ಮಾಂಗಲ್ಯವೂ ಜುಲ್ಮಾನೆಗೆ

ಚಂದ್ರಶೇಖರ ಭಂಡಾರಿ - 0 Comment
Issue Date :

….ಅಲ್ಲಿರುವ ವ್ಯಕ್ತಿ ನಿರ್ಧಾರಿತ ಸಂಕೇತ ಶಬ್ದ ಹೇಳಿದಾಗ ಆತನಿಗೆ ತಾನು ತಂದಿರುವ ಚೀಲವಿತ್ತು ಹಿಂದಿನ ದಿನ ಕೊಡಲಾದ ಚೀಲವನ್ನು ಪಡೆದು ಮರುದಿನದ ನಿರ್ಧಾರಿತ ಸಂಕೇತ ಶಬ್ದವನ್ನೂ ತಿಳಿಸಿ ಬರುತ್ತಿದ್ದರು. ಹಲವು ದಿನಗಳ ಕಾಲ ಈ ವ್ಯವಸ್ಥೆ ತುಂಬ ಯಶಸ್ವಿಯಾಗಿ ನಡೆಯಿತು. ಪೊಲೀಸರು ಕಟ್ಟೆಚ್ಚೆರದಿಂದ ಹುಡುಕುತಿದ್ದರೂ ಯಾವುದೂ ಅವರ ಕೈಗಳಿಗೆ ದಕ್ಕಿರಲಿಲ್ಲ. ಗುಪ್ತಚರ ವಿಭಾಗ ಹುಡುಕಾಟದಲ್ಲಿ ಪೂರಾ ಸುಸ್ತಾಗಿತ್ತು.
ಆದರೆ ಒಂದು ದಿನ -ಪರಶುರಾಮ ಸ್ವತಃ ಚೀಲ ಸಹಿತ ಸೈಕಲ್‌ನಲ್ಲಿ ಹೊರಟಿದ್ದರು. ಅವರನ್ನು ಕಂಡು ಯಾರೋ ಒಬ್ಬ ಗುಪ್ತಚರನಿಗೆ ತುಸು ಸಂದೇಹ ಉಂಟಾಯಿತು. ಅವನೂ ಸೈಕಲ್ ಹತ್ತಿ ಇವರ ಬೆನ್ನು ಹತ್ತಿದ. ತುಸು ಮುಂದೆ ಹೋದ ಮೇಲೆ ಪರಶುರಾಮನಿಗೆ ಅವನು ತನ್ನನ್ನೇ ಅನುಸರಿಸಿ ಬರುತ್ತಿರುವುದು ಅನುಮಾನ ಉಂಟಾಯಿತು. ಅವರು ಏಕದಂ ಉರ್ದುಬಾಝಾರ್‌ನಲ್ಲಿ ಒಂದು ಚಪ್ಪಲಿ ಅಂಗಡಿಯ ಬಳಿ ಸೈಕಲ್ ನಿಲ್ಲಿಸಿ, ಅದನ್ನು ಹೊರಗೆ ಬಿಟ್ಟು ತಾವು ಅಂಗಡಿಯ ಒಳಗೆ ಹೋದರು. ಆ ಗುಪ್ತಚರ ಸಹ ಅಲ್ಲಿಗೆ ತಲಪಿ ತಾನೂ ಅಂಗಡಿಯೊಳಗೆ ಬಂದು ಪರಶುರಾಮ ಅವರ ಸಮೀಪವೇ ಕುಳಿತ. ಪರಶುರಾಮ ಅಂಗಡಿಯವನ ಬಳಿ ತನಗಾಗಿ ಚಪ್ಪಲಿ ತೋರಿಸಲು ಕೇಳಿದರು. ಆದರೆ ಗುಪ್ತಚರ ಸಹ ಭಾರೀ ಆಸಾಮಿ ಅಗಿದ್ದವನೇ. ಅವನು ಅಂಗಡಿಯಿಂದ ಕದಲಲೇ ಇಲ್ಲ. ಕೊನೆಯಲ್ಲಿ ಪರಶುರಾಮರಿಗೆ ಒಂದು ಉಪಾಯ ಹೊಳೆಯಿತು. ಅವರು ಆ ಗುಪ್ತಚರನ ಬಳಿ ಒಂದು ವಿನಂತಿ ಮಾಡಿದರು. ‘ಗೆಳೆಯಾ, ನನ್ನ ಈ ಸೈಕಲ್ ತುಸು ಹೊತ್ತು ನೋಡಿಕೊಳ್ಳುವಿರಾ? ನಾನು ಲಘು ಶಂಕೆ ಮುಗಿಸಿ ಇಷ್ಟರಲ್ಲೆ ಬರುತ್ತೇನೆ’ ಎಂದು ಅಲ್ಲಿಂದ ಹೊರಟರು. ಆ ಗುಪ್ತಚರ ಇವರ ಸೈಕಲ್ ಮತ್ತು ಚೀಲ ಕಾದದ್ದೇ ಬಂತು. ಎಷ್ಟು ಹೊತ್ತಾದರೂ ಪರಶುರಾಮ ಬರಲೇ ಇಲ್ಲ. ನಿಜ, ಆ ಸೈಕಲ್ ಮತ್ತು ಭೂಗತ ಕರಪತ್ರಗಳೂ ಚೀಲ ಸಹಿತ ಠಾಣೆಗೆ ಸೇರಿದವು. ಆದರೆ ಹಕ್ಕಿ ಮಾತ್ರ ತಪ್ಪಿಸಿಕೊಂಡು ಹೋಯಿತು. ಭೂಗತ ಕರಪತ್ರಗಳು ತಯಾರಾಗುವ ಜಾಗವೂ ಪೊಲೀಸರಿಗೆ ಗೊತ್ತಾಗಲೇ ಇಲ್ಲ.
ಆ ದಿನಗಳಲ್ಲಿ ಉತ್ತರ ಪ್ರದೇಶದ ಸೀತಾಪುರ ಜಿಲ್ಲೆಗೆ ಭೂಗತ ಪ್ರಚಾರ ಪ್ರಮುಖರಾಗಿದ್ದವರು ಶ್ರೀ ವಿಪಿನ ಬಿಹಾರಿ ತಿವಾರಿ ಅವರು. ಗಾಂಧೀಜಿ ಯವರ ಹತ್ಯೆಯಾಗಿ ಸಂಘದ ಮೇಲೆ ನಿಷೇಧ ವಿಧಿಸಲ್ಪಟ್ಟಾಗಲೇ ಅವರು ಭೂಗತರಾಗಿದ್ದರು. ಆದರೆ ಅವರ ಮೇಲೆ ವಾರಂಟ್ ಇದ್ದ ಕಾರಣಕ್ಕಾಗಿ, ಸಂಘದ ನೀತಿಯಂತೆ ಅವರು ತಾವಾಗಿಯೇ ಪೊಲೀಸ್ ಠಾಣೆಯಲ್ಲಿ ಹಾಜರಾಗಿ ತಮ್ಮನ್ನು ಬಂಧನಕ್ಕೊಳಪಡಿಸಿದರು. ಮೂರು ತಿಂಗಳವರೆಗೆ ಪೊಲೀಸರು ಅವರನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲೇ ಇಲ್ಲ. ಅದಕ್ಕಾಗಿ ಕೊನೆಯಲ್ಲಿ ಯೋಜನೆಗನುಸಾರವಾಗಿ ನ್ಯಾಯಾಲಯದಲ್ಲಿ ವ್ಯಕ್ತಿ ಹಾಜರೀಕರಣದ ಮನವಿ ಸಲ್ಲಿಸಿ, ಅದರ ಮೂಲಕ ತನ್ನ ಬಿಡುಗಡೆ ಪಡೆದರು.
ಹೊರಗೆ ಬಂದ ಮೇಲೆ ಸಂಘದ ಯೋಜನೆಯಂತೆಯೇ ಲಖಿಮಪುರ ಜಿಲ್ಲೆಯ ಗೋಲಾಗೋಕರ್ಣನಾಥದಲ್ಲಿನ ಪಬ್ಲಿಕ್ ಇಂಟರ್ ಕಾಲೇಜಿನಲ್ಲಿ ಪ್ರಾಧ್ಯಾಪಕರಾಗಿ ಕೆಲಸಕ್ಕೆ ಸೇರಿದರು. ಮುಂದೆ ಸತ್ಯಾಗ್ರಹ ಆರಂಭವಾದಾಗ ಕೆಲಸಕ್ಕೆ ರಾಜಿನಾಮೆ ಇತ್ತರು. ಅವರಿಗೆ ಮೇಲೆ ಹೇಳಿದಂತೆ ಸೀತಾಪುರ ಜಿಲ್ಲೆಯಲ್ಲಿ ಭೂಗತ ಪ್ರಚಾರ ಪ್ರಮುಖರ ಹೊಣೆ ವಹಿಸಲಾಯಿತು. ಈ ಕೆಲಸಕ್ಕಾಗಿ ಅವರಿಗೆ ಲಖ್ನೋದಿಂದ ಒಂದು ಚಕ್ರಮುದ್ರಣ ಯಂತ್ರವನ್ನೂ ಒದಗಿಸಲಾಯಿತು. ಆದರೆ ಸಮಸ್ಯೆಯಾಗಿದ್ದುದು ಅದನ್ನು ಎಲ್ಲಿ ಇರಿಸಬೇಕು. ಪ್ರಕಟಣೆಯ ಕೇಂದ್ರ ಎಲ್ಲಿ ಮಾಡಬೇಕು ಎಂಬುದೇ. ಸತ್ಯಾಗ್ರಹ ವ್ಯಾಪಕವಾಗಿ ಬೆಳೆಯುತ್ತಿದ್ದ ಹಿನ್ನೆಲೆಯಲ್ಲಿ, ಭೂಗತ ಸಾಹಿತ್ಯಕ್ಕೆ ಸಂಬಂಧಿಸಿದ ಯಾವುದೇ ವಸ್ತು ಮತ್ತು ಯಂತ್ರ ಕೈಗೆ ಸಿಕ್ಕಲ್ಲಿ, ಅಂತಹ ಮನೆಯವರಿಗೆ ಮೂರು ವರ್ಷಗಳ ಸಶ್ರಮ ಶಿಕ್ಷೆ ಮತ್ತು ಮೂರು ಸಾವಿರ ರೂಪಾಯಿ ಜುಲ್ಮಾನೆ ವಿಧಿಸಲಾಗುವುದು ಎಂದು ಸರಕಾರ ಆದೇಶ ಹೊರಡಿಸಿತ್ತು. ಹೀಗಾಗಿ ಯಂತ್ರ ಇರಿಸಿಕೊಳ್ಳಲು ಯಾವುದೇ ಮನೆಯವರು ಸಿದ್ಧರಿರಲಿಲ್ಲ.
ಕೊನೆಯಲ್ಲಿ ಪಾಕಿಸ್ತಾನದಿಂದ ನಿರಾಶ್ರಿತರಾಗಿ ಬಂದಿದ್ದ ರಘುನಾಥ ದಾಸ ಸೆಹರಾ ಅವರು ಈ ಅಪಾಯವನ್ನೆದುರಿಸಲು ತಯಾರಾದರು. ಅವರ ಮನೆಯಲ್ಲಿ ಕರಪತ್ರಗಳ ಮುದ್ರಣ ಮತ್ತು ವಿತರಣೆಯ ಕೇಂದ್ರ ಆರಂಭವಾಯಿತು. ವಿತರಣೆಯ ಕೆಲಸವನ್ನು ಬಾಲ ಸ್ವಯಂಸೇವಕರು ಅತಿ ಕುಶಲತೆಯಿಂದ, ಚುರುಕಾಗಿ ಮಾಡುತ್ತಿದ್ದರು. ಕರಪತ್ರಗಳ ಮೇಲೆ ಪ್ರಕಾಶಕರ ಗುಪ್ತ ಹೆಸರು ತಿಳಿಸಲಾಗುತ್ತಿದ್ದು ಪ್ರಕಟಣೆಯ ಸ್ಥಾನವನ್ನು ಲಖಿಮಪುರವಾಗಿ ಹೇಳಲಾಗುತ್ತಿತ್ತು.
A¨æíñÜÖÜ ¯Ðæu
ಶ್ರೀ ರಘುನಾಥ ಸೆಹರಾ ಅವರು ನಿಜಕ್ಕೂ ತಮ್ಮನ್ನು ಭಾರೀ ಅಪಾಯಕ್ಕೆ ಒಡ್ಡಿದ್ದರು. ಅವರಿಗೊಂದು ಪರೀಕ್ಷಾ ಪ್ರಸಂಗವೂ ಎದುರಾಯಿತು.
ಅವರಿಬ್ಬರು ಸೋದರರು ಮೊದಲೇ ಸತ್ಯಾಗ್ರಹದಲ್ಲಿ ಪಾಲ್ಗೊಂಡು ಸೆರೆಮನೆ ಸೇರಿದ್ದರು. ಸಶ್ರಮ ಸೆರೆವಾಸದ ಜತೆಯಲ್ಲಿ ಒಬ್ಬಬ್ಬರಿಗೂ ಐದು ನೂರು ರೂಪಾಯಿಗಳ ಜುಲ್ಮಾನೆ ವಿಧಿಸಲಾಗಿತ್ತು. ಜುಲ್ಮಾನೆ ಹಣ ಕಟ್ಟಲು ನಿರಾಕರಿಸಿದ ಕಾರಣಕ್ಕಾಗಿ ಇನ್ನೂ ಹೆಚ್ಚಿನ ಸೆರೆವಾಸದ ಶಿಕ್ಷೆಗೆ ಅವರು ಒಳಗಾಗಿದ್ದರು. ಅಷ್ಟಾದರೂ ಅಂದಿನ ಹೇಳುವವರು ಕೇಳುವವರು ಇಲ್ಲದೆ ಇರುವ ದಿನಗಳಲ್ಲಿ ಪೊಲೀಸರು ಜುಲ್ಮಾನೆ ಹಣ ವಸೂಲು ಮಾಡುವುದನ್ನೂ ಬಿಡಲಿಲ್ಲ. ಮೇಲಿಂದ ಮೇಲೆ ಮನೆಗೆ ಬಂದು ರಗಳೆ ಮಾಡಲಾರಂಭಿಸಿದರು. ರಘುನಾಥ ಅವರ ಬಳಿ ಹಣ ಇರಲೂ ಇಲ್ಲ. ಆದರೆ ಪೊಲೀಸರು ಬಿಡುತ್ತಲೂ ಇರಲಿಲ್ಲ. ರಘುನಾಥರಿಗೆ ನಿಜಕ್ಕೂ ಭಾರಿ ಸಮಸ್ಯೆ ಎದುರಾಯಿತು. ಜುಲ್ಮಾನೆ ಹಣ ಕಟ್ಟದೆ ಹೋದಲ್ಲಿ ಪೊಲೀಸರು ಮನೆಯ ತಲಾಶ್ ಮಾಡುವುದು ಖಚಿತ. ಹಾಗಾದಲ್ಲಿ ಯಂತ್ರ ಸಿಗುವುದು ಸಹ ಅಷ್ಟೇ ಖಚಿತ. ಯಂತ್ರ ತಮ್ಮ ಕೈ ಬಿಟ್ಟು ಹೋದಲ್ಲಿ ಮುಂದೆ ಕರಪತ್ರದ ಮುದ್ರಣ ಮತ್ತು ವಿತರಣೆ ನಿಂತೇ ಹೋಗುತ್ತದೆ. ಅಷ್ಟೇ ಅಲ್ಲ, ಮನೆಯಲ್ಲಿ ಅವಿತುಕೊಂಡಿರುವ ವಿಪಿನಬಿಹಾರಿ ತಿವಾರಿಯವರೂ ಬಂಧಿತರಾಗುವರು. ಏನೇ ಆಗಲಿ, ಅದಕ್ಕವಕಾಶವಾಗಬಾರದು. ಅದಕ್ಕಾಗಿ ಪೊಲೀಸರು ಬರಬಹುದೆಂಬ ಮಾಹಿತಿ ದೊರೆತೊಡನೆಯೇ ಅವರಿದ್ದ ಕೋಣೆಗೆ ಹೊರಗಿನಿಂದ ಬೀಗ ತಗಲಿಸಿದರು. ರಘುನಾಥ ಅವರು ತನ್ನ ಸ್ವಂತದ ಗೌರವ, ಸ್ವಹಿತ ಇತ್ಯಾದಿ ಎಲ್ಲ ಪಕ್ಕಕ್ಕೆ ಸರಿಸಿ, ಸಂಘಟನೆಯ ಹಿತವೇ ಸರ್ವ ಶ್ರೇಷ್ಠವೆಂದು ಬಗೆದು ತನ್ನ ಪತ್ನಿಯ ಕೈಬಳೆಗಳನ್ನೇ ಪೋಲಿಸರಿಗೆ ಜುಲ್ಮಾನೆಯ ಹಣದ ಬದಲಿಗೆ ಒಪ್ಪಿಸಿದರು. ಆ ಮೂಲಕ ಅನುಪಮ ಸಂಘ ನಿಷ್ಠೆ ಮೆರೆದರು.
ನಿರ್ಲಜ್ಜರಾದ ಪೊಲೀಸರಿಗೆ ಓರ್ವ ಗೃಹಿಣಿಯ ಮಾಂಗಲ್ಯದ ಚಿಹ್ನೆ ಬಳೆಗಳನ್ನು ಜುಲ್ಮಾನೆಯ ಹೆಸರಲ್ಲಿ-ಅದೂ ಸಹ ಅನ್ಯಾಯದಿಂದ; ಕಾರಣವೆಂದರೆೆ ಜುಲ್ಮಾನೆ ಸಲ್ಲಿಸಬೇಕಾದ ಅಗತ್ಯವೇ ಇರಲಿಲ್ಲ – ವಸೂಲು ಮಾಡಿ ತಮ್ಮ ಜೇಬಿಗೆ ಇಳಿಸುವುದಕ್ಕೆ ಸ್ವಲ್ಪವೂ ಸಂಕೋಚವೆನಿಸಲಿಲ್ಲ. ಆದರೆ ಇದೊಂದು ಸಾರ್ವಜನಿಕ ಚರ್ಚೆಯ ವಿಷಯವಾಯ್ತು. ಪತ್ರಿಕೆಗಳಲ್ಲೂ ಅದು ಪ್ರಕಟವಾಯ್ತು. ಪರಿಣಾಮವಾಗಿ ಪೊಲೀಸರು ಅದನ್ನು ವಾಪಸ್ ಕೊಡಬೇಕಾದ ಸ್ಥಿತಿ ಏರ್ಪಟ್ಟಿತು. ಜನಾಕ್ರೋಶ ಅದಷ್ಟೆು ಪ್ರಬಲವಾಗಿತ್ತೆಂದರೆ ಪೊಲೀಸರ ಈ ಅಕೃತ್ಯಕ್ಕೆ ಸಂಬಂಧಿಸಿ ಸ್ವತಃ ಪ್ರಧಾನಿ ನೆಹರು ಅವರು ಸರಕಾರದ ಪರವಾಗಿ ವಿಷಾದ ವ್ಯಕ್ತಪಡಿಸಿ ಪತ್ರ ಬರೆಯಬೇಕಾಯಿತು.
PÜí¹WÜÙÜ Baæ
ಸತ್ಯಾಗ್ರಹಿಗಳ ಮೇಲೆ ಪೊಲೀಸರು ಹಿಂಸೆ ಎಸಗುತಿದ್ದುದು ಕೇವಲ ಬಂಧನದ ಸಂದರ್ಭದಲ್ಲಿ ಮತ್ತು ಠಾಣೆಗಳಲ್ಲಿ ಮಾತ್ರ ಎಂದೇನಲ್ಲ. ಸೆರೆಮನೆಗಳ ಒಳಗೂ ಅವರು ಅತಿ ಕ್ರೂರ ಯಾತನೆ ನೀಡುತಿದ್ದರು. ವಾಸ್ತವಿಕವಾಗಿ ಸಂಘದ ಸತ್ಯಾಗ್ರಹಿಗಳೆಲ್ಲರೂ ರಾಜಕೀಯ ಕೈದಿಗಳಾಗಿದ್ದವರು. ಅವರನ್ನು ಅದೇ ರೀತಿಯಲ್ಲಿ ನೋಡಿಕೊಳ್ಳಬೇಕಾದುದೇ ನ್ಯಾಯಕ್ಕನುಗುಣವಾಗಿ ಇದ್ದ ಅಪೇಕ್ಷೆ. ಆದರೆ ಸೆರೆಮನೆಗಳಲ್ಲಿ ಅವರನ್ನು ನೋಡಲಾಗುತಿದ್ದುದೇ ಭಾರೀ ಅಪರಾಧದ ಶಿಕ್ಷೆಗೊಳಗಾಗುವ ಕಳ್ಳರು, ಡಕಾಯಿತರಂತೆ, ಅಥವಾ ಅದಕ್ಕಿಂತಲೂ ಹೀನವಾಗಿ. ಅವರಿಗೆ ನೀಡಲಾಗುತಿದ್ದ ಆಹಾರ ಹೊಟ್ಟೆತುಂಬುವಷ್ಟು ಅಂತೂ ಮೊದಲೇ ಇರಲಿಲ್ಲ; ಜತೆಯಲ್ಲಿ ಅದನ್ನು ತಿಂದಲ್ಲಿ, ಜಾನುವಾರುಗಳು ಕೂಡ ಕಾಯಿಲೆಗೊಳ್ಳಬಹುದಾದಂತಹದು ಅದು. ಹೆಚ್ಚಿನ ಸೆರೆಮನೆಗಳಲ್ಲಿ ಅವರಿಗೆ ಧರಿಸಲು ಕೊಡಲಾಗುತಿದ್ದುದು ಕ್ರಿಮಿನಲ್ ಅಪರಾಧಿಗಳಿಗೆ ನೀಡುವಂತಹ ಉಡುಪು. ಮೈಕೊರೆಯುವ ಚಳಿಯಲ್ಲೂ ಹಾಸಲು ಹೊದೆಯಲು ಸಾಕಷ್ಟು ಬೆಚ್ಚನೆಯ ಬಟ್ಟೆ ಕೊಡುತ್ತಿರಲಿಲ್ಲ. ಯಾವುದೋ ಹಳೆಯ ಹರಿದು ಚಿಂದಿಯಾದ ಒಂದೆರಡು ಕಂಬಳಿ. ಅದರಲ್ಲೆ ಹೆಚ್ಚಿನವರು ತೃಪ್ತಿಪಡಬೇಕಾಗುತ್ತಿತ್ತು. ಸೆರೆಮನೆಗಳಲ್ಲಿ ನೀರಿನ ವ್ಯವಸ್ಥೆ ಇದ್ದೇ ಇರುತ್ತಿತ್ತೆಂದೇನೂ ಇಲ್ಲ. ಒಂದಿಷ್ಟು ಇದ್ದರೂ, ಅದು ಸಾಕಾಗುವಷ್ಟು ಎನ್ನುವಂತೆ ಇರುತ್ತಿರಲಿಲ್ಲ. ಇಂತಹ ಸ್ಥಿತಿಯಲ್ಲಿ ನಿತ್ಯಸ್ನಾನ, ಬಟ್ಟೆ ಒಗೆಯುವ ಅನುಕೂಲ ಇತ್ಯಾದಿ ಕಲ್ಪಿಸುವುದೂ ಸಾಧ್ಯವಿರಲಿಲ್ಲ. ವಾರದಲ್ಲಿ ಒಂದೆರಡು ಬಾರಿ ಸ್ನ್ನಾನಕ್ಕೆ ಅವಕಾಶವಾದಲ್ಲಿ ಅದೇ ಭಾಗ್ಯ ಎಂದು ತಿಳಿದುಕೊಳ್ಳಬೇಕಾದಂತಹ ಮಾನಸಿಕತೆ ಪ್ರಯತ್ನಪೂರ್ವಕವಾಗಿ ಅವರು ಬೆಳೆಸಿಕೊಳ್ಳಬೇಕಾಗುತ್ತಿತ್ತು. ಇನ್ನು ಶೌಚಾಲಯಗಳ ಬಗ್ಗೆ ಉಲ್ಲೇಖಿಸದಿರುವುದೇ ಲೇಸು. ಅಸ್ವಚ್ಛ, ಬಾಗಿಲು, ಸೂರು ಇಲ್ಲದಂತಹವು, ನೂರಾರು ಮಂದಿಯಿರುವಲ್ಲಿ ಬೆರಳೆಣಿಕೆಯಷ್ಟು ಸಂಖ್ಯೆಯಲ್ಲಿ ಇರುವ ಶೌಚಾಲಯಗಳು ಅವು. ದಿನದ ಯಾವುದೇ ಸಂದರ್ಭದಲ್ಲೂ ಅಲ್ಲಿ ‘ಕ್ಯೂ’ ಖಾಯಂ.
ರಾತ್ರಿಯ ಹೊತ್ತು ಬೆಳಕಿಗೆ ವ್ಯವಸ್ಥೆ ಸರಿಯಾಗಿ ಇರುತ್ತಿರಲಿಲ್ಲ. ಕೆಲವು ಕಡೆಗಳಲ್ಲಿ ಸಂಜೆ ಸುಮಾರು 15-20 ನಿಮಿಷಗಳ ಕಾಲ ಮಾತ್ರ ದೀಪವಿದ್ದು ನಂತರ ಕೇವಲ ಕತ್ತಲೆಯದೇ ಸಾಮ್ರಾಜ್ಯ. ಅವಕಾಶ ಇದ್ದುದಕ್ಕಿಂತ ಮೂರು ಅಥವಾ ನಾಲ್ಕು ಪಟ್ಟು ಸತ್ಯಾಗ್ರಹಿಗಳನ್ನು ಸೆರೆಮನೆಯ ಬ್ಯಾರಕ್ಕುಗಳಲ್ಲಿ ಅಥವಾ ಕತ್ತಲೆ ಕೊಠಡಿಗಳಲ್ಲಿ ತಳ್ಳಿ ಸೇರಿಸಲಾಗುತ್ತಿತ್ತು. ಕೆಲವು ಸೆರೆಮನೆಗಳಲ್ಲಂತೂ ಸತ್ಯಾಗ್ರಹಿಗಳು ಮತ್ತು ಕ್ರಿಮಿನಲ್ ಕೈದಿಗಳೂ ಇರುತಿದ್ದುದು ಒಂದೇ ಕೊಠಡಿಯ ಒಳಗೆ. ಅಂತಹ ಅಪರಾಧಿಗಳು ಸಾಮಾನ್ಯವಾಗಿ ತುರಿಕೆ, ಕಜ್ಜಿ ಅಥವ ಮೈಲಿಗೆ ಇತ್ಯಾದಿ ಕಾಯಿಲೆಯವರಾಗಿ ಇರುತಿದ್ದರು. ಅಂತಹವರ ಸಹವಾಸದಲ್ಲಿ ಇರಬೇಕಾದ ಅನಿವಾರ್ಯತೆಯಿಂದಾಗಿ ಇವರಿಗೂ ಆ ಕಾಯಿಲೆಗಳು ತಗಲುತಿದ್ದುದು ಸರ್ವೇಸಾಮಾನ್ಯ. ಬ್ಯಾರಕ್‌ಗಳಲ್ಲೆ ರಾತ್ರಿ ಹೊತ್ತು ಶರೀರ ಬಾಧೆ ತೀರಿಸಿಕೊಳ್ಳ್ಳಬೇಕಾಗುತ್ತಿದ್ದುದರಿಂದ ಅವು ಸದಾ ದುರ್ಗಂಧಯುಕ್ತವಾಗಿರುತಿದ್ದವು. ಸೆರೆಮನೆಗಳಲ್ಲಿ ವೈದ್ಯರೇನೋ ಇರುತ್ತಿದ್ದರು. ಆದರೆ ಸತ್ಯಾಗ್ರಹಿಗಳ ಆರೋಗ್ಯದ ಕಾಳಜಿ ಅವರಿಗಿತ್ತೆಂದೇನೂ ಹೇಳುವಂತಿರಲಿಲ್ಲ. ಔಷಧಿಯ ಹೆಸರಲ್ಲಿ ಏನೋ ಒಂದಿಷ್ಟು ಮಿಕ್ಸಚರ್-ತಲೆಗೆಲ್ಲ ಒಂದೇ ಔಷಧಿ ಎಂಬಂತೆ ಇರುತ್ತಿತ್ತು. ಹೀಗೆ ಆಹಾರವೆಲ್ಲ ಕಾಯಿಲೆಗೆ ಆಹ್ವಾನ, ಪರಿಸರವೆಲ್ಲ ಕೊಳೆ, ದುರ್ವಾಸನೆಯದೇ ಸಾಮ್ರಾಜ್ಯ ಮತ್ತು ಔಷಧಿಯೋ ದೇವರಿಗೆ ಪ್ರೀತಿ – ಇಂತಹ ಸನ್ನಿವೇಶದಲ್ಲಿ ಹೆಚ್ಚಿನ ಸತ್ಯಾಗ್ರಹಿಗಳು ಏನೇನೋ ಕಾಯಿಲೆಗೊಳಗಾಗುತಿದ್ದುದು – ಸ್ವತಃ ವಿಶೇಷ ಎಚ್ಚರಿಕೆ, ಸಂಯಮ ಕಾಪಾಡಿಕೊಂಡಾಗಲೂ ಮಾಮೂಲಿ. ಇನ್ನು ಸಶ್ರಮ ಶಿಕ್ಷೆಯ ಹೆಸರಲ್ಲಿ ತರುಣರಷ್ಟೇ ಅಲ್ಲ, ಎಳೆ ವಯಸ್ಸಿನ ಕಿಶೋರರಿಂದಲೂ ಕಠಿಣ ಪರಿಶ್ರಮದ ಕೆಲಸಗಳನ್ನು ಮಾಡಿಸಲಾಗುತ್ತಿತ್ತು. ನಿಗದಿತ ಕೆಲಸಮಾಡಿ ಮುಗಿಸದೆ ಇದ್ದಲ್ಲಿ, ಇನ್ನಷ್ಟು ಹೆಚ್ಚಿನ ಶಿಕ್ಷೆ-ಹೊಡೆತ ಮತ್ತು ಕೆಟ್ಟ ಬೈಗುಳ ಅನುಭವಿಸಬೇಕಾಗುತಿದ್ದುದು ಖಚಿತ.
ಕಲ್ಲು ಒಡೆಯುವುದು, ಕಾಳು ಬೀಸುವುದು, ಸೌದೆ ಒಡೆಯುವುದು, ಮೂಟೆ ಹೊರುವುದು, ಗುಡಿಸುವುದು ಇತ್ಯಾದಿ ಅನೇಕ ರೀತಿಯ ಶಾರೀರಿಕ ಪರಿಶ್ರಮದ ಕೆಲಸಗಳನ್ನು ಮಾಡಿಸಲಾಗುತ್ತಿತ್ತು. ಸಶ್ರಮ ಶಿಕ್ಷೆಗೆ ನೀಡಲಾಗುತಿದ್ದ ಅರ್ಥವೇ ಅದು. ಸತ್ಯಾಗ್ರಹಿಗಳ ಬಗ್ಗೆ ಇತರ ಕೈದಿಗಳಿಗೆ ತಿಳಿಸಲಾಗುತಿದ್ದುದು ಗಾಂಧಿಜಿಯ ಹಂತಕರು, ಹಿಂಸಾವಾದಿಗಳು, ಸರಕಾರದ ವೈರಿಗಳು ಇತ್ಯಾದಿ ರೀತಿಯಲ್ಲಿ. ಹೀಗಾಗಿ ಆ ಕೈದಿಗಳಿಗೆಲ್ಲ ಸತ್ಯಾಗ್ರಹಿಗಳ ಬಗ್ಗೆ ತಿರಸ್ಕ್ಕಾರದ ಮತ್ತು ದ್ವೇಷದ ಭಾವನೆ ಉಂಟಾಗಿದು್ದದು ಸ್ವಾಭಾವಿಕ.

   

Leave a Reply