ಮಧ್ಯಂತರ ಚುನಾವಣೆ – ಅರಳಿದ ಕಮಲ ಅಸ್ತಮಿಸಿದ ಹಸ್ತ

ಚುನಾವಣೆಗಳು - 0 Comment
Issue Date : 09.12.2013

2014 ಮಹಾಸಮರದ ಸೆಮಿಫೈನಲ್ ಎಂದೇ ಕರೆಯಲಾಗುತ್ತಿರುವ ವಿಧಾನಸಭಾ ಚುನಾವಣೆಗಳಲ್ಲಿ ಬಿಜೆಪಿ ಸ್ಪಷ್ಟ ಮೇಲುಗೈ ಸಾಧಿಸಿದೆ. ಕಾಂಗ್ರೆಸ್ ನಾಲ್ಕೂ ರಾಜ್ಯಗಳಲ್ಲಿ ಹೀನಾಯ ಸೋಲುಗಂಡಿದ್ದು, ಬಿಜೆಪಿ ರಣೋತ್ಸಾಹದಲ್ಲಿದೆ. ಈ ನಡುವೆ ಆಮ್ ಆದ್ಮಿ ಪಕ್ಷವೂ ತನ್ನ ಅಸ್ತಿತ್ವವನ್ನು ಸಾಬೀತುಪಡಿಸಿದೆ. 

ಮಧ್ಯಪ್ರದೇಶದ ಮುಖ್ಯಮಂತ್ರಿ ಬಿಜೆಪಿಯ ಶಿವರಾಜ್ ಸಿಂಗ್ ಚೌಹಾಣ್ ಹ್ಯಾಟ್ರಿಕ್ ಗೆಲುವು ಸಾಧಿಸುವ ಮೂಲಕ ಮತ್ತೆ ಅಧಿಕಾರದ ಗದ್ದುಗೆ ಏರಿದ್ದಾರೆ.

ಮಧ್ಯ ಪ್ರದೇಶ (230/230)
ಪಕ್ಷ         ಗೆಲುವು                ಮುನ್ನಡೆ
ಬಿಜೆಪಿ        165                   04
ಬಿಎಸ್ಪಿ          02                   00
ಕಾಂಗ್ರೆಸ್      57                   02
ಇತರರು       02                   00

ಛತ್ತೀಸಗಢದಲ್ಲಿ ಕಾಂಗ್ರೆಸ್ ಮತ್ತು ಅಧಿಕಾರರೂಢ ಬಿಜೆಪಿ ಸಮಬಲದ ಹೋರಾಟದಲ್ಲಿ ತೊಡಗಿದ್ದು, ಮಿಜೋರಾಂ ಚುನಾವಣೆಯ ಚುನಾವಣೆಯ ಮತ ಎಣಿಕೆಯು ಡಿ.9 ಸೋಮವಾರ ನಡೆಯಲಿದೆ.

ಛತ್ತೀಸ್ಗಢ (90/90)
ಪಕ್ಷ            ಗೆಲುವು         
ಬಿಜೆಪಿ          49                 
ಕಾಂಗ್ರೆಸ್     39                 
ಬಿಎಸ್ಪಿ          01             
ಇತರರು       01                 

ರಾಜಸ್ಥಾನದಲ್ಲಿ ಕಾಂಗ್ರೆಸ್ ನಿಂದ ಬಿಜೆಪಿ ಅಧಿಕಾರ ಕಸಿದುಕೊಂಡಿದೆ.  ಆಡಳಿತ ವಿರೋಧಿ ಅಲೆ ಮತ್ತು ಮೋದಿ ವರ್ಚಸ್ಸನ್ನು ಬಳಸಿಕೊಂಡ ರಾಜ್ಯದಲ್ಲಿ ಬಿಜೆಪಿ ಮೂರನೇ ಎರಡರಷ್ಟಕ್ಕಿಂತಲೂ ಹೆಚ್ಚಿನ ಬಹುಮತ ಗಳಿಸಿದೆ.  ಅಶೋಕ್ ಗೆಹ್ಲೋಟ್ ಸಂಪುಟದ 19 ಸಚಿವರ ಪೈಕಿ 16 ಮಂದಿ ಪರಾಜಿತರಾಗಿದ್ದು, ಸ್ವಾತಂತ್ಯ್ರಾನಂತರ ಕಾಂಗ್ರೆಸ್ ಗೆ ಒದಗಿರುವ ಹೀನಾಯ ಸೋಲು ಇದಾಗಿದೆ.

ರಾಜಸ್ಥಾನ (199/200)
ಪಕ್ಷ                 ಗೆಲುವು           
ಬಿಜೆಪಿ               162               
ಎನ್ ಪಿಪಿ            03                
ಕಾಂಗ್ರೆಸ್            21                
ಇತರರು             13                

15 ವರ್ಷಗಳ ಅಧಿಕಾರವುಂಡ ಕಾಂಗ್ರೆಸ್ಸನ್ನು ಮೂರನೇ ಸ್ಥಾನಕ್ಕೆ ತಳ್ಳಿ, ದಿಲ್ಲಿ ಗದ್ದುಗೆಯಿಂದ ಇಳಿಸುವಲ್ಲಿ ಅರವಿಂದ ಕೇಜ್ರಿವಾಲ್ ಅವರ ಆಮ್ ಆದ್ಮಿ ಪಕ್ಷ ಯಶಸ್ವಿಯಾಗಿದೆ. ಬಿಜೆಪಿ ಗರಿಷ್ಠ ಸ್ಥಾನಗಳನ್ನು ಗಳಿಸಿದರೂ, ಅಧಿಕಾರಕ್ಕಾಗಿ ತ್ರಾಸ ಪಡಬೇಕಾಗುವ ಸಾಧ್ಯತೆಗಳಿವೆ.

ದೆಹಲಿ (70/70)
ಪಕ್ಷ              ಗೆಲುವು           
ಎಎಪಿ                28              
ಬಿಜೆಪಿ                32              
ಕಾಂಗ್ರೆಸ್           08               
ಇತರರು            02                

70 ಸದಸ್ಯ ಬಲದ ವಿಧಾನಸಭೆಗೆ ನಡೆದ ಚುನಾವಣಾ ಫಲಿತಾಂಶ ಭಾನುವಾರ ಪ್ರಕಟವಾಗಿದ್ದು, ಅರವಿಂದ ಕೇಜ್ರಿವಾಲ್ ಅವರ ಎದುರು ಸ್ವತಃ ಮೂರು ಅವಧಿಯ ದಿಲ್ಲಿ ಮುಖ್ಯಮಂತ್ರಿ ಶೀಲಾ ದೀಕ್ಷಿತ್ ಸೋತಿದ್ದಾರೆ. ಇದರೊಂದಿಗೆ ಅವರು ತಮ್ಮ ರಾಜೀನಾಮೆ ಪತ್ರವನ್ನೂ ಲೆಫ್ಟಿನೆಂಟ್ ಗವರ್ನರ್‌ಗೆ ರವಾನಿಸಿದ್ದಾರೆ. ಮೂರು ಅವಧಿಯ ಮುಖ್ಯಮಂತ್ರಿಯನ್ನು ಹೊಸಬ ಕೇಜ್ರಿವಾಲ್ ಅವರು ಸುಮಾರು 22 ಸಾವಿರ ಮತಗಳ ಅಂತರದಿಂದ ಸೋಲಿಸಿದ್ದಾರೆ.

ಇದರೊಂದಿಗೆ, ಬಿಜೆಪಿ ಪ್ರಧಾನ ಮಂತ್ರಿ ಅಭ್ಯರ್ಥಿ ನರೇಂದ್ರ ಮೋದಿ ಅವರ 2014ರ ಚುನಾವಣೆಯ ಕನಸಿಗೆ ಪುಷ್ಟಿ ದೊರೆತಿದೆ.  ಬಿಜೆಪಿ ಪಾಳಯದಲ್ಲಿ ಎಲ್ಲೆಲ್ಲೂ ವಿಜಯೋತ್ಸವ ಆಚರಣೆ ಕಂಡುಬರುತ್ತಿದೆ.

 

   

Leave a Reply