ವಿಶ್ವ ಸ್ಮಾರಕಗಳ ಪಟ್ಟಿಗೆ ಬೀದರ್ ಆಯ್ಕೆ

ಬೀದರ್ - 0 Comment
Issue Date : 10.10.2013

ದೇಶದ ಮೂರು ಸ್ಮಾರಕಗಳಲ್ಲಿ 2014ರ ವರ್ಲ್ಡ್ ಮಾನ್ಯುಮೆಂಟ್ ವಾಚ್ ಪಟ್ಟಿಗೆ ಐತಿಹಾಸಿಕ ಬೀದರ್ ಸಿಟಿ ಆಯ್ಕೆಯಾಗಿದೆ. ಅ 8.ರಂದು ಅಮೆರಿಕದ ನ್ಯೂಯರ್ಕ್ ನಲ್ಲಿ ನಡೆದ ಸುದ್ಧಿಗೋಷ್ಟಿಯಲ್ಲಿ ವಿಶ್ವ ಸ್ಮಾರಕಗಳ ನಿಧಿಯ ಸಂಶೋಧನಾ ಮತ್ತು ಶಿಕ್ಷಣ ನಿರ್ದೇಶಕ ಎರಿಕಾ ಔರಾಮಿ ಈ ವಿಷಯ ಪ್ರಕಟಿಸಿದರು.

ವಿಶ್ವದ 166 ದೇಶಗಳ 741 ಸ್ಮಾರಕಗಳಲ್ಲಿ 41 ರಾಷ್ಟ್ರಗಳ 67 ಸ್ಮಾರಕಗಳು ಆಯ್ಕೆಯಾಗಿದ್ದು, ಭಾರತದ ಐತಿಹಾಸಿಕ ನಗರ ಬೀದರ್, ಉತ್ತರ ಪ್ರದೇಶದ ಆಗ್ರಾ ಬಳಿಯ ಫತ್ತೇಪುರ್ ಸಿಕ್ರಿಯ ಹೌಸ್ ಆಫ್ ಶೇಖ್ ಸಲಿಂ ಚಿಸ್ತಿ ಮತ್ತು ರಾಜಸ್ಥಾನದ ಡುಂಗ್ರಾಪುರದ ಜುನಾ ಮಹಲ್ ಆಯ್ಕೆಯಾಗಿವೆ.

ನ್ಯೂಯಾರ್ಕ್ ಮೂಲದ ವಿಶ್ವ ಸ್ಮಾರಕಗಳ ನಿಧಿ ಸಂಸ್ಥೆಯಿಂದ ಆಯ್ಕೆಯಾಗಿರುವ  ರಾಜ್ಯದ ಮೊದಲ ಸ್ಥಳ ಬೀದರ್. ಇದು ನಮ್ಮ ಜಿಲ್ಲೆ, ನಮ್ಮ ರಾಜ್ಯ ಮತ್ತು ನಮ್ಮ ದೇಶಕ್ಕೆ ಹೆಮ್ಮೆಯ  ವಿಷಯ.

   

Leave a Reply