ವಿಜಾಪುರಕ್ಕೆ ನಮೋ ತೇರು

ಬಿಜಾಪುರ - 0 Comment
Issue Date : 04.02.2014

ವಿಜಾಪುರ: ಮಂಗಳೂರಿನಿಂದ ಹೊರಟು ಜ. 28ರಂದು ನಗರಕ್ಕೆ ಆಗಮಿಸಿದ ನಮೋ ತೇರಿಗೆ ನಮೋ ಬ್ರಿಗೇಡ್ ಹಾಗೂ ಬಿಜೆಪಿ ಕಾರ್ಯಕರ್ತರು ಬರ ಮಾಡಿಕೊಂಡರು.

ನಮೋ ತೇರು ಬಾಗಲಕೋಟ ಜಿಲ್ಲೆಯಿಂದ ಆಗಮಿಸಿದಾಗ ಬೈಕ್ ರ್ಯಾಲಿ ನಡೆಸಲಾಯಿತು. ಅಥಣಿ ರಸ್ತೆಯ ಸಾರಿಗೆ ಸಂಸ್ಥೆಯ ಬಳಿ ಕೇಂದ್ರದ ಮಾಜಿ ಸಚಿವ ಬಸನಗೌಡ ಪಾಟೀಲ ( ಯತ್ನಾಳ), ನಮೋ ಬ್ರಿಗೇಡ್  ಮಾರ್ಗದರ್ಶಕರು ಉಮೇಶ ಕಾರಜೋಳ ರ್ಯಾಲಿಗೆ ಚಾಲನೆ ನೀಡಿದರು.

ನಂತರ ಅಲ್ಲಿಂದ ನಮೋ ತೇರಿನೊಂದಿಗೆ ಹೊರಟ ಬೈಕ್ ರ್ಯಾಲಿ ಸೋಲಾಪುರ ರಸ್ತೆ, ಬಂಜಾರಾ ಕ್ರಾಸ್, ಆದರ್ಶನಗರ, ಆಶ್ರಮ ರಸ್ತೆ, ಕೋರಿ ಚೌಕ್, ಅಂಬೇಡ್ಕರ ವೃತ್ತ, ಮನಗೂಳಿ ರಸ್ತೆ, ಜಲನಗರ, ಜಿಲ್ಲಾ ನ್ಯಾಯಾಲಯ ರಸ್ತೆ, ಬಸ್ ನಿಲ್ದಾಣ ರಸ್ತೆ, ಬಸವೇಶ್ವರ ವೃತ್ತ, ಆಜಾದ್ ರಸ್ತೆ, ಸರಾಫ್ ಬಜಾರ್ ಮಾರ್ಗವಾಗಿ ಸಂಚರಿಸಿ ಸಿದ್ಧೇಶ್ವರ ದೇವಸ್ಥಾನದ ಆವರಣ ತಲುಪಿ ಮುಕ್ತಾಯಗೊಂಡಿತು. ಬೈಕ್ ರ್ಯಾಲಿಯಲ್ಲಿ ಕಾರ್ಯಕರ್ತರು ಭಾಗವಹಿಸಿದ್ದರು.

ಸಿದ್ಧೇಶ್ವರ ದೇವಸ್ಥಾನದ ಮುಂಭಾಗದಲ್ಲಿ ನರೇಂದ್ರ ಮೋದಿ ಮಾಡಿದ ಅಭಿವೃದ್ಧಿ ಕಾರ್ಯಗಳು ಹಾಗೂ ಕಾಂಗ್ರೆಸ್ ಸರಕಾರದ ಹಗರಣಗಳ ಕುರಿತು ಎಲ್‍ಸಿಡಿ ಮೂಲಕ ಚಿತ್ರ ಪ್ರದರ್ಶಿಸಲಾಯಿತು.

ಬಿಜೆಪಿ ನಗರ ಅಧ್ಯಕ್ಷ ಭೀಮಾಶಂಕರ ಹದನೂರ, ಈರಣ್ಣ ಪಟ್ಟಣಶೆಟ್ಟಿ, ರಾಘು ಅಣ್ಣಗೇರಿ, ಶಿವರುದ್ರ ಬಾಗಲಕೋಟ, ನ್ಯಾಯವಾದಿ ತುಳಿಸೀರಾಮ ಸೂರ್ಯವಂಶಿ, ವಿಜಯ ಜೋಶಿ, ಮಾರುತಿ ಬಂಡಿ, ಕೃಷ್ಣಾ ಗುನ್ಹಾಳಕರ, ಚಂದ್ರು ಚೌಧರಿ, ಶಿವಾನಂದ ಭುಂಯ್ಯಾರ, ನಗರಸಭೆ ಸದಸ್ಯರಾದ ಶಂಕರ ಕುಂಬಾರ, ಆನಂದ ಧೂಮಾಳೆ, ರಾಹುಲ ಜಾಧವ, ಪ್ರಕಾಶ ಮಿರ್ಜಿ, ನಮೋ ಬ್ರಿಗೇಡ್ ಪ್ರಮುಖರಾದ ರೋಹನ್ ಆಪ್ಟೆ, ವಿನೋದ ಮಣೂರ, ಚಂದನ ಹಿರೇಮಠ, ಸಾಗರ ಗಾಯಕವಾಡ, ಸತೀಶ ಬಾಗಿ, ಅಖೀಲ ಶೀಲವಂತ, ಅನೀಲ ಉಪ್ಪಾರ, ಆನಂದ ಶೇಳಕೆ, ಶ್ರೀಶೈಲ ಗಾಡೆ, ಕಾಂತು ಶಿಂಧೇ, ಶಿವು ಕಂಬಾರ, ವಿಕ್ರಂ ತಾಂಬೇಕರ, ಸಂತೋಷ ಬಂಗಾರಿ, ಆದಿತ್ಯ ತಾವರಗೇರಿ, ದೇವೇಂದ್ರ ಕಡಕೋಳ, ರಾಘವೇಂದ್ರ ವಿಜಾಪುರ, ರೋಹಿತ ಕೊಪ್ಪದ, ರಾಘು ಸುಧಾಕರ ಉಪಸ್ಥಿತರಿದ್ದರು.

   

Leave a Reply