ಮಾನವ ಸೇವೆಯೇ ಮಾಧವ ಸೇವೆ

ಲೇಖನಗಳು ; ಸಂದರ್ಶನಗಳು - 0 Comment
Issue Date : 07.05.2016

-ವಿನಾಯಕ ಅಣ್ಣಯ್ಯ

ರಾಗಿಗುಡ್ಡ ಆಂಜನೇಯ ದೇವಸ್ಥಾನದ ಐತಿಹಾಸಿಕ ಹಿನ್ನೆಲೆ ತಿಳಿಸಿ?
ಹಿಂದಿನ ಕಾಲದಲ್ಲಿ ಇಲ್ಲಿ ಪಾಳೇಗಾರರು ಆಳುತ್ತಿದ್ದರು. ಹಿಂದಿನ ದಿನಗಳಲ್ಲಿ ರೈತರು ರಾಗಿಯನ್ನು ಗುಡ್ಡ ಮಾಡಿ ಪೂಜಿಸಿ ಒಂದು ಭಾಗ ದೇವರಿಗೆ ಒಂದು ಭಾಗ ದಾಸಯ್ಯನಿಗೆ ಹೀಗೆ ಹಂಚುತ್ತಿದ್ದರು. ಪಾಳೇಗಾರರು ದೊಡ್ಡ ರಾಗಿಗುಡ್ಡೆಯನ್ನು ಮಾಡಿ ಪೂಜೆಗೆ ಸಿದ್ಧರಾದರು. ತಕ್ಷಣ 3 ಜನ ದಾಸಯ್ಯನವರು ಅಲ್ಲಿಗೆ ಬಂದರು. ಪಾಳೇಗಾರನ ಸೊಸೆಗೆ ಆ ಮೂವರು ಬ್ರಹ್ಮ, ವಿಷ್ಣು, ಮಹೇಶ್ವರರಾಗಿ ಕಾಣಿಸಿಕೊಂಡರು. ತಕ್ಷಣ ರಾಗಿಗುಡ್ಡೆಯಿಂದ ರಾಗಿಯನ್ನು ತೆಗೆದುಕೊಂಡು ದಾನ ನೀಡಲು ಹೊರಟಳು, ಪಾಳೇಗಾರನ ಹೆಂಡತಿ ತನ್ನ ಸೊಸೆಯನ್ನು ತಡೆದಳು. ಸೊಸೆ ಆ ಮೂವರು ದೇವರು ಎಂದು ಹೇಳಿದರೂ ಅತ್ತೆಗೆ ಕೇವಲ ದಾಸಯ್ಯರಾಗಿ ಕಾಣಿಸಿಕೊಂಡರು. ಸೊಸೆ ಮತ್ತೆ ರಾಗಿ ಕೊಡಲು ಮುಂದಾದಾಗ ಅತ್ತೆ ಮತ್ತೆ ತಡೆದಳು. ತಕ್ಷಣ ಸಿಟ್ಟಾದ ಸೊಸೆ ದೇವರಿಗಿಲ್ಲದ ರಾಗಿ ಕಲ್ಲಾಗಲಿ ಎಂದು ಶಪಿಸಿದಳು. ಆಗ ಇಡೀ ರಾಗಿ ಗುಡ್ಡೆ ಕಲ್ಲಾಯಿತು. ಅವತ್ತಿನಿಂದ ಇದು ರಾಗಿ ರಾಶಿಗುಡ್ಡ (ರಾಗಿ ಗುಡ್ಡ)ವಾಯಿತು. ದೂರದಿಂದ ನೀವು ನೋಡಿದರೆ ಇದು ರಾಗಿಯ ರೀತಿ ಕಾಣುತ್ತದೆ. ಹಾಗೆ ನೀವು ಕಲ್ಲನ್ನು ಜೋರಾಗಿ ಉಜ್ಜಿದರೆ ರಾಗಿಯ ವಾಸನೆ ಬರುತ್ತದೆ.
ರಾಗಿ ಗುಡ್ಡ ಆಂಜನೇಯ ದೇವಸ್ಥಾನದ ಸ್ಥಾಪನೆ ಮತ್ತೆ ವೈವಿಧ್ಯಮಾನಕ್ಕೆ ಬಂದ ಹಾದಿ ತಿಳಿಸಿ?
1968ರ ಗೀತಾ ಜಯಂತಿಯಂದು ವಿಗ್ರಹ ಪ್ರತಿಷ್ಠಾಪನೆ ಆಯಿತು. 1969 ರ ರಥಸಪ್ತಮಿಯಂದು ಪುನರ್ ಪ್ರತಿಷ್ಠಾಪನೆಯನ್ನು ಶ್ರೀ ಪಾಂಡೇಶ್ವರ ನಾಗಪ್ಪಯ್ಯ ಬಾಯಾರಿಯವರು ಮಾಡಿಸಿದರು. ಆಗ ನಮಗೆ ಆರ್ಥಿಕ ಸಹಾಯ ಮಾಡುವವರು ಯಾರೂ ಇರಲಿಲ್ಲ. ನಾವೆಲ್ಲ ಮನೆಮನೆಗೆ ತರಳಿ ಪೂಜೆ ಮತ್ತು ಪ್ರಸಾದಕ್ಕೆ ಬೇಕಾದ ಪದಾರ್ಥಗಳನ್ನು ಸಂಗ್ರಹಿಸುತ್ತಿದ್ದೆವು. ಇಲ್ಲಿನ ಔಟ್ಚಚ್ಝ
ಛಿಟಟ್ಝಛಿ ಬಹಳ ಸಹಾಯ ಮಾಡಿದರು. ಪ್ರತಿಯೊಬ್ಬರು ತಮ್ಮ ಮನೆಯ ಕೆಲಸದ ರೀತಿ ಮಾಡಿದರು. 1972ರಲ್ಲಿ ಸರ್ಕಾರ 5 1/2 ಎಕರೆ ಜಮೀನನ್ನು
ಟ್ರಸ್ಟ್‌ಗೆ ಬಿಟ್ಟುಕೊಟ್ಟಿತು. ನಾವು ಮೊದಲು ಶತರುದ್ರಾಭಿಷೇಕ ಮಾಡಿಸಿದೆವು. ನಮ್ಮ ಕಾರ್ಯಕರ್ತರು ಮನೆಮನೆಗೆ ತೆರಳಿ ಕೆಲಸ ಮಾಡಲು ಶುರುಮಾಡಿದೆವು. ಸಾಮೂಹಿಕ ಶ್ರೀ ಸತ್ಯನಾರಾಯಣ ಪೂಜೆಯನ್ನು ಏರ್ಪಡಿಸಿದೆವು. ಆಗ ಭಕ್ತರು ದೊಡ್ಡ ದೊಡ್ಡ ಸಂಖ್ಯೆಯಲ್ಲಿ ಬರಲು ಶುರುಮಾಡಿದರು. ತದನಂತರ ಆರ್ಥಿಕವಾಗಿ ಬಲಿಷ್ಠವಾಯಿತು. ಅದರಿಂದ ಹೀಗೆ ಆಧ್ಯಾತ್ಮಿಕ, ಸಾಮಾಜಿಕ ಸೇವೆಯಲ್ಲಿ ತೊಡಗಿಕೊಂಡಿದ್ದೇವೆ.
ಹನುಮ ಜಯಂತಿ ಕಾರ್ಯಕ್ರಮದ ಬಗ್ಗೆ ತಿಳಿಸಿ?
ಹನುಮ ಜಯಂತಿಯನ್ನು ಪ್ರತಿವರ್ಷ ಡಿಸೆಂಬರ್ ತಿಂಗಳಿನಲ್ಲಿ ಮಾಡುತ್ತೇವೆ. 12ರಿಂದ 14 ದಿನಗಳ ಕಾರ್ಯಕ್ರಮ ಇಲ್ಲಿ ಯಾವುದೇ ಜಾತಿ ಬೇಧ, ಮತಗಳ ಬೇಧ ಭಾವವಿಲ್ಲದೆ ಸಮಾಜದ ಎಲ್ಲರೂ ಒಟ್ಟಾಗಿ ಕಾರ್ಯಕ್ರಮ ನಡೆಸುತ್ತೇವೆ. ಕಾರ್ಯಕ್ರಮದ ಎಲ್ಲಾ ದಿನಗಳು ಹೋಮ ಮತ್ತು ಹವನ ನಡೆಯುತ್ತದೆ. ಸಂಜೆ ಹೊತ್ತು ಸಾಂಸ್ಕೃತಿಕ ಕಾರ್ಯಕ್ರಮ, ಅನ್ನಸಂತರ್ಪಣೆ ಇರುತ್ತದೆ. ಹಲವಾರು ಸಮಾಜಮುಖಿ ಸಾಂಸ್ಕೃತಿಕ ಕಾರ್ಯಕ್ರಮಗಳು ಮತ್ತು ಪ್ರವಚನಗಳನ್ನು ಏರ್ಪಡಿಸುತ್ತೇವೆ.
ಶ್ರೀ ರಾಗಿಗುಡ್ಡ ಆಂಜನೇಯ ಶಿಕ್ಷಣ ಸಂಸ್ಥೆಯ ಕಾರ್ಯದ ಬಗ್ಗೆ ತಿಳಿಸಿ?
ಶ್ರೀ ರಾಗಿಗುಡ್ಡದ ದೇವಸ್ಥಾನದ ಆದಾಯ ಸ್ಪಲ್ಪ ಪೂಜೆಗೆ ಆಗಿ ಉಳಿಯಲು ಶುರುವಾಯಿತು. ಸರಿ ಹೀಗೆ ಬಡಮಕ್ಕಳಿಗೆ ಶಿಕ್ಷಣವನ್ನು ಕೊಡುವುದು ಉಚಿತವೆನಿಸಿತು. 1973ರಲ್ಲಿ ಶ್ರೀ ರಾಗಿಗುಡ್ಡ ಆಂಜನೇಯ ವಿದ್ಯಾಕೇಂದ್ರ ಸ್ಥಾಪನೆಯಾಯಿತು. ಮೊದಲು 30 ಮಕ್ಕಳಿಂದ ಎಲ್‌ಕೆಜಿ ಶುರುವಾಯಿತು. ಈಗ 1200 ಮಕ್ಕಳು 10 ನೇ ತರಗತಿವರೆಗೂ ಓದುತ್ತಿದ್ದಾರೆ. ಅವರಿಗೆ ಒಳ್ಳೆಯ ಶಿಕ್ಷಣವನ್ನು ಕೊಡಲಾಗುತ್ತದೆ. ಸಂಸ್ಥೆಯು ದೊಡ್ಡದಾದಂತೆ ಖರ್ಚು ಬೆಳೆಯುತ್ತಾ ಹೋಯಿತು.ಆಗ ನಾವು ‘‘ಶ್ರೀ ಗುರುನರಸಿಂಹ ಕಲ್ಯಾಣ ಮಂಟಪ’’ವನ್ನು ಕಟ್ಟಿಸಿದೆವು ಅದರ ಆದಾಯವನ್ನು ಶಿಕ್ಷಣಕ್ಕೆ ವಿನಿಯೋಗಿಸುತ್ತಿದ್ದೇವೆ. ಕನ್ನಡ ಮತ್ತು ಆಂಗ್ಲ ಮಾಧ್ಯಮಗಳಲ್ಲಿ ಮಕ್ಕಳು ಶಿಕ್ಷಣ ಪಡೆಯುತ್ತಿದ್ದಾರೆ.
‘‘ವಿದ್ಯಾನಿಧಿ’’ ಬಡಮಕ್ಕಳಿಗೆ ಹೇಗೆ ಸಹಾಯವಾಗುತ್ತದೆ?
ನಾವು ಆರ್ಥಿಕವಾಗಿ ಸಬಲರಲ್ಲದ ಮಕ್ಕಳಿಗೆ ಶಿಕ್ಷಣಕ್ಕಾಗಿ ಸ್ವಲ್ಪ ಸೇವೆಯನ್ನು ಮಾಡುತ್ತಿದ್ದೇವೆ. ನಮ್ಮ ಕಾರ್ಯಕರ್ತರು ಮನೆ ಮನೆಗೆ ತೆರಳಿ ಎಸ್‌ಎಸ್‌ಎಲ್‌ಸಿ ಪೂರೈಸಿದ ಬಡ ವಿದ್ಯಾರ್ಥಿಗಳನ್ನು ಗುರುತಿಸುತ್ತಾರೆ. ಅವರಿಗೆ ಐಶಾರಾಮಿ ಮನೆ ಇದೆಯೇ ಅಥವಾ ಗುಡಿಸಲಿನಲ್ಲಿದ್ದಾರೆಯೇ, ಮನೆಯಲ್ಲಿ ಕಾರು ಇದೆಯೇ ಎಲ್ಲವನ್ನೂ ಪರಿಶೀಲಿಸಿ, ನಿಜವಾದ ಬಡವರಿಗೆ ಜಾತಿಬೇಧವಿಲ್ಲದೆ ವಿದ್ಯಾ
ನಿಧಿಯನ್ನು ಕೊಡುತ್ತಿದ್ದೇವೆ. 2014 ರಲ್ಲಿ 100 ಮಕ್ಕಳಿಗೆ 15 ಲಕ್ಷ, 2015ರಲ್ಲಿ 200 ಮಕ್ಕಳಿಗೆ 20 ಲಕ್ಷ ರೂಪಾಯಿ ವಿತರಿಸಲಾಯಿತು. ಈ ವರ್ಷ ಜೂನ್ ತಿಂಗಳಲ್ಲಿ ವಿದ್ಯಾನಿಧಿಯನ್ನು ವಿತರಿಸುತ್ತೇವೆ. ನಮ್ಮ ಉದೇಶ ಬಡಮಕ್ಕಳು ಕೂಡ ವಿದ್ಯಾವಂತರಾಗಬೇಕು ಎನ್ನುವುದು.
ಸಂಜೀವಿನಿ ಉಚಿತ ಆಸ್ಪತ್ರೆಯ ಬಗ್ಗೆ ತಿಳಿಸಿ?
ಶ್ರೀ ರಾಗಿಗುಡ್ಡ ಆಂಜನೇಯ ಸ್ವಾಮಿ ಸುಪ್ರಸನನ್ನಾಗಿ ನಮ್ಮನ್ನು ಆಶೀರ್ವದಿಸಿದ್ದರಿಂದ ಸಂಜೀವಿನಿ ಉಚಿತ ಆಸ್ಪತ್ರೆಗೆ ಅಡಿಪಾಯವಾಯಿತು. 1993-94ರಲ್ಲಿ ಬಡವರಿಗಾಗಿ ಉಚಿತ ಆಸ್ಪತ್ರೆ ಅಸ್ತಿತ್ವಕ್ಕೆ ಬಂತು. ಅಲ್ಲಿ ಇಂಗ್ಲೀಷ್ ಮೀಡಿಯಂ, ಆಯುರ್ವೇದಿಕ್ ಎಲ್ಲಾ ರೀತಿಯ ಉಚಿತ ಸೇವೆ ಲಭ್ಯವಿದೆ. ಹಾಗೆ ಉಚಿತವಾಗಿ ಔಷಧಿಗಳನ್ನು ಕೂಡ ಕೊಡಲಾಗುತ್ತದೆ. ಕಳೆದ 20 ವರ್ಷಗಳಿಂದ ಈ ಸೇವೆ ಮುಂದುವರೆದಿದೆ.
ಶಿವಶಂಕರ ಜೀ ನಿಮಗೂ ಮತ್ತು ಟ್ರಸ್ಟ್‌ಗೂ ಸ್ಫೂರ್ತಿ ಏನು?
ನಮ್ಮ ಸಂಘದ ಶ್ರೀ ಗುರೂಜಿ ಹೇಳುತ್ತಿದ್ದರು. ಱಈಟ್ಞೞಠಿ ಚಿಛಿ ಜ್ಝ್ಝಿಚ್ಟ, ಚಿಛಿ ಊಟ್ಠ್ಞಠಿಜಿಟ್ಞ ಖಠಿಟ್ಞಛಿೞೞಅಂತ. ಇದೆ ನನಗೆ ಸ್ಪೂರ್ತಿ. ಅಂದಿನಿಂದ ಇಂದಿನವರೆಗೂ ನಮ್ಮ ಟ್ರಸ್ಟ್ ಯಾವುದೇ ಪ್ರಚಾರವಿಲ್ಲದೆ ಕೆಲಸ ಮಾಡುತ್ತಿದೆ. ೞೞಮಾನವ ಸೇವೆಯೇ ಮಾಧವ ಸೇವೆ’’ ನಮ್ಮ ಗುರಿ. ಸಮಾಜ ಸ್ವರೂಪಿ ಪರಮಾತ್ಮನ ಕೆಲಸ ಶ್ರೇಷ್ಠವಾದದ್ದು. ದೇವಸ್ಥಾನ ಯಾವಾಗಲೂ ಸಮಾಜಮುಖಿಯಾಗಿರಬೇಕು.
ದೇವಸ್ಥಾನ ಕಟ್ಟುವಾಗ ಬಂದ ಸವಾಲುಗಳೇನು?
ಒಂದು ಒಳ್ಳೆಯ ಕಾರ್ಯಕ್ಕೆ ನೂರಾರು ಅಡ್ಡಿ. ನಮ್ಮ ಟ್ರಸ್ಟ್‌ನವರ ಮೇಲೆ ಕೇಸ್ ಕೂಡಾ ಹಾಕಿದ್ದರು. ನಾವೆಲ್ಲ ಅಂದು ಅಧೀರರಾಗದೆ ಗುರಿ ಮುಟ್ಟುವ ತನಕ ಶ್ರಮಿಸಿದೆವು. ಇಂದು ಇದು ದೊಡ್ಡ ಆಲದ ಮರವಾಗಿ ಬೆಳೆದಿದೆ ಎನ್ನಲು ಸಂತಸವಾಗುತ್ತದೆ. ನಮ್ಮ ಮೇಲೆ ರೌಡಿಗಳನ್ನು ಬಿಟ್ಟು ಹೊಡೆಸುವ ಪ್ರಯತ್ನವೂ ನಡೆದಿತ್ತು. ಆಂಜನೇಯ ನಮ್ಮನ್ನು ಕಾಪಾಡಿದನು.
ನಿಮ್ಮ ಟ್ರಸ್ಟ್ ಬಗ್ಗೆ ತಿಳಿಸಿ?
ನಮ್ಮಲ್ಲಿ ಎರಡು ಟ್ರಸ್ಟ್‌ಗಳಿವೆ. ಒಂದು ಧಾರ್ಮಿಕ ಸಂಸ್ಥೆ ಮತ್ತೊಂದು ಸೇವಾಟ್ರಸ್ಟ್. ಒಂದು ದೇವಸ್ಥಾನದ ಧಾರ್ಮಿಕ ಚಟುವಟಿಕೆ ಕಾರ್ಯಮಾಡಿದರೆ ಇನ್ನೊಂದು ಸಾಮಾಜಿಕ ಕಾರ್ಯಗಳನ್ನು ಮಾಡುತ್ತದೆ. ನಮ್ಮ ಟ್ರಸ್ಟ್ ಸದಸ್ಯರ ಸಂಖ್ಯೆ ಕಡಿಮೆ. ಅವರು ಯಾವ ಪ್ರಚಾರವನ್ನೂ ಬಯಸದೆ ಕಳೆದ 5 ದಶಕಗಳಿಂದ ಕಾರ್ಯ ಮಾಡುತ್ತಿದ್ದಾರೆ.
ಯಾವುದಾದರೊಂದು ಸ್ವಾರಸ್ಯಕರ ಘಟನೆ ತಿಳಿಸಿ?
ನಾವು ದೇವಸ್ಥಾನ ಗರ್ಭಗುಡಿ ಕಟ್ಟುವಾಗ ನಡುರಾತ್ರಿಯಲ್ಲಿ ಒಂದು ದೊಡ್ಡ ಘಟಸರ್ಪ ಬಂದಿದ್ದು ಎಲ್ಲರಿಗೂ ಆಶ್ಚರ್ಯ. ಅದೂ ಯಾರಿಗೂ ತೊಂದರೆ ಮಾಡದೆ ಹಾಗೇ ಸರಿದುಹೋಗಿದ್ದು ಒಂದು ವಿಸ್ಮಯವೇ ಸರಿ.
ಸಾಮಾಜಿಕ ಸೇವೆಯಲ್ಲಿ ದೇವಸ್ಥಾನಗಳ ಪಾತ್ರವೇನು?
ದೇವಸ್ಥಾನಗಳು ಕೇವಲ ಪೂಜೆ ಪುನಸ್ಕಾರಗಳಿಗೆ ಸೀಮಿತವಾಗಬಾರದು. ಸಮಾಜದಲ್ಲಿನ ಏರುಪೇರುಗಳನ್ನು ಸರಿಮಾಡಬೇಕು. ನಮ್ಮ ದೇವಸ್ಥಾನದಲ್ಲಿ ಜಾತಿಬೇಧಗಳಿಲ್ಲದೆ ಭಕ್ತಿಯಿಂದ ಎಲ್ಲರೂ ಕೈಂಕರ್ಯದಲ್ಲಿ ಪಾಲ್ಗೊಳ್ಳುತ್ತಾರೆ. ನಮ್ಮ ಸಮಾಜದ ಕೇಂದ್ರ ದೇವಸ್ಥಾನಗಳು ಎಂಬುದನ್ನು ಮರೆಯಬಾರದು. ಅಲ್ಲಿ ಜನರಿಗೆ ಭಕ್ತಿಯ ಜೊತೆಗೆ ಸಮಾಜದ ಕಾಳಜಿಯನ್ನು ಬೆಳೆಸಬೇಕು. ಬಡವರಲ್ಲಿಯೂ ಮತ್ತು ದೀನದಲಿತರಲ್ಲಿಯೂ ದೇವರನ್ನು ಕಾಣುವ ಮತ್ತು ಸೇವೆ ಮಾಡುವ ಮನೋಭಾವವನ್ನು ಬೆಳೆಸಬೇಕು.

   

Leave a Reply