ಮಾಯಾ – ಇಂಕಾ

ಜಗದ್ಗುರು ಭಾರತ ; ಲೇಖನಗಳು - 0 Comment
Issue Date :

 •  ಕ್ರಿಸ್ತಪೂರ್ವ ಮೂರು ಸಹಸ್ರಮಾನಗಳಷ್ಟು ಪ್ರಾಚೀನ ಇತಿಹಾಸ ಹೊಂದಿರುವ ಮಾಯನ್ನರ ಕಾಲಮಾನ ಶುರುವಾಗುವುದು ಭಾರತೀಯರ ಪಂಚಾಂಗದಂತೆ ಕಲಿಯುಗದ ಆರಂಭಿಕ ಅವಧಿಯಲ್ಲಿ.
 •  ಕಲಿಯುಗದ ಆರಂಭವೆಂದರೆ ದ್ವಾಪರ ಯುಗದ ಅಂತ್ಯಕಾಲ. ಈ ಅವಧಿಯಲ್ಲಿ ಅರ್ಜುನನು ನಡೆಸಿದ ದಂಡಯಾತ್ರೆಯಲ್ಲಿ ಆತ ಪಾತಾಳದ ನಾಗಕನ್ಯೆಯನ್ನು ಮದುವೆಯಾಗುವ ಉಲ್ಲೇಖವಿದೆ. ಈ ಪಾತಾಳವೇ ಇಂದಿನ ಮೆಕ್ಸಿಕೋ.
 •  ಪಾತಾಳ ನಾಗಗಳ ಲೋಕ. ಮೆಕ್ಸಿಕನ್ನರ ಪೂರ್ವಜರು ನಾಗಾ ಜನಾಂಗದವರೇ. ಇವರು ಭಾರತದ ಈಶಾನ್ಯ ಭಾಗದಲ್ಲಿ ನೆಲೆಸಿದ್ದ ತಮ್ಮ ಜನಾಂಗದವರೊಡನೆ ಸಂಬಂಧ ಹೊಂದಿದ್ದರು.
 •  ಮಾಯಾ ಸಂಸ್ಕೃತಿಯ ಅಧಿನಾಯಕ ಮಯಾಸುರ. ಈತ ಅಸುರರ ಮುಖ್ಯ ವಾಸ್ತುತಜ್ಞ, ಅರ್ಜುನನ ಗೆಳೆಯ ಕೂಡಾ.
 •  ಯಾವ ಲೋಕದಲ್ಲಿ ನಮಗೆ ಬೆಳಕಿದ್ದಾಗ ಕತ್ತಲು ಕವಿದಿರುತ್ತದೆಯೋ ಅದು ಅಸುರ ಲೋಕ ಎನ್ನುತ್ತವೆ ಪುರಾಣಗಳು. ಅದರಂತೆ ಭಾರತದಲ್ಲಿ ಬೆಳಕಿದ್ದಾಗ ಮೆಕ್ಸಿಕೋದಲ್ಲಿ ನಡುರಾತ್ರಿಯಾಗಿರುತ್ತದೆ.
 •  ಅರ್ಜುನನ ಸಿಬ್ಬಂದಿ ಮತ್ತು ಸಂತತಿಯ ಪ್ರಭಾವದಿಂದ ಮಾಯಾ ಸಂಸ್ಕೃತಿಯು ಹಿಂದೂ ರಿವಾಜುಗಳನ್ನು ಮೈಗೂಡಿಸಿಕೊಂಡು ಬೆಳೆಯಿತು.
 •  ಮಾಚುಪಿಚ್ಚು ಉತ್ಖನನದಲ್ಲಿ ದೊರೆತ ಹಲವಾರು ಸಾಮಗ್ರಿಗಳು ಅಲ್ಲಿ ನೆಲೆಸಿದ್ದವರು ಹಿಂದೂಗಳೇ ಎನ್ನುವುದನ್ನು ಖಚಿತಪಡಿಸುವಷ್ಟು ಬಲವತ್ತರವಾಗಿವೆ.
 •  ಸಮುದ್ರ ಮಥನದ ಚಿತ್ರಿಕೆ ಸ್ವಸ್ತಿಕ, ಪದ್ಮ, ನಾಗಾಗಳ ಪದ್ಧತಿಯ ಗಣಿತ ಸಂಜ್ಞೆಗಳು, ಆಭರಣಗಳು, ವಾಸ್ತುಶಿಲ್ಪ – ಇವೆಲ್ಲವೂ ಶುದ್ಧ ಭಾರತೀಯವೇ ಆಗಿವೆ.
 •  ಮಾಯನ್ನರ ಜ್ಯೋತಿಷ ಶಾಸ್ತ್ರವು ಭಾರತೀಯ ಜ್ಯೋತಿಷ ಶಾಸ್ತ್ರದ ಸ್ಪಷ್ಟ ಪ್ರಭಾವ ಹೊಂದಿದ್ದು, ನಮ್ಮದೇ ಪಂಚಾಂಗ ಪದ್ಧತಿಯನ್ನು ಅನುಸರಿಸಿದಂತಿದೆ.
 •  ಅಂದಿನ ಕಾಲದಲ್ಲಿ, ಕೊಲಂಬಿಯನ್ ಅಮೆರಿಕಾ ಪ್ರಾಂತ್ಯದಲ್ಲಿಯೇ ಲಿಖಿತ ಭಾಷಾಭಿವೃದ್ಧಿ ಹೊಂದಿದ ಏಕೈಕ ಸಾಮ್ರಾಜ್ಯ ಇದಾಗಿತ್ತು.
 •  ಭಾರತೀಯ ಸಂಸ್ಕೃತಿಯ ಪ್ರಭಾವ ಹರಡಿದಲ್ಲೆಲ್ಲ ಆಯಾ ಸ್ಥಳೀಯ ಭಾಷೆಗಳು ತಮ್ಮದೇ ಆದೊಂದು ಲಿಪಿ ಅಭಿವೃದ್ಧಿಗೆ ಮುಂದಾಗುತ್ತಿದ್ದುದನ್ನು ಇತಿಹಾಸದುದ್ದಕ್ಕೂ ಗಮನಿಸಬಹುದು.
 •  ಆಭರಣ ಪ್ರಿಯರಾಗಿದ್ದ ಮಾಯನ್ನರು ಸೂಕ್ಷ್ಮ ಅಭಿರುಚಿ ಹೊಂದಿದ್ದರು ಮತ್ತು ಸ್ವಭಾವತಃ ಕುಶಲಕರ್ಮಿಗಳಾಗಿದ್ದರು. ಈ ಜನಾಂಗವು ಅಸುರ ಶಿಲ್ಪಿ ಮಯಾಸುರನ ವಂಶಜರೆನ್ನುವ ಮಾತಿಗೆ ಪುಷ್ಟಿ ನೀಡುತ್ತದೆ.
 •  ಖಗೋಳ ವಿಜ್ಞಾನದಲ್ಲಿ ಅತ್ಯಾಸಕ್ತರಾಗಿದ್ದ ಮಾಯನ್ನರು ದಾಖಲಿಸಿಟ್ಟ ಆಕಾಶಕಾಯಗಳ ವಿವರ ಇಂದಿನ ವೈಜ್ಞಾನಿಕ ಅನ್ವೇಷಣೆಗಳನ್ನು ನಿಖರವಾಗಿ ಹೊಂದುತ್ತವೆ.
 •  ಅಸುರ ಗುರು ಶುಕ್ರಾಚಾರ್ಯ. ಖಗೋಳ ಶಾಸ್ತ್ರಪ್ರಿಯರಾಗಿದ್ದ ಮಾಯನ್ನರಿಗೆ ಶುಕ್ರವೇ ಸೂರ್ಯನಿಗಿಂತ ಪ್ರಮುಖ ಆಕಾಶ ಕಾಯ. ಅವರ ಶುಕ್ರಪ್ರೀತಿಗೆ ಅಸುರ ಕುಲದವರೆಂಬುದೇ ಮುಖ್ಯ ಕಾರಣವಾಗಿತೆನ್ನುವುದು ಖಚಿತ ಊಹೆ.
 •  ಈ ತ್ರಿವಳಿ ಸಂಸ್ಕೃತಿಗಳು ಭಾರತೀಯರಂತೆ ಅಗ್ನಿ ಪೂಜಕರಾಗಿದ್ದರು ಮತ್ತು ಪ್ರಕೃತಿ ಆರಾಧಕರಾಗಿದ್ದರು.
 •  ಭೂಮಿ, ಆಕಾಶ ಹಾಗೂ ಪಾತಾಳಗಳೆಂಬ ಮೂರು ಲೋಕಗಳಿವೆ ಎನ್ನುವ ಅರಿವು ಮಾಯನ್ನರಿಗಿತ್ತು. ಪಾತಾಳದಲ್ಲಿ ಮರಣ ದೇವತೆ ಮತ್ತವನ ಪರಿವಾರವೂ ಸ್ವರ್ಗದಲ್ಲಿ ಪುರಾತನರು ಮತ್ತು ಪಿತೃ ದೇವತೆಗಳೂ ವಾಸಿಸುವರೆಂಬ ನಂಬಿಕೆ ಅವರದಾಗಿತ್ತು.
 •  ವೈದಿಕ ಪರಿಕಲ್ಪನೆಯಂತೆಯೇ ಮಾಯನ್ನರ ದೇವತೆಗಳು ಸಾಂಕೇತಿಕವಾಗಿದ್ದು, ಪ್ರತಿಯೊಂದು ಅಂಕಿ ಅಥವಾ ಅಕ್ಷರವೂ ಒಂದು ದೇವತೆಯ ಪ್ರತಿನಿಧಿ ಎಂದು ಪರಿಗಣಿಸುತ್ತಿದ್ದರು.
 •  ಕರ್ಮಗಳ ಪ್ರಭಾವವು ವರ್ತಮಾನದ ಮೇಲೂ ವರ್ತಮಾನದ ಸ್ಪಂದನೆಯು ಭವಿಷ್ಯವನ್ನೂ ನಿರ್ಧರಿಸುತ್ತವೆ ಎನ್ನುವ ಕರ್ಮ ಸಿದ್ಧಾಂತದಲ್ಲಿ ಮಾಯನ್ನರಿಗೆ ನಂಬಿಕೆ ಇತ್ತು.
 •  ಇಂಕನ್ನರು ಸೂರ್ಯನನ್ನು ಇನ್ತಿ ಎಂಬ ಹೆಸರಿನಿಂದ ಪೂಜಿಸುತ್ತಿದ್ದರು. ತಮ್ಮ ದೊರೆಯನ್ನು ಅವರು ಸೂರ್ಯಪುತ್ರ ಎಂದೇ ಪರಿಗಣಿಸುತ್ತಿದ್ದರು.
 •  ತ್ರೇತಾ ಯುಗದ ಅಂತ್ಯದಲ್ಲಿ ಸೂರ್ಯ ವಂಶದ ಭರತ – ಶತ್ರುಘ್ನರ ಮಕ್ಕಳು ಪಶ್ಚಿಮ ದಿಕ್ಕಿನಲ್ಲಿ ದೂರಾತಿದೂರದ ವರೆಗೂ ಸಾಮ್ರಾಜ್ಯ ವಿಸ್ತರಣೆ ಮಾಡಿದ್ದ ಅಂಶವನ್ನಿಲ್ಲಿ ನೆನೆಯಬಹುದು.
 •  ಇಂಕನ್ನರ ಪ್ರಮುಖ ದೇವತೆ ವಿರಚಷ ಅಪ್ರತಿಮ ಕುಶಲಗಾರ. ಭಾರತೀಯ ಪುರಾಣಗಳ ಪ್ರಹ್ಲಾದ ಚಕ್ರವರ್ತಿಯ ಮಗ ವಿರೋಚನನು ಅಸುರ ಲೋಕವನ್ನು ಆಳುತ್ತಿದ್ದು, ಮೆಕ್ಸಿಕನ್ ಪ್ರಾಂತ್ಯವನ್ನು ನಮ್ಮ ಪ್ರಾಚೀನ ಸಾಹಿತ್ಯ ಅಸುರಲೋಕವೆಂದು ಕರೆದಿರುವುದಕ್ಕೆ ಸಮೀಕರಿಸಬಹುದು.
 •  ಅಜ್‌ಟೆಕ್ ಜನರ ಶಿಲ್ಪಕಲೆ ಹಾಗೂ ವಾಸ್ತು ಶೈಲಿಗಳು ಅವರ ಸೂಕ್ಷ್ಮಜ್ಞತೆ ಎತ್ತಿ ತೋರಿಸುತ್ತವೆ. ಭಾರತೀಯ ಭಿತ್ತಿ ಉಬ್ಬು ಚಿತ್ರಗಳಂತೆಯೇ ವಿವಿಧ ಕಥನಗಳನ್ನು ಸಾರುವ ಚಿತ್ರಗಳನ್ನಿವರು ಕೆತ್ತಿದ್ದಾರೆ.
 •  ಸೂರ್ಯ ಹಾಗೂ ಗರುಡ ಈ ಜನಾಂಗದವರ ಪ್ರಮುಖ ದೇವತೆಗಳಾಗಿದ್ದರು. ಗರುಡನನ್ನು ಅವರು ವೀರ ದೇವತೆಯೆಂದು ಪರಿಗಣಿಸುತ್ತಿದ್ದರು.
 •  ಅಜ್‌ಟೆಕ್ ಜನರಿಗೆ ಆತ್ಮದ ಪರಿಕಲ್ಪನೆ ಇಲ್ಲದಿದ್ದರೂ ದೇಹಕ್ಕಿಂತ ಮುಖ್ಯವಾದ ಅಂಶವೊಂದಿದೆ ಎಂಬುದನ್ನು ತಿಳಿದಿದ್ದರು. ಅಜ್‌ಟೆಕ್ ಸಾಹಿತ್ಯದಲ್ಲಿ ಇದಕ್ಕೆ ಪುರಾವೆಗಳನ್ನು ನೋಡಬಹುದು.

 

   

Leave a Reply