ಮಂಡ್ಯದ ಡಾ.ವಿವೇಕ್ ಅಮೆರಿಕದ ಮುಂದಿನ ವೈದ್ಯಾಧಿಕಾರಿ?

ಕರ್ನಾಟಕ ; ಮಂಡ್ಯ - 0 Comment
Issue Date : 16.11.2013

ಕರ್ನಾಟಕದ ಮಂಡ್ಯ  ಜಿಲ್ಲೆಯ ಹಳ್ಳೆಗೆರೆ ಸಂಜಾತ ವೈದ್ಯ ಡಾ.ವಿವೇಕ್ ಎಚ್.ಮೂರ್ತಿ ಅವರನ್ನು ಅಮೆರಿಕದ ಅಧ್ಯಕ್ಷ ಬರಾಕ್ ಒಬಾಮಾ ಅವರು ಮುಂದಿನ ಪ್ರಧಾನ ವೈದ್ಯಾಧಿಕಾರಿ ಹುದ್ದೆಗೆ ನಾಮನಿರ್ದೇಶನ ಮಾಡಿದ್ದಾರೆ.

ಲಂಡನ್‌ನಲ್ಲಿ ಜನಿಸಿ ಈಗ ಅಮೆರಿಕಾದ ಪ್ರಜೆಯಾಗಿದ್ದರೂ ಮೂರ್ತಿ ಯವರು ಮಂಡ್ಯ ಜೊತೆಗೆ ಈಗಲೂ ನಂಟು ಹೊಂದಿದ್ದಾರೆ. ಮಂಡ್ಯ ತಾಲೂಕು ಹಲ್ಲೆಗೆರೆ ಗ್ರಾಮದ ವೈದ್ಯ ಎಚ್‌.ಎನ್‌.ಲಕ್ಮೀನರಸಿಂಹಮೂರ್ತಿ ಹಾಗೂ ಮೈತ್ರೇಯಿ ದಂಪತಿ ಪುತ್ರರಾಗಿರುವ ಡಾ.ವಿವೇಕ್‌ ಮೂರ್ತಿ ವಿದೇಶದಲ್ಲೇ ನೆಲೆಸಿದ್ದರೂ ಕನ್ನಡವನ್ನು ಸ್ಪಷ್ಟವಾಗಿ ಮಾತನಾಡುತ್ತಾರೆ. ಇವರು ಪ್ರತಿ ವರ್ಷ ಹಲ್ಲೇಗೆರೆಗೆ ಬಂದು ತನ್ನೂರಿನ ಜನರಿಗೆ ಉಚಿತವಾಗಿ ಆರೋಗ್ಯ ಸೇವೆ ಒದಗಿಸುತ್ತಾ ಸ್ಥಳೀಯ ಜನರ ಪ್ರೀತಿಗೆ ಪಾತ್ರರಾಗಿದ್ದಾರೆ. 

ಸದ್ಯ ಬ್ರಿಗ್ ಹ್ಯಾಂನಲ್ಲಿ ಆಸ್ಪತ್ರೆಯ ಸಹ ಸಂಸ್ಥಾಪಕ ವೈದ್ಯರಾಗಿರುವ ಡಾ.ವಿವೇಕ್ ಅವರು ಅಮೆರಿಕ ಅಧ್ಯಕ್ಷರ ವೈದ್ಯರಲ್ಲಿ ಒಬ್ಬರಾಗಿದ್ದಾರೆ.  ಇವರು ಹಾರ್ವಡ್ ವಿಶ್ವವಿದ್ಯಾಲಯದಿಂದ ಬಿಎ ಪದವಿ, ಯಾಲೆಯ ಮ್ಯಾನೇಜ್‍ಮೆಂಟ್ ಸ್ಕೂಲ್‍ನಿಂದ ಎಂಬಿಎ ಪದವಿ ಹಾಗೂ ಯಾಯೆಯ ಸ್ಕೂಲ್ ಆಫ್ ಮೇಡಿಸಿನ್‍ನಿಂದ ಎಂಡಿ ಪದವಿ ಪಡೆದಿದ್ದಾರೆ.

ಭಾರತ ಮತ್ತು ಅಮೇರಿಕಾ ಸೇರಿದಂತೆ ವಿಶ್ವದಾದ್ಯಂತ ಎಚ್ಐವಿ/ಏಡ್ಸ್ ಕುರಿತಾದ ಶಿಕ್ಷಣ ನೀಡುತ್ತಿರುವ ವಿಜನ್ಸ್ ಎಂಬ ಸೇವಾ ಸಂಘಟನೆಯನ್ನು 1995ರಲ್ಲಿ ಹುಟ್ಟುಹಾಕುವಲ್ಲಿ ಶ್ರಮಿಸಿದ ಮೂರ್ತಿ 2000ರ ವರೆಗೆ ಅಧ್ಯಕ್ಷರಾಗಿ ಮತ್ತು 2000-2003ರವರೆಗೆ ಮಂಡಳಿಯ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದಾರೆ.  

   

Leave a Reply