್ರ:  ಭಾರತದ ಸಾವಿರಾರು ವರ್ಷಗಳ ಭವ್ಯ ಇತಿಹಾಸದಲ್ಲಿ ಜಗತ್ತಿನ ಯಾವ ಸಾಮ್ರಾಜ್ಯದ ಮೇಲೂ ಭಾರತ ತಾನಾಗಿಯೇ ಆಕ್ರಮಣ ಮಾಡಿದ ಒಂದೇ ಒಂದು ಉದಾಹರಣೆ ಇಲ್ಲ. ಬದಲಾಗಿ ಇಲ್ಲಿ ಸಾಮ್ರಾಟ ಅಶೋಕ ಯುದ್ಧವನ್ನೇ ತ್ಯಜಿಸಿದ ಉದಾಹರಣೆ ಇದೆ. ಭಾರತ ಇಂದಿಗೂ ಅಲಿಪ್ತ ರಾಷ್ಟ್ರವಾಗಿ ಮುಂದುವರೆಯುತ್ತಿದ್ದು ಶಾಂತಿ ಪರವಾದ ತನ್ನ ನಿಲುವಿಗೆ ಬದ‍್ಧವಾಗಿದೆ.

21. ಪವಿತ್ರ ನದಿ: ಭಾರತದ ಪವಿತ್ರ ನದಿಯಾದ ಗಂಗಾ ನದಿಯು  ಭಾರತದ ಅತೀ ಉದ್ದವಾದ ನದಿಯಾಗಿದೆ. ಹಿಂದೂಗಳಿಗೆ ಪವಿತ್ರ ನದಿ ಎಂದು ಹೆಸರುವಾಸಿಯಾಗಿದೆ. ಜಗತ್ತಿನ ಅತೀ ಹೆಚ್ಚು ಜನಸಂಖ್ಯೆ ಇರುವ ನದಿ ಪಾತ್ರವಾಗಿದೆ.

22. ಚಲನಚಿತ್ರೋದ್ಯಮ: ಭಾರತವು ಜಗತ್ತಿನಲ್ಲಿ ಅತೀ ದೊಡ್ಡದಾದ ಚಲನಚಿತ್ರೋದ್ಯಮ ಹೊಂದಿದೆ. ಬಹಳಷ್ಟು ಚಲನಚಿತ್ರಗಳು ಬಾಲಿವುಡ್ ನಲ್ಲಿ ತಯಾರಾದರೂ ದೇಶದಾದ್ಯಂತ ಹರಡಿರುವ ಸ್ಟುಡಿಯೋಗಳಲ್ಲಿ ವಿವಿಧ ಭಾಷೆಯ ಚಲನಚಿತ್ರಗಳು ತಯಾರಾಗುತ್ತವೆ.

23. ಶೂನ್ಯ: ಗಣಿತದ ಮಹಾನ್ ಸಾಧನೆಯಾದ ಶೂನ್ಯವನ್ನು ಜಗತ್ತಿಗೆ ಕೊಡುಗೆಯಾಗಿ ಕೊಟ್ಟವರು ಭಾರತೀಯರೆ.

24. ಬಾಳೆ ಹಣ್ಣು: ಭಾರತದಿಂದ ಅತೀ ಹೆಚ್ಚು ಬಾಳೆ ಹಣ್ಣುಗಳು ರಫ್ತಾಗುತ್ತವೆ.

25. ಕುಂಭಮೇಳ: ಪ್ರತಿ 12 ವರ್ಷಕ್ಕೊಮ್ಮೆ ಅಲಹಾಬಾದ್‍ ನಲ್ಲಿ ನಡೆಯುವ ಕುಂಭ ಮೇಳವು ಜಗತ್ತಿನಲ್ಲೇ ಅತೀ ಹೆಚ್ಚು ಜನರು ಸೇರುವ ಧಾರ್ಮಿಕ ಮೇಳವಾಗಿದೆ.

26. ಹಾಲಿನ ಹೊಳೆ:  ಜಗತ್ತಿನಲ್ಲಿ ಅತೀ ಹೆಚ್ಚು ಹಾಲು ಉತ್ಪಾದನೆ   ಆಗುವುದು ಭಾರತದಲ್ಲಿ.

27. ಚಹಾ:  ಚಹಾವೂ ಭಾರತದ ರಾಷ್ಟ್ರೀಯ ಪಾನೀಯವಾಗಿದೆ. ಇಲ್ಲಿ ಜಗತ್ತಿನಲ್ಲೇ ಅತೀ ಹೆಚ್ಚು ಚಹಾ ಉತ್ಪಾದಿಸಲ್ಪಡುತ್ತದೆ.

28. ಬೃಹದೇಶ್ವರ ದೇವಾಲಯ: ಭಾರತದ ಅತೀ ದೊಡ್ಡ ಗ್ರಾನೈಟ್ ಕಲ್ಲಿನ ದೇವಾಲಯ. 1000 ವರ್ಷಗಳಷ್ಟು ಹಳೆಯದು.

29. ಆನೆ: ಭಾರತದ ರಾಷ್ಟ್ರೀಯ ಪಾರಂಪರಿಕ ಪ್ರಾಣಿ ಎಂದು ಘೋಷಿಸಲ್ಪಟ್ಟಿದೆ.

30. ಹಿಂದೂ ಬಾಹುಳ್ಯ: ಭಾರತದಲ್ಲಿರುವ ಜನಸಂಖ್ಯೆಯಲ್ಲಿ ಹಿಂದುಗಳೇ ಅಧಿಕವಾಗಿದ್ದರು.

31. ಬೆಂಗಳೂರು:  ಭಾರತದ ಮಾಹಿತಿ ತಂತ್ರಜ್ಞಾನದ ತವರು ಎಂದು ಹೆಸರುವಾಸಿಯಾಗಿದೆ.

32. ವೇದಗಳು:  4 ವೇದಗಳು ಭಾರತೀಯ ಸಂಸ್ಕ್ರತಿಯ ಅಮೂಲ್ಯ ಭಂಡಾರವಾಗಿವೆ. ಶತಮಾನಗಳಷ್ಟು ಹಳೆಯದಾದರೂ ಇವುಗಳು ಇಂದಿನ ಕಾಲಕ್ಕೂ ಪ್ರಸ್ತುತತೆ ಹೊಂದಿವೆ.

33. ಆಯುರ್ವೇದ:  ಗಿಡಮೂಲಿಕೆಗಳಿಂದ ಸರ್ವ ರೋಗಕ್ಕೂ ಔಷಧಿ ಇದು ಯಾವುದೇ ಅಡ್ಡ ಪರಿಣಾಮಗಳಿಲ್ಲದ ಔಷಧ ಪದ್ಧತಿ.

34. ಸೀರೆ: ಭಾರತೀಯ ನಾರಿಯರು ಉಡುವ ಸೀರೆ ಎಲ್ಲ ಕಾಲಕ್ಕೂ ಎಲ್ಲರಿಗೂ ಒಪ್ಪುವ ಬಹಳ ಹಿಂದಿನಿಂದಲೂ ಬಳಸಲ್ಪಡುತ್ತಿರುವ ಹೊಲಿಯದೆ ಇರುವ ಉಡುಪು.

35. ಮದನ ಮೋಹನ ಮಾಲವೀಯ ‘ಮಹಾಮನಾ’ ಎಂದು ಕರೆಯಲಾಗುತ್ತಿತ್ತು.

36. ರಂಗನತಿಟ್ಟು ಪಕ್ಷಿಧಾಮ ಕರ್ನಾಟಕದಲ್ಲಿದೆ.

37. ಆನಂದಮಠ, ದುರ್ಗೇಶ್ ನಂದಿನಿ, ಕಪಾಲ ಕುಂಡಲಾ ಕಾದಂಬರಿಗಳನ್ನು  ಬಂಕೀಮಚಂದ್ರ ಚಟರ್ಜಿ ಅವರು ಬರೆದಿದ್ದಾರೆ.

38. ಯೋಗ ದರ್ಶನವನ್ನು ಪತಂಜಲಿಯವರು ಪ್ರತಿಪಾದಿಸಿದರು.

39. ಭುವನೇಶ್ವರವನ್ನು ಭಾರತದ ದೇವಾಲಯಗಳ ನಗರ ಎಂದು ಕರೆಯಲಾಗುತ್ತದೆ.

40. ಹರ್ಯಾಣಾ ರಾಜ್ಯದಲ್ಲಿ ಬುಡಕಟ್ಟು ಪಂಗಡಗಳ ಜನರು ಕಂಡು ಬರುವುದಿಲ್ಲ.

41. ಪರಮ ಎಂಬ  ಸೂಪರ್ ಕಂಪ್ಯೂಟರ್ ಭಾರತದಿಂದ ಅಭಿವೃದ್ಧಿಗೊಂಡ ಮೊದಲ ಸೂಪರ್ ಕಂಪ್ಯೂಟರ್ ಆಗಿದೆ.

42. ಋಗ್ವೇದದ ಮಂತ್ರಗಳು ಇಂದ್ರನಿಗೆ ಸಂಬಂಧಪಟ್ಟಿವೆ.

43. ಎನ್.ಸಿ.ಸಿ.ಯ ಧ್ಯೇಯವಾಕ್ಯ ಏಕತೆ ಮತ್ತು ಅನುಶಾಸನ

44. 1961ರಲ್ಲಿ ಭಾರತದ ಮೊದಲ I.I.M.  ಸ್ಥಾಪನೆಯಾಯಿತು.

 ಮುಂದುವರೆಯುವುದು

 

 

 

 

   

Leave a Reply