ಮಹಮ್ಮದ್‍ ತುಘ್ಲಕನ “ಕೆಂಪು ಆಳ್ವಿಕೆ”

ಇತಿಹಾಸ - 0 Comment
Issue Date : 08.03.2016

ದೆಹಲಿ ಸುಲ್ತಾನರ ಆಡಳಿತಾವಧಿ (1206-1526) ಕಂಡ ಒಂದು ವಿವಾದಾತ್ಮಕವಾದ ಆಡಳಿತ ಮಹಮ್ಮದ್ -ಬಿನ್-ತುಘಲಕನದಾಗಿತ್ತು.ಅವನು 1325 ರಲ್ಲಿ ದೆಹಲಿ ಸಿಂಹಾಸನವೇರಿದ. ಅವನ ಕಾಲದ ಇತಿಹಾಸದ ಮೇಲೆ ಕೆಲವು ಮುಸಲ್ಮಾನ ಇತಿಹಾಸಕಾರರ ಬರವಣಿಗೆಗಳಿವೆ. ಐಲ್ ಮುಸಾನೀಫ ಅಥವಾ ಸಿ. ಎಫ್. ಮೆಕೆಂಜ್ಸೀಯವರು ಬರೆದ ಹಿಂದೂಸ್ಥಾನದ ಮೇಲಿನ ಇತಿಹಾಸ ಕೃತಿ (IL Musannif, ‘The Romantic Land of Hind’) ಪ್ರಥಮ ಬಾರಿಗೆ 1907ರಲ್ಲಿ ಪ್ರಕಟವಾಗಿತ್ತು. ಅದರ ಮರುಮುದ್ರಣ 2012 ರಲ್ಲಿ ದೆಹಲಿಯಲ್ಲಾಯಿತು. (Logos Press-New Delhi) ಆ ಕೃತಿ ಅನೇಕ ಕುತೂಹಲಕಾರಿಯಾದ ಮತ್ತು ಆಕರ್ಷಣೀಯ ವಿಷಯಗಳ ಹಾಗೂ ಘಟನೆಗಳ ವಿವರ ನೀಡುತ್ತದೆ. ಅಂತಹ ಒಂದು ವಿವರಣೆ ಮಹಮ್ಮದ್-ಬಿನ್-ತುಘ್ಲಕನ ಇತಿಹಾಸಕ್ಕೆ ಸಂಬಂಧಪಟ್ಟದ್ದಾಗಿದೆ. ಸುಲ್ತಾನ ಅಬುಲ್-ಮುಜಾಹಿದ್ ಮಹಮ್ಮದ ಷಹನ (ಮಹಮ್ಮದ್ ತುಘ್ಲಕ್) ಆಳ್ವಿಕೆಯು ಎಷ್ಟೊಂದು ಭಯಾನಕವಾಗಿತ್ತೆಂದರೆ, ಅದನ್ನು ‘‘ಕೆಂಪು ಆಳ್ವಿಕೆ’’ (The Red Reign of Muhammad Tugaluk) ಎಂದೇ ಮುಸಾನೀ ಬಣ್ಣಿಸಿದ್ದಾರೆ. ಅವನ ಅರಮನೆಯ ಹೊರಪ್ರದೇಶ ಯಾವಾಗಲೂ ರಕ್ತಮಯವಾಗಿತ್ತು !

ಸುಲ್ತಾನ ತುಘ್ಲಕನ ಅರಮನೆಯ ಹೊರಗಿನ ವೇದಿಕೆಯಲ್ಲಿ ಕೊಲೆಗಡುಕರು ಯಾವಾಗಲೂ ಅವನ ಅಪ್ಪಣೆಯನ್ನು ಜಾರಿಗೊಳಿಸಲು ತಯಾರಾಗಿ ಕಾಯುವುದಾಗಿತ್ತು. ‘ಅಪರಾ—’ ಎಂದು ಸುಲ್ತಾನ ಪರಿಗಣಿಸಿದವರ ತಲೆತುಂಡರಿಸುವ ಕಾರ್ಯಕ್ರಮ ದಿನನಿತ್ಯವೂ (ಶುಕ್ರವಾರದ ಹೊರತಾಗಿ) ನಡೆಯುವುದಾಗಿತ್ತು. ರುಂಡ ಬೇರ್ಪಡಿಸಲ್ಪಟ್ಟ ಶವ ಎರಡು ಮೂರು ದಿನಗಳ ತನಕ ಅಲ್ಲೇ ಬಿದ್ದು ನಾರುತ್ತಿತ್ತು! ಕೆಲವೊಮ್ಮೆ ಅಂಗಾಂಗಗಳನ್ನು ತುಂಡರಿಸಿ ಅಲ್ಲೇ ಹಾಕುತ್ತಿದ್ದರು. ಸುಲ್ತಾನ ‘ಚಿಕ್ಕ ತಪ್ಪು’-‘ಮಹಾ ಅಪರಾಧ’ ಇವುಗಳೊಳಗೆ ಯಾವುದೇ ವ್ಯತ್ಯಾಸಮಾಡುತ್ತಿರಲಿಲ್ಲ! ವಿದ್ಯಾವಂತ, ಪ್ರತಿಷ್ಠಿತ, (Noble) ಧಾರ್ಮಿಕ ನಾಯಕ, ರಾಜಕಾರಣಿ….ಇತ್ಯಾದಿ ಪರಿಗಣನೆ ಮಾಡದೆ ಶಿಕ್ಷೆ ವಿ—ಸಲಾಗುತ್ತಿತ್ತು. ಪ್ರತಿದಿನ ನೂರಾರು ಅದೃಷ್ಟಹೀನರು ಸುಲ್ತಾನನ ಶಿಕ್ಷೆಗೆ ಗುರಿಯಾಗಿ ಜೀವ ಕಳೆದುಕೊಳ್ಳುತ್ತಿದ್ದರು! ಕೆಲವರಿಗೆ ಮರಣದಂಡನೆಯಾದರೆ, ಕೆಲವರಿಗೆ ಚಿತ್ರಹಿಂಸೆ, ಛಡಿಯೇಟು ಇತ್ಯಾದಿಗಳಾಗುತ್ತಿದ್ದವು.

ಒಂದು ಸಂದರ್ಭದಲ್ಲಿ ಪರ್ವತ ಪ್ರದೇಶದ ಹಿಂದೂಗಳ ವಿರುದ್ಧ ದಂಡೆತ್ತಿಹೋಗಲು ಹಿಂಜರಿದ ಸುಮಾರು ಮುನ್ನೂರು ಮಂದಿಯನ್ನು ಸುಲ್ತಾನನ ಅಪ್ಪಣೆಯಂತೆ ಹತ್ಯೆಮಾಡಲಾಯಿತು. ಸುಲ್ತಾನನ ಆಡಳಿತದಲ್ಲಿ ಬೇಸತ್ತ ದೆಹಲಿ ಜನರು ಅವನಿಗೆ ಅನಾಮಧೇಯ ನಿಂದನಾ ಪತ್ರಗಳನ್ನು ಬರೆದಿದ್ದರು. ಅದಕ್ಕೆ ಪ್ರತೀಕಾರವಾಗಿ ಸುಲ್ತಾನ ದೆಹಲಿಯಿಂದ ದೌಲತಾಬಾದಿಗೆ (ದೇವಗಿರಿ) ರಾಜಧಾನಿಯ ವರ್ಗಾವಣೆಯ ಯೋಜನೆ ಕೈಗೊಂಡ, ಸಮಸ್ತ ನಾಗರಿಕರನ್ನೂ ದೌಲತಾಬಾದಿಗೆ ಹೋಗಲು ಆಜ್ಞೆ ಮಾಡಿದ. ಅದಾದ ಮೂರನೇ ದಿನ ಸ್ವತಃ ಸುಲ್ತಾನ ಪರಿಶೀಲಿಸಿದಾಗ ಇಬ್ಬರು, ಓರ್ವ ಕಾಲಿಲ್ಲದವ ಮತ್ತು ಓರ್ವ ಕಣ್ಣು ಕಾಣದವ ಅವನ ಕಣ್ಣಿಗೆ ಬಿದ್ದರು. ಅದರಲ್ಲಿ ಓರ್ವನನ್ನು ಫಿರಂಗಿಯ ಬಾಯಿಗೆ ಆಹುತಿ ನೀಡಿದರೆ, ಮತ್ತೊಬ್ಬನನ್ನು ಕುದುರೆಗೆ ಕಟ್ಟಿ ದೌಲತಾಬಾದಿಗೆ ಎಳೆಯಲಾಯಿತು. ಪರಿಣಾಮವಾಗಿ ಅವನ ಒಂದು ಕಾಲು ಮಾತ್ರ ತಲುಪಿತು! ಸುಲ್ತಾನನ ರಾಜಧಾನಿ ವರ್ಗಾವಣೆಯ ಯೋಜನೆ ಸಂಪೂರ್ಣ ವಿಲವಾದಾಗ, ಪುನಃ ಆಸ್ಥಾನವನ್ನು ಮತ್ತು ಜನರನ್ನು ದೆಹಲಿಗೆ ವರ್ಗಾಯಿಸಿದ ! ದೆಹಲಿ ಮಾತ್ರ ಮೊದಲಿನ ವೈಭವಕ್ಕೆ ಮರುಕಳಿಸಲಿಲ್ಲ.
ಸುಲ್ತಾನನ ಸಂಬಂ— ಬಹಾವುದ್ದೀನ್ (Baha-ud-Din Gurshasp) ದಂಗೆ ಎದ್ದಾಗ ಅವನನ್ನು ಸೋಲಿಸಿ ಓಡಿಸಲಾಯಿತು. ಆವನು ಕಂಪಿಲರಾಯನ ಅಶ್ರಯ ಪಡೆದ. ಆಗ ದೆಹಲಿ ಸೈನ್ಯ ಕಂಪ್ಲಿಯ ಮೇಲೆ ಧಾಳಿಮಾಡಲಾಗಿ ಅಲ್ಲಿಯ ಸೀಯರೂ, ಪುರುಷರೂ ಬೆಂಕಿಗೆ ಹಾರಿ ಆತ್ಮಾರ್ಪಣೆ ಗೈದರು. ಅದರೆ, ಬಹಾವುದ್ದೀನನನ್ನು ದ್ವಾರಸಮುದ್ರದ ರಾಜನ (ವೀರ ಬಲ್ಲಾಳ) ಆಶ್ರಯಕ್ಕೆ ಒಪ್ಪಿಸಲಾಯಿತು.
ದೆಹಲಿ ಸುಲ್ತಾನನೊಡನೆ ಹೋರಾಡಲು ವೀರ ಬಲ್ಲಾಳ ಹಿಂಜರಿದ ಮತ್ತು ಹೊಯ್ಸಳರ ದ್ವಾರಸಮುದ್ರ ನಾಶವಾಗುವುದೆಂಬ ಭೀತಿಯಿಂದ ಬಹಾವುದ್ದೀನನನ್ನು ರಕ್ಷಿಸುವ ಜವಾಬ್ದಾರಿಯನ್ನು ಬಿಟ್ಟುಬಿಟ್ಟ.ಅದರೊಂದಿಗೆ ಬಂ—ಸಲಾಗಿ ಇವನಿಗೆ ಚಿತ್ರಹಿಂಸೆ ನೀಡಲಾಯಿತು. ಆ ಬೀಭತ್ಸ ವರ್ಣನೆಯನ್ನು ಮುಸಾನ್ೀ ಮಾಡಿದ್ದಾರೆ. ಬಹಾವುದ್ದೀನನ ಕೈಕಾಲುಗಳನ್ನು ಕಟ್ಟಿ ಅವನ ಜನಾನದ ಸೀಯರ ಮುಂದೆ ಅವಮಾನಿಸಲಾಯಿತು ಆಮೇಲೆ ಅವನನ್ನು ಜೀವಂತ ಸುಲಿಯಲಾಯಿತು. ಅವನ ಮಾಂಸವನ್ನು ಆಹಾರದಲ್ಲಿ ಬೆರೆಸಿ, ಅವನ ಹೆಂಡಿರು-ಮಕ್ಕಳ ಬಾಯಿಗೆ ತುರುಕಲಾಯಿತು! ಆಮೇಲೆ, ಅವನ ಶರೀರವನ್ನು ಆನೆಯಿಂದ ತುಳಿಸಲಾಯಿತು ಮತ್ತು ಅವನ ಅವಶೇಷವನ್ನು ವಿವಿಧೆಡೆಗಳಲ್ಲಿ ಪ್ರದರ್ಶಿಸಲಾಯಿತು. ಹಾಗೆಯೇ, ಬಂಗಾಳದ ರಾಜ ಬಹಾದಿನ್ ಬೂರಾನನ್ನು ಸೋಲಿಸಿ, ಬಂ—ಸಿ ಅವನ ಚರ್ಮವನ್ನೂ ಸುಲಿಯಲಾಯಿತು. ಸಿಂಧ್ ಪ್ರಾಂತ್ಯದ ರಾಜ್ಯಪಾಲ ಕಿಸ್ಲೂ ಖಾನ್ ಆ ದುರ್ದೈವಿಗಳ ಕಾರ್ಯಗಳನ್ನು ಪ್ರದರ್ಶಿಸಲು ಸಮ್ಮತಿಸದಾಗ ಅವನ ಮೇಲೆ ದಾಳಿಮಾಡಿ ಅವನನ್ನು ಹತ್ಯೆಮಾಡಲಾಯಿತು. ಈ ರೀತಿಯ ಚಿತ್ರಹಿಂಸೆ ನೀಡುವುದು ಸುಲ್ತಾನನ ಅಡಿಯಲ್ಲಿ ಸಾಮಾನ್ಯವಾಗಿತ್ತು. ಅವನ ಆನೆಗಳಿಗೂ ಶಿಕ್ಷೆಯನ್ನು ಜಾರಿಗೊಳಿಸುವಲ್ಲಿ ವಿಶೇಷ ತರಬೇತಿ ನೀಡಲಾಗಿತ್ತು. ಅವುಗಳ ದಾಪೆಗಳಿಗೆ ಕಬ್ಬಿಣದ ಚೂಪಾದ ಕವಚಗಳನ್ನು ತೊಡಿಸಿ, ಅಪರಾ—ಗಳನ್ನು ಅವುಗಳಿಂದ ತಿವಿದು, ಮೇಲೆತ್ತಿ ಬಿಸಾಡಿ ಆಮೇಲೆ ಕಾಲಿನಿಂದ ತುಳಿದು ನೆಲಸಮ ಮಾಡುವುದಾಗಿತ್ತು. ಅದನ್ನು ಸುಲ್ತಾನ ನೋಡಿ ಆನಂದಿಸುತ್ತಿದ್ದ.
ಮಹಮ್ಮದನ ಒಂದು ಅಸಾಧ್ಯ ಯೋಜನೆ ಚೀನಾದ ಮೇಲಿನ ದಂಡಯಾತ್ರೆ. ಅದು ಸಂಪೂರ್ಣವಾಗಿ ವಿಲವಾಗಿ ಅವನ ಸೈನ್ಯ ಹಿಂದಿರುಗುತ್ತಿದ್ದಾಗ ಹಿಮಾಲಯದ ತಪ್ಪಲಿನ ಹಿಂದೂಗಳು ಆ ಸೈನ್ಯದ ಮೇಲೆ ದಾಳಿಮಾಡಿ ಗಣನೀಯ ಹಾನಿ ಮಾಡಿದರು. ಅದೇ ರೀತಿಯಾಗಿ ಸುಲ್ತಾನನ ಮಲಬಾರಿನ ಮೇಲಿನ ದಾಳಿಯು ವಿಲವಾಯಿತು. ಸುಲ್ತಾನ ಪರ್ಷಿಯಾದ ಮೇಲೆ ದಾಳಿ ಮಾಡುವುದಕ್ಕಾಗಿ ಬಲುದೊಡ್ಡ ಸೈನ್ಯ ಸಂಘಟಿಸಿದ – ಆದರೆ ಅದು ಕಾರ್ಯರೂಪಕ್ಕೆ ಬರಲಿಲ್ಲ. ಸೈನಿಕರಿಗೆ ವೇತನ ನೀಡಲೂ ಅಸಾಧ್ಯವಾಗಿ ಅವರು ಸೈನ್ಯ ತೊರೆದು ದುಷ್ಕೃತ್ಯಗಳಲ್ಲಿ ತೊಡಗಿದರು! ಅದರಂತೆಯೇ ಅವನ ಇನ್ನೊಂದು ಕಾರ್ಯಗತಗೊಳಿಸಲಾಗದ ಯೋಜನೆ ತಾಮ್ರದ ನಾಣ್ಯಗಳ ಚಲಾವಣೆಯಾಗಿತ್ತು.ಅದೂ ಸಂಪೂರ್ಣವಾಗಿ ವಿಲವಾಗಿ ಸುಲ್ತಾನನ ಖಜಾನೆಯೂ ಖಾಲಿಯಾಯಿತು. ಅವನ ಆಡಳಿತಾವ—ಯಲ್ಲಿ ಭೀಕರ ಬರಗಾಲವೂ ತಲೆದೋರಿತು. ಆ ದಿನಗಳಲ್ಲಿ ಸತ್ತ ಪ್ರಾಣಿಗಳ ಚರ್ಮವನ್ನು ತಿಂದು ಬದುಕುವವರಿದ್ದರು!
ಮಹಮ್ಮದನ ಕಾಲದಲ್ಲಿ ವಿದೇಶೀ ಪ್ರವಾಸಿಗ ಇಬನ್ ಬಟೂಟ ದೆಹಲಿಗೆ ಬಂದ. ಅವನನ್ನು ಸುಲ್ತಾನ ಆದರದಿಂದ ಬರಮಾಡಿಕೊಂಡು, ಸತ್ಕರಿಸಿ, ಅವನಿಗೆ ಬೇಕಾದ ಅನುಕೂಲತೆಯನ್ನು ಕಲ್ಪಿಸಿದ. ಆಮೇಲೆ, ಅವನನ್ನು ದೆಹಲಿಯಲ್ಲಿ ನ್ಯಾಯಾ—ೀಶನಾಗಿ ನೇಮಿಸಲಾಯಿತು. ಅವನಿಗೆ ಸುಮಾರು 12,000 ದಿನಾರ್‌ಗಳ ವೇತನವನ್ನೂ, ಸವಾರಿಗಾಗಿ ಕುದುರೆಗಳನ್ನೂ, 10 ಮಂದಿ ಸೀಯರನ್ನೂ ನೀಡಲಾಗಿತ್ತು. ಬಟೂಟ ಸುಲ್ತಾನನ ಪ್ರೀತಿಪಾತ್ರನಾಗಿದ್ದ. ಆದರೆ, ಮುಂದೆ ಬಟೂಟ ಸುಲ್ತಾನನ ವೈರಿಯೊಬ್ಬನ ಸಂಬಂಧ ಅಥವಾ ಸಂಪರ್ಕ ಹೊಂದಿದ್ದಕ್ಕಾಗಿ ಅವನ ಮೇಲೆ ವಿಶೇಷ ನಿಗಾ ಇರಿಸಿ ಗೃಹಬಂಧನದಂತೆಯೇ ಮಾಡಲಾಯಿತು. ಆಮೇಲೆ, ಅದೃಷ್ಟವಶಾತ್ ಅದರಿಂದ ಮುಕ್ತನಾದ ಬಟೂಟನನ್ನು ಚೀನಾಕ್ಕೆ ರಾಯಭಾರಿಯಾಗಿ ಕಳುಹಿಸಲಾಯಿತು. ‘‘ಬದುಕಿದೆಯಾ ಬಡಜೀವವೇ’’ ಎಂದು ಬಟೂಟ ಹಿಂದೂಸ್ಥಾನದಿಂದ ಕಾಲ್ತೆಗೆದ. ಮಹಮ್ಮದನ ಮನೋಗತವನ್ನು ಯಾರಿಗೂ ತಿಳಿಯಲು ಸಾಧ್ಯವಿಲ್ಲ ಮತ್ತು ಅವನ ನಡವಳಿಕೆ ತೀರಾ ಅಸ್ಥಿರವಾಗಿತ್ತೆಂದು ಬಟೂಟನ ಅಭಿಮತ. ಸುಲ್ತಾನನ ಕೊನೆಗಾಲದಲ್ಲಿ ಸಾಮ್ರಾಜ್ಯದ ಎಲ್ಲೆಡೆಗಳಲ್ಲೂ ದಂಗೆಗಳಾದವು. ಆ ದಂಗೆಗಳನ್ನು ನಿಗ್ರಹಿಸಲು ಅವನಿಂದ ಆಗಲಿಲ್ಲ. ಸಿಂಧ್ ಪ್ರದೇಶದಲ್ಲಿಯ ಟಾಗೀ ಎಂಬವನ ದಂಗೆ ಹತ್ತಿಕ್ಕಲು ಸುಲ್ತಾನ ಸ್ವತಃ ದಂಡೆತ್ತಿಹೋದ. ಅಲ್ಲಿ ಅನಾರೋಗ್ಯಕ್ಕೆ ತುತ್ತಾಗಿ ಹಿಜರಿ ಶಕ 752 ರಲ್ಲಿ (1350-51) ಸಾವಿಗೀಡಾದ. ಸುಲ್ತಾನ ತುಘ್ಲಕನ ‘ಕೆಂಪು ಆಳ್ವಿಕೆ’ಯಿಂದ ಜನರು ಬಿಡುಗಡೆ ಹೊಂದಿದರು. ಹಾಗೂ ಜನಾಕ್ರೋಶದಿಂದ ಅವನೂ ಮುಕ್ತನಾದ. ಈ ಮುಸಾನ್ೀ ವಿವರಣೆ ಇತರ ಇತಿಹಾಸ ಕೃತಿಗಳಿಗಿಂತ ಭಿನ್ನವಾಗಿದೆ.

   

Leave a Reply