‘ಮಾಪಿಳ್ಳಾ ದಂಗೆ’-ಬೆಸೆಂಟ್ ಕಂಡಂತೆ (1921)

ಇತಿಹಾಸ - 0 Comment
Issue Date : 30.4.2016

ಒಂದನೇ ಜಾಗತಿಕ ಸಮರದಲ್ಲಿ (1914-18) ಜರ್ಮನಿಯ ಸೋಲಿನೊಂದಿಗೆ ಅದರ ಮಿತ್ರರಾಷ್ಟ್ರಗಳೂ ಸೋಲು ಅನುಭವಿಸಿದವು. ಅದರ ಪರಿಣಾಮವಾಗಿ ಟರ್ಕಿಯ ಸುಲ್ತಾನ ‘ಖಲೀಫ’ ಅಬ್ದುಲ್ ಮಜೀದ್ ಅವನ ಸಿಂಹಾಸನ ಮತ್ತು ಅಧಿಕಾರ ಕಳೆದುಕೊಂಡ. ಖಲೀಫ ಸಮಸ್ತ ಮುಸಲ್ಮಾನರ ಧಾರ್ಮಿಕ ಹಾಗೂ ರಾಜಕೀಯ ಅಧಿಪತಿ. ಟರ್ಕಿಯಲ್ಲಿ ಖಲೀಫನನ್ನು ಪದಚ್ಯುತಿ ಮಾಡಿದುದಕ್ಕೆ ಬ್ರಿಟಿಷರ ವಿರುದ್ಧ ಭಾರತದಲ್ಲಿ ನಡೆದ ಆಂದೋಲನವೇ ‘ಖಿಲಾಫತ್ ಚಳವಳಿ’. ಅದರ ನಾಯಕತ್ವವನ್ನು ಗಾಂಧೀಜಿಯವರೇ ವಹಿಸಿದ್ದರು. ಭಾರತದಲ್ಲಿ ಗಾಂಧೀಜಿಯವರಿಂದಾದ ಅನೇಕ ರಾಜಕೀಯ ಪ್ರಮಾದಗಳಲ್ಲಿ ಖಿಲಾಫತ್ ಚಳವಳಿಯು ಒಂದಾಗಿದೆ. ಆ ಖಿಲಾಫತ್ ಚಳವಳಿಯ ಮುಂದುವರಿದ ಭಾಗವೇ ಮಲಬಾರಿನಲ್ಲಿ ನಡೆದ ‘ಮಾಪಿಳ್ಳಾ ದಂಗೆ’ (ಟಟ್ಝ ್ಕಛಿಚಿಛ್ಝ್ಝಿಜಿಟ್ಞ1921). ಮಲಬಾರ್ ಕರಾವಳಿಯಲ್ಲಿ ಸುಮಾರು 8-9ನೇ ಶತಮಾನದಲ್ಲಿ ನೆಲೆಸಿದ್ದ ಅರಬ್ ವರ್ತಕರ ಸಂತತಿಯವರೇ ‘ಮಾಪಿಳ್ಳೆ’ ಎಂದು ಕರೆಯಲ್ಪಡುವ ಮುಸಲ್ಮಾನ ಜನರು. ಬ್ರಿಟಿಷ್ ಆಳ್ವಿಕೆಯಲ್ಲಿ ಆಗಾಗ ಅವರು ಚಿಕ್ಕ ಚಿಕ್ಕ ದಂಗೆಗಳನ್ನೂ, ಗಲಭೆಗಳನ್ನೂ ನಡೆಸುತ್ತಿದ್ದರು. 1921ರ ಆಗಸ್ಟ್ ತಿಂಗಳಲ್ಲಿ ಅವರು ಅತ್ಯಂತ ಘೋರ ರೂಪದ ದಂಗೆಯೆಬ್ಬಿಸಿದರು. ಅದಕ್ಕೆ ಹಿನ್ನೆಲೆ, ಗಾಂಧೀಜೀ ಪ್ರೇರಿತ ಖಿಲಾಫತ್ ಚಳವಳಿಯಾಗಿತ್ತು. ಆ ಗಲಭೆಗಳಲ್ಲಿ ಸುಮಾರು 1500 ಹಿಂದುಗಳ ಕಗ್ಗೊಲೆಯಾಯಿತು, 20,000 ಬಲವಂತದ ಮತಾಂತರವಾಯಿತು ಹಾಗೂ ಸುಮಾರು ಮೂರು ಕೋಟಿ ರೂಪಾಯಿಗಳ ಆಸ್ತಿ-ಸೊತ್ತುಗಳ ಲೂಟಿಯಾಯಿತು!
ಅನ್ನಿ ಬೆಸೆಂಟ್ (1847-1933) ಭಾರತದ ಸ್ವಾತಂತ್ರ್ಯ ಹೋರಾಟದಲ್ಲಿ ಸಕ್ರಿಯವಾಗಿ ಭಾಗವಹಿಸಿದ ವಿದೇಶಿ ಮಹಿಳೆ. 1917 ರಲ್ಲಿ ಅವರು ಕಾಂಗ್ರೆಸ್ಸಿನ ಕಲ್ಕತ್ತಾ ಅಧಿವೇಶನದ ಅಧ್ಯಕ್ಷೆಯಾಗಿದ್ದರು. 1921 ರಲ್ಲಿ ಮಾಪಿಳ್ಳಾ ದಂಗೆ ನಡೆದ ಮೇಲೆ ಅವರು ಮಲಬಾರ್ ಸಂದರ್ಶಿಸಿದ್ದರು. ಆಮೇಲೆ, ಅದರ ಬಗ್ಗೆ ಕೆಲವು ಲೇಖನಗಳನ್ನು ಬರೆದಿದ್ದರು. 1921ರ ನವಂಬರ್ 29 ಮತ್ತು ದಶಂಬರ 6 ರಲ್ಲಿ ಬರೆಯಲ್ಪಟ್ಟ ಅವರ ಲೇಖನಗಳು ‘ನ್ಯೂ ಇಂಡಿಯಾ’ದಲ್ಲಿ ಪ್ರಕಟವಾಗಿದ್ದವು. ಅವುಗಳ ಸಾರಾಂಶ ಈ ರೀತಿಯಾಗಿವೆ :
ಗಾಂಧೀಜಿಯವರ ಕರೆಯ ಮೇರೆಗೆ ಮಲಬಾರಿನಲ್ಲಿ ನಡೆದ ಖಿಲಾಫತ್ ಚಳವಳಿಯಲ್ಲಾದ ಭಯಾನಕ ಕ್ರೌರ್ಯವನ್ನು (ಜಠಿ ಟ್ಟ್ಟಟ್ಟ) ಗಾಂಧೀಜಿಯವರೇ ನೋಡಬೇಕಿತ್ತು. ಆಗಸ್ಟ್ 1, 1921 ರಿಂದಲೇ ಆ ಗಲಭೆಗಳಿಗೆ ಪೂರ್ವತಯಾರಿಯಾಗಿತ್ತು. ಆಗಸ್ಟ್ 20 ರಂದು ಅಡಗಿಸಲ್ಪಟ್ಟ ಚೂರಿಗಳೆಲ್ಲಾ ಹೊರಬಂದವು. ಖಿಲಾಫತ್ ಧ್ವಜಗಳನ್ನು ಪೊಲೀಸ್ ಠಾಣೆಗಳಲ್ಲಿ ಮತ್ತು ಸರಕಾರೀ ಕಚೇರಿಗಳಲ್ಲಿ ಬಲವಂತವಾಗಿ ಹಾರಿಸಲಾಯಿತು. ಆ ಗೂಂಡಾಗಿರಿಯಲ್ಲಿ ನಡೆಸಲಾದ ಅನಾಹುತಗಳನ್ನು ವಿವರಿಸಲೂ ಅಸಾಧ್ಯ. ಮಾಪಿಳ್ಳೆಗಳ ರಕ್ತದಾಹ ಮತ್ತು ಧರ್ಮದಾಹ ಎಲ್ಲಾ ಮಾನವೀಯ ಮೌಲ್ಯಗಳನ್ನೂ ಮೀರಿದ ರಾಕ್ಷಸೀಯ ಕೃತ್ಯಗಳಾಗಿದ್ದವು! ಕೆಲವು ಪಾರ್ಸೀ ಸ್ತ್ರೀಯರ ಉಡುಪುಗಳನ್ನು ಹರಿದುಹಾಕಿ ತುಂಡು ಬಟ್ಟೆಯಲ್ಲಿ ಅವರನ್ನು ಓಡಿಸಲಾಯಿತು. ಅದೆಷ್ಟೋ ಸ್ತ್ರೀಯರು ತುಂಡುಡಿಗೆಯಲ್ಲಿ ಮನೆ ಬಿಡುವಂತಾಯಿತು. ಅವರಲ್ಲಿ ಕೆಲವರು ನಿರಾಶ್ರಿತ ಶಿಬಿರಗಳಲ್ಲೂ, ಮಾರ್ಗಮಧ್ಯೆಯೂ ಶಿಶುಗಳಿಗೆ ಜನ್ಮ ನೀಡಿದರು. ಅನೇಕ ನಾರಿಯರು ಅವರ ಗಂಡಂದಿರನ್ನು ಕೊಚ್ಚಿ ಕೊಚ್ಚಿ ತುಂಡರಿಸುವುದನ್ನು ಕಣ್ಣಾರೆ ಕಂಡರು. ಅನ್ನಿ ಬೆಸೆಂಟ್ ನಿರಾಶ್ರಿತರ ಶಿಬಿರಕ್ಕೆ ಭೇಟಿ ನೀಡಿದಾಗ ಅಲ್ಲಿಯ ದೃಶ್ಯಕಂಡು ಅತೀ ಕನಿಕರಪಟ್ಟರು. ನಿರಾಶ್ರಿತರ ಹೇಳಿಕೆ ಆ ಭಯಂಕರ ಹತ್ಯಾಕಾಂಡದ ಹೃದಯವಿದ್ರಾವಕ ವಿವರಣೆ ನೀಡುವುದಾಗಿತ್ತು. ಮಾಪಿಳ್ಳೆಗಳ ಖಡ್ಗದ ಹರಿತಕ್ಕೆೆ ಹಿಂದೂಗಳು ಬಲಿಯಾಗುವುದನ್ನು ಬ್ರಿಟಿಷರು ಸ್ವಲ್ಪಮಟ್ಟಿಗೆ ತಡೆದರು. ಹಾಗಾಗಿ, ನಿರಾಶ್ರಿತರ ಶಿಬಿರಗಳ ಮೇಲೆ ಮಾಪಿಳ್ಳೆಗಳಿಗೆ ದಾಳಿ ಮಾಡಲಾಗಲಿಲ್ಲ. ಆ ನಿಟ್ಟಿನಲ್ಲಿ ಬ್ರಿಟಿಷರ ಮಹದುಪಕಾರವನ್ನು ಮರೆಯಲು ಸಾಧ್ಯವಿಲ್ಲ. ಬೆಸೆಂಟ್ ಕಲ್ಲಿಕೋಟೆಯಲ್ಲಿ ಮೂರು ಶಿಬಿರಗಳನ್ನು ಸಂದರ್ಶಿಸಿದರು. ಅಲ್ಲಿ ಹುಲ್ಲಿನ ಛಾವಣಿಯಡಿಯಲ್ಲಿ ಹೆಂಗಸರೂ ಮಕ್ಕಳೂ ಮಲಗಿದರೆ, ಗಂಡಸರು ಹೊರಗಡೆ ಮಲಗುವುದಾಗಿತ್ತು. ಆ ಹಿಂಸಾಚಾರದಲ್ಲಿ ಇಬ್ಬರು ಕೆಳವರ್ಗದ ‘ಪುಲಿಯಾ’ರನ್ನು (ಕ್ಠ್ಝೃಜಿಠ್ಠಚಿಞಛ್ಟಿಜಛಿ ್ಚ್ಝ) ಸೆರೆಹಿಡಿದು ಮಾಪಿಳ್ಳೆಗಳು ಅವರಿಗೆ ‘ಇಸ್ಲಾಂ ಅಥವಾ ಸಾವು’ ಆಯ್ಕೆಯನ್ನಿತ್ತರು. ಆ ಹಿಂದೂ ಅಸ್ಪೃಶ್ಯರು ಹಿಂದೂಧರ್ಮವನ್ನು ಎಷ್ಟು ಮೆಚ್ಚಿಕೊಂಡಿದ್ದರೆಂದರೆ, ಅವರು ಸ್ವಧರ್ಮದಲ್ಲಿಯೇ ಸಾಯಲು ಬಯಸಿದ್ದರು. (‘ಹಿಂದೂಧರ್ಮದಲ್ಲಿಯ ಅಸ್ಪೃಶ್ಯತೆಯಿಂದಾಗಿ ಜನ ಮತಾಂತರವಾಗುತ್ತಾರೆ’ ಎಂಬುದು ಸತ್ಯಕ್ಕೆ ದೂರ ಎಂಬುದನ್ನು ಇಲ್ಲಿ ಕಾಣಬಹುದು). ನಿರ್ದಯರಾದ ಮಾಪಿಳ್ಳೆಗಳು ಕೂಡಲೇ ಅವರನ್ನು ಹತ್ಯೆಗೈದರು. ‘ಅವರು ಬಯಸಿದ ಧರ್ಮದಲ್ಲೇ ಅವರಿಗೆ ಮರುಜನ್ಮವಾಗಲೀ’ ಬೆಸೆಂಟ್ ಬೇಡಿಕೊಂಡರು. (ೞಘೆಛಿಡಿ ಐ್ಞಜಿೞ ್ಫ 29 ಘೆಟ 1921)
ಮಾಪಿಳ್ಳೆ ದಂಗೆಯಲ್ಲಿ ನಿರ್ಗತಿಕರಾದವರು ಕಲ್ಲಿಕೋಟೆ ಮತ್ತು ಇರ್ನಾಡ್ ತಾಲೂಕಿನಿಂದ ದಿನನಿತ್ಯ ನಿರಾಶ್ರಿತರ ಶಿಬಿರಕ್ಕೆ ಬರುತ್ತಿದ್ದರು. ಅಲ್ಲಿಯ ತಂಗಳ್ (ಇಛಿಞಚ್ಟಿಛ್ಟಿಜಿ ಚ್ಞಜಚ್ಝ) ಹಾಗೂ ಅವರ ಬಂಟರಿಂದ ಭೀಕರ ಹತ್ಯಾಕಾಂಡ ಅನಿರ್ಬಂಧಿತವಾಗಿ ನಡೆಯುತ್ತಿತ್ತು. ಕಲ್ಲಿಕೋಟೆಯ ಸಮೀಪ ಒಂದು ನಡು ಮಧ್ಯಾಹ್ನ ಮತಾಂತರಕ್ಕೆ ಒಲ್ಲದ 25 ಜನರನ್ನು ಕೊಚ್ಚಿ ಬಾವಿಯೊಂದಕ್ಕೆ ಹಾಕಲಾಯಿತು. ಅದೃಷ್ಟವಶಾತ್ ಬದುಕಿದ ಅವರಲ್ಲೊಬ್ಬ ಬಾವಿಯಿಂದ ಮೇಲೆ ಬಂದು ತಪ್ಪಿಸಿಕೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾಗ ಈ ವಿಷಯ ಅರುಹಿದ. ಕಲ್ಲಿಕೋಟೆಯಿಂದ ಸುಮಾರು 14 ಮೈಲು ದೂರದ ಮನ್ನೂರ್‌ನಲ್ಲೂ ಬಲವಂತದ ಮತಾಂತರ ನಡೆಯುತ್ತಿತ್ತು. ಮಾಪಿಳ್ಳೆಗಳು ಹಿಂದೂ ಸ್ತ್ರೀಯರನ್ನು ಬಲವಂತವಾಗಿ ವಿವಾಹವಾಗುತ್ತಿದ್ದರು! ಸ್ತ್ರೀಯರನ್ನು ಎಲ್ಲಾ ವಿಧದ ಬಲವಂತಕ್ಕೆ ಒಳಪಡಿಸುತ್ತಿದ್ದರು. ಪ್ರತಿದಿನ ರೈಲಿನಲ್ಲಿ ಸಾವಿರಾರು ನಿರಾಶ್ರಿತರು ಬರುವುದು ಸಾಮಾನ್ಯವಾಗಿತ್ತು. ಅವರ ಹೇಳಿಕೆಯಂತೆ ಅಲ್ಲಿ 50 ಜನರನ್ನು ಕೊಲ್ಲಲಾಗಿ, ಅನೇಕರನ್ನು ಮತಾಂತರಿಸಿ, ಅನೇಕ ಮನೆಗಳಿಗೆ ಕೊಳ್ಳಿಯಿಡಲಾಯಿತು. ಓರ್ವ ಗರ್ಭಿಣಿ ಸ್ತ್ರೀಯ ಹೊಟ್ಟೆಯನ್ನು ಮಾಪಿಳ್ಳೆಗಳು ಸೀಳಿದಾಗ, ಏಳು ತಿಂಗಳ ಶಿಶು ಹೊರಬಂದು ತಾಯಿಯೊಡನೆಯೇ ಅಸುನೀಗಿತು! ಆ ಬೀಭತ್ಸ ದೃಶ್ಯದಂತೆಯೇ, ಇನ್ನೊಂದು ಶಿಶು ತಾಯಿಯ ಹಾಲು ಕುಡಿಯುತ್ತಿದ್ದಂತೆಯೇ ಅದನ್ನು ಎಳೆದು ಕತ್ತಿಯಿಂದ ತುಂಡರಿಸಲಾಯಿತು! ಮಾಪಿಳ್ಳೆಗಳು ಮಾನವರೋ, ಅಥವಾ ದಾನವರೋ, ಎಂದು ಕೇಳುತ್ತಾರೆ ಅನ್ನಿ ಬೆಸೆಂಟ್…… ಬಲವಂತದ ಮತಾಂತರದಿಂದ ತಪ್ಪಿಸಿಕೊಂಡು ಮರಹತ್ತಿ ಅಡಗಿದವನೊಬ್ಬನ ಹೇಳಿಕೆಯಂತೆ ಸುಮಾರು 10-12 ಜನರನ್ನು ತಲೆಬೋಳಿಸಿ, ಮುಸಲ್ಮಾನನಾಗುವ ಶಾರೀರಿಕ ವಿಧಿ ನೆರವೇರಿಸಿ, ಕುರಾನ್ ಪಠಣ ಮಾಡಿಸಲಾಯಿತು. ಕೊಟ್ಟೆಕಲ್‌ನಿಂದ ಬಂದ ಒಂದು ವರದಿಯಂತೆ 11 ಜನರನ್ನು ಒಮ್ಮೆಗೇ ಹತ್ಯೆಮಾಡಲಾಯಿತು. ಮೇಲತ್ತೂರು ಸಮೀಪದ ಕಲ್ಸಂಕದ ಅಡಿಯಲ್ಲಿ 15 ಹಿಂದೂ ಶವಗಳನ್ನು ಬಿಸಾಡಿದುದು ಕಂಡುಬಂತು. ಆ ಕ್ರೌರ್ಯಗಳ ಹೊರತಾದ ಹೀನ ಹೇಯ ಕೃತ್ಯಗಳನ್ನು ಯೋಚಿಸಲೂ ಅಸಾಧ್ಯ! ಓರ್ವ ಗೌರವಾನ್ವಿತ ನಾಯರ್ ಮಹಿಳೆಯನ್ನು ವಿವಸ್ತ್ರಗೊಳಿಸಿ, ಕೈಕಟ್ಟಲ್ಪಟ್ಟ ಅವಳ ಗಂಡ ಮತ್ತು ಸಹೋದರರ ಕಣ್ಮುಂದೆಯೇ ಅವಳ ಮೇಲೆ ಅತ್ಯಾಚಾರವೆಸಗಲಾಯಿತು. ಆ ಮರ್ಯಾದಸ್ಥ ಪುರುಷರು ಅದನ್ನು ನೋಡಲಾಗದೆ ನಿಸ್ಸಹಾಯಕರಾಗಿ ಕಣ್ಣು ಮುಚ್ಚಿಕೊಂಡಾಗ ಚೂರಿ ಪ್ರಯೋಗ ಮಾಡಿ ಬಲವಂತವಾಗಿ ಅವರ ಕಣ್ಣು ತೆರೆಸಲಾಯಿತು! ಆ ವಿವರ ನೀಡಿದವ, ಪುಣ್ಯವಶಾತ್ ಅವರಿಂದ ತಪ್ಪಿಸಿಕೊಂಡು ಅತೀ ಪ್ರಯಾಸದಿಂದ ಶಿಬಿರ ತಲುಪಿದ್ದ. ಇದಕ್ಕಿಂತಲೂ ಭಯಾನಕವಾದ ಮತ್ತು ಅಸಹ್ಯವಾದ ಎಷ್ಟೋ ವಿಷಯಗಳು ವರದಿಯಾಗದೆ ದಾಖಲಾತಿಗೆ ಸಿಗಲಿಲ್ಲ. (ೞಘೆಛಿಡಿ ಐ್ಞಜಿೞ ್ಫ ಈಛ್ಚಿ. 6, 1921)
ಈ ರೀತಿಯಾಗಿ ಅನ್ನಿ ಬೆಸೆಂಟ್, ಮಾಪಿಳ್ಳಾ ದಂಗೆಯ ಬಗ್ಗೆ ತಮ್ಮ ತೀವ್ರ ಕಳವಳವನ್ನೂ, ನೊಂದ ಹಿಂದೂಗಳಿಗೆ ಸಹಾನುಭೂತಿಯನ್ನೂ ವ್ಯಕ್ತಪಡಿಸಿದ್ದರು. ಆ ವಿದೇಶೀ ಮಹಿಳೆ, ದೇಶೀಯ ಮಹಾತ್ಮರಿಗಿಂತಲೂ ಹೆಚ್ಚಾಗಿ, ಹಿಂದೂಗಳ ಬಗ್ಗೆ ಕಾಳಜಿ ವಹಿಸಿದ್ದುದು ಮತ್ತು ‘ಅಹಿಂಸಾ’ ಶಿರೋನಾಮೆಯ ಬರ್ಬರ ಹಿಂಸಾಚಾರವನ್ನು ಖಂಡಿಸಿದುದು ಸರ್ವ ಸಹಿಷ್ಣುತೆಯ ಹಿಂದುತ್ವಕ್ಕೆ ಸಂದ ಜಯವಾಗಿತ್ತು. ಎಲ್ಲಕ್ಕೂ ಹೆಚ್ಚಾಗಿ, ‘ಖಿಲಾಫತ್ ಚಳುವಳಿ’ಯನ್ನು ಹುಟ್ಟುಹಾಕಿದ ಗಾಂಧೀಜಿಯವರು ಮಾಪಿಳ್ಳಾ ದಂಗೆಯ ಭೀಕರತೆಗೆ ಸಿಲುಕಿ ಹಿಂದೂಗಳು ಮರಣಯಾತನೆ ಅನುಭವಿಸಿದಾಗ ನಿರ್ಲಿಪ್ತವಾದುದು ಬಹಳ ಆಶ್ಚರ್ಯಕರವಾಗಿತ್ತು! ‘ಮಾಪಿಳ್ಳೆಗಳು ವೀರರು, ಧರ್ಮತತ್ಪರರು ಮತ್ತು ಅವರು ತಾವು ನಂಬಿದ ಧರ್ಮಕ್ಕಾಗಿ ಧಾರ್ಮಿಕ ಹೋರಾಟ ಮಾಡಿದರು’ ಎಂಬ ‘ಮಹಾತ್ಮ’ ಶೋಭೆಯ ಗಾಂಧೀಜಿಯವರ ಕೇವಲ ಮುಸಲ್ಮಾನರ ಓಲೈಕೆಯ ‘ನುಡಿಮುತ್ತು’ಗಳಿಗೆ (ಆ.್ಕ.ಅಞಚಿಛಿಚ್ಟ ೞಟ್ಠಜಠಿ ಟ್ಞ ಜಿಠಿಚ್ಞೞ) ಏನು ಹೇಳಲಿ? ‘ಗಾಂಧೀ’ ಎಂಬ ಮಾಂತ್ರಿಕ ಹೆಸರಲ್ಲಿ (ಜಜ್ಚಿ ್ಞಞಛಿ) ಈ ಒಲವು (ಠ್ಟಿಛ್ಞಿ\u3227?್ಡಿಟ್ಞಠಿಡಿ2) ಇಂದಿಗೂ ಮುಂದುವರಿಯುವುದೇ?

   

Leave a Reply