ಭಾರತೀಯ ಸಂಸ್ಕೃತಿಯನ್ನು ಅನುಸರಿಸುತ್ತಿರುವ ದ್ವೀಪ ಬಾಲಿ

ಭಾರತೀಯ ಸಂಸ್ಕೃತಿ - 0 Comment
Issue Date : 09.10.2013

ಬಾಲಿ ಇಂಡೋನೇಷ್ಯಾ ದೇಶದ ಒಂದು ದ್ವೀಪ. ಬಾಲಿ ವಾಸ್ತುಶಿಲ್ಪಕ್ಕೆ ಹೆಸರುವಾಸಿ. ಬಾಲಿ ದ್ವೀಪವನ್ನು ‘ಐಸ್‌ಲ್ಯಾಂಡ್ ಆಫ್ ಗಾಡ್ ‘ (ದೇವರ ದ್ವೀಪ) ಎಂದೂ ಕರೆಯುತ್ತಾರೆ.

ಬಾಲಿಯ ದೇವಸ್ಥಾನಗಳು ಮತ್ತು  ಹಬ್ಬಗಳ ಆಚರಣೆ

ವಿಶ್ವದ ಮತ್ತೊಂದೆಡೆ ತಮ್ಮದೂ ಹಿಂದೂಗಳ ನಾಡು, ಹಿಂದು ಸಂಸ್ಕೃತಿಯ ನೆಲೆವೀಡು ಎಂದು ಕರೆದುಕೊಳ್ಳುವ ದ್ವೀಪ ಇಂಡೋನೇಷಿಯಾದ ಬಾಲಿ. ಇಂಡೋನೇಶಿಯಾದ ಬಾಲಿ ದ್ವೀಪದಲ್ಲಿ ದಟ್ಟ ಅರಣ್ಯ, ಸುತ್ತಲೂ ನೀರು, ಫಲವತ್ತಾದ ಭೂಮಿ, ದೇಗುಲಗಳು ತುಂಬಿರುವ ಈ ದ್ವೀಪದಲ್ಲಿ ನೂರಕ್ಕೆ ತೊಂಬತ್ತು ಮಂದಿ  ಹಿಂದೂ ಸಂಸ್ಕೃತಿಯನ್ನು  ಜೀವನದಲ್ಲಿ ಹಾಸು ಹೊಕ್ಕಾಗಿಸಿಕೊಂಡಿದ್ದಾರೆ. ಇಲ್ಲಿ ದೇವಸ್ಥಾನಗಳಿಗೆ “ಮೇರು” ಎನ್ನುತ್ತಾರೆ. ರಾಮಾಯಣ, ಮಹಾಭಾರತಗಳಿಗೆ ವಿಶೇಷ ಮಾನ್ಯತೆ ಇದೆ.

 20 ಮೀಟರ್ ಎತ್ತರದ ವಿಷ್ಣುವಿನ ಮೂರ್ತಿ ಬಾಲಿಯ ಮತ್ತೊಂದು ಆಕರ್ಷಣೆ. ಟಬನಾನ್ ಪಟ್ಟಣದಿಂದ 11ಕಿಮೀ ದೂರದಲ್ಲಿ ತನ್ಹಾ ಲಾಟ್ ಎಂಬ ದೇವಸ್ಥಾನವಿದೆ. ಈ ದೇವಸ್ಥಾನವನ್ನು 3ಎಕರೆ ಜಾಗದಲ್ಲಿ ಕಲ್ಲಿನಿಂದ ನಿರ್ಮಿಸಲಾಗಿದೆ. ಈ ದೇವಸ್ಥಾನದ ಸುತ್ತ ಹವಳದ ಬಂಡೆಯಿದೆ. ಅದು ದೇವತೆಯ ಆಸ್ತಿ, ಅದರ ರಕ್ಷಣೆಗೆಂದು ಅದರ ಸುತ್ತ ಕಪ್ಪು ಮತ್ತು ಬಿಳಿಯ ಹಾವು ಇದೆ ಎಂಬುದು ಸ್ಥಳೀಯರ ನಂಬಿಕೆ.

 ಗಣೇಶೋತ್ಸವ ಸಾರ್ವತ್ರಿಕ ಉತ್ಸವದ ರೂಪ ಪಡೆಯುತ್ತದೆ.  ವಿದೇಶಗಳಲ್ಲಿ ನೆಲೆಸಿದವರಿಂದ ಭಾರತೀಯತೆಯ ಗುರುತಾಗಿ ಗಣೇಶ ಆರಾಧಿಸಲ್ಪಡುತ್ತಾನೆ.

ಬಾಲಿ ದ್ವೀಪದಲ್ಲಿ ಈಗಲೂ ಸಹ ಅನೇಕ ಹಿಂದು ದೇವಾಲಯಗಳು ಉಳಿದುಕೊಂಡಿವೆ. ಜಾವಾದಲ್ಲಿ ಹಿಂದುಗಳು ಮತ್ತು ಬೌದ್ಧಧರ್ಮೀಯರು 12ನೇ ಶತಮಾನದಲ್ಲಿ 3 ಮೀಟರ್‌ ಎತ್ತರದ ಗಣೇಶ ಮೂರ್ತಿ ನಿರ್ಮಿಸಿದ್ದರು.

  ಯುಗಾದಿ ಸಂಪೂರ್ಣ ವ್ಯತಿರಿಕ್ತ ರೀತಿಯಲ್ಲಿ “ಮೌನ ದಿನಾಚರಣೆ” ನೈಪಿ ಎಂದು ಆಚರಿಸಲ್ಪಡುತ್ತದೆ. ಹಿಂದೂ ಸಂಸ್ಕೃತಿ ಆಚರಣೆಯ ಮೂಲ ಭಾರತದಿಂದ ಬಂದಿದ್ದರೂ ಅವರು ತಮ್ಮದೇ ಸ್ವಲ್ಪ ವಿಭಿನ್ನ-ವಿಶಿಷ್ಟ ಪದ್ಧತಿಯನ್ನು ತಮ್ಮ ಸಂಸ್ಕೃತಿಯ ಹಬ್ಬ ಹರಿದಿನಗಳಲ್ಲಿ, ನಾಮಕರಣ, ಚೌಲಾ, ವಿವಾಹ ಮತ್ತು ಶವಸಂಸ್ಕಾರ ಕ್ರಿಯೆಗಳಲ್ಲಿ ಅಳವಡಿಸಿಕೊಂಡಿದ್ದಾರೆ.

   ಪ್ರಾಚೀನ ಹಿಂದೂ ಸಂಸ್ಕೃತಿಯನ್ನು ಹೊಂದಿರುವ ಬಾಲಿ ದೇಶಕ್ಕೆ ನೀವು ಹೋದರೆ, ಅಲ್ಲಿ ಮಹಿಳಾ ಪುರೋಹಿತರನ್ನು ಕಾಣಬಹುದು (ಬಾಲಿಯ ಹಿಂದೂ ಸಂಸ್ಕೃತಿಯು ಭಾರತಕ್ಕಿಂತ ಪ್ರಾಚೀನವಾದುದು). ಭಾರತದಲ್ಲಿ, ಈ ಪದ್ಧತಿಯು ಮಾಯವಾಗಿ ಹೋಗಿದೆ. ಮಹಿಳೆಯರಿಗೆ ಅರ್ಚಕರಾಗಲು ಅವಕಾಶವಿಲ್ಲ.

 ಬಾಲಿಯಲ್ಲಿ,  ಎಲ್ಲಾ ಚಿಕ್ಕ  ದೇವಾಲಯದೊಳಗೆ ಯಾವುದೇ ಮೂರ್ತಿಯಿಲ್ಲ. ಯಾಕೆಂದರೆ ಅದು ನಮ್ಮ ಪೂರ್ವಿಕರಿಗಾಗಿ ಇರುವುದು. ಪೂರ್ವಿಕರ ಆತ್ಮಕ್ಕಾಗಿ ಅವರು, ಸರಿಯಾದ ಒಂದು ಚಿಕ್ಕ ಆಸನವನ್ನು ಇಡುತ್ತಾರೆ. ದೇವರಿಗಾಗಿರುವ ದೇವಾಲಯಗಳು ಕೂಡಾ ಇವೆ. ಹಲವಾರು ದೇವರುಗಳಿದ್ದಾರೆ, ಅವರೆಲ್ಲರೂ ಬರುತ್ತಾರೆ, ಅಲ್ಲಿ ಕುಳಿತುಕೊಳ್ಳುತ್ತಾರೆ, ನಮ್ಮನ್ನು ಹರಸುತ್ತಾರೆ ಮತ್ತು ನಮ್ಮನ್ನು ನೋಡಿಕೊಳ್ಳುತ್ತಾರೆ. ಇದು ಇಲ್ಲಿನ ನಂಬಿಕೆ. ನಿಜವಾಗಿ, ಇದು ಕೇವಲ ಒಂದು ನಂಬಿಕೆಯಲ್ಲ, ಅದೊಂದು ವಾಸ್ತವವೂ ಆಗಿದೆ.

 ಬಾಲಿಯ ಇತಿಹಾಸ

       12ನೇ ಶತಮಾನದಲ್ಲಿ ಭಾರತ ಸ್ವತಃ (800 ವರ್ಷಗಳ ಹಿಂದೆ) ಮುಸಲ್ಮಾನರ ಧಾಳಿಗೆ ಸಿಲುಕಿದ್ದ ಸಂದರ್ಭದಲ್ಲಿ ಇಂಡೋನೇಶಿಯಾದಲ್ಲಿ ಹಿಂದೂ ಮತ್ತು ಬೌದ್ಧ ಸಂಸ್ಕೃತಿ ಹಬ್ಬಿತ್ತು ಮತ್ತು ಬಹುಮಂದಿ ಅದರ ಅನುಯಾಯಿಗಳಾಗಿದ್ದರು. ಕ್ರಿಸ್ತ ಪೂರ್ವ ಕಾಲದಲ್ಲೇ ಈ ದ್ವೀಪಸಮೂಹವು ನಮ್ಮ ದೇಶದವರಿಗೆ ಸುವರ್ಣಭೂಮಿಯೆಂದು ಪರಿಚಿತ. ನಮ್ಮ ಸಮುದ್ರಯಾನೀ ವರ್ತಕರು ಈ ದ್ವೀಪಗಳೊಂದಿಗೆ ವ್ಯಾಪಾರ ಸಂಪರ್ಕವನ್ನಿಟ್ಟುಕೊಂಡಿದ್ದರು. ನಮ್ಮ ದೇಶದ ನಾವೆಗಳು ವ್ಯಾಪಾರಕ್ಕೋಸ್ಕರ ಅಲ್ಲಿಗೆ ಪಯಣಿಸುತ್ತಿದ್ದವು, ಹಾಗೂ ನಮ್ಮ ವರ್ತಕರು ಅಲ್ಲಿನ ಬಂದರುಪ್ರದೇಶಗಳಲ್ಲಿ ನೆಲೆಯೂರಿದ್ದರು. (ಬ್ರಿಟಿಷ್ ಈಸ್ಟ್ ಇಂಡಿಯಾದ ವ್ಯಾಪಾರಿಗಳು ನಮ್ಮ ಮುಂಬಯಿ,ಮದ್ರಾಸ್ ಗಳಲ್ಲಿ ನೆಲೆಯೂರಿದ್ದಂತೆ!). ಇವರೊಂದಿಗೆ ಧಾರ್ಮಿಕ ವಿಧಿ-ವಿಧಾನಗಳ ಆಚರಣೆಗಳಿಗೆ ಬ್ರಾಹ್ಮಣರನ್ನೂ ಕರೆದೊಯ್ದಿದ್ದರು. ಆ ದೇಶದಲ್ಲಿ ನಮ್ಮ ನಾಡಿನ ಬ್ರಾಹ್ಮಣರಿಗೆ ತುಂಬಾ ಗೌರವ ದೊರಕುತ್ತಿತ್ತು. ಅವರ ವಿದ್ಯೆ, ಪಾಂಡಿತ್ಯಗಳಿಗೆ ಮನ್ನಣೆಯೂ ದೊರೆಯಿತು. ಹಾಗೂ ಜನರು ಅವುಗಳನ್ನು ಅನುಸರಿಸಲು, ತಿಳಿದುಕೊಳ್ಳಲು ಬಯಸಿದರು. ಹೀಗೆ ಕಾಲಕ್ರಮೇಣ ಹಿಂದೂ ಧರ್ಮವು ಪ್ರಚಾರಕ್ಕೆ ಬಂದಿತು. ಒಟ್ಟೊಟ್ಟಿಗೆ ಮಹಾಯಾನ ಬೌದ್ಧಧರ್ಮವೂ ಈ ದೇಶವನ್ನು ಪ್ರವೇಶ ಮಾಡಿತು. ಇದು ನಮ್ಮ ದೇಶದ ಬೌದ್ಧ ಸನ್ಯಾಸಿಗಳ ಧರ್ಮಪ್ರಚಾರಕ್ಕಾಗಿ ನಡೆಸಿದ ಸಮುದ್ರಯಾನದ ಪ್ರಭಾವ.

 ಬಾಲಿ ದ್ವೀಪ ಹೇಗಾಯ್ತು, ಹೆಸರು ಹೇಗೆ ಬಂತು ಎಂಬುದಕ್ಕೆ-ಜಾವಾದ ಮಹಾರಾಜ ತನ್ನ ಅವಿಧೇಯ ಮಗನ ಮೇಲೆ ಕೋಪಗೊಂಡು ಅವನನ್ನು ರಾಜ್ಯದೊಳಗೆ ಬಾರದಂತೆ ಬಹಿಷ್ಕಾರ ಹಾಕಿದನು. ಅವಿಧೇಯ ಮಗ ಮರಳಿ ಬಂದರೆ ಬಲಿ ಕೊಡುವೆನೆಂದು ಘೋಷಿಸಿ, ಮಗ ಮನೆಗೆ ಮರಳಿ ಬಾರದಂತೆ ನೆಲದ ಮೇಲೆ ರೇಖೆ ಎಳೆದನಂತೆ. ತತ್‍ಕ್ಷಣ ಉತ್ತರ-ದಕ್ಷಿಣಗಳ ಸಮುದ್ರವೆರಡೂ ಸೇರಿ ಬಾಲಿ ದ್ವೀಪವಾಯಿತೆಂದು ಪ್ರತೀತಿ.

 ಅಲ್ಲಿ ಪರ್ವತ ಕಣಿವೆ, ಸರೋವರ, ಸಮತಟ್ಟಾದ ಪ್ರದೇಶ, ಬಿಳಿ ಮರಳಿನ ಬೀಚ್, ಮತ್ತು ಬಿಸಿಯಾಗಿರುವ ಸಮುದ್ರದ ನೀಲಿ ನೀರಿನ ಸೌಂದರ್ಯವನ್ನು ಸವಿಯಬಹುದು. ಅಲ್ಲದೇ ಐಸ್‌ಲ್ಯಾಂಡ್‌ನಲ್ಲಿ ಶ್ರೀಮಂತ ಸಂಸ್ಕೃತಿ, ಡ್ಯಾನ್ಸ್, ಅದ್ಭುತ ದೃಶ್ಯ ಹೊಂದಿರುವ ಶಿಖರ ಮತ್ತು ಸಮುದ್ರದ ಸೌಂದರ್ಯ ಇಲ್ಲಿನ ವಿಶೇಷತೆ. ಈ ದ್ವೀಪದಲ್ಲಿ ಅನನ್ಯ ಸಂಸ್ಕೃತಿ ಮತ್ತು ದ್ವೀಪದ ಪ್ರಾಕೃತಿಕ ಸೌಂದರ್ಯ ಎಂಥವರನ್ನೂ ಮಂತ್ರಮುಗ್ಧರನ್ನಾಗಿಸದೆ ಇರದು. ಸರ್ಫಿಂಗ್, ಡೈವಿಂಗ್ ಜತೆಗೆ ಸಾಂಸ್ಕೃತಿಕ, ಐತಿಹಾಸಿಕ ಮತ್ತು ಪುರಾತತ್ವ ಶಾಸ್ತ್ರದ ಆಕರ್ಷಣೆಗಳು ಪ್ರವಾಸಿಗರನ್ನು ಸೆಳೆಯುತ್ತವೆ. ಮಾತ್ರವಲ್ಲ ಇಂಡೋನೇಷಿಯಾದ ಬಾಲಿಯಲ್ಲಿ ವಿಶಾಲ ಮಾರುಕಟ್ಟೆಯೂ ಇದೆ. ಕೋಟಾ ಸಮುದ್ರ ತೀರ ಬಾಲಿಯ ಪ್ರಮುಖ ಬೀಚ್. ಪ್ರವಾಸಿಗರಿಂದ ಆಕರ್ಷಣೆಗೊಳಪಟ್ಟ ಪ್ರಮುಖ ಬೀಚ್‌ಗಳಲ್ಲಿ ಒಂದು. ಬೀಚ್‌ನುದ್ದಕ್ಕೂ ತಾಳೆಮರಗಳನ್ನು ನೋಡಬಹುದು. ಇಲ್ಲಿಂದ ಸೂರ್ಯೋದಯ ಮತ್ತು ಸೂರ್ಯಾಸ್ತವನ್ನು ನೋಡಬಹುದು. ಅಬ್ಬರದ ಅಲೆಗಳು ನಿಮ್ಮನ್ನು ಸರ್ಫಿಂಗ್‌ಗೆ ಆಹ್ವಾನಿಸುತ್ತದೆ.

ಅದ್ಭುತ ವಾಸ್ತುಶಿಲ್ಪ ಹೊಂದಿರುವ ಅಲ್ಲಿನ ಪ್ರತಿಯೊಂದು ಮನೆಯು ಒಂದಕ್ಕಿಂತ ಒಂದು ವಿಭಿನ್ನ.

 

   

Leave a Reply