ಮತದಾರನ ಕೈಯಲ್ಲಿ ಬ್ರಹ್ಮಾಸ್ತ್ರ

ಚುನಾವಣೆಗಳು - 0 Comment
Issue Date : 26.11.2013

ಪ್ರಜಾಪ್ರಭುತ್ವದ ಪ್ರಧಾನ ಅಸ್ತ್ರವಾದ ಮತದಾನದ ಬಗ್ಗೆ ಇತ್ತೀಚೆಗೆ ಮಹತ್ವದ ತೀರ್ಪು ನೀಡಿದ್ದ ಸುಪ್ರೀಂಕೋರ್ಟ್ ಮತದಾರ ಎಲ್ಲ ಅಭ್ಯರ್ಥಿಗಳನ್ನು ನಿರಾಕರಿಸುವ ಅವಕಾಶದ ಬಗ್ಗೆ ಸೋಮವಾರ ಮಹತ್ವದ ತೀರ್ಪೊಂದನ್ನು  ನೀಡಿದೆ.

ಮತದಾನದ ವೇಳೆ ಮತದಾರರು ಹೆಚ್ಚಿನ ಸಂಖ್ಯೆಯಲ್ಲಿ ಅಭ್ಯರ್ಥಿಗಳನ್ನು ನಿರಾಕರಿಸಿದ್ದೇ ಆದರೆ, ಅಂದರೆ ಕಣದಲ್ಲಿರುವ ಯಾವುದೇ ಅಭ್ಯರ್ಥಿಯೂ ಬೇಡವೆನ್ನುವುದು ಬಹುಮತದಲ್ಲಿದ್ದರೆ ಅಂತಹ ಸಂದರ್ಭದಲ್ಲಿ ಮರು ಚುಣಾವಣೆ ನಡೆಸುವ ಪ್ರಮೇಯ ಬರುವುದಿಲ್ಲ ಎಂದು  ಸುಪ್ರೀಂಕೋರ್ಟ್ ಸ್ಪಷ್ಟಪಡಿಸಿದೆ. ಇದರಿಂದ ‘ನೋಟಾ’ ಗೆ ಬಲ ಬಂದಂತಾಗಿದೆ. (ನನ್ ಆಫ್ ದ ಅಬೌವ್)ಮತದಾರರ ತೀರ್ಮಾನಕ್ಕೆ ಗೌರವ ಕೊಡಬೇಕೆಂದು ಸುಪ್ರೀಂಕೋರ್ಟ್ ಅಭಿಪ್ರಾಯ ಪಟ್ಟಿದೆ. ಇದು ಮರುಚುಣಾವಣೆ ಬಗೆಗಿನ ಗೊಂದಲ ನಿವಾರಿಸಿದೆ.

ಜನಪ್ರತಿನಿಧಿಗಳು ಭ್ರಷ್ಟರಾಗಿದ್ದರೆ, ಜನಸೇವೆಯಲ್ಲಿ ಕರ್ತವ್ಯ ಲೋಪ ಎಸಗಿದ್ದರೆ, ಇನ್ನು ಮುಂದೆ ಅವರು ಜನತೆಯಿಂದ ನಿರಾಕರಿಸಲ್ಪಡುವ ಸಂಭವನೀಯತೆ ಇರುವುದರಿಂದ, ರಾಜಕೀಯದಲ್ಲಿ ಭ್ರಷ್ಟಾಚಾರದ ಪ್ರಮಾಣ ಕಡಿಮೆಯಾಗಿ ಪ್ರಜಾಪ್ರಭುತ್ವದ ನಿಜವಾದ ಆಶಯಗಳು ಇನ್ನಾದರೂ ಇಡೇರುತ್ತವೆಯೋ ಕಾದು ನೋಡಬೇಕು. ಈ ಅಸ್ತ್ರವನ್ನು ಪರಿಣಾಮಕಾರಿಯಾಗಿ ಬಳಸುವಲ್ಲಿ ಜನತೆಯ ಜವಾಬ್ದಾರಿಯುತ ನಾಗರೀಕ ಪ್ರಜ್ಞೆಯು ಕೆಲಸ ಮಾಡಬೇಕು.

 

 

   

Leave a Reply