ಮಕ್ಕಳಿಗೆ ರಾಷ್ಟ್ರಸಂಸ್ಕೃತಿಯ ಪಾಠ

ಲೇಖನಗಳು ; ಸಂದರ್ಶನಗಳು - 0 Comment
Issue Date :

-ರ. ಶಿವಶಂಕರ

ನಿಮ್ಮ ಸಂಸ್ಥೆಯ ಬಗ್ಗೆ ತಿಳಿಸಿ.
ನಮ್ಮ ಶಾಲೆಯನ್ನು ಗೊಯೆಂಕಾ ಮೆಮೋರಿಯಲ್ ಟ್ರಸ್ಟಿನಿಂದ
ನಡೆಸಲಾಗುತ್ತಿದೆ, ನಮ್ಮ ಈ ಟ್ರಸ್ಟ್ ಹಲವಾರು ಸಮಾಜ ಸೇವೆಗಳನ್ನು ಸಲ್ಲಿಸುತ್ತಿದೆ. ಕೋರಮಂಗಲದ ಪ್ರಾಣಿದಯಾ ಸಂಘದ ಗೋಶಾಲೆಯನ್ನು ನಮ್ಮ ಟ್ರಸ್ಟ್ ವತಿಯಿಂದ 12 ವರ್ಷಗಳಿಂದ ನಡೆಸಲಾಗುತ್ತಿದೆ. ನಮ್ಮ ಎಲ್ಲಾ ಮಕ್ಕಳನ್ನು ಸಾಧ್ಯವಾದಾಗೆಲ್ಲಾ ಅಲ್ಲಿಗೆ ಕರೆದೊಯ್ದು ಗೋಸೇವೆ ಅದರ ಮಹತ್ವಗಳ ಅರಿವು ನೀಡಲಾಗುತ್ತಿದೆ. ವಿಪಾಷನ ಮೆಡಿಟೇಷನ್ ಸೆಂಟರ್ ಕೂಡ ನಮ್ಮ ಟ್ರಸ್ಟ್‌ನ ಒಂದು ಕಾರ್ಯಕ್ರಮವಾಗಿದ್ದು ನಮ್ಮ ಶಾಲೆಯಲ್ಲೂ ಆನಪಾನ ಧ್ಯಾನ ಕಾರ್ಯಕ್ರಮ ಹೆಸರಿನಲ್ಲಿ ಹಲವು ವರ್ಷಗಳಿಂದ ನಮ್ಮ ಮಕ್ಕಳಿಗೆ ತಿಂಗಳಿಗೊಂದಾವರ್ತಿ ಭಾನುವಾರದಂದು ಊಟೋಪಚಾರ ಸಹಿತವಾಗಿ ಉಚಿತವಾಗಿ ನಮ್ಮ ಶಾಲಾ ಮಕ್ಕಳು ಹಾಗೂ ಸಾರ್ವಜನಿಕವಾಗಿ ಯಾವುದೇ ಶಾಲಾ ಮಕ್ಕಳಿಗೂ ಕಲಿಸಿಕೊಡಲಾಗುತ್ತದೆ. ಅದರಿಂದ ಅವರ ಭಾವನಾತ್ಮಕ ವರ್ತನೆಗಳ ಮೇಲೆ ಸ್ವಯಂ ನಿಯಂತ್ರಣ ನಿಶ್ಚಿತ ಗುರಿ ಗಮ್ಯತೆ ಸಾಧನೆಯಾಗುತ್ತದೆ. ಬೆಂಗಳೂರಿನ ಗುರಪ್ಪನಪಾಳ್ಯ ಬಡಾವಣೆಯಲ್ಲಿ ಉಚಿತ ಟೈಲರಿಂಗ್ ತರಬೇತಿ ಕೇಂದ್ರವನ್ನು ನಡೆಸಲಾಗುತ್ತಿದೆ. ನಮ್ಮ ಟ್ರಸ್ಟ್ ಸ್ಥಾಪಕರಾದ ಚೋಟ್‌ಮಲ್ ಗೊಯೆಂಕಾ ಅವರಿಗೆ 99 ವರ್ಷ ವಯಸ್ಸಾಗಿದ್ದು ಅವರ ನಿಸ್ವಾರ್ಥ ಮನೋಭಾವ ಅವರ ಸೊಸೆ ಲಕ್ಷಿ ್ಮೀದೇವಿ ಗೊಯೆಂಕಾ ಅವರಿಗೂ ಧಾರೆ ಬಂದಿದೆ. ಬೆಂಗಳೂರು ಮಾತ್ರವಲ್ಲದೆ ರಾಜಸ್ಥಾನದ ಜುಂಜುನುವಿನಲ್ಲಿ ಗೋಸಂರಕ್ಷಣೆ ಹಾಗೂ ಗೋತಳಿ ಅಭಿವೃದ್ಧಿ ಕೇಂದ್ರವನ್ನು ಸ್ಥಾಪಿಸಲಾಗಿದೆ. ಅಲ್ಲಿ ನೀರಿನ ಬವಣೆ ಅತಿಯಾಗಿದ್ದುದರಿಂದ ನಮ್ಮ ಟ್ರಸ್ಟ್ ವತಿಯಿಂದ ಕೊಳವೆಬಾವಿಗಳನ್ನು ಕೊರೆದು ಹತ್ತು ಹಳ್ಳಿಗಳಿಗೆ ನಿರಂತರ ನೀರು ಒದಗಿಸುತ್ತಿದ್ದು ಅದರಿಂದ ಅಲ್ಲಿ ಸ್ಥಗಿತವಾಗಿದ್ದ ಕೃಷಿ ಚಟುವಟಿಕೆಗಳು ಮತ್ತೆ ಗರಿಗೆದರಿವೆ ದನಕರುಗಳ ಪಾಲನೆ ಅರಂಭಿಸಿ ಸತ್ವ ಹಾಲು ಉತ್ಪಾದನಾ ಮತ್ತು ಮಾರಾಟ ಕೇಂದ್ರ ಆರಂಭಿಸಿ ಅವರಿಗೊಂದು ಉತ್ತಮ ವಾಣಿಜ್ಯ ಚಟುವಟಿಕೆಗೂ ಅವಕಾಶ ಕಲ್ಪಿಸಿ ಕೊಡಲಾಗಿದೆ. ನಮ್ಮ ಟ್ರಸ್ಟ್ ವತಿಯಿಂದಲೇ ಅಲ್ಲಿ ದೇವಾಲಯ ನಿರ್ಮಾಣವನ್ನೂ ಮಾಡಲಾಗಿದೆ.
ನಿಮ್ಮ ಶಾಲೆ ಯಾವ ರೀತಿ ವಿಭಿನ್ನವಾಗಿದೆ ?
ನಮ್ಮ ಶಾಲೆಯಲ್ಲಿ ಮಕ್ಕಳಿಗೆ ಕೇವಲ ಸಿಲಬಸ್ ಮಾತ್ರ ಕಲಿಸುವ ಪುಸ್ತಕದ ಹುಳುಗಳನ್ನು ಬೆಳೆಸುವುದಿಲ್ಲ, ಪಠ್ಯಕ್ರಮದೊಂದಿಗೆ ಮಕ್ಕಳು ಸಾಂಸ್ಕೃತಿಕ ಚಟುವಟುಕೆಗಳಿಂದ ಹೆಚ್ಚು ಕಲಿಯುತ್ತಾರೆ ನಮ್ಮ ಶಾಲೆಂುಲ್ಲಿ ಸಂಗೀತ ನೃತ್ಯ ಯೋಗ ಆರ್ಟ್ಸ್ ಮತ್ತು ಕ್ರಾಫ್ಟ್ಸ್ ತರಬೇತಿ 1ನೇ ತರಗತಿಯ ಮಕ್ಕಳಿಂದ ಎಲ್ಲಾ ಮಕ್ಕಳಿಗೂ ಕಲಿಸಲಾಗುತ್ತದೆ. ಸಾಮಾನ್ಯ ಪಠ್ಯಕ್ರಮದಂತೆಯೇ ಇತರೆ ಚಟುವಟಿಕೆಗಳನ್ನೂ ಎಲ್ಲಾ ವಿದ್ಯಾರ್ಥಿಗಳಿಗೂ ಕಲಿಸಲಾಗುತ್ತದೆ. ಪ್ರತಿದಿನ 5 ತರಗತಿಗಳು ಪಠ್ಯಕ್ರಮಗಳಿಗಾದರೆ 3 ತರಗತಿಗಳು ಇತರೆ ಚಟುವಟಿಕೆಗಳಿಗೆ ಮೀಸಲಾಗಿರುತ್ತವೆ. ಇತರೆ ಚಟುವಟಿಕೆಗಳು ಮಕ್ಕಳನ್ನು ಶಾಲೆಗೆ ತಪ್ಪದೇ ಹಾಜರಾಗುವಂತೆ ಸ್ವಯಂಪ್ರೇರಣೆ ನೀಡಿವೆ. ನಮ್ಮ ಶಾಲೆಯಲ್ಲಿ ಎಲ್ಲಾ ಜಾತಿ ವರ್ಗದ ಮಕ್ಕಳಿಗೂ ಸಮಾನ ಅವಕಾಶಗಳನ್ನು ನೀಡಲಾಗಿದೆ. ಹೇಳಬೇಕೆಂದರೆ ಮೊದಲಲ್ಲಿ ನಮ್ಮ ಶಾಲೆಯ ಅರ್ಜಿಯಲ್ಲಿ ಜಾತಿ ಕಲಂ ನಮೂದಿಸಿಯೇ ಇರಲಿಲ್ಲ ಆದರೆ ನಂತರದ ದಿನಗಳಲ್ಲಿ ಸ್ವಯಂ ಶಿಕ್ಷಣ ಇಲಾಖೆ ಅಧಿಕಾರಿಗಳ ಒತ್ತಾಯದ ಮೇರೆಗೆ ಮಕ್ಕಳ ಜಾತಿ ಕೇಳಿ ನಮೂದಿಸಬೇಕಾಯಿತು, ಹಾಗೇ ಮೊದಮೊದಲು ಚಟುವಟಿಕೆಗಳ ಬಗ್ಗೆ ಆಕ್ಷೇಪಣೆಗಳು ಕೇಳಿಬಂದವು ಆದರೆ ನಾವು ಪೋಷಕರಿಗೆ ತಿಳಿಸಿ ಹೇಳಿದ ಮೇಲೆ ಅವರ ಮಕ್ಕಳ ಸರ್ವಾಂಗೀಣ ವ್ಯಕ್ತಿತ್ವ ವಿಕಸನ ಅದರಿಂದ ಆಗುವುದನ್ನು ಮನಗಂಡು ತಮ್ಮ ಮಕ್ಕಳ ಒಳಿತಿಗಾಗಿ ಎಲ್ಲಾ ಪೋಷಕರೂ ನಮ್ಮೊಂದಿಗೆ ಕೈ ಜೋಡಿಸಿದ್ದಾರೆ. ಆದರೆ ಸರ್ಕಾರ ಅವರದಲ್ಲದ ಮಕ್ಕಳನ್ನು ತನ್ನ ರಾಜಕೀಯ ನೀತಿಗಳಿಗೆ ಅನುಗುಣವಾಗಿ ಒಡೆದು ಜಾತಿಭೇದದ ಬೀಜ ಬಿತ್ತುವಲ್ಲಿ ನಿರಂತರ ಕಾರ್ಯಮಗ್ನವಾಗಿದೆ. ನಮ್ಮ ಮಕ್ಕಳಿಗೆ ಯೋಗ ತರಗತಿಗಳನ್ನು ನಾವು ಬಹಳ ಹಿಂದಿನಿಂದಲೇ ಅಳವಡಿಸಿಕೊಂಡಿದ್ದೇವೆ. ಒಳಿತಾಗುವ ಯಾವುದೇ ತರಬೇತಿಯನ್ನು ಯಾರೂ ನಿರಾಕರಿಸುವುದಿಲ್ಲ. ಅಂತೆಯೇ ನಮ್ಮ ಮಕ್ಕಳ ಸಮಗ್ರ ಅಭಿವೃದ್ಧಿ ನಮ್ಮ ಉದ್ದೇಶ. ಸಂಗೀತ ನೃತ್ಯ ಎಲ್ಲವನ್ನೂ ಭಾರತೀಯತೆಯನ್ನೇ ಅಳವಡಿಸಿಕೊಂಡಿರುವುದರಿಂದ ಮಕ್ಕಳಿಗೆ ನಮ್ಮ ಸಂಸ್ಕೃತಿಯ ಪರಿಪೂರ್ಣ ಅರಿವು ಲಭಿಸುತ್ತಿದೆ. ನಮ್ಮಲ್ಲಿ ಗಣೇಶ ಚತುರ್ಥಿಗೆ ಸಂ್ರಮದಿಂದ ಗಣೇಶ ಮೂರ್ತಿ ಸ್ಥಾಪನೆ ಮಾಡಿ ಹಬ್ಬ ಆಚರಿಸುತ್ತೇವೆ, ಜನ್ಮಾಷ್ಠಮಿ, ನವರಾತ್ರಿಗೆ ಬೊಂಬೆಗಳ ಪ್ರದರ್ಶನ, ಮಾತಾಪಿತೃ ಪೂಜನಾ ದಿನ, ಅಜ್ಜ-ಅಜ್ಜಿ ದಿನ ಮುಂತಾದ ಸಂಬಂಧಗಳನ್ನು ಗಟ್ಟಿಗೊಳಿಸುವ ಎಲ್ಲಾ ರೀತಿಯ ಹಬ್ಬಗಳನ್ನೂ ಆಚರಿಸುತ್ತೇವೆ.
ನೀವು ಮತ್ತು ನಿಮ್ಮ ಶಾಲೆ ಭ್ರಷ್ಟಾಚಾರ ವಿರೋಧಿ ಭಾರತ ಹಾಗೂ ಇನ್ನೂ ಕೆಲವು ಚಳುವಳಿಗಳಲ್ಲಿ ಬಹಳ ಸಕ್ರಿಯವಾಗಿ ಭಾಗವಹಿಸಿದ ವಿಚಾರ ಹೇಳಬಹುದೆ?
ನಮ್ಮ ಶಾಲೆಯಿಂದ ಐ.ಏ.ಸಿ. ಚಳುವಳಿಗಾಗಿ ಒಂದು ವಿಶೇಷ ಹಿಂದಿ ಇಂಗ್ಲೀಷ್ ತಾತ್ವಿಕ ಗೀತೆಯನ್ನು ರಚಿಸಿ ರಾಗ ಭ್ರಷ್ಟಾಚಾರಮುಕ್ತ ಭಾರತ ನಿರ್ಮಾಣಾಂದೋಲನದಲ್ಲಿ ನಮ್ಮ ಶಾಲೆಯ ಮಕ್ಕಳು ಪೋಷಕರ ಸಮೇತ ಸಕ್ರಿಯವಾಗಿ ಭಾಗವಹಿಸಿದೆವು ಅದರ ಸಂಬಂಧ ಹಲವಾರು ಪೂರ್ವಭಾವಿ ಸಭೆಗಳನ್ನು ನಡೆಸಲಾಯಿತು. ಅದಕ್ಕೆ ಪೂರಕವಾಗಿ ಪ್ರಚಾರಾಂದೋಲನ ಕೈಗೊಳ್ಳಲಾಯಿತು ಅದರ ನಂತರ ಇಲೆಕ್ಟ್ರಾನಿಕ್ ಮತಯಂತ್ರದಲ್ಲಿ ನೋಟ
(ಘೆಅ) ಗುಂಡಿಯನ್ನು ಅಳವಡಿಸಿ ಯಾವುದೇ ಅಭ್ಯರ್ಥಿಯನ್ನು ಇಷ್ಟಪಡದವರೂ ತಮ್ಮ ಅಭಿಪ್ರಾಯ ವ್ಯಕ್ತಪಡಿಸುವ ಅವಕಾಶಕ್ಕಾಗಿ ಬಹಳ ಪರಿಣಾಮಕಾರಿಯಾಗಿ ಆಂದೋಲನದಲ್ಲಿ ಭಾಗವಹಿಸಿದೆವು ಆ ಬಗೆಗಿನ ನನ್ನ ಲೇಖನಗಳು ಹಲವಾರು ಪ್ರಮುಖ ಪತ್ರಿಕೆಗಳಲ್ಲಿ ಪ್ರಕಟವಾಗಿದ್ದವು. ಅದಲ್ಲದೆ ಆಗ ನನ್ನ ಬ್ಲಾಗ್ ಸಹ ಬಹಳ ಹೆಸರು ಪಡೆದುಕೊಂಡಿತು.
ನೀವು ಮತ್ತು ರವಿಹೆಗಡೆಯವರು ಹಲವಾರು ವಿಚಾರಗಳ ಬಗ್ಗೆ ಸಂಶೋಧನಾ ಲೇಖನಗಳನ್ನು ಬರೆದಿರುವ ಬಗ್ಗೆ ಹೇಳಬಹುದೆ ?
ನಾನು ಮತ್ತು ವಿಜ್ಞಾನ ಸಂಶೋಧಕರಾಗಿ ನಿಮ್ಹಾನ್ಸ್ನಲ್ಲಿ ಸಂಶೋಧಕರಾಗಿ ಕಾರ್ಯನಿರ್ವಹಿಸುತ್ತಿರುವ ರವಿ ಹೆಗ್ಡೆಯವರು ಸೇರಿ ಸಾಂಸ್ಕೃತಿಕ, ಚಾರಿತ್ರಿಕ, ಹಾಗೂ ಜೈವಿಕ ಸಂರಕ್ಷಣಾ ಕಾರ್ಯದಲ್ಲಿ ನಿರತರಾಗಿ ಜನತೆಗೆ ಅರಿವು ಮೂಡಿಸುವಲ್ಲಿ ಕೆಲಸ ಮಾಡುತ್ತಿದ್ದೇವೆ. ಉತ್ತರ ಕನ್ನಡ ಜಿಲ್ಲೆಯ ಶಿರಸಿಯಿಂದ ಸುಮಾರು 3 ಕಿ.ಮೀ.ದೂರದ ಕಲಾಗರ ಪಕ್ಕದ ತೈಲಗಾರ ಹಳ್ಳಿಯ ಮಹಾಗಣಪತಿ ದೇವಾಲಯವಿದೆ. ಆ ದೇವಾಲಯದ ಒಂದು ಗುಡಿಯೇ ಹುಲಿಯಪ್ಪನ ಕಟ್ಟೆ. ಅಲ್ಲಿದ್ದಾನೆ ಹುಲಿಯಪ್ಪ ದೇವರು. ಆ ದೇವರಿಗೆ ನಡೆದುಕೊಳ್ಳುವ ಹತ್ತಾರು ಸಾವಿರ ಜನ ಪ್ರತಿವರ್ಷ ಕಾರ್ತಿಕ ಬಹುಳ ಅಮಾವಾಸ್ಯೆಯ ದಿನ ಸೇರಿ ಜಾತ್ರೆ ನಡೆಸುತ್ತಾರೆ. ಶಿವನ ಸತಿ ಪಾರ್ವತಿಯ ವಾಹನ ುಲಿಯಪ್ಪ ಅವನು ಮಹಾಶಕ್ತಿಶಾಲಿ ದೇವರು, ಅವನ ಸಂಪ್ರೀತಿಯಿಂದ ದನಕರುಗಳು ಸಂವೃದ್ಧಿ ಹೊಂದುತ್ತವೆ, ಹುಲಿಗಳ ಆರ್ಟ ತೊಂದರೆ ನಮಗೆ ನಮ್ಮ ರಾಸುಗಳ ಮೇಲೆ ಉಂಟಾಗುವುದಿಲ್ಲ ಎಂಬುದು ನಂಬಿಕೆ. ಜಾತ್ರೆಯ ದಿನದ ರಾತ್ರಿ ಆರಂಭವಾಗುವ ಪೂಜಾ ಕೈಂಕರ್ಯಗಳು ಷೋಡಷೋಪಚಾರ ಆರಾಧನೆ ರಾತ್ರಿ ಇಡೀ ಜರುಗುತ್ತದೆ. ಬಾಲಕ್ಕೊಂದು ಕಾಯಿ ಪೂಜೆ ಇಲ್ಲಿಯ ಒಂದು ವಿಶೇಷ. ರೈತರು ತಮ್ಮಲ್ಲಿಯ ಪ್ರತಿ ರಾಸುವಿನ ಬಾಲಕ್ಕೆ ಒಂದರಂತೆ ತೆಂಗಿನಕಾಯಿ ಒಡೆದು ಹರಕೆ ತೀರಿಸುತ್ತಾರೆ. ಆ ದಿನ ಸುಮಾರು ಕಿಲೋಮೀಟರಿನಷ್ಟು ಸಾಲು ನಿಲ್ಲುವ ಜನರೆಲ್ಲಾ ಈ ರೀತಿ ಕಾಯಿ ಒಡೆದು ರಾಶಿ ರಾಶಿ ತೆಂಗಿನ ಕಾಯಿ ಚೂರಾಗುತ್ತದೆ. ಅದರ ಜೊತೆಗೆ ಇಡೀ ದಿನ ಸಾವಿರಾರು ಭಕ್ತರು ಚಿನ್ನ ಬೆಳ್ಳಿ ಇನ್ನಿತರೆಯಿಂದ ಮಾಡಿದ ಹಸು, ತೊಟ್ಟಿಲು, ಮಕ್ಕಳ, ಪ್ರಾಣಿಗಳ ಅಂಗಾಂಗಗಳ ಪ್ರತಿಕೃತಿಗಳನ್ನು ಹುಲಿಯಪ್ಪನಿಗೆ ಸಲ್ಲಿಸಿ ತಮ್ಮ ಮಕ್ಕಳುಮರಿ ದನಕರು ಸಾಕುಪ್ರಾಣಿಗಳಿಗೆ ರಕ್ಷಣೆ ನೀಡಿ ಆರೋಗ್ಯ ಸಂವೃದ್ಧಿ ನೀಡುವಂತೆ ಬೇಡಿಕೊಳ್ಳುತ್ತಾರೆ. ಅದರ ಮಾರನೇ ದಿನ ನಮ್ಮ ಹಾಗೂ ಗ್ರಾಮದ ಯುವಕರ ತಂಡ ಇಡೀ ಜಾತ್ರೆಯ ಪ್ರದೇಶವನ್ನು ಸ್ವಚ್ಛಗೊಳಿಸುವ, ಪ್ಲಾಸ್ಟಿಕ್ ಮುಕ್ತಗೊಳಿಸುವ ಕೆಲಸ ಮಾಡಿ ಪರಿಸರಕ್ಕೆ ಹಾನಿ ಆಗದಂತೆ ಸಂರಕ್ಷಣೆ ಮಾಡುತ್ತೇವೆ. ಜಾತ್ರೆಯ ಆರಂಭದಿಂದಲೂ ಕೊನೆವರೆಗೂ ಸ್ವಯಂಸೇವಕರು ಅಲ್ಲಿನ ಸಾಂಪ್ರದಾಯಿಕ ಆರಾಧನೆಗೆ ಅಡಚಣೆ ಆಗದಂತೆ ವ್ಯವಸ್ಥೆಗೆ ಸಹಕಾರ ಮಾಡುತ್ತಾರೆ. ಆ ಹಳ್ಳಿಯ ಯುವಕರ ಪರಿಸರ ಪ್ರಜ್ಞೆ ನಿಜಕ್ಕೂ ಸ್ವಚ್ಛ ಭಾರತದ ಸಾಕಾರಕ್ಕೆ ಸಾಕ್ಷಿಯಾಗಿದೆ. ಇದರೊಂದಿಗೆ ನಮ್ಮ ತಂಡ ವಾರ ಪತ್ರಿಕೆ ಮಾಸಿಕಗಳಲ್ಲಿ ಹಲವಾರು ಹಬ್ಬಗಳು ದೇವರುಗಳನ್ನು ಕುರಿತಾದ ಲೇಖನಗಳನ್ನು ಬರೆಯುತ್ತಿರುತ್ತೇವೆ. ನಾಟ್ಯ ಗಣಪತಿ, ದೇವಾಲಯಗಳ ಕಿಟಕಿ ಗವಾಕ್ಷಗಳ ವಿಶೇಷತೆಗಳ ಕುರಿತಾದ ಲೇಖನಗಳು ತರಂಗ ಪತ್ರಿಕೆಯಲ್ಲಿ ಅತಿ ಹೆಚ್ಚು ಪ್ರತಿಕ್ರಿಯಗಳನ್ನು ಪಡೆದಿತ್ತು.
ಉತ್ತರ ಕನ್ನಡದ ಹೈಗುಂದ ಎಂಬ ದ್ವೀಪದಲ್ಲಿ ಪುರಾತನ ಕಾಲದ ಹಲವಾರು ಶಾಸನ, ಪಳೆಯುಳಿಕೆಗಳು ಇವೆ. ಬೌದ್ಧಮತದ ವಸತಿ ಕುರುಹುಗಳು
ಕಾಣಸಿಗುತ್ತವೆ ನಾವು ಲಕ್ನೋದ ಬೀರ‌್ಬಲ್ ಸಹಾನಿ ಇನ್‌ಸ್ಟಿಟ್ಯೂಟ್ ಜೊತೆಗೆ ಫಿಸಿಕಲ್ ರೀಸರ್ಚ್ ಲ್ಯಾಬೋರೇಟರಿ ಅಹಮದಾಬಾದ್ ಇವರುಗಳ ಸಹಕಾರದಿಂದ ಉತ್ಖನನ ಮಾಡಿ ಅಲ್ಲಿ ದೊರೆತ ವಸ್ತುಗಳನ್ನು ವೈಜ್ಞಾನಿಕ ಸಂಶೋಧನೆಗಳಿಗೆ ಒಳಪಡಿಸಿ ಅವುಗಳ ಕಾಲಾದಿ ವಿವರಗಳನ್ನು ಪ್ರಕಟಿಸುತ್ತೇವೆ. ಪಕ್ಕದ ಗೇರುಸೊಪ್ಪದ ಮೆಣಸಿನ ರಾಣಿ ಎಂದೇ ಖ್ಯಾತಳಾಗಿದ್ದ ವಿಜಯನಗರ ಸಾಳುವ ವಂಶದ ರಾಣಿ ಚೆನ್ನಬೈರಾದೇವಿಯ ಬಗೆಗೂ ಸಂಶೋಧಿತ ಲೇಖನ ಪ್ರಕಟಿಸಿದ್ದೇವೆ. ಅದರಂತೆಯೇ ಹರದಸೆಯಲ್ಲಿ ಸ್ಥಳೀಯ ಚಂದಾವರನ ಆಡಳಿತ ಕಾಲದಲ್ಲಿ ಕಟ್ಟಿರುವ ಪರಿಪೂರ್ಣ ಯೋಗಾನರಸಿಂಹ ಸ್ವಾಮಿ ದೇವಾಲಯಕ್ಕೆ 12ನೇ ಶತಮಾನದಲ್ಲಿ ಕದಂಬರ ಚಕ್ರವರ್ತಿ ಬೀರದೇವರಸನು ಭೂದಾನ ಮಾಡಿದ ಬಗೆಗಿನ ಹಾಳಾಗಿ ಒಡೆದು ತುಂಡಾಗಿದ್ದ ಮಣ್ಣಿನಲ್ಲಿ ಹೂತು ಬಿದ್ದಿದ್ದ ಕಲ್ಲಿನ ಶಾಸನವನ್ನು ತೆಗೆದು ಮರುಸ್ಥಾಪಿಸಿ ಅದನ್ನು ಪುರಾತತ್ವ ಇಲಾಖೆಯಲ್ಲಿ ನೋಂದಾಯಿಸಿ ದಾಖಲಿಸಿದ್ದೇವೆ.
ಉತ್ತರ ಕನ್ನಡ ಜಿಲ್ಲೆಯಲ್ಲಿ ವಿಶೇಷವಾಗಿರುವ ಜೌಗು ಜಾಪತ್ರೆ(ಠಿಜಿಠಿಜ್ಚಿ ಖಡಿಞ) ಮರವನ್ನು ಸಂರಕ್ಷಿಸಲು ಅದರ ವಿಶೇಷತೆಗಳನ್ನು ಅದು ಭೂಮಿಯ ಮೇಲೆ ಅಲೆ ಅಲೆಂಾಗಿ ಬೇರು ಬಿಡುವ ಜಗತ್ತಿನ ಏಕೈಕ ಮರ ಪ್ರಬೇದವಾಗಿದ್ದು ಅದು ಬೆಳೆವ ಪರಿಸರದಲ್ಲಿ ಸವಕಳಿ ತಪ್ಪಿಸಿ ಬುಡದಲ್ಲಿ ಜಲವಾರು ಕೀಟ ಸಣ್ಣಸಣ್ಣ ಪ್ರಾಣಿಗಳಿಗೆ ಆಸರೆ ನಿಡುವುದನ್ನು ಅದರ ವಿಶೇಷ ಸುವಾಸನೆ ಗುಣವೈಶಿಷ್ಟ್ಯಗಳನ್ನು ಸ್ಥಳೀಯರಿಗೆ ತಿಳಿಸಿ ಅದರ ಸಂರಕ್ಷಣೆಯ ಮಹತ್ವವನ್ನು ತಿಳಿಸಿಕೊಡುತ್ತಿದ್ದೇವೆ…
ಮುಮ್ಮುಡಿ ಕೃಷ್ಣರಾಜ ಒಡೆಯರ್ ಅವರು ಬರೆದಿರುವ ಶ್ರೀ ತತ್ವನಿಧಿ ಕೃತಿಯ ಶಿವತತ್ವನಿಧಿ ಭಾಗದಲ್ಲಿ ಅವರು ಗಣೇಶನ ಬಗ್ಗೆ ನೀಡಿರುವ ಚಿತ್ರಣ ಹಾಗೂ ವಿಶೇಷತೆಗಳನ್ನು ಈ ಬಾರಿಯ ಗಣೇಶೋತ್ಸವದ ವೇಳೆಗೆ ಪ್ರಕಟಿಸಲಿದ್ದೇವೆ.
ಸಮಾಜಕ್ಕೆ ನಿಮ್ಮ ಸಂದೇಶವೇನು ?
ನಮ್ಮ ಸಮಾಜದ ಪ್ರತಿಯೊಬ್ಬರು ನಮ್ಮದೇ ಆದ ಒಂದಾದರೂ ಕೊಡುಗೆ ನೀಡಬೇಕು. ಆ ಕೊಡುಗೆ ನಿಸ್ವಾರ್ಥದಿಂದ ಆಗಿರಬೇಕು, ನಮ್ಮ ಶಿಕ್ಷಣ ಇಲಾಖೆ ನಮ್ಮ ಸಂಸ್ಕೃತಿ ಇತಿಹಾಸಗಳ ಮಹತ್ವ ತಿಳಿಸಿಕೊಡುವ, ಅವುಗಳ ಪರಿಚಯವನ್ನು ಅಭ್ಯಾಸವನ್ನು ಪ್ರತಿಮಕ್ಕಳಿಗೂ ಕಲಿಸುವಂತೆ ಶಿಕ್ಷಣದ ಕ್ರಮದಲ್ಲಿ ಅಳವಡಿಸಬೇಕು. ಪ್ರತಿ ಮಗುವೂ ತನ್ನ ಜೀವನವನ್ನು ಖುಷಿಯಿಂದ ಆಚರಿಸುವಂತೆ ಆಗಬೇಕು. ಒಂದು ಶಾಲೆಯ ಮಕ್ಕಳೆಲ್ಲಾ ಒಂದೇ ಶಿಕ್ಷಣ ಪಡೆಯುವ ವಾತಾವರಣ ನಿರ್ಮಾಣ ಮಾಡಬೇಕಾದ ಅಗತ್ಯ ಇದೆ, ಇದೀಗ ಅನೇಕ ದೊಡ್ಡ ದೊಡ್ಡ ಶಾಲೆಗಳಲ್ಲಿ ಆರ್.ಟಿ.ಇ. ಮೂಲಕ ಪ್ರವೇಶ ಪಡೆದವರಿಗೇ ಬೇರೆ ಸೆಕ್ಷನ್ ಆರಂಭಿಸಿ ಅವರಿಗೆ ಎರಡನೇ ದರ್ಜೆಯ ಶಿಕ್ಷಣ ನೀಡುತ್ತಿರುವ ಬಗ್ಗೆ ತಿಳಿದು ಬಂದಿರುವುದು ನಿಜಕ್ಕೂ ನನಗೆ ಬಹಳ ಬೇಜಾರೆನಿಸುತ್ತದೆ ಮಕ್ಕಳು ದೇವರ ಸಮಾನ ಅವರ ಸೇವೆ ಮಾಡುವಾಗ ಅವರ ಹಣಕಾಸು ವಿಚಾರ ಮುಂದಿಟ್ಟುಕೊಂಡು ವ್ಯಾಪಾರೀ ಮನೋಭಾವ, ಚತುರತೆ ಪ್ರದರ್ಶನ ಮಾಡುವುದು ನಿಜಕ್ಕೂ ಹೀನಾಯ. ಇಲಾಖೆಯ ಅಧಿಕಾರಿಗಳು ಇಂಥವರೊಂದಿಗೆ ಎಂಜಲು ಕಾಸಿಗೆ ಹೊಂದಾಣಿಕೆ ಮಾಡಿಕೊಳ್ಳದೆ ಸೂಕ್ತ ಕ್ರಮ ಕೈಗೊಂಡು ಎಲ್ಲರಿಗೂ ಸಮಾನ ಶಿಕ್ಷಣ ದೊರೆಯುವಂತೆ ನೊಡಿಕೊಳ್ಳಬೇಕಾದ ಜವಾಬ್ದಾರಿ ಇದೆ. ಏಕೆಂದರೆ ಮಕ್ಕಳೇ ದೇಶದ ಭವಿಷ್ಯ. ಅವರನ್ನು ಇಂದು ಮೊಳಕೆಯಲ್ಲಿ ಹೇಗೆ ಬೆಳೆಸುತ್ತೇವೋ ಅದೇ ರೀತಿ ಅವರು ರೂಪುಗೊಳ್ಳುತ್ತಾರೆ ಎಂಬ ಅತ್ಯಂತ ಜವಾಬ್ದಾರಿಯ ಕೆಲಸ ಶಾಲೆಗಳು ನಿರ್ವಹಿಸಬೇಕಿದೆ ಎಂಬ ಅರಿವನ್ನು ಎಲ್ಲರೂ ಹೊಂದಿರಬೇಕೆಂದು ಆಶಿಸುತ್ತೇನೆ.

   

Leave a Reply