ಮಹಿಳಾ ಸುರಕ್ಷತಾ ಅಭಿಯಾನ

ಮೈಸೂರು - 0 Comment
Issue Date : 25.11.2013

ಗುಂಡ್ಲುಪೇಟೆ: ಇಲ್ಲಿ ನ.17ರಂದು ಅಖಿಲಭಾರತ ವಿದ್ಯಾರ್ಥಿ ಪರಿಷತ್ ವತಿಯಿಂದ ಮಹಿಳಾ ಸುರಕ್ಷತಾ ಅಭಿಯಾನವನ್ನು ನಡೆಸಲಾಯಿತು.

ಮಡಹಳ್ಳಿ ವೃತ್ತದಿಂದ ಹೊರಟ ಗುಂಡ್ಲುಪೇಟೆಯ ಎಲ್ಲಾ ಕಾಲೇಜುಗಳ ಸುಮಾರು 350 ವಿದ್ಯಾರ್ಥಿನಿಯರು ಪಟ್ಟಣದ ಪ್ರಮುಖ ಬೀದಿಗಳಲ್ಲಿ ಸಂಚರಿಸಿ ಮಹಿಳಾ ಜಾಗೃತಿ ಅಭಿಯಾನ ನಡೆಸಿದರು. ಹಳೇ ಬಸ್‌ನಿಲ್ದಾಣದ ನೆಹರು ವೃತ್ತದಲ್ಲಿ ಸ್ವಲ್ಪಹೊತ್ತು ಮಾನವ ಸರಪಳಿಯನ್ನು ರಚಿಸಿ ಮಹಿಳೆಯರ ಸುರಕ್ಷತೆಯ ಬಗ್ಗೆ ನಿರ್ಲಕ್ಷ್ಯ ಧೋರಣೆ ಅನುಸರಿಸುತ್ತಿರುವ ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗಿದರು. ನಂತರ ತಾಲ್ಲೂಕು ಕಛೇರಿಗೆ ತೆರಳಿ ಮಹಿಳೆಯರ ಸುರಕ್ಷತೆಗೆ ಆದ್ಯತೆ ನೀಡಿ ಕಾನೂನನ್ನು ರಚಿಸುವಂತೆ ಒತ್ತಾಯಿಸುವ ಮನವಿ ಪತ್ರವನ್ನು ತಹಶೀಲ್ದಾರ್ ಜಿ.ಎಸ್. ರಂಗನಾಥ್ ಅವರಿಗೆ ಸಲ್ಲಿಸಿದರು.

ವಿದ್ಯಾರ್ಥಿ ಪರಿಷತ್‌ನ ಜಿಲ್ಲಾ ಸಂಘಟನಾ ಕಾರ್ಯದರ್ಶಿ ಆನಂದ್, ಜಿಲ್ಲಾ ಸಂಚಾಲಕ ರಾಜಶೇಖರ ಮೂರ್ತಿ, ಗುಂಡ್ಲುಪೇಟೆ ಪಟ್ಟಣ ಕಾರ್ಯದರ್ಶಿ ಮಂಜು ಸೇರಿದಂತೆ ಪದಾಧಿಕಾರಿಗಳು ಭಾಗವಹಿಸಿದ್ದರು.

   

Leave a Reply