ಭೂಕಂಪ ಪೀಡಿತರಿಗೆ ಪಾಕ್ ಗೋಮಾಂಸ!

ರಾಜ್ಯಗಳು - 0 Comment
Issue Date : 07.05.2015

ಕಂಠ್ಮಡು: ಭೂಕಂಪ ಪೀಡಿತ ನೇಪಾಳದಲ್ಲಿ ನಿರಾಶ್ರಿತರಾಗಿರುವ ಲಕ್ಷಾಂತರ ಜನರು ಹಸಿವಿನಿಂದ ಕಂಗೆಟ್ಟಿದ್ದು, ಜೀವ ಉಳಿಸಿಕೊಳ್ಳಲು ಹರಸಾಹಸಪಡುತ್ತಿದ್ದಾರೆ. ಇಂತಹ ಪರಿಸ್ಥಿತಿಯಲ್ಲಿ ಗೋಮಾಂಸ ನಿಷೇಧ ಕಾನೂನು ಜಾರಿಯಲ್ಲಿರುವ ಹಿಂದು ರಾಷ್ಟ್ರ ನೇಪಾಳಕ್ಕೆ ನೆರೆ ರಾಷ್ಟ್ರ ಪಾಕಿಸ್ಥಾನ ಕಳುಹಿಸಿದ್ದು, ಗೋಮಾಂಸದ ಪೊಟ್ಟಣ!
ಪಾಕ್ ಕಳುಹಿಸಿರುವ ಆಹಾರ ಪೊಟ್ಟಣಗಳಲ್ಲಿ ಹಿಂದುಗಳಿಗೆ ಪವಿತ್ರವಾ ಗಿರುವ ಗೋವಿನ ಮಾಂಸ ಇರುವ ಪೊಟ್ಟಣಗಳಿರುವುದು ಬೆಳಕಿಗೆ ಬಂದಿದೆ. ಆ ಆಹಾರ ಪೊಟ್ಟಣಗಳನ್ನು ಮುಟ್ಟದ ಜನರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಪಾಕಿಸ್ಥಾನದ ಈ ನಡೆಯಿಂದ ಸಾರ್ಕ್ ಸದಸ್ಯ ರಾಷ್ಟ್ರಗಳ ನಡುವೆ ರಾಜತಾಂತ್ರಿಕ ಬಿಕ್ಕಟ್ಟು ಉಂಟಾಗುವ ಸಾಧ್ಯತೆಗಳು ಸಹ ದಟ್ಟವಾಗಿವೆ. ಪ್ರಜಾಪ್ರಭುತ್ವ ಜಾರಿಗೆ ಬರುವ ಮುನ್ನ ನೇಪಾಳ ವಿಶ್ವದ ಏಕೈಕ ಹಿಂದು ರಾಷ್ಟ್ರವಾಗಿತ್ತು. ನೇಪಾಳದಲ್ಲಿ ಪ್ರಸ್ತುತ ಗೋಹತ್ಯೆ ನಿಷೇಧಿಸಲಾಗಿದ್ದು, ಒಂದು ವೇಳೆ ಗೋಹತ್ಯೆ ಮಾಡಿದಲ್ಲಿ 12 ವರ್ಷ ಕಠಿಣ ಜೈಲು ಶಿಕ್ಷೆ ವಿಧಿಸಲಾಗುತ್ತಿದೆ.
ವೈದ್ಯರಿಂದ ಪತ್ತೆ
ಭೂಕಂಪದಲ್ಲಿ ನಿರಾಶ್ರಿತರಾದವರಿಗೆ ಪಾಕ್ ಏ. 27ರಂದು ಕಳುಹಿಸಿದ್ದ ಆಹಾರ ಪೊಟ್ಟಣಗಳಲ್ಲಿ ಗೋಮಾಂಸ ಇದ್ದುದನ್ನು ಕಠ್ಮಂಡುವಿನ ಬಿರ್ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡುತ್ತಿರುವ ಭಾರತೀಯ ವೈದ್ಯರು ಮೊದಲಿಗೆ ಪತ್ತೆ ಹೆಚ್ಚಿದ್ದಾರೆ.

   

Leave a Reply