ಮಹಾದಾಯಿಯ ಒಳಸುಳಿ

ಲೇಖನಗಳು - 0 Comment
Issue Date :

-ವೃಷಾಂಕ

ಸೋನಿಯಾ ಗಾಂಧಿಯವರೇ, ಮಹಾದಾಯಿ ನೀರನ್ನು ಕರ್ನಾಟಕಕ್ಕೆ ಕೊಡುವುದಿಲ್ಲವೆಂದು ಘರ್ಜಿಸಿದವರು ನೀವೇ ಅಲ್ಲವೇ? ಎಲ್ಲಿಯವರೆಗೆ ನಮ್ಮ ಜನರು ಸಮಸ್ಯೆಗಳನ್ನು ಅರಿವ ಕ್ರಮಗಳನ್ನು ಸರಿಯಾಗಿ ಬೆಳೆಸಿಕೊಳ್ಳುವುದಿಲ್ಲವೋ ಅಲ್ಲಿಯವರೆಗೆ ಭಾವನಾತ್ಮಕ ಹೋರಾಟಗಳನ್ನು ಮಾಡಿಕೊಂಡೇ ಬರುತ್ತಾರೆ. ಇದನ್ನೂ ಒಂದು ರೀತಿಯ ಮೌಢ್ಯ ಎನ್ನಬಹುದು. ಈ ಮೌಢ್ಯದಿಂದ  ಲಾಭಪಡೆಯುವುದು ರಾಜಕೀಯ ಪಕ್ಷಗಳು. ಈ ಬಾರಿ ಅಂತಹ ಲಾಭವನ್ನು ರಾಜ್ಯ ಕಾಂಗ್ರೆಸ್ ಪಡೆಯ ಹೊರಟಿದೆ. ಅದೂ ನೀರಿನ ವಿಷಯದಲ್ಲಿ. ನಾವು ಮಹಾದಾಯಿ ನದಿ ನೀರಿನ ಬಗ್ಗೆ ಮಾತನಾಡುವಾಗ ಮೊದಲು ಸಮಸ್ಯೆಯ ಇತಿಹಾಸವನ್ನು ಅರಿಯಬೇಕು. ಆಗ ಮಾತ್ರ ಆ ಸಮಸ್ಯೆಯನ್ನು ಹೇಗೆ ಬಗೆಹರಿಸಬಹುದು ಎಂದು ಬಾಯಿ ಬಡೆದುಕೊಳ್ಳುತ್ತಿದ್ದರೂ ಕಾಂಗ್ರೆಸ್ ರಾಷ್ಟ್ರೀಯ ಅಧ್ಯಕ್ಷ ರಾಹುಲ್ ಗಾಂಧಿಯಾಗಲೀ, ತಾಯಿ ಸೋನಿಯಾ ಗಾಂಧಿಯಾಗಲೀ, ಇತ್ತೀಚೆಗೆ ಮಾತನಾಡುವ ಅಭ್ಯಾಸ ಹೆಚ್ಚಿಸಿಕೊಳ್ಳುತ್ತಿರುವ ಮನಮೋಹನ್ ಸಿಂಗ್ ಆಗಲೀ ಅಥವಾ ಯಾವುದೇ ರಾಷ್ಟ್ರೀಯ ನಾಯಕರಾಗಲೀ ಧ್ವನಿ ಎತ್ತುತ್ತಿಲ್ಲ. ಕಾರಣ ಸ್ಪಷ್ಟ. ಮೂರು ರಾಜ್ಯಗಳು ಸೇರಿ ಹಂಚಿಕೊಳ್ಳಬಹುದಾಗಿದ್ದ ಮಹಾದಾಯಿ ವಿವಾದ ಮಹಾದಾಯಿ ನೀರನ್ನು ನ್ಯಾಯಾಲಯದ ಮೆಟ್ಟಲೇರುವಂತೆ ಮಾಡಿದವರು ಕಾಂಗ್ರೆಸಿಗರು. ಅದರಲ್ಲಿ  ಸೋನಿಯಾ ಗಾಂಧಿ ಪಾತ್ರವಿದೆ. ಮಹಾದಾಯಿಯ ಒಂದು ಹನಿ ನೀರನ್ನೂ ಕರ್ನಾಟಕಕ್ಕೆ ಬಿಡುವುದಿಲ್ಲ ಎಂದು ಸೋನಿಯಾ ಈ ಹಿಂದೆ ಘರ್ಜಿಸಿದ್ದರು. ಸೋನಿಯಾ ಹೇಳಿಕೆಯನ್ನು ಸ್ವತಃ ಕಾಂಗ್ರೆಸ್ ಮರೆತಿದ್ದರೆ, ಬಿಜೆಪಿ ಕೂಡ ಮರೆತಿರುವುದು ವಿಷಾದನೀಯ!

 ಜುಲೈ 2002, ಆಗ ಗೋವಾದಲ್ಲಿದ್ದದ್ದು ಕಾಂಗ್ರೆಸ್ ಸರ್ಕಾರ. ಅಂತಾರಾಜ್ಯ ನದಿ ನೀರು ವಿವಾದ -1953 ರ ಸೆಕ್ಷನ್ 3ರ ಅಡಿಯಲ್ಲಿ ಮಹಾದಾಯಿ ನದಿ ನೀರನ್ನು ಯಾರ‌್ಯಾರು ಎಷ್ಟೆಷ್ಟು ಬಳಸಬೇಕು ಎಂದು ತೀರ್ಮಾನಿಸಲು ನ್ಯಾಯಾಧಿಕರಣ ಸ್ಥಾಪಿಸುವಂತೆ ಗೋವಾ ಸರ್ಕಾರ ಕೇಂದ್ರ ಸರ್ಕಾರಕ್ಕೆ ಮನವಿ ಸಲ್ಲಿಸಿತು. 2006 ರಲ್ಲಿ ಗೋವಾ-ಮಹಾರಾಷ್ಟ್ರ-ಕರ್ನಾಟಕದ ಮುಖ್ಯಮಂತ್ರಿಗಳನ್ನು ಕರೆದ ಕೇಂದ್ರ ಮಾತುಕತೆಯ ಮೂಲಕ ಬಗೆಹರಿಸಿಕೊಳ್ಳಲು ಸಾಧ್ಯವೇ ಎಂದು ಕೇಳಿತು. ಕರ್ನಾಟಕ ಮತ್ತು ಗೋವಾ ಸರ್ಕಾರಗಳು ಮಾತುಕತೆಗೆ ಸಿದ್ದವಿತ್ತಾದರೂ ಗೋವಾ ಮಾತ್ರ ಸುತಾರಾಂ ಒಪ್ಪಲಿಲ್ಲ ಮತ್ತು ಸುಪ್ರೀಂ ಕೋರ್ಟ್ ಮೆಟ್ಟಲೇರಿತು. ನ್ಯಾಯಾಧಿಕರಣ ರಚಿಸುವಂತೆ  10-12-2009ರಂದು ಸುಪ್ರೀಂ ಕೋರ್ಟ್ ತೀರ್ಪಿತ್ತಿತ್ತು. ಸುಮಾರು ಅದೇ ಹೊತ್ತಿಗೆ ಮಹಾದಾಯಿ ನೀರನ್ನು ಯಾವುದೇ ಕಾರಣಕ್ಕೂ ಕರ್ನಾಟಕಕ್ಕೆ ನೀಡಲು ಬಿಡುವುದಿಲ್ಲವೆಂದು ಸೋನಿಯಾ ಗಾಂಧಿ ಸಾರ್ವಜನಿಕ ಭಾಷಣದಲ್ಲಿ ಗುಡುಗಿದರು!

 ಕರ್ನಾಟಕಕ್ಕೆ ಮಹಾದಾಯಿ ನೀರನ್ನು ಕೊಡಬಾರದು ಎಂಬುದು ಕಾಂಗ್ರೆಸ್ ಸರ್ಕಾರದ ರಾಷ್ಟ್ರೀಯ ನೀತಿ. ಒಂದುವೇಳೆ ಗೋವಾ ಮತ್ತು ಮಹಾರಾಷ್ಟ್ರದಲ್ಲಿರುವ ಬಿಜೆಪಿ ಸರ್ಕಾರಗಳು ಕರ್ನಾಟಕ್ಕೆ ನೀರು ಬಿಡಲು ಒಪ್ಪಿದರೆ ಗೋವಾದ್ಯಂತ ಉಗ್ರ ಪ್ರತಿಭಟನೆ ನಡೆಸುವುದು ಕಾಂಗ್ರೆಸ್ ಯೋಜನೆ. ಈ ಕುಟಿಲ ತಂತ್ರವನ್ನು ಅರಿತಿರುವ ಬಿಜೆಪಿಯು ಸಮಸ್ಯೆಯನ್ನು ಬಗೆಹರಿಸಲು ಹೊಸ ದಾರಿಗಳನ್ನು ಹುಡುಕುತ್ತಿದೆ.

 ಬಿಜೆಪಿಯ ಅಸಹಾಯಕತೆಯನ್ನು ಕಾಂಗ್ರೆಸ್ ಪಕ್ಷ ಸವಿಯುತ್ತಿದೆ!

 

   

Leave a Reply