ವಿಶ್ವ ವ್ಯಾಪಾರ ಕೇಂದ್ರ ಲೋಕಾರ್ಪಣೆ

ವಿದೇಶ - 0 Comment
Issue Date : 15.11.2013

ಭಯೋತ್ಪಾದಕ ದಾಳಿಗೆ ತುತ್ತಾಗಿದ್ದ ಟ್ವಿನ್ ಟವರ್ ಮರು ನಿರ್ಮಾಣಗೊಂಡು  ಲೋಕಾರ್ಪಣೆಯಾಗಿದೆ.  2001ರ ಸೆ.11ರಂದು ಅಲ್ ಖೈದಾ ಉಗ್ರರ ದಾಳಿಗೆ ನೆಲಸಮಗೊಂಡಿದ್ದ ವಿಶ್ವ ವ್ಯಾಪಾರ ಕೇಂದ್ರದ ಅವಳಿ ಗೋಪುರಗಳಿದ್ದ ಲೋವರ್ ಮ್ಯಾನ್‍ಹಟನ್‍ನ ಝೀರೊ ಜಾಗದಲ್ಲಿ ನ.13ರಂದು ಮೊದಲ ಹೊಸ ಕಛೇರಿ ಗೋಪುರ ತಲೆ ಎತ್ತಿದೆ.

104ಮಹಡಿಗಳನ್ನು ಹೊಂದಿದ ಬಾನೆತ್ತರಕ್ಕೆ ಗಗನಚುಂಬಿಯಂತಿದ್ದ ಡಬ್ಲ್ಯುಟಿಸಿ ಅವಳಿ ಗೋಪುರಗಳಿಗೆ ಉಗ್ರರು ವಿಮಾನಗಳನ್ನು ಡಿಕ್ಕಿ ಹೊಡೆಸಿ ನೆಲಸಮ ಮಾಡಿದ್ದರು. ಈ ದಾಳಿಯಿಂದ ಸುಮಾರು 2,700 ಜನರು ಸಾವಿಗೀಡಾಗಿದ್ದು,  ಈಗ ಅದೇ ಜಾಗದಲ್ಲಿ 72 ಮಹಡಿಗಳ 4 ವಿಶ್ವ ವ್ಯಾಪರ ಕೇಂದ್ರದ ಮೊದಲ ಸೌಧ ತಲೆ ಎತ್ತಿ ನಿಂತಿದೆ. ವಿಶ್ವ ವ್ಯಾಪಾರ ಕೇಂದ್ರದ 4 ಗೋಪುರಗಳ ಪೈಕಿ ಮೊದಲನೆಯದು ಪೂರ್ತಿಗೊಂಡಿದ್ದು, ನ್ಯೂಯರ್ಕ್ ಮೇಯರ್ ಮೈಕೇಲ್‍ಬ್ಲೂಂಬರ್ಗ್ ಹೊಸ ಟವರನ್ನು ಉದ್ಘಾಟಿಸಿದರು.

ಮುಂದಿನ ವರ್ಷ ಇನ್ನೊಂದು ಸೌಧ ತಲೆ ಎತ್ತಲಿದೆ ಎಂದು ಮ್ಯಾನ್‍ಹಟನ್ ಬೊರೋ ಅಧ್ಯಕ್ಷ  ಸ್ಕಾಟ್ ಎ. ಸ್ಟ್ರೀಂಜರ್ ಹೇಳಿದ್ದಾರೆ.  ಹೊಸ ಸೌಧ 298 ಮೀ. ಎತ್ತರವಿದ್ದು ವಿಶ್ವ ವ್ಯಾಪಾರ ಕೇಂದ್ರದ 4 ಗೋಪುರಗಳಲ್ಲೇ ಅತಿ ಕಿರಿದುದಾಗಿದೆ. 2014ರಲ್ಲಿ ತಲೆ ಎತ್ತುವ ಗೋಪುರ  541 ಮೀ. ಎತ್ತರದ್ದಾಗಲಿದೆ. ಇದು 4 ಗೋಪರಗಳಲ್ಲೇ ಅತಿ ಎತ್ತರದ ಗೋಪುರ. 

ಭಯೋತ್ಪಾದನೆ ಬಗ್ಗು ಬಡಿಯುವಲ್ಲಿ ಅಮೆರಿಕ ದೇಶ  ನಾವೇನು ಕಮ್ಮಿ ಇಲ್ಲ ಎಂಬುದನ್ನು ಈ ಮೂಲಕ ತೋರಿಸಿಕೊಟ್ಟಿದ್ದಾರೆ.

   

Leave a Reply