ಯಶಸ್ಸಿಗೆ ರೂವಾರಿ ದಸರೆಯ ಶಿಸ್ತಿನ ತಯಾರಿ

ಕರ್ನಾಟಕ - 0 Comment
Issue Date : 19.09.2014

ಸೆಪ್ಟಂಬರ್ ಸಮಯ ಬಂತೆಂದರೆ ಸಾಕು ನಾಡಿನ ಜನತೆಗೆ ಅಪಾರವಾದ ಸಂತಸ ಉಂಟಾಗುತ್ತದೆ. ಮಕ್ಕಳಿಂದ ಹಿಡಿದು ಹಿರಿಯರವರೆಗೆ ಎಲ್ಲರಿಗೂ ಕುತೂಹಲ ಹೆಚ್ಚಾಗ ತೊಡಗುತ್ತದೆ. ಚಳಿಗಾಲದ ರಜೆಯ ಮೋಜು ಮಕ್ಕಳಿಗೆ ಒಂದೆಡೆಯಾದರೆ, ಶ್ರೀಮಂತಮಯ ಹಬ್ಬಗಳ ಥಳುಕು ಬಳುಕು ಇನ್ನೊಂದೆಡೆ ವಯಸ್ಕರ ಮನದಲ್ಲಿ ಚಿಗುರತೊಡಗುತ್ತವೆ.

ಹೌದು ದಸರೆಯ ಹಬ್ಬದ ಮಹತ್ವವೆ ಹಾಗೆ. ನಮ್ಮ ರಾಜ್ಯದ “ನಾಡ ಹಬ್ಬ” ವಾದ ದಸರಾ ಸಮೀಪಿಸಿದರೆ ಎಲ್ಲರ ಕಣ್ಣು ಬೀಳುವುದು ನಮ್ಮ ನಾಡಿನ ಸಾಂಸ್ಕೃತಿಕ ರಾಜಧಾನಿ ಎಂಬ ಹೆಗ್ಗಳಿಕೆ ಹೊಂದಿರುವ ಮೈಸೂರಿನ ಮೇಲೆ. ಮೈಸೂರು ದಸರಾ ಸಿಕ್ಕಾಪಟ್ಟೆ ಅಬ್ಬರ ಎಂದು ಹೇಳಿದರೆ ತಪ್ಪಾಗಲಿಕ್ಕಿಲ್ಲ. ಪ್ರಪಂಚದಲ್ಲೆ ಮೈಸೂರು ದಸರಾ ಪ್ರಖ್ಯಾತಿಯನ್ನು ಗಳಿಸಿದೆ.

ಮೈಸೂರು ದಸರಾ ನೋಡಲು ಬಲು ಚೆಂದ ಅಂತ ಎಲ್ಲರಿಗೂ ಗೊತ್ತು. ಜಂಬು ಸವಾರಿಯಿಂದ ಹಿಡಿದು, ವಿವಿಧ ಕಲೆಗಳು, ಸಾಹಸಮಯ ಕ್ರೀಡೆಗಳವರೆಗೂ ಹಲವಾರು ಚಟುವಟಿಕೆಗಳು ಒಂದೊಂದಾಗಿ ಅನಾವರಣಗೊಳ್ಳುತ್ತವೆ ಹಾಗು ನೆರೆದವರ ಮನ ತಣಿಸುತ್ತವೆ.

ಆದರೆ ಮೈಸೂರು ದಸರಾ ಹಬ್ಬವು ಯಾವೆಲ್ಲ ತಯಾರಿಗಳೊಂದಿಗೆ ಸಜ್ಜಾಗುತ್ತದೆ, ಏನೆಲ್ಲ ಸಿದ್ಧತೆಗಳನ್ನು ಎಷ್ಟು ದಿನಗಳ ಮುಂಚೆಯೆ ಪ್ರಾಂಭಿಸಲಾಗುತ್ತದೆ, ಹಬ್ಬದ ಅವಿಭಾಜ್ಯ ಹಾಗೂ ಮಹತ್ತರ ಅಂಗವಾದ ಆನೆಗಳ ತರಬೇತಿ ಕಾರ್ಯಕ್ರಮ, ಈ ಸಕಲ ಸಿದ್ಧತೆಗಳನ್ನು ಕಣ್ಣಾರೆ ನೋಡುವುದು ಕೂಡ ಕಣ್ಣಿಗೆ ಹಬ್ಬ ಉಂಟುಮಾಡುತ್ತದೆ.

   

Leave a Reply