ಭೂಕಂಪ ಪೀಡಿತರ ನೆರವಿಗೆ ವಿಹಿಂಪ ತ್ರಿ-ಸ್ತರೀಯ ಯೋಜನೆ

ರಾಜ್ಯಗಳು - 0 Comment
Issue Date : 07.05.2015

ಹೊಸದಿಲ್ಲಿ: ನೇಪಾಳದ ಭೂಕಂಪ ಪೀಡಿತರ ನೆರವಿಗಾಗಿ ವಿಶ್ವ ಹಿಂದು ಪರಿಷತ್ ತ್ರಿ – ಸ್ತರೀಯ ಯೋಜನೆಯನ್ನು ಹಮ್ಮಿಕೊಂಡಿದೆ.
1. ಅನಾಥ ಮಕ್ಕಳಿಗಾಗಿ ವಸತಿ ಹಾಗೂ ಶಿಕ್ಷಣ: ಭೂಕಂಪದ ಪರಿಣಾಮವಾಗಿ ಅನೇಕ ಮಕ್ಕಳು ತಂದೆ ತಾಯಿಯರನ್ನು ಕಳೆದುಕೊಂಡು ಅನಾಥರಾಗಿದ್ದಾರೆ. ವಿಶ್ವ ಹಿಂದು ಪರಿಷತ್ ಭಾರತದಲ್ಲಿ 150ಕ್ಕೂ ಹೆಚ್ಚು ವಿದ್ಯಾರ್ಥಿನಿಲಯ ಹಾಗೂ 50ಕ್ಕೂ ಹೆಚ್ಚು ಅನಾಥಾಲಯಗಳನ್ನು ನಿರ್ವಹಿಸುತ್ತಿದೆ. ಇಂತಹ ವಿದ್ಯಾರ್ಥಿ ನಿಲಯ ಹಾಗೂ ಅನಾಥಾಲಯಗಳಲ್ಲಿ ಭೂಕಂಪ ಪೀಡಿತರ ಅನಾಥ ಮಕ್ಕಳಿಗೆ ವಿಹಿಂಪ ವ್ಯವಸ್ಥೆ ಮಾಡಲಿದೆ.
2. ಮನೆ: ಭೂಕಂಪ ಪೀಡಿತರಲ್ಲಿ ನೂರಾರು ಮಂದಿ ತಮ್ಮ ಮನೆ ಕಳೆದುಕೊಂಡಿದ್ದಾರೆ. ತಮ್ಮ ಭವಿಷ್ಯದ ಬಗ್ಗೆ ಯೋಚಿಸುವ ಸಾಮರ್ಥ್ಯವೂ ಅವರಿಗೆ ಈಗ ಉಳಿದಿಲ್ಲ. ಭೂಕಂಪದಲ್ಲಿ ಮನೆ ಕಳೆದುಕೊಂಡವರಿಗೆ ವಿಹಿಂಪ ಮತ್ತೆ ಮನೆಗಳನ್ನು ನಿರ್ಮಿಸಿಕೊಡಲಿದೆ. ಗೃಹ ನಿರ್ಮಾಣ ಸಂಸ್ಥೆಗಳು ಅಥವಾ ತತ್ಸಂಬಂಧಿತ ಕಂಪನಿಗಳು ಈ ಹಿನ್ನೆಲೆಯಲ್ಲಿ ವಿಹಿಂಪಗೆ ಸಹಾರ ನೀಡಬೇಕಾಗಿ ಮನವಿ.
3. ಪ್ರಾಚೀನ ಮಂದಿರ: ಪ್ರಾಚೀನ ಮಂದಿರಗಳು ಹಾಗೂ ವಿಶ್ವವಿಖ್ಯಾತ ಧರೋಹರ ಮಂದಿರಕ್ಕಾಗಿ ನೇಪಾಳ ಪ್ರಸಿದ್ಧವಾಗಿತ್ತು. ನೇಪಾಳದ ಮಂದಿರಗಳಲ್ಲಿ ಪ್ರತಿನಿತ್ಯ ಪೂಜೆ ನಡೆಯುತ್ತಿತ್ತು. ದೇಶ ವಿದೇಶಗಳಿಂದ ಬಂದ ಭಕ್ತರು ಅಲ್ಲಿ ನೆರೆದಿರುತ್ತಿದ್ದರು. ಆದರೆ ಈಗ ಹಲವಾರು ಮಂದಿರಗಳು ಮುರಿದುಬಿದ್ದಿವೆ. ಅಂತಹ ಮಂದಿರಗಳನ್ನು ಮತ್ತೆ ನಿರ್ಮಿಸುವುದು ನಮ್ಮೆಲ್ಲರ ಕರ್ತವ್ಯವಾಗಿದೆ. ವಿಶ್ವ ಹಿಂದು ಪರಿಷತ್ ಮಂದಿರಗಳ ಪುನರ್ನಿರ್ಮಾಣಕ್ಕಾಗಿ ನೆರವು ನೀಡಲಿದೆ. ಈ ಕಾರ್ಯದಲ್ಲಿ ಹಿಂದು ಅಭಿಮಾನಿಗಳು ಮುಂದಾಗಬೇೆಂದು ವಿಹಿಂಪ ಕರೆಕೊಟ್ಟಿದೆ.
ಭೂಕಂಪ ಪೀಡಿತರಿಗೆ ಹೀಗೆ ತ್ರಿ-ಸ್ತರೀಯ ಯೋಜನೆಗಳನ್ನು ವಿಹಿಂಪ ಹಮ್ಮಿಕೊಂಡಿದೆ ಎಂದು ಅಂ.ರಾ. ಕಾರ್ಯಾಧ್ಯಕ್ಷ ಪ್ರವೀಣ್ ತೊಗಾಡಿಯಾ ತಿಳಿಸಿದ್ದಾರೆ. ಭಾರತದಲ್ಲಿರುವ ಸಹೃದಯ ವ್ಯಕ್ತಿಗಳು ಭೂಕಂಪ ಪೀಡಿತರಿಗಾಗಿ ಎಲ್ಲ ಬಗೆಯ ನೆರವು ನೀಡಬೇಕೆಂದು ಅವರು ಮನವಿ ಮಾಡಿದ್ದಾರೆ.
ಈ ಯೋಜನೆಗೆ ನೆರವು ನೀಡುವ ಆಸಕ್ತಿವುಳ್ಳವರು ಸಂಪರ್ಕಿಸಬೇಕಾದ ವಿಳಾಸ: vhp.prezoffice@gmail.com

   

Leave a Reply