ಮಕ್ಕಳ ಹಕ್ಕು ತಿಳಿಸಲು ಜಿನೆವಾಕ್ಕೆ ಕರ್ನಾಟಕದ ಹುಬ್ಬಳಿಯ ಬಾಲಕಿ

ಹುಬ್ಬಳ್ಳಿ - 0 Comment
Issue Date :

 ಸ್ವಿಜರ್ಲೆಂಡ್ ನ ಜಿನೆವಾದಲ್ಲಿ ಅ.10ರಂದು ನಡೆಯಲಿರುವ 66 ನೇ ಅಂತರಾಷ್ಟ್ರೀಯ ಮಕ್ಕಳ ಹಕ್ಕುಗಳ ಸಮಾವೇಶದಲ್ಲಿ ಭಾರತದ ಮಕ್ಕಳ ಹಕ್ಕುಗಳಿಗೆ ಸಂಬಂಧಿಸಿದ ವರದಿ ಮಂಡಿಸಲು ಧಾರವಾಡ ತಾಲೂಕಿನ ಮಂಜುಳ ಮುನವಳ್ಳಿ ಆಯ್ಕೆಯಾಗಿದ್ದಾರೆ. Childrens alternative report to united nations commite on the rights of child  ಎಂಬ ಶಿರ್ಷಿಕೆಯ ವರದಿಯಲ್ಲಿ ಮಕ್ಕಳೆಂದರೆ ಯಾರು ಎಂಬ ಗೊಂದಲ ನಿವಾರಿಸುವುದರೊಂದಿಗೆ ಮಕ್ಕಳ ಬಗೆಗಿನ ತಾರತಮ್ಯ, ನಾಗರಿಕ ಹಕ್ಕು, ಸ್ವಾತಂತ್ರ್ಯ, ಶಿಕ್ಷಣದ ಹಕ್ಕು ಮೊದಲಾದ ವಿಷಯಗಳ ಕುರಿತಾಗಿ ವಿಚಾರ ಮಂಡನೆ ಮಾಡಲಿದ್ದಾರೆ. ಧಾರವಾಡದ ಆರ್ ಎಲ್ ಎಸ್ ಕಾಲೇಜಿನ ಪ್ರಥಮ ಪಿಯುಸಿ ವಿದ್ಯಾರ್ಥಿನಿ ಈ ಬಾಲಕಿ. ಇದು ಕರ್ನಾಟಕದ ಬಾಲಕಿಗೆ ಸಂದ ಗೌರವ.

   

Leave a Reply