ಭಾರತವನ್ನು ನಮ್ಮದೇ ದೃಷ್ಟಿಯಿಂದ ನೋಡಬೇಕು : ಗೋವಿಂದಾಚಾರ್ಯ

ರಾಜ್ಯಗಳು - 0 Comment
Issue Date : 08.05.2015

ಸಿರ್‌ಮೌರ್ (ಮಧ್ಯಪ್ರದೇಶ): ಬೇರೆ ದೇಶಗಳ ಅಭಿ ವೃದ್ಧಿ ಯನ್ನು ನಕಲು ಮಾಡುವುದರಿಂದ ಭಾರತದ ಪ್ರಗತಿ ಸಾಧ್ಯವಿಲ್ಲ. ಇತರ ದೇಶಗಳಿಗೆ ಅಭಿವೃದ್ಧಿಯ ಮಾದರಿ ಕೊಡುಗೆಯನ್ನು ನೀಡಿದ್ದು ನಾವೇ. ಈಗ ಅದೇ ರೀತಿ ನಮ್ಮದೇ ಮಾದರಿಯನ್ನು ನಮ್ಮ ದೇಶದ ಅಭಿವೃದ್ಧಿಗಾಗಿ ಬಳಸಬೇಕಾಗಿದೆ. ಭಾರತವನ್ನು ನಮ್ಮದೇ ದೃಷ್ಟಿಯಿಂದ, ನಮ್ಮ ಕನ್ನಡಕಗಳಿಂದಲೇ ನೋಡಬೇಕಾಗಿದೆ ಎಂದು ಸ್ವದೇಶಿ ಚಿಂತಕ ಕೆ.ಎನ್.ಗೋವಿಂದಾಚಾರ್ಯ ಪ್ರತಿಪಾದಿಸಿದ್ದಾರೆ. ಅವರು ಇಲ್ಲಿ ನಡೆದ ಶ್ರೀಕಾಂತ ಜೋಷಿ ಸ್ಮಾರಕ ಉಪನ್ಯಾಸ ಕಾರ್ಯಕ್ರಮದಲ್ಲಿ ಮಾತನಾಡಿದರು. ಹಿಂದುಸ್ತಾನ ಸಮಾಚಾರ ಮತ್ತು ಇಲ್ಲಿನ ಪ್ರೆಸ್ ಕ್ಲಬ್ ಜಂಟಿಯಾಗಿ ಈ ಕಾರ್ಯಕ್ರಮವನ್ನು ಏರ್ಪಡಿಸಿದ್ದವು.
ಪ್ರಾಕೃತಿಕ ಕೇಂದ್ರಿತ ಅಭಿವೃದ್ಧಿ ಕುರಿತು ಒತ್ತುನೀಡಿ ಮಾತನಾಡಿದ ಗೋವಿಂದಾಚಾರ್ಯ, ಇಂದು ಶೇ.20 ಮಂದಿ ಶೇ.80 ಮಂದಿಯ ಸಂಪ ನ್ಮೂಲಗಳನ್ನು ಬಳಸುತ್ತಿದ್ದಾರೆ. ಶೇ.80 ಮಂದಿ ಶೇ.20ಕ್ಕಿಂತ ಕಡಿಮೆ ಪ್ರಮಾಣದ ಸಂಪನ್ಮೂಲಗಳನ್ನು ಬಳಸಬೇಕಾದ ಅನಿವಾರ್ಯತೆ ಸೃಷ್ಟಿಯಾಗಿದೆ. ಎಲ್ಲರ ಪ್ರಗತಿಯೇ ಸರ್ಕಾರದ ನೀತಿಯಾಗಿರಬೇಕು ಎಂದು ಆಗ್ರಹಿಸಿದರು.
ಸಂಘದ ಹಿರಿಯ ಕಾರ್ಯಕರ್ತರಾದ ಉತ್ತಮ್ ಬ್ಯಾನರ್ಜಿ, ಮಹಿಳಾ ಕಾರ್ಯಕರ್ತೆ ಶ್ರೀಮತಿ ಕವಿತಾ ಪಾಂಡೆ ಕೂಡ ಈ ಸಂದರ್ಭದಲ್ಲಿ ಮಾತನಾಡಿದರು. ನಿವೃತ್ತ ಮುಖ್ಯ ಇಂಜಿನಿಯರ್ ಎಸ್.ಜಿ. ಗಡ್ಕರ್ ಸಭೆಯ ಅಧ್ಯಕ್ಷತೆ ವಹಿಸಿದರು.

   

Leave a Reply