ರಿಯಲ್ ಎಸ್ಟೇಟ್‌ಗಳ ಶಿಲುಬೀಕರಣ

ಲೇಖನಗಳು - 0 Comment
Issue Date :

-ಬಿನು ಕಂದಿಯಾಲ್

ಖಾಲಿಯಿರುವ ಜಾಗ ಅಥವಾ ಸರ್ಕಾರಿ ಭೂಮಿಯಲ್ಲಿ ಶಿಲುಬೆ ನೆಡುವುದು ಕ್ರೈಸ್ತ ಮಿಶನರಿಗಳು ಇಂದಿಗೂ ಬಳಸುತ್ತಿರುವ ಹಳೆಯ ತಂತ್ರ. ಕೆಲವೇ ಕೆಲವು ಗುಂಪುಗಳನ್ನು ಹೊರತುಪಡಿಸಿ ಬಹುತೇಕ ಎಲ್ಲ ಮಿಶನರಿ ತಂಡಗಳು ಸರ್ಕಾರಿ ಭೂಮಿ, ದೇವಸ್ಥಾನದ ಜಾಗ ಅಥವಾ ಅರಣ್ಯ ಪ್ರದೇಶವನ್ನು ಒತ್ತುವರಿ ಮಾಡಲು ಅನುಸರಿಸುವ ಮಾದರಿ ಇದೇ ಆಗಿದೆ. ಕ್ರೈಸ್ತೀಕರಣಗೊಂಡ ಕ್ರಿಮಿನಲ್‌ಗಳನ್ನು ಬಳಸಿಕೊಂಡು ಈ ಶಿಲುಬೀಕರಣ ಯೋಜನೆಯ ಮೊದಲ ಹಂತವನ್ನು ಜಾರಿಗೊಳಿಸಲು ಬಳಸಿಕೊಳ್ಳುವ ಅವರು, ಸೂಕ್ತವಾದ ಪ್ರದೇಶವನ್ನು ಹುಡುಕಿ ಅಲ್ಲಿ ಸದ್ದಿಲ್ಲದೇ ಕಾಂಕ್ರೀಟ್‌ನ ಶಿಲುಬೆಯನ್ನು ಹುಗಿಯುತ್ತಾರೆ. ನಂತರ ಅದೇ ಗುಂಪು ಅಲ್ಲಿ ಪ್ರೇಯರ್ ಆರಂಭಿಸುತ್ತದೆ. ಆ ಸ್ಥಳಕ್ಕೆ ರಸ್ತೆಯನ್ನು ನಿರ್ಮಿಸುವುದು ಮೂರನೇ ಹಂತ. ತದನಂತರ ಸಾಮೂಹಿಕ ಪ್ರೇಯರ್. ಯಾತ್ರಾ ಸ್ಥಳ, ಅಂಗಡಿ ಮುಂಗಟ್ಟು, ಮನೆಗಳು ಮುಂತಾದವು ಒಂದೊಂದಾಗಿ ಅದನ್ನು ಅನುಸರಿಸಿ ನಿಧಾನವಾಗಿ ತಲೆ ಎತ್ತುತ್ತವೆ. ಅಂತಿಮವಾಗಿ ಸರ್ಕಾರ ಇದನ್ನು ಸಕ್ರಮಗೊಳಿಸಿಬಿಡುತ್ತದೆ !

 ಕೇರಳದ ಬೊನಕ್ಕಾಡ್ ಸಂರಕ್ಷಿತ ಅರಣ್ಯ ಪ್ರದೇಶ ಕ್ರಿಶ್ಚಿಯನ್ ಮಿಶನರಿಗಳ ಇತ್ತೀಚಿನ ಗುರಿ. ವಿಶ್ವಸಂಸ್ಥೆಯ ಶಿಕ್ಷಣ, ವಿಜ್ಞಾನ ಮತ್ತು ಸಾಂಸ್ಕೃತಿಕ ಸಂಸ್ಥೆ- ಯುನೆಸ್ಕೋ (United Nations Educational, Scientific and Cultural Organization – UNESCO) ಗುರುತಿಸಿರುವ 20 ವಿಶ್ವ ಸಂರಕ್ಷಿತ ಜೀವವೈವಿಧ್ಯ ಪ್ರದೇಶಗಳಲ್ಲಿ ಒಂದಾದ ಅಗಸ್ತ್ಯಾರ್ ಬಯೋಸ್ಪಿಯರ್‌ನಲ್ಲಿ ಬೊನಕ್ಕಾಡ್ ಅರಣ್ಯವಿದೆ. ಕೇರಳ ಕ್ಯಾಥೋಲಿಕ್ ಯುವ ಆಂದೋಲನ (KCYM –Kerala Christian Youth Movement) ಇದು ಕ್ಯಾಥೋಲಿಕ್ ಬಿಶಪ್‌ಗಳ ಅಖಿಲ ಭಾರತ ಸಂಘವಾದ CBCIನ ಕೇರಳ ಶಾಖೆ. ಬೊನಕ್ಕಾಡ್ ಅರಣ್ಯದಲ್ಲಿ ನೆಡಲಾಗಿದ್ದ ಅವರ ಕಾಂಕ್ರೀಟ್ ಶಿಲುಬೆ ನಾಶವಾಗಿದೆ ಎನ್ನುತ್ತ ಕಳೆದ ಅಗಸ್ಟ್‌ನಲ್ಲಿ ಪ್ರತಿಭಟನೆ ಆರಂಭಿಸಿತು. ಅದು ಅರವತ್ತು ವರ್ಷ ಹಿಂದಿನ ಶಿಲುಬೆಯಾಗಿತ್ತು, ಸರ್ಕಾರ ಅರಣ್ಯಾಧಿಕಾರಿಗಳ ನೆರವಿನಿಂದ ಅದನ್ನು ಕೆಡವಿಹಾಕಿತು – ಎನ್ನುವುದು ಅವರ ಅಂಬೋಣ. ಆದರೆ ಅದು ಒಡೆದುಹೋಗಿದ್ದು ಸಿಡಿಲಿನಿಂದ ಎನ್ನುವುದು ಅರಣ್ಯ ಇಲಾಖೆಯ ಹೇಳಿಕೆ. ಕೆಲವು ಕ್ರೈಸ್ತ ಪಾದ್ರಿಗಳ ಮುಂದಾಳತ್ವದಲ್ಲಿ ಈ ವರ್ಷದ ಮೊದಲ ಶುಕ್ರವಾರದಿಂದ ಇಲ್ಲಿಗೆ ಯಾತ್ರೆ ಆರಂಭಿಸಲು ಕೆಸಿವೈಎಮ್ ನಿರ್ಣಯಿಸಿತು. ಅವರು ಸರ್ಕಾರದ ಆದೇಶವನ್ನು ಉಲ್ಲಂಘಿಸಿ ಸಂರಕ್ಷಿತ ಪ್ರದೇಶವನ್ನು ಪ್ರವೇಶಿಸಲು ಮುಂದಾದರು. ಇದು ಉಚ್ಚ ನ್ಯಾಯಾಲಯದ ಆದೇಶದ ಉಲ್ಲಂಘನೆಯಾಗುವ ಕಾರಣದಿಂದ ಸರ್ಕಾರ ಈ ಯಾತ್ರೆನ್ನು ನಡೆಸದಂತೆೆ ಎಚ್ಚರಿಕೆ ನೀಡಬೇಕಾಯಿತು. ಈ ಪ್ರತಿಭಟನೆಯಲ್ಲಿ ಮಕ್ಕಳು ಮಹಿಳೆಯರೂ ಸೇರಿದಂತೆ ದೊಡ್ಡ ಸಂಖ್ಯೆಯಲ್ಲಿ ಜನರು ಸೇರಿದ್ದರು, ಆದರೆ ಬೊನಕ್ಕಾಡ್ ತಲುಪುವ ಮೊದಲೇ ಅವರನ್ನು ಪೋಲೀಸರು ತಡೆದರು. ಪ್ರಚೋದನೆ ನೀಡಲು ಮತ್ತು ಪೋಲೀಸರತ್ತ ಕಲ್ಲು ಎಸೆಯಲು ಒಂದು ಗುಂಪು ಆರಂಭಿಸಿದ್ದರಿಂದ ಪರಿಸ್ಥಿತಿ ಕೈಮೀರಿತು. ಶಾಂತಿ ಸುವ್ಯವಸ್ಥೆಯನ್ನು ಕಾಯ್ದುಕೊಳ್ಳಲು ಹರಸಾಹಸಪಟ್ಟ ಪೋಲೀಸರು ಕೊನೆಗೆ ಲಾಠೀಛಾರ್ಜ್ ಮಾಡಬೇಕಾಯಿತು. ಕೊನೆಗೆ ಸರ್ಕಾರ ಹದಿನೈದು ಜನರನ್ನು ಪ್ರೇಯರ್ ಮಾಡಲು ಒಳಬಿಡಲು ಸಮ್ಮತಿಸಿತಾದರೂ ಎಲ್ಲರಿಗೂ ಅನುಮತಿ ನೀಡಬೇಕೆಂದು ಪಾದ್ರಿಗಳು ಪಟ್ಟುಹಿಡಿದರು. ಅಷ್ಟೇ ಅಲ್ಲದೇ ಪ್ರೇಯರ್ ನಡೆಸುವ ಸ್ವಾತಂತ್ರ್ಯವನ್ನು ಕಸಿದುಕೊಳ್ಳುವ ಸರ್ಕಾರದ ನಡೆಯ ವಿರುದ್ಧ ಪ್ರತಿಭಟನೆಯಲ್ಲಿ ಎಲ್ಲರೂ ಸೇರಿಕೊಳ್ಳುವಂತೆ ಉಳಿದ ಅನೇಕ ಚರ್ಚ್‌ಗಳಿಗೆ ಅವರು ಸುತ್ತೋಲೆಯನ್ನೂ ಹೊರಡಿಸಿದರು !

 ಬೊನಕ್ಕಾಡ್ ಸಂರಕ್ಷಿತ ಅರಣ್ಯದ ಮಹತ್ವದ ಕುರಿತು ಪರಿಸರ ಹೋರಾಟಗಾರ ಜೇಕಬ್ ಲೇಜರ್ ತಮ್ಮ ಫೇಸ್‌ಬುಕ್ ಪೇಜಿನಲ್ಲಿ ಬರೆದುಕೊಂಡಿದ್ದು ಹೀಗೆ – ಬೊನಕ್ಕಾಡ್, ಅಗಸ್ತ್ಯ ಬಯೊಸ್ಪಿಯರ್ ಪ್ರದೇಶ ಅತ್ಯಂತ ಪ್ರಮುಖ ಸಂರಕ್ಷಿತ ಪ್ರದೇಶ. ಈ ಅರಣ್ಯಪ್ರದೇಶದಿಂದಲೇ ಪೆಪ್ಪರ ಅಣೆಕಟ್ಟೆಗೆ ನೀರು ಹರಿದು ಬರುವುದು. ತಿರುವನಂತಪುರಮ್‌ನ ಪ್ರಮುಖ ಜಲಸರಬರಾಜಿನ ಮೂಲ ಪೆಪ್ಪರ ಅಣೆಕಟ್ಟು. ಆದ್ದರಿಂದ ಕುಡಿಯುವ ನೀರಿನ ಸಲುವಾಗಿ ಈ ಅರಣ್ಯವನ್ನು ಉಳಿಸುವುದು ಅತ್ಯಗತ್ಯವಾಗಿದೆ.

 ಪರಿಸರವನ್ನು ನಾಶಮಾಡುವುದು ಪಾಪ ಎಂಬ ಪೋಪ್ ಫ್ರ್ರಾನ್ಸಿಸ್‌ರ ಹೇಳಿಕೆಯ ಶಾಯಿ ಒಣಗಿಹೋಗುವ ಮೊದಲು, ಸಂರಕ್ಷಿತ ಅರಣ್ಯವನ್ನು ಅತಿಕ್ರಮಣ ಮಾಡುವ ಅವರ ಅನುಯಾಯಿಗಳು ಅಲ್ಲಿ ಶಿಲುಬೆ ನೆಟ್ಟು ಅರಣ್ಯವನ್ನು ಖಾಸಗೀ ಜಮೀನಾಗಿ ಪರಿವರ್ತಿಸಿಕೊಳ್ಳುತ್ತಿದ್ದಾರೆ. ಕುಡಿಯುವ ನೀರಿಗೆ ವಿಷಬೆರೆಸುವ ಇಂತಹ ಜನರನ್ನು ಬಿಳಿ ಗೋರಿಗಳು ಎಂದು ಯೇಸು ಕರೆಯುತ್ತಿದ್ದನೇನೋ !

 ಎರಡು ವರ್ಷಗಳ ಹಿಂದೆ, ಮುನ್ನಾರ್ ಅರಣ್ಯಪ್ರದೇಶದ ಒತ್ತುವರಿ ವಿವಾದಕ್ಕೀಡಾಯಿತು. ಪ್ರಾಮಾಣಿಕ ಅಧಿಕಾರಿಯಾದ ಜಿಲ್ಲಾಧಿಕಾರಿ ಶ್ರೀರಾಮ್ ವೆಂಕಟರಾಮನ್‌ರ ಕಠಿಣ ಕ್ರಮದಿಂದಾಗಿ ಈ ಎಲ್ಲ ಒತ್ತುವರಿ ಕೆಲಸ ನಿಂತಿತು. ಆದರೆ ತಥಾಕಥಿತ ಸೆಕ್ಯುಲರ್ ಪಕ್ಷಗಳ ಒತ್ತಡದಿಂದಾಗಿ ಅವರು ತೆಗೆದುಕೊಂಡ ಎಲ್ಲ ಕಠಿಣ ಕ್ರಮಗಳೂ ಮಣ್ಣುಪಾಲಾದವು. ಅವರನ್ನು ಸಾರ್ವಜನಿಕವಾಗಿ ನಿಂದಿಸಿದ ಮುಖ್ಯಮಂತ್ರ್ರಿ ಪಿಣರಾಯಿ ವಿಜಯನ್, ಅವರನ್ನು ಇನ್ನೊಂದು ಸ್ಥಳಕ್ಕೆ ವರ್ಗಾವಣೆ ಮಾಡಿಬಿಟ್ಟರು. ಇದು ಕ್ರಿಶ್ಚಿಯನ್ ಮಿಶನರಿಗಳ ತಾಕತ್ತು.!

 ಕೇರಳದ ಬಹುತೇಕ ಪ್ರತಿಯೊಂದು ಜಿಲ್ಲೆಯಲ್ಲೂ ಇಂತಹ ಅನೇಕ ಕ್ರೈಸ್ತಮತಾಂತರ ಚಟುವಟಿಕೆಗಳನ್ನು ನಾವು ಕಾಣಬಹುದು. ಚರ್ಚ್‌ಗಳು ಪರಿಸರದ ಬಗ್ಗೆ ಬಹಳ ಮಾತನಾಡುತ್ತವೆ. ಆದರೆ ಗಾಡ್ಗೀಳ್ ಸಮಿತಿ, ಕಸ್ತೂರಿ ರಂಗನ್ ಸಮಿತಿ ಮೊದಲಾದವುಗಳ ಪರಿಸರ ಸಂಬಂಧೀ ವರದಿಗಳನ್ನು ಅವರು ವಿರೋಧಿಸುತ್ತಾರೆ. ಚರ್ಚ್ ಮತ್ತು ಅದರ ಅಂಗಸಂಸ್ಥೆಗಳ ಜನರ ರಿಯಲ್ ಎಸ್ಟೇಟ್ ವ್ಯವಹಾರವೇ ಈ ಒತ್ತುವರಿಗಳ ಪ್ರಮುಖ ಕಾರ್ಯಸೂಚಿ. ಕುಮಾಲಿ, ಮುನ್ನಾರ್, ವಾಗಮನ್, ಚಕ್ಕುಲಪಲ್ಲಮ್, ಪಂಚಲಿಮೇಡು, ವಯನಾಡು ಮೊದಲಾದ ಪ್ರಮುಖ ಪ್ರೇಕ್ಷಣೀಯ ಸ್ಥಳಗಳಿಗೆ ಚರ್ಚ್ ಹೆಚ್ಚಿನ ಮಹತ್ವವನ್ನು ನೀಡುತ್ತದೆ.

 1980ರ ಸಮಯದಲ್ಲಿ ನೀಲಕ್ಕಲ್ – ಶಬರಿಮಲ ಅಯ್ಯಪ್ಪ ಸ್ವಾಮಿಯ ಪೂಂಗವನಮ್‌ನ್ನೂ ಒತ್ತುವರಿ ಮಾಡಲು ಅವರು ಯತ್ನಿಸಿದ್ದರು. ಒಂದು ಸುಳ್ಳು ಕಥೆಯನ್ನು ಕಟ್ಟಿದ ಚರ್ಚ್ ಅಲ್ಲಿ ಶಿಲುಬೆಯನ್ನು ನೆಡಲು ಪ್ರಯತ್ನಿಸಿತು. ಅವರು ಹೇಳುವಂತೆ ಅದು ಸೇಂಟ್ ಥಾಮಸ್ ಕಟ್ಟಿದ್ದಂತೆ! ಆರೆಸ್ಸೆಸ್ ಮುಂದಾಳತ್ವದಲ್ಲಿ ಹಿಂದೂ ಸಂಘಟನೆಗಳು ಸರಿಯಾದ ಸಮಯದಲ್ಲಿ ಮಧ್ಯಪ್ರವೇಶಿಸಿ ಸತತ ಪ್ರಯತ್ನ ನಡೆಸಿದ ಪರಿಣಾಮ ಅವರು ನೀಲಕ್ಕಲ್‌ನಿಂದ ಕಾಲುಕೀಳಬೇಕಾಯಿತು. ಹಿರಿಯ ಮುಖಂಡರೂ ಸೇರಿದಂತೆ ಆರೆಸ್ಸೆಸ್‌ನ ಅನೇಕ  ಕಾರ್ಯಕರ್ತರು ಪೋಲಿಸ್ ಮತ್ತು ಶಾಂತಿಯ ಮತದ ಅನುಯಾಯಿ(!) ಗೂಂಡಾಗಳಿಂದ ಕ್ರೂರವಾದ ಶಾರೀರಿಕ ಚಿತ್ರಹಿಂಸೆಯನ್ನೂ ಎದುರಿಸಬೇಕಾಯಿತು.

 ಬೇಸರದ ಸಂಗತಿಯೆಂದರೆ, ಪೋಲೀಸ್ ಮತ್ತು ತಥಾಕಥಿತ ಸೆಕ್ಯುಲರ್ ಸರ್ಕಾರಗಳು ಅವರಿಗೇ ಬೆಂಬಲವಾಗಿ ನಿಲ್ಲುತ್ತವೆ. ಅವರ ಬಹುತೇಕ ಒತ್ತುವರಿಗಳು ಅಧಿಕಾರಾರೂಢ ಪಕ್ಷಗಳಿಂದ ಸಕ್ರಮಗೊಳಿಸಲ್ಪಟ್ಟಿವೆ. ಇನ್ನೂ ಅನೇಕ ಆಸ್ತಿಗಳನ್ನು ಚರ್ಚ್ ಮಿಶನರಿಗಳು ಕಾನೂನುಬಾಹಿರವಾಗಿ ಅತಿಕ್ರಮಣಮಾಡಿಕೊಂಡಿವೆ. ರಾಜ್ಯ ಸರ್ಕಾರ ಈ ಒತ್ತುವರಿಯ ವಿರುದ್ಧ ಯಾವುದೇ ಕ್ರಮ ಕೈಗೊಳ್ಳುವುದಿಲ್ಲ ಎನ್ನುವುದೂ ಅವರಿಗೆ ಖಚಿತವಾಗಿ ಗೊತ್ತಿದೆ.

 ಓ ಜೀಸಸ್, ಅವರನ್ನು ಕ್ಷಮಿಸಿಬಿಡು, ತಾವೇನು ಮಾಡುತ್ತಿದ್ದೇವೆ ಎನ್ನುವುದು ಅವರಿಗೆ ತಿಳಿದಿಲ್ಲ.

            (ಅನು: ಸತ್ಯನಾರಾಯಣ ಶಾನುಭಾಗ್)

 

   

Leave a Reply