ಮನೋಲ್ಲಾಸದ ಆಟಗಳು

ಸ್ವದೇಶೀ ಕ್ರೀಡೆ - 0 Comment
Issue Date : 05.06.2015

ನಗರದ ವೇಗದ ಜೀವನದಲ್ಲಿ ಮನೋಲ್ಲಾಸ ಕಾರ್ಯಕ್ರಮಗಳು ವಿರಳವಾಗುತ್ತಿವೆ. ಕೇವಲ ಕೆಲಸ, ಕೆಲಸ, ಕೆಲಸ. ಇದರ ನಡುವೆ ಪಾರಿವಾರಿಕ ಕಾರ್ಯಕ್ರಮಗಳು, ಕುಟುಂಬ ಮಿಲನಗಳು ಮನೋಲ್ಲಾಸಕ್ಕೆ ಸ್ವಲ್ಪ ಇಂಬು ನೀಡುತ್ತವೆ. ಈ ವಾರದಲ್ಲಿ ಈ ರೀತಿಯ ಕಾರ್ಯಕ್ರಮಗಳಲ್ಲಿ ಆಟಗಳನ್ನು ಆಡಿಸುವುದು ಹೇಗೆ ಎಂಬ ಪರಿಚಯ ಮಾಡಿಕೊಳ್ಳೋಣ.
ಈ ರೀತಿಯ ಕಾರ್ಯಕ್ರಮಗಳನ್ನು ಏರ್ಪಡಿಸುವಾಗ ಆಟ ಆಡಿಸುವವನು ಕೆಳಗೆ ನಮೂದಿಸಿದ ವಿಷಯಗಳನ್ನು ಗಮನದಲ್ಲಿ ಡಬೇಕು.
* ಸಂದರ್ಭ ಜ್ಞಾನ * ಆಟಗಾರರ ವಯಸ್ಸಿನ ಹೊಂದಾಣಿಕೆ * ಆಟ ಗಾರರ ಸಂಖ್ಯೆ *ಗುಂಪುಗಳ ರಚನೆ * ಎಲ್ಲರೂ ಹುಡು ವಗರೆ? ಎಲ್ಲರೂ ಹುಡುಗಿಯರೆ? ಇಬ್ಬರು ಇರುವರೆ? ಮುಂತಾದ ವಯಸ್ಸಿನ ವಿಚಾರವನ್ನು ಗಮನಿಸಬೇಕು. * ಕಾರ್ಯ ಕ್ರಮ ಸಮಯಾವಕಾಶ * ಸಿದ್ಧವಿರಬೇಕಾದ ಆಟದ ಉಪಕರಣಗಳು * ಆಟಕ್ಕೆ ದೊರಕಲಿರುವ ಸ್ಥಳದ ಮಾಹಿತಿ * ಸಮಾರಂಭಕ್ಕೆ ಹೊಂದುವ ರೀತಿಯಲ್ಲಿ ಕಾರ್ಯಕ್ರಮವನ್ನು ನಿರ್ಧರಿಸ ಬೇಕಾದದ್ದು ಅವಶ್ಯಕತೆಯ ಅಂಶವನ್ನು ಗಮನಿಸಬೇಕು.
ಇಂತಹ ಸಮಾರಂಭ ಬೇರೆ ಬೇರೆ ರೀತಿಯವುಗಳಾಗಬಹುದು. ಆಟದ ವಿಚಾರವನ್ನುಳಿದು ಕಾರ್ಯಕ್ರಮದ ಇತರ ವಿಚಾರಗಳನ್ನು ಕೂಲಂಕುಷವಾಗಿ ಪರಿಶೀಲಿಸಬೇಕು. ಕಾರ್ಯಕ್ರಮ ವಾತಾವರಣವು ಆಹ್ಲಾದಕರವಾಗಿದ್ದರೆ ಆಟದಲ್ಲಿ ಭಾಗವಹಿಸುವವರ ಮನಸ್ಥಿತಿಯು ಉಲ್ಲಾಸವಾಗಿರುತ್ತದೆ. ಆಯಾ ಕಾರ್ಯಕ್ರಮಕ್ಕೆ ಸೂಚಕವಾದ ಸಂದೇಶ ಅಥವಾ ಆದರ್ಶ ವಾಕ್ಯಕ್ಕೆ ಹೊಂದು ವಂತಹ ಆಟಗಳನ್ನು ಚುನಾಯಿಸಬೇಕು. ಸಾಮಾನ್ಯವಾದ ಆಟಗಳನ್ನು ಪ್ರಕಟಪಡಿಸತಕ್ಕ ರೀತಿ ನೀತಿಗಳೂ ಸಹ ಸಮಾರಂಭಕ್ಕೆ ಹೊಂದಿಕೊಳ್ಳುವ ರೀತಿಯಲ್ಲಿರಬೇಕು. ಮೇಲೆ ಹೇಳಿರುವುವುಗಳಲ್ಲದೆ ವಯೋ ಪರಿಮಿತಿ, ಗುಂಪುಗಳ ರಚನೆ ಮತ್ತು ಸಂಖ್ಯೆ, ಕಾಲಪರಿಮಿತಿ, ಸಲಕರಣೆಗಳು ಇವುಗಳ ಪರಿಸ್ಥಿತಿಗಳ ವ್ಯತ್ಯಾಸವನ್ನು ಅನುಸರಿಸತಕ್ಕ ಕ್ರಮಗಳನ್ನು ಆಟ ಆಡಿಸುವವನು ಆಟಗಳ ಹೆಸರುಗಳನ್ನು ನಮೂದಿಸಿರುವ ಸ್ಥಳಗಳಲ್ಲಿ ತಿಳಿಸಬೇಕು.
ಕಾರ್ಯಕ್ರಮದಲ್ಲಿ ಗಮನಿಸಬೇಕಾದ ಅಂಶಗಳು.
* ಭಾಗವಹಿಸುವವರು ಮಕ್ಕಳು ಅಥವಾ ವಯಸ್ಕರೆ?
* ಗುಂಪಿನ ಸಂಖ್ಯೆ
* ಆಡುವ ಸ್ಥಳದ ಪರಿಚಯ, ಆಟ ಆಡುವವರ ಹಿನ್ನೆಲೆ
* ಆಟ ಆಡುವ ಸ್ಥಳ ಮನೆಯ, ಮೈದಾನವೆ?
ಆಟದ ಕಾರ್ಯಕ್ರಮಗಳನ್ನು ರೂಪಿಸುವಾಗ ಕ್ರಮವಾಗಿ ಶಾರೀರಿಕ ಚಲನೆ ಕಡಿಮೆ ಇರುವ ಮತ್ತು ಹೆಚ್ಚಾಗಿರುವ – ಗಲಾಟೆ ಇಲ್ಲದ ಮತ್ತು ಹೆಚ್ಚು ಗಲಾಟೆಯ ಆಟಗಳು. ಒಂದರ ನಂತರ ಒಂದು ಬರುವಂತೆ ಸೇರಿಸಿಕೊಳ್ಳಬೇಕು. ಇದರಿಂದ ಆಟಗಾರರಿಗೆ ಅತಿ ಆಯಾಸವಾಗುವುದಾಗಲಿ ಅಥವಾ ಬೇಸರವಾಗುವುದಾಗಲಿ ಆಗದೆ ಇರಲು ಅವಕಾಶವಾಗುವುದು.
ಆಟದಲ್ಲಿ ಉಪಕರಣಗಳನ್ನು ಉಪಯೋಗಿಸುವಾಗ ಯಾರಿ ಗೂ ಪೆಟ್ಟಾಗದಂತಹ ಉಪಕರಣಗಳನ್ನು ಆಯ್ದುಕೊಳ್ಳಬೇಕು. ವಯಸ್ಸಿನ ಮಿತಿ ಹೆಚ್ಚಿರುವ ಗುಂಪುಗಳಲ್ಲಿ ಆಟದ ನಿಯಮಗಳನ್ನು ಸ್ವಲ್ಪ ಸಡಿಲಿಸಿದರೆ ಒಳಿತು. ಯಾವ ಕಾರಣಕ್ಕೂ ಗೆಲುವಿನ ನಿರ್ಧಾರಗಳನ್ನು ಕೊಡಬೇಕಾದ ಸಂದರ್ಭದಲ್ಲಿ ಸರಿಯಾದ ನಿರ್ಣಯಗಳನ್ನೇ ಕೊಡಬೇಕು. ಎಲ್ಲರಿಗೂ ಈ ಆಟಗಳು ಮನೋಲ್ಲಾಸಕ್ಕೆ ಹೊರತು ಗೆಲುವು ಸೋಲುಗಳ ಬಗ್ಗೆ ಹೆಚ್ಚು ಗಮನವಿರಬಾರದು ಎಂಬ ಎಚ್ಚರಿಕೆಯನ್ನು ಕೊಡಬೇಕು. ಈ ರೀತಿಯಲ್ಲಿ ಆಟಗಳನ್ನು ಆಡಿಸಿದಾಗ ಆ ಸಮಯದಲ್ಲಾದರೂ ಎಲ್ಲವನ್ನೂ ಮರೆತು ಆಟಗಾರರು ಆಟದಲ್ಲಿ ಪಾಲ್ಗೊಂಡು ಸಂತೋಷಿಸುತ್ತಾರೆ.

– ಶಿ.ನಾ.ಚಂದ್ರಶೇಖರ

   

Leave a Reply