ವಿಹೆಚ್‍ಪಿ ದೆಹಲಿಯ ಉಪಾಧ್ಯಕ್ಷ ನಿಧನ

ವಿಶ್ವ ಹಿಂದೂ ಪರಿಷತ್ - 0 Comment
Issue Date : 18.01.2014

ವಿಶ್ವಹಿಂದು ಪರಿಷತ್, ದಿಲ್ಲಿಯ ಉಪಾಧ್ಯಕ್ಷ ಹಾಗೂ ಸಮಾಜಸೇವಕರಾದ ಸರದಾರ್ ಉಜಾಗರ್ ಸಿಂಗ್ ಅವರು ಮಂಗಳವಾರ(ಜ.14)ದಂದು ರಾಜಧಾನಿ ದೆಹಲಿಯಲ್ಲಿ ನಿಧನರಾಗಿದ್ದು, ಇವರಿಗೆ 65 ವರ್ಷ ವಯಸ್ಸಾಗಿತ್ತು. ಇವರ ಅಂತಿಮಸಂಸ್ಕಾರವು ಮಂಗಳವಾರ ಸಂಜೆ 5 ಗಂಟೆಗೆ ಪಂಜಾಬಿ ಬಾಗ್ ಚಿತಾಗಾರದಲ್ಲಿ ನೆರವೇರಿತು.  ಉಜಾಗರ್ ಅವರು ಇಬ್ಬರು ಗಂಡು ಮಕ್ಕಳು ಮತ್ತು ಇಬ್ಬರು ಹೆಣ್ಣುಮಕ್ಕಳನ್ನು ಅಗಲಿದ್ದಾರೆ.

ಸರದಾರ್ ಉಜಾಗರ್ ಸಿಂಗ್ ಅವರು ಕಳೆದ 8 ವರ್ಷಗಳಿಂದ ವಿಶ್ವಹಿಂದು ಪರಿಷತ್‍ನ ಉಪಾಧ್ಯಕ್ಷರಾಗಿದ್ದು, ಹಲವು ಸಮಾಜಸೇವಾ ಸಂಘಟನೆಗಳಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದರು.  

ವಿಹೆಚ್‍ಪಿಯ ಅಂತರರಾಷ್ಟ್ರೀಯ ಉಪಾಧ್ಯಕ್ಷ ಶ್ರೀ ಓಂಪ್ರಕಾಶ್ ಸಿಂಘಾಲ್, ರಾಷ್ಟ್ರೀಯ ಕಾರ್ಯದರ್ಶಿ ಶ್ರೀ ಮಹಾವೀರ್ ಪ್ರಸಾದ್ ಮತ್ತಿತರ ಗಣ್ಯರು ಮೃತರ ಅಂತ್ಯಕ್ರಿಯೆಯಲ್ಲಿ ಭಾಗವಹಿಸಿದ್ದರು.

   

Leave a Reply