ರಕ್ತದ ಗುಂಪು ನೋಡಿ ಆಹಾರ ಸೇವಿಸಿ!

ಆರೋಗ್ಯ ; ಲೇಖನಗಳು - 0 Comment
Issue Date :

ತಮ್ಮ ದೇಹದ ಲಕ್ಷಣವನ್ನು ಅರಿತು ಆಹಾರ ಸೇವಿಸುವ ಬಗ್ಗೆ ಕೇಳಿದ್ದೇವೆ, ತಮ್ಮ ತೂಕ, ದೇಹಸ್ಥಿತಿಗೆ ಅನುಗುಣವಾಗಿ ಆಹಾರ ಸೇವಿಸುವವರ ಬಗ್ಗೆಯೂ ಕೇಳಿದ್ದೇವೆ. ಆದರೆ ತಮ್ಮ ರಕ್ತದ ಗುಂಪಿಗೆ ಅನುಗುಣವಾಗಿ ಆಹಾರ ಸೇವಿಸುವವರ ಬಗ್ಗೆ ಗೊತ್ತಾ?
ದೆಹಲಿಯ ವೈದ್ಯರ ತಂಡವೊಂದು ಈ ಹೊಸ ಆವಿಷ್ಕಾರ ಮಾಡಿದೆ. ಇದರ ಪ್ರಕಾರ ಮನುಷ್ಯ ತನ್ನ ರಕ್ತದ ಗುಂಪು ಯಾವುದು ಎಂದು ಅರಿತು ಅದಕ್ಕೆ ಯೋಗ್ಯವಾದ ಆಹಾರ ಸೇವಿಸುವುದರಿಂದ ಹೆಚ್ಚು ಕಾಲ ಆರೋಗ್ಯವಂತರಾಗಿ ಬಾಳುವುದಕ್ಕೆ ಸಾಧ್ಯವಂತೆ.
ನಾವು ಎಷ್ಟೇ ಪೌಷ್ಟಿಕ ಆಹಾರ ತಿಂದರೂ, ಪಥ್ಯ ಅನುಸರಿಸಿದರೂ ಒಮ್ಮೊಮ್ಮೆ ಅನಾರೋಗ್ಯಕ್ಕೆ ತುತ್ತಾಗುತ್ತೇವೆ. ಮತ್ತು ದೇಹದ ಆರೋಗ್ಯ ಸಮತೋಲನದಲ್ಲಿರುವುದಿಲ್ಲ ಎಂಬುದು ಹಲವರ ದೂರು. ಇದಕ್ಕೆಲ್ಲ ಪ್ರಮುಖ ಕಾರಣ ನಾವು ನಮ್ಮ ರಕ್ತದ ಗುಂಪಿಗನುಗುಣವಾಗಿ ಆಹಾರ ಸೇವಿಸದಿರುವುದು ಎಂಬುದು ಈ ವೈದ್ಯರ ಅಭಿಪ್ರಾಯ.
ಯಾವ್ಯಾವ ರಕ್ತದ ಗುಂಪಿನವರು ಎಂಥ ಆಹಾರ ಸೇವಿಸಬೇಕು ಎಂಬ ಬಗ್ಗೆ ಈ ವೈದ್ಯರ ತಂಡವೇ ಒಂದು ಚಾರ್ಟ್ ನೀಡಿದೆ.
1. ಒ – ರಕ್ತದ ಗುಂಪಿನವರು ಪ್ರೊಟೀನ್ ಹೆಚ್ಚಿರುವ ಆಹಾರಗಳು, ಬೇಳೆ, ತರಕಾರಿಗಳನ್ನು ತಿನ್ನಬೇಕು. ಡೈರಿ ಪದಾರ್ಥಗಳು, ಬೀನ್ಸ್, ಮೀನು ಸಹ ಈ ರಕ್ತದ ಗುಂಪಿನವರಿಗೆ ಒಳ್ಳೆಯದು. ಆದರೆ ಗೋಧಿ, ಕೆಫಿನ್ ಅಂಶ ಹೆಚ್ಚಿರುವ ಪದಾರ್ಥ ಸೇವನೆಯನ್ನು ಮಿತಗೊಳಿಸಬೇಕು. ಮತ್ತು ಆಲ್ಕೋಹಾಲ್ ಸೇವನೆಯನ್ನು ನಿಲ್ಲಿಸಬೇಕು.
2. ಎ – ರಕ್ತದ ಗುಂಪಿನವರು ಮಾಂಸವನ್ನು ತಿನ್ನದೆ ಹೆಚ್ಚು ಹಸಿರು ತರಕಾರಿಗಳನ್ನು, ಹಣ್ಣುಗಳನ್ನು ತಿನ್ನಬೇಕು. ಬೇಳೆ ಕಾಳುಗಳ ಸೇವನೆಯೂ ಒಳ್ಳೆಯದು.
3. ಬಿ – ರಕ್ತದ ಗುಂಪಿನವರು ಕೊಬ್ಬಿನಂಶ ಕಡಿಮೆ ಇರುವ ಡೈರಿ ಉತ್ಪನ್ನಗಳನ್ನೂ, ಮೊಟ್ಟೆಗಳನ್ನು ಸೇವಿಸಬಹುದು. ಆದರೆ ಟೊಮ್ಯಾಟೋ, ಗೋಧಿ, ಚಿಕನ್‌ಗಳನ್ನು ಹೆಚ್ಚು ತಿನ್ನಬಾರದು.
4. ಎಬಿ – ರಕ್ತದ ಗುಂಪಿನವರು ಹೆಚ್ಚು ಹಸಿರು ತರಕಾರಿಗಳನ್ನು ಸೇವಿಸಬೇಕು, ಮೀನಿನ ಸೇವನೆಯೂ ಒಳ್ಳೆಯದು. ಮತ್ತು ಮದ್ಯಸೇವನೆ, ಕೆಫಿನ್ ಅಂಶ ಹೆಚ್ಚಿರುವ ಪದಾರ್ಥಗಳ ಸೇವನೆಯನ್ನು ಬಿಡಬೇಕೆಂಬುದು ವೈದ್ಯರ ಮಾತು.
ನೋಡೋಕೆ ಕೆಂಪು ಬಣ್ಣವೇ ಆದರೂ ರಕ್ತದಲ್ಲಿ ವಿಧಗಳಿವೆ. ನಮ್ಮ ಆರೋಗ್ಯವನ್ನು ಕಾಯುವಲ್ಲಿ ಅಗ್ರಸ್ಥಾನ ರಕ್ತಕ್ಕೆ ಹೋಗುತ್ತದೆ. ಆದ್ದರಿಂದ ರಕ್ತದ ವಿಧಕ್ಕನುಗುಣವಾಗಿ ಆಹಾರ ಸೇವಿಸುವುದು ದೇಹಾರೋಗ್ಯದ ದೃಷ್ಟಿಯಿಂದ ಒಳ್ಳೆಯದು ಎನ್ನುತ್ತಾರೆ ತಜ್ಞ ವೈದ್ಯರು.

   

Leave a Reply