ಯುವ ಭಾರತ್ ನಿರ್ಮಾಣ್ ಅಭಿಯಾನ

ಮೈಸೂರು - 0 Comment
Issue Date : 05.11.2013

ಸದೃಢ, ಸ್ವಾಭಿಮಾನಿ ಹಾಗೂ ಸಶಕ್ತ ಭಾರತ ನಿರ್ಮಾಣಕ್ಕೆ ಬಿಜೆಪಿ ಯುವ ಭಾರತ್ ಆಶ್ರಯದಲ್ಲಿ ನವೆಂಬರ್ 6 ರಿಂದ 8 ರವರೆಗೆ ಮೂರು ದಿನಗಳ ಯುವ ಭಾರತ್ ನಿರ್ಮಾಣ್ ಅಭಿಯಾನ್  ಮೈಸೂರಿನಲ್ಲಿ  ನಡೆಯಲಿದೆ ಎಂದು ಮಾಜಿ ಸಚಿವ ಎಸ್.ಎ. ರಾಮದಾಸ್ ಸುದ್ದಿಗೋಷ್ಟಿಯಲ್ಲಿ ತಿಳಿಸಿದರು.

ಪ್ರತಿ ಗ್ರಾಮದಲ್ಲಿ ಯುವಕರನ್ನು ಸಂಘಟಿಸಿ ಧ್ವಜ ನೀಡಿ ಬೆಂಗಳೂರಿನಲ್ಲಿ ನ.17 ರಂದು ನಡೆಯಲಿರುವ ಭಾರತ ಗೆಲ್ಲಿಸಿ ಅಭಿಯಾನಕ್ಕೆ ಸಹಯೋಗ ನೀಡುವಂತೆ ಪ್ರೇರೇಪಿಸಲಾಗುವುದು.  ಈ ವೇಳೆ ಆರೋಗ್ಯ ಭಾರತಕ್ಕಾಗಿ ಒಂದು ರಾಷ್ಟ್ರೀಯ ಆರೋಗ್ಯ ನೀತಿ ರೂಪಿಸುವುದು ಮತ್ತು ರಾಷ್ಟ್ರೀಯ ಆರೋಗ್ಯ ಭದ್ರತಾ ಕಾಯ್ದೆಗಾಗಿ ಗ್ರಾಮಸ್ಥರಿಂದ ನಿರ್ಣಯ ಮಾಡಿ ಅದನ್ನು ಗುಜರಾತ್‍ನ ಮುಖ್ಯಮಂತ್ರಿಗಳಿಗೆ, ಪಕ್ಷದ ಕಚೇರಿಗಳಿಗೆ  ಆನ್ ಲೈನ್ ಮೂಲಕ ಕಳುಹಿಸಲಾಗುವುದು.  ಭಾರತ ಗೆಲ್ಲಿಸಿ ಅಭಿಯಾನದ ನೆನಪಿಗಾಗಿ ಪ್ರತಿ ಗ್ರಾಮಪಂಚಾಯಿತಿಯಲ್ಲಿ ಒಂದೊಂದು ಗಿಡ ನೆಡುವ ಮೂಲಕ ಅಭಿಯಾನವನ್ನು ಸ್ಮರಣೀಯ ಆಗಿಸಲಾಗುವುದು ಎಂದು  ಮಾಜಿ ಸಚಿವ ಎಸ್.ಎ. ರಾಮದಾಸ್ ತಿಳಿಸಿದರು.

   

Leave a Reply