ವೀರಶೈವ ಲಿಂಗಾಯತ

ಲೇಖನಗಳು - 0 Comment
Issue Date :

-ಮಲ್ಲಿಕಾರ್ಜುನ

ಬಹು ಚರ್ಚಿತ ವೀರಶೈವ ಧರ್ಮದ ಹುಟ್ಟಿನ ಬಗ್ಗೆ ಇಂಥದ್ದೇ ಕಾಲ ಎಂದು ಯಾರೂ ನಿಖರವಾಗಿ ಹೇಳಿಲ್ಲ. ಕ್ರಿಸ್ತಶಕ ಪೂರ್ವದಲ್ಲೂ ಅಂದರೆ ಅನಾದಿ ಕಾಲದಿಂದಲೂ ವೀರಶೈವ ಧರ್ಮ ಇದ್ದುದರ ಬಗ್ಗೆ ಸಾಕಷ್ಟು ಮಾಹಿತಿ ಇವೆ.  ಅಖಂಡ ಹಿಂದು ಧರ್ಮದ ಅನೇಕ ಒಳಧರ್ಮಗಳಲ್ಲಿ ಇದೂ ಒಂದು ಎಲ್ಲರೂ ಒಪ್ಪಿಕೊಂಡಿದ್ದಾರೆ. ಹನ್ನೆರಡನೆ ಶತಮಾನದಲ್ಲಿ ಬಸವಣ್ಣನವರ ಅವತಾರ ಆದಾಗಿನಿಂದ ಹಾಗೂ ತದ ನಂತರ ವೀರಶೈವ-ಲಿಂಗಾಯತ ಎಂಬ ಮಾರ್ಮಿಕ ವಿಚಾರ ಚರ್ಚೆಯಾಗುತ್ತಲೇ ಇದೆ. ಮಹಾತ್ಮಾ ಬಸವೇಶ್ವರರು, ಈಗಾಗಲೇ ಪ್ರಚಲಿತವಿರುವ ವೀರಶೈವದ ಭಾಗಿಯೆಂದು ಅಥವಾ ನಾನು ಲಿಂಗಾಯತ ಧರ್ಮವನ್ನು ಸ್ಥಾಪನೆ ಮಾಡಿದ್ದೆನೆಂದು ನಿಶ್ಚಲವಾಗಿ ಪ್ರತಿಪಾದಿಸಿದ್ದರೆ ಈಗಿನ ಈ ವಿವಾದ ಇರುತ್ತಿರಲಿಲ್ಲ ಎಂದು ಸ್ಪಷ್ಟವಾಗಿ ಹೇಳಬಹುದು. ಚರ್ಚೆಯ ವಿಷಯವಿರುವುದು ಪ್ರಮುಖವಾಗಿ ಇಲ್ಲಿಯೇ ಎಂದು ಎಲ್ಲರೂ ಅರಿತುಕೊಳ್ಳಬೇಕು. ಇನ್ನೂ ಮುಂದಕ್ಕೆ ಹೋದರೆ, ಯಾವುದೇ ಮೂರ್ತಿಪೂಜೆಗೆ ಹಾಗೂ ನಮ್ಮದಲ್ಲದ ದೇವರುಗಳನ್ನು ಪೂಜಿಸಲು ತಿಳಿಸಲಿಲ್ಲ. ಮಾನವರು ಯಾವ ರೀತಿ ನಡೆಯಬೇಕು, ಯಾವುದನ್ನು ಆರಾಧಿಸಬೇಕು, ನಡೆ-ನುಡಿಯಲ್ಲಿ ಹೇಗಿರಬೇಕು, ದಯೆ ದಾಕ್ಷಿಣ್ಯ, ಕರುಣೆ, ಸತ್ಯ ಮಿಥ್ಯ ಅನೇಕ ವಿಚಾರಗಳಲ್ಲಿ ನಮ್ಮ ಭಾವನೆ ಹೇಗಿರಬೇಕು ಎಂಬುದರ ಬಗ್ಗೆ ಜೀವನಪರ್ಯಂತ ಪ್ರತಿಪಾದಿಸಿದರು. ಆದರೆ ಮಾಡಬೇಕಾದ ಕೆಲಸಗಳು ಇನ್ನೂ ಗುಡ್ಡದಷ್ಟು ಇರುವಾಗಲೇ ಅವರನ್ನು ನಂಬಿದವರನ್ನು ಅನಾಥ ಮಾಡಿಬಿಟ್ಟು ಹೋಗಿಬಿಟ್ಟರು. ವೀರಶೈವ ಅಲ್ಲದೇ ಬೇರೆ ಯಾವುದೇ ಧರ್ಮದ ಬಗ್ಗೆ ತೆಗಳಲಿಲ್ಲ, ಹೊಗಳಲಿಲ್ಲ. ಕೇವಲ ಒಂದು ಬಾರಿ ಹುಟ್ಟಿಬಂದವರಾದ ನಾವು ಹೇಗೆ ನಡೆದುಕೊಳ್ಳಬೇಕು, ಯಾವುದು ಸತ್ಯ, ಯಾವುದು ಮಿಥ್ಯ, ದೇವರು ಎಂಥವರನ್ನು ಪ್ರೀತಿಸುತ್ತಾನೆ ಎಂಬ ವಿಷಯಗಳ ಚರ್ಚೆಯನ್ನು ಅನುಭವ ಮಂಟಪದಲ್ಲಿ ಅಲ್ಲಮ ಪ್ರಭು, ಚನ್ನಬಸವಣ್ಣ, ಸಿದ್ದರಾಮೇಶ್ವರ, ಅಕ್ಕಮಹಾದೇವಿ ಇನ್ನೂ ಸಾವಿರಾರು ದೇವ ಪ್ರತಿಭೆಗಳ ಮೂಲಕ, ಶುದ್ಧ ತಿಳಿಗನ್ನಡದಲ್ಲಿ ವಚನಗಳ ಮೂಲಕ ಪ್ರತಿಪಾದಿಸಿದರು. ಇಂಥಹ ಕ್ರಾಂತಿಕಾರಕ ವಿಚಾರಗಳನ್ನು ತಿಳಿದುಕೊಳ್ಳಲು ಕನ್ನಡ ದೇಶವಲ್ಲದೇ ಬೇರೆ ದೇಶಗಳ ಜನರು ಬಸವ ಮಹಾತ್ಮನ ಕಡೆಗೆ ಧಾವಿಸಿದರು. ಇದನ್ನು ಸಹಿಸದ ಬಸವ ವಿರೋಧೀಗಳು ಅಪಪ್ರಚಾರ ಪ್ರಾರಂಭಿಸಿದರು. ಇದನ್ನೇ ಬಯಸುತ್ತಿದ್ದ ಕೆಲವರು ಬಸವಣ್ಣ  ವೀರಶೈವನೆಂದು, ಅವನು ನಮ್ಮ ಶಿಷ್ಯನೆಂದು ಜನರಲ್ಲಿ ಸುಮಾರು 8 ಶತಮಾನಗಳ ಕಾಲ ಕೇವಲ ಸುಳ್ಳುಗಳನ್ನೇ ಸೃಷ್ಟಿಸಿ ಜನರಲ್ಲಿ ಅನಿವಾರ್ಯತೆಗಳನ್ನು ಬಿತ್ತಿದರು. ಅಂದರೆ ಬಸವಣ್ಣ ಕೇವಲ ವೀರಶೈವ ಧರ್ಮದ ಸುಧಾರಕ ಎಂದು ಹೇಳುವಲ್ಲಿ ಯಶಸ್ವಿಯಾದರು. ಸಮಯದ ದುರುಪಯೋಗ, ಜನರ ಮೌಡ್ಯತನದ ಸದುಪಯೋಗ ಮಾಡಿ, ಇದನ್ನೇ ನಂಬುವಂತೆೆ ಮಾಡಿದ್ದಾರೆ. ಹೆಸರಿಗೆ ಬಸವ ಭಕ್ತರು, ಆಚರಣೆ ವೀರಶೈವ. ಇದು ಚಳುವಳಿ ಮಾಡುವ ಜನರ ಅಪಹಾಸ್ಯ. ಲಿಂಗಧಾರಣೆ, ಮದುವೆ, ಮರಣ ಎಲ್ಲದರಲ್ಲೂ ವೀರಶೈವ ಧರ್ಮದ ಪ್ರಕಾರ ಆಚರಣೆ ಮಾಡುತ್ತಾರೆ. ಈಗಿನ ಮುಖ್ಯಮಂತ್ರಿಗಳು, ಪರಮ ಶಿಷ್ಯರಾದ ಮಾನ್ಯ ಎಮ್.ಬಿ.ಪಾಟೀಲ್, ವಿನಯ ಕುಲಕರ್ಣಿ, ಮಾತೆ ಮಹಾದೇವಿ ಆಚರಣೆಯಲ್ಲಿ ಮೊದಲು ವೀರಶೈವರು ನಂತರ ಹಿಂದುಗಳು. ಇದನ್ನು ಅವರ ತಂದೆ-ತಾಯಿಗಳು ಬಳುವಳಿಯಾಗಿ ಕೊಟ್ಟಿದ್ದಾರೆ. ಒಬ್ಬ ಶಾಸಕ, ಮಂತ್ರಿ ಹಾಗೂ ಮುಖ್ಯಮಂತ್ರಿ ಪ್ರಮಾಣವಚನ ಸ್ವೀಕರಿಸುವಾಗ, ಪವಿತ್ರ ಸಂವಿಧಾನದ ಪ್ರಕಾರ ಎಲ್ಲರನ್ನೂ ಸಮಭಾವದಿಂದ ನೋಡುವುದಾಗಿ ಹೇಳುತ್ತಾರೆ. ಆದರೆ ಈಗ ಚುನಾವಣೆಯ ಹೊಸ್ತಿಲಲ್ಲಿರುವಾಗ, ಅರ್ಜಿದಾರರೇ ಇಲ್ಲದ ಒಂದು ವಿವಾದಕ್ಕೆ, ಅರ್ಜಿ ಬರೆದುಕೊಂಡು ಬನ್ನಿ, ನಾನು ನಿಮಗೆ ನಿಮ್ಮ ಧರ್ಮದ ಮೀಸಲಾತಿಗೆ ಪ್ರಯತ್ನಿಸುತ್ತೇನೆ, ಎಂದು ಹೇಳುವ ಮೂಲಕ ಹಾಸ್ಯಕ್ಕೆ ಈಡಾಗಿದ್ದಾರೆ. ಈಗಿನ ಮುಖ್ಯಮಂತ್ರಿ ಮಾಜಿಯಾಗಿ ಇತಿಹಾಸದ ಪುಟದಲ್ಲಿ ಸೇರುವುದು ಎಷ್ಟು ಸತ್ಯವೋ, ವೀರಶೈವ-ಲಿಂಗಾಯತ ಇತಿಹಾಸದಲ್ಲಿ ಕೊಂಡಿ ಮಂಚಣ್ಣನಾಗಿ ಅಜರಾಮರವಾಗಿ ಹೆಸರು ನೊಂದಾಯಿಸುವುದು ಅಷ್ಟೇ ಸತ್ಯ. ಒಂದು ಸಭೆಯಲ್ಲಿ ಒಂದು ವಚನ ಹೇಳಿದರೆ ಅವನು ಬಸವ ಭಕ್ತನೇ?

ಮಾನ್ಯ ಎಮ್.ಬಿ.ಪಾಟೀಲ್ ವಿದ್ಯಾರ್ಥಿ ಜೀವನದಲ್ಲಿ ಡ್ರಗ್ ಅಡಿಕ್ಟ್ ಆಗಿ ಡಾಬಾಗಳಲ್ಲೇ ಜೀವನ ಕಳೆದದ್ದು ಅವರ ಸಹಪಾಠಿಗಳೇ ಹೇಳುತ್ತಾರೆ. ಇವರ ಪೂಜ್ಯ ತಂದೆಯವರಿಗೆ ವೀರಶೈವ-ಲಿಂಗಾಯತ ಬೇಧಭಾವ ಗೊತ್ತಿರಲಿಲ್ಲ. ಮಗನ ಬಗ್ಗೆಯೂ ತುಂಬಾ ನೊಂದುಕೊಂಡಿದ್ದರು. ಅವರ ಅಕಾಲಿಕ ಮರಣ, ಇವರು ಅರಸೊತ್ತಿಗೆ (Dynasty) ಏರಲು ಕಾರಣವಾಯಿತು. BLDE  ಇವರೊಬ್ಬರ ಸ್ವತ್ತಲ್ಲ. ಗುರುಲಿಂಗ ಜಂಗಮರಲ್ಲದೇ ಮೋಸಹೋದ ಲಕ್ಷಗಟ್ಟಲೇ ಜನರು ಶಪಿಸುತ್ತಿದ್ದಾರೆ. ಇಂಥಹ ಇತಿಹಾಸ ಹೊಂದಿದ ವ್ಯಕ್ತಿ ಬಸವ ಅನುಯಾಯಿ ಅನ್ನಬೇಕೆ?

 ಬಸವಣ್ಣನವರ ಬೆನ್ನಿಗೆ ಚೂರಿಹಾಕಿ ಅವರ ವಚನಗಳನ್ನು ತಿದ್ದಿದಾಕೆೆ, ಇದೇ ಮಾತೆ ಮಹಾದೇವಿಯ ವಿರೋಧವಾಗಿ ಇಡೀ ಶರಣ ಸಮುದಾಯ ಚಳುವಳಿ ಮೂಲಕ ಕ್ರಾಂತಿ ಮಾಡಿದಾಗ ಎಲ್ಲಿ ಹೋಗಿತ್ತು ಇವರ ಬಸವ ಭಕ್ತಿ! ನ್ಯಾಯಾಲಯ ಛೀಮಾರಿ ಹಾಕಿದರೂ ಇವರು ಇನ್ನೂ ಸುಧಾರಿಸಿಲ್ಲ. ಬಸವ ಕ್ರಾಂತಿಯ ಭಾಗವಾಗಿ ಶರಣ ಧರ್ಮ ಪ್ರಚಾರಕ್ಕೆ ನಿಮ್ಮ ಜೀವನ ಮುಡಿಪಾಗಿಟ್ಟು, ತಪ್ಪು ಮಾಡಿದ್ದೇನೆಂದು ನಿಮಗನಿಸಲಿಲ್ಲವೆ? ನಿಮ್ಮನ್ನು ನಂಬಿದ ಅಭಿಮಾನಿಗಳನ್ನು ಬಿಟ್ಟು ಸಮಯಸಾಧಕರು ಹಾಗೂ ಆಷಾಡಭೂತಿಗಳ ಜೊತೆ ಹೊಂದಾಣಿಕೆ ಮಾಡಿಕೊಂಡಿದ್ದೀರಾ? ದಿನದ 24 ಘಂಟೆ ಬಸವ ಸ್ಮರಣೆಯಲ್ಲಿರುವ ನಿಮಗೆ ಮಹಾತ್ಮಾ ಕನಸಿನಲ್ಲಿ ಬಂದಿದ್ದರಾ?

 ಚಳುವಳಿಯಲ್ಲಿ ಭಾಗವಹಿಸುತ್ತಿರುವ ಇನ್ನೊಬ್ಬ ಮಹಾನುಭಾವರು ಚಿತ್ರದುರ್ಗದ ಮುರುಘಾ ಶರಣರು. ಕನಕಪುರದ ಒಂದು ಸಮಾರಂಭದಲ್ಲಿ ಇವರ ಭಾಷಣದಿಂದ ತುಂಬಾ ಪ್ರಭಾವಿತನಾಗಿದ್ದೆ ಹಾಗೂ ಒಬ್ಬ ಬಸವ ಭಕ್ತನನ್ನು ಕಂಡಿದ್ದೆ. ಪಂಚಪೀಠದ ಅನುಯಾಯಿ ಮಠದ ಒಬ್ಬ ಸ್ವಾಮೀಜಿ ನಿಧನರಾದಾಗ, ಅವರ ಬಗ್ಗೆ ಒಂದು ಅಸತ್ಯದ ಲೇಖನ ಬರೆದಿದ್ದರು. ನಿಧನರಾದ ಸ್ವಾಮೀಜಿಯನ್ನು ಬಾಲ್ಯದಿಂದ ನಿಧನ ಹೊಂದುವವರೆಗೂ ಅತೀ ಸಮೀಪದಲ್ಲಿ ಕಂಡಿದ್ದ ನಾನು, ಮುರುಘಾ ಶರಣರ ಲೇಖನದಿಂದ ಮನಸ್ಸು ತುಂಬಾ ನೊಂದು, ತಕ್ಷಣ ಮುರಘರಾಜೇಂದ್ರ ಸ್ವಾಮೀಜಿಗೆ ಒಂದು ಪತ್ರ ಬರೆದು ನಿಧನರಾದ ಸ್ವಾಮೀಜಿಯ ಇತಿಹಾಸ ತಿಳಿಸಿದೆ. ಸ್ವಾಮೀಜಿ ನಿಜವಾಗಿ ಪ್ರಾಮಾಣಿಕರಾಗಿದ್ದರೆ ತಪ್ಪೊ, ಒಪ್ಪೊ, ನನಗೆ ತಿಳಿಸಬಹುದಾಗಿತ್ತು. ಆದರೆ ಹಾಗಾಗಲಿಲ್ಲ. ಅಂದರೆ ಹಣದ ವ್ಯಾಮೋಹದಿಂದಾಗಿ ಹೀಗೆ ಮಾಡಿರಬಹುದು ಅನ್ನಿಸಿತು. ಇವರು ಅಸತ್ಯವನ್ನು ಏಕೆ ಹೊಗಳಿದರು? ನಿಧನರಾದವರ ಬಗ್ಗೆ ತುಂಬಾ ಚೆನ್ನಾಗಿ ಬರೆಯುತ್ತಾರೆ ಎಂದು ಶಹಬ್ಬಾಸ್‌ಗಿರಿ ಪಡೆಯಲು ಬರೆದರಾ? ಅಂಗೈ ಹುಣ್ಣಿಗೆ ಕನ್ನಡಿ ಏಕೆ ಎಂಬಂತೆ ಇಂಥ ವ್ಯಕ್ತಿಗಳಿಂದ ಒಂದು ಮಹಾನ್ ಧರ್ಮದ ವಿಭಜನೆ ಆಗಬೇಕೆ? ನಿಜ ಜೀವನದಲ್ಲಿ ನೀವೆಷ್ಟು ಪ್ರಾಮಾಣಿಕರು ನೀವೇ ಹೇಳಿರಿ.

 ಇನ್ನು ಗದುಗಿನ ತೋಂಟದಾರ್ಯಮಠದ ಡಂಬಳ ಸ್ವಾಮಿಗಳು. ಮಾತೆ ಮಹಾದೇವಿಯವರು, ಕೂಡಲ ಸಂಗಮದ ಬದಲು ಲಿಂಗದೇವ ಅಂತಾ ತಿದ್ದುಪಡಿ ಮಾಡಿ ಬರೆದಾಗ, ನಂ.13 ರಾಷ್ಟ್ರೀಯ ಹೆದ್ದಾರಿ ಹಾಗೂ ಸಣ್ಣ ಸಣ್ಣ ಚೌಕಗಳಲ್ಲಿ ನಿಂತು ವಿರೋಧ ಮಾಡಿದಿರಿ. ಮಾತೆಯವರು ದೊಡ್ಡ ಅಪರಾಧ ಮಾಡಿದ್ದಾರೆ ಎಂದು ಹೇಳಿದ್ದಿರಿ. ಇವತ್ತೇಕೆ ಅವರ ಸೆರಗು ಹಿಡಿಯುವ ಅವಶ್ಯಕತೆ ಬಂತು? ವಚನಗಳ ತಿದ್ದುಪಡಿ ಮಾಡಿದ್ದರ ಬಗ್ಗೆ ಏನಾದರೂ ಸ್ಪಷ್ಟೀಕರಣ  ಕೊಟ್ಟಿದ್ದಾರಾ. ಜನಕ್ಕೆ ತಿಳಿಸಿ. ಶರಣರು ಕರೆದರೆ ಓ ಎನ್ನನೇ ಬಸವಣ್ಣ, ಹೇಳಿ ಶ್ರೀ ಸಿದ್ದಲಿಂಗ ಸ್ವಾಮಿಗಳೇ. ದುಷ್ಟರ ಸಹವಾಸದಿಂದ ಏನನ್ನಾದರೂ ಸಾಧಿಸಲು ಹೊರಟರೆ ಯಶಸ್ಸು ಸಿಗಬಹುದಾ?

 ಇನ್ನೊಬ್ಬ ಮಂತ್ರಿ ಶ್ರೀ ವಿನಯ ಕುಲಕರ್ಣಿ (ಧಾರವಾಡ) ಇವರ ಬಗ್ಗೆ ನನಗೆ ವಿವರವಾಗಿ ತಿಳಿದಿಲ್ಲ. ಆದರೆ ಇತ್ತೀಚೆಗೆ ಒಬ್ಬ ಜಿಲ್ಲಾ ಪಂಚಾಯತಿ ಸದಸ್ಯನ ಕೊಲೆ ಕೇಸ್‌ನಲ್ಲಿ ಆರೋಪಿಗಳಾಗಿದ್ದಾರೆ.

ಅಧಿಕಾರ ದುರುಪಯೋಗಪಡಿಸಿ ಕೊಲೆಯಾದ ಸದಸ್ಯನ ಹೆಂಡತಿಯಿಂದ ಹೇಳಿಕೆ ಹೇಳಿಸಿ ಪ್ರಕರಣವನ್ನು ಮುಚ್ಚಿಡಲು ಪ್ರಯತ್ನಿಸಿದ್ದಾರೆ ಎಂಬ ಆರೋಪವಿದೆ. ದೇವರ ದೇವ, ಜಗತ್ತಿಗೆ ಒಬ್ಬ ಶ್ರೇಷ್ಠ ದಾರ್ಶಿಕನಾಗಿ ಕೋಟಿ ಕೋಟಿ ಜನರ ಮನದಲ್ಲಿ ರಾರಾಜಿಸುವ ಅಣ್ಣ ಬಸವಣ್ಣನ ಅನುಯಾಯಿಗಳಾಗಲು, ಚಳುವಳಿ ಮಾಡುತ್ತಿರುವ ಮಹಾನುಭಾವರು ನಂಬಿಗಸ್ಥರೆ? ಅನುಭವ ಮಂಟಪದಲ್ಲಿ ಚರ್ಚೆಯಾದಂತೆ ಈಗಲೂ ಅನುಭಾವಿಗಳ ದೀರ್ಘ ಚರ್ಚೆಯ ನಂತರ ಒಂದು ನಿರ್ಧಾರಕ್ಕೆ ಬರಬಹುದು. ಕೇವಲ ನಾವು ಬೇರೆ, ನಮ್ಮ ಧರ್ಮ ಬೇರೆ, ನಮಗೆ ಸರಕಾರದ ಉಚಿತ ಸವಲತ್ತುಗಳು ಬೇಕು ಎಂದು ಮೈಕಿನಲ್ಲಿ ಕೂಗಿದರೆ ವಿಭಜನೆ ಆಗಿ ಬಿಡುತ್ತಾ. ಕಳೆದ ದಿನಗಳಲ್ಲಿ ದೃಶ್ಯ ಮಾಧ್ಯಮಗಳಲ್ಲಿ ಇವರು ಮಾಡುವ ಭಾಷಣ ಹಾಗು ಇವರ ಮುಖ ನೋಡಿ ಅಸಹ್ಯ ಎನಿಸುತ್ತಿತ್ತು.

 ಭಾಗ 2 – ಬಸವ ಭಕ್ತರು ಮುಖ್ಯವಾಗಿ ತಿಳಿಯಲೇ ಬೇಕಾದ ಸಂಗತಿಗಳು. ಈ ವಿವಾದ ಇಂದು ನಿನ್ನೆಯದು ಅಲ್ಲ. ನೂರಾರು ವರುಷಗಳಿಂದ ಬೂದಿ ಮುಚ್ಚಿದ ಕೆಂಡದಂತೆ ಕುದೀತಾನೇ ಇದೆ. ಹನ್ನೆರಡನೇ ಶತಮಾನದಲ್ಲಿ ಜಗತ್ತಿಗೇ ಮಾದರಿಯಾಗಿ ನಡೆಯುತ್ತಿದ್ದ ಅನುಭವ ಮಂಟಪಕ್ಕೆ ಸಾವಿರಾರು ಮೈಲು ದೂರದ ರಾಜ ಮಹಾರಾಜರು, ಜ್ಞಾನಿಗಳು, ಅನುಭಾವಿಗಳು ದಿನನಿತ್ಯ ಬರುತ್ತಿದ್ದರೆ, ಕನ್ನಡ ದೇಶದಲ್ಲಿಯೇ ಇದ್ದ ಪಂಚ ಪೀಠಾಧಿಪತಿಗಳು ಭಯದಿಂದ ದೂರಾಗಿಯೇ ಇದ್ದರು. ನಿಜವಾಗಿಯೂ ಅಂದು ಅಲ್ಲಿಗೆ ಹೋಗಿದ್ದರೆ ಅಣ್ಣನ ಭಕ್ತರಾಗುತ್ತಿದ್ದರು ಎಂದು ಹೆಮ್ಮೆಯಿಂದ ಹೇಳುತ್ತೇನೆ. ಅವರ ಆಡಂಬರಕ್ಕೆ, ಅಸ್ತಿತ್ವಕ್ಕೆ, ಕೊನೆಗೆ ಹೊಟ್ಟೆಗೂ ಪೆಟ್ಟು ಬೀಳಬಹುದೆಂದು ಅನುಮಾನಿಸಿದರು. ಕಲ್ಯಾಣ ಕ್ರಾಂತಿ, ಸಾವಿರಾರು ಶರಣರ ಮರಣ ಇವರಿಗೆ ವರವಾಗಿ ಪರಿಣಮಿಸಿದವು. ನಿಜ ಸಂಗತಿಯನ್ನು ಅರಿತಿದ್ದರೆ ಈಗಿರುವ ವಿವಾದ ಇಷ್ಟು ಹೆಮ್ಮರವಾಗಿ ಬೆಳೆಯುತ್ತಿರಲಿಲ್ಲ.

 ಮುಗ್ಧ ಜನರು (ವೀರಶೈವ-ಲಿಂಗಾಯತ ಭೇಧ ಭಾವ ಅರಿಯದ ಜನರು) ಇವರನ್ನು ಅಡ್ಡಪಲ್ಲಕ್ಕಿಯಲ್ಲಿ ಹೊತ್ತು, ಬೆಳ್ಳಿ ಬಂಗಾರ ಕಿರೀಟಧಾರಿಗಳಾದ ಇವರು ಮದುಮಗನ ಗತ್ತಿನಲ್ಲಿ ಮೆರವಣಿಗೆ ಮಾಡಿಸಿಕೊಳ್ಳುವುದು, ಕಡಿಮೆಯಾಗಿದೆಯೇ ಹೊರತು ಪೂರ್ತಿ ನಿಲ್ಲಿಸಿಲ್ಲ. ಪಂಚ ಪೀಠಾಧಿಕರಗಳ ಪಾದಪೂಜೆ ತುಂಬಾ ವೈಭವದಿಂದ ನಡೆಯುತ್ತದೆ. ಈ ಪೂಜೆಗೆ ಹಣ ಸಂದಾಯ ಮಾಡಿದರೇನೇ ನಿಮ್ಮ ಮನೆಗೆ ಬರುತ್ತೇನೆ ಅಂತಾ ಹೇಳಿ, ಬೆದರಿಸಿ ಪೂಜೆ ಮಾಡಿಸಿಕೊಂಡರೆ ಶಿವನು ಒಲಿಯುತ್ತಾನೆಯೇ. ಇಂತದ್ದೇ ಅನೇಕ ಕಾರಣಗಳಿಂದ ಇವರು ಜನಮಾನಸದಿಂದ ದೂರಾಗಿದ್ದಾರೆ. ಬಸವನ ಬಾಗೇವಾಡಿಯಲ್ಲಿ ಸಂಜಾತ ಒಬ್ಬ ವ್ಯಕ್ತಿ ಶ್ರೀಶೈಲ ಪೀಠಕ್ಕೆ ನಿಯುಕ್ತರಾದರು. ಊರಿನ ಜನ ಅಭಿಮಾನದಿಂದ ಸನ್ಮಾನಿಸಲು ಕರೆದರೆ ಅಗಸಿ ಬಾಗಿಲ ಮೇಲಿರುವ ಬಸವಣ್ಣನ ಫೋಟೋ ತೆಗದರೇನೇ ನಾನು ಬರುತ್ತೇನೆ ಅಂದಾಗ ನಾಗರಿಕರು ಇವರ ಮೆರವಣಿಗೆಯನ್ನು ಕೈಬಿಟ್ಟರು. ಆದರೆ ಫೋಟೋ ತೆಗೆಯಲಿಲ್ಲ. ಸುಮಾರು 35 ವರ್ಷದಿಂದ ಊರಲ್ಲಿ ಮೆರವಣಿಗೆ ಇಲ್ಲ. ಬೇರೆ ಬೇರೆ ಊರುಗಳಲ್ಲೂ ಇವರ ಬಗ್ಗೆ ಭಿನ್ನಾಭಿಪ್ರಾಯಗಳು ಇವೆ. ಬೆಂಗಳೂರಲ್ಲಿ ವೀರಶೈವ ಕ್ಷೇಮಾಭಿವೃದ್ಧಿ ಸಂಸ್ಥೆ ಇದೆ. ಬಾಗಲಕೋಟೆಯ ಒಬ್ಬ ಲಿಂಗಾಯತ ಯುವಕ SSLC ಯಲ್ಲಿ 90% ಮಾರ್ಕ್ಸ್ ಪಡೆದು, ಸ್ಕಾಲರ್‌ಶಿಪ್‌ಗಾಗಿ ಅರ್ಜಿ ಹಾಕಿದ್ದನು. ಈಗಲೂ ಅಧ್ಯಕ್ಷನಾಗಿರುವ ಶ್ರೀ ಪರಮಶಿವಯ್ಯನವರು ಹೇಳಿದ್ದೇನು ಗೊತ್ತಾ – ನೀನು ಉತ್ತರ ಕರ್ನಾಟಕದವನು, ನಿಮ್ಮ ಭಾಗದಲ್ಲಿ ಮಠಮಾನ್ಯಗಳು ತುಂಬಾ ಇವೆ. ನಾವು ಈ ಕಡೆಯ ವೀರಶೈವ ಅರ್ಜಿಗಳನ್ನು ಮಾತ್ರ ಮಾನ್ಯತೆ ಮಾಡುತ್ತೇವೆ ಎಂದು ಹೇಳಿ ಆ ವಿದ್ಯಾರ್ಥಿಯ ಅರ್ಜಿ ತಿರಸ್ಕರಿಸಿದರು. ಇಂತಹ ಮನಸ್ಥಿತಿಯನ್ನು ಹೊಂದಿದ ವೀರಶೈವರ ಜೊತೆ ಬಸವ ಆರಾಧಕರು ಒಂದಾಗ ಬೇಕಾ, ಶರಣಾಗ ಬೇಕಾ ಅಥವಾ ಧಿಕ್ಕರಿಸಬೇಕಾ, ನೀವೇ ಹೇಳಿ.

 ಲೇಖಕರು ಒಂದು ಸಾರಿ ಶ್ರೀಶೈಲಕ್ಕೆ ಹೋದಾಗ ಜಗದ್ಗುರುಗಳನ್ನು ಭೆಟ್ಟಿಯಾಗಿ ಗುರುಗಳೇ ಬಾಗೇವಾಡಿಯಲ್ಲಿ ನೀವು ಹೀಗೇಕೆ ಮಾಡಿದಿರಿ ಎಂದು ಕೇಳಿದಾಗ ಅವರ ಉತ್ತರದ ನುಡಿಗಳು ನನ್ನ ಕಿವಿಯಲ್ಲಿ ಇನ್ನೂ ಗುಂಗುಡತ್ತವೆ. ಜಗದ್ಗುರುಗಳ ಅಣ್ಣ  SSLC ವರೆಗೆ ನನ್ನ ಬಾಲ್ಯ ಸ್ನೇಹಿತರಾಗಿದ್ದರಿಂದ, ಅವರು ನನ್ನನ್ನು ಬಳಿ ಕೂಡಿಸಿಕೊಂಡು, ನೋಡಿ ಇಂದಿಗೂ ನಾವು ಮತ್ತು ಧರ್ಮ ಬದುಕಿದ್ದೇವೆ ಎಂದರೆ ಅದಕ್ಕೆ ಬಸವಣ್ಣನವರೇ ಕಾರಣ. ಅವರು ಹುಟ್ಟದಿದ್ದರೆ ನಾವು ಎಲ್ಲಿಯೋ ಒಂದು ಮೂಲೆಯಲ್ಲಿ ಇರುತ್ತಿದ್ದೆವು. ನಾವು ಊಟ ಮಾಡುವಾಗ ಮೊದಲ ತುತ್ತು ಬಸವಣ್ಣನ ಹೆಸರಲ್ಲೆ ಅಂದಾಗ ಅವರ ಮಾತು ತುಂಬಾ ಹಿತಕರವೆನಿಸಿತು. ಉಳಿದೆಲ್ಲವೂ ನಾಟಕೀಯ. ಆದರೆ ಇನ್ನೂ ಎಚ್ಚೆತ್ತುಕೊಂಡಿಲ್ಲ. ವೀರಶೈವ ಲಿಂಗಾಯತ ಜನಗಣತಿ ಮಾಡಿರುವ ಒಬ್ಬ ತಜ್ಞ  – ವೀರಶೈವ 15%,ಲಿಂಗಾಯತ 85% ಇರುವರೆಂದು ಹೇಳಿದ್ದಾರೆ. ಈ 85% ಜನ ಇನ್ನೆಷ್ಟು ದಿನ ಕತ್ತಲಲ್ಲಿ ಇರಬೇಕು.

 ಪರಿಹಾರ – ಪ್ರಚಲಿತ ವಿವಾದ ಲಿಂಗಾಯತರಿಂದ ಪ್ರಾರಂಭವಾಗಿಲ್ಲ. ಅದು ವೀರಶೈವರಿಂದ ಎಂಬುದು ಎಲ್ಲರಿಗೂ ತಿಳಿದಿದೆ. ಇದು ಕಟು ಸತ್ಯ. ಈ ಚುನಾವಣೆಯ ಸಂದರ್ಭದಲ್ಲಿ ಇದು ಪರಿಹಾರ ಕಾಣದಿದ್ದರೂ, ಕಾಲ ಗತಿಸಿದಂತೆ, ಧರ್ಮಸಭೆಗಳಲ್ಲಿ ವಿಚಾರ ವಿನಿಮಯಗಳ ನಂತರ ಲಿಂಗಾಯತರು ಬೇರೆಯಾಗುವರು. ಪರಿಸ್ಥಿತಿ ವಿಕೋಪಕ್ಕೆ ಹೋಗದಂತೆ ತಡೆಯಬೇಕಾದವರು ತಡೆಯಿರಿ. ಎಚ್ಚರವಾಗಿರಿ. ಯಾವುದೇ ಕಾರಣಕ್ಕೂ ನಾವು ಹಿಂದುಗಳಲ್ಲ ಎಂದು ಹೇಳದಿರಿ. ನಮಗೆ ದೇಶ ಮೊದಲು. ನಂತರ ಬರುವುದು ನಾವು ನಂಬಿದ ಧರ್ಮ. ನಮ್ಮ ಸಂಸ್ಕೃತಿ ವಿಶಾಲವಾದದ್ದು. ಮಾದರಿಯಾದದ್ದು. ಎಂದಿಗೂ ನಾವು ಇದರ ಭಾಗವಾಗಿರಬೇಕು. ಬಸವಣ್ಣವನವರು ಕೇವಲ ಲಿಂಗಪೂಜೆ ಹೇಳಿದ್ದರಿಂದ, ವೀರಭದ್ರ, ವಿನಾಯಕ, ಹನುಮ, ಯಲ್ಲಮ್ಮ, ತಿರುಪತಿ ತಿಮ್ಮಪ್ಪ, ರೇಣುಕಾ ಯಲ್ಲಮ್ಮ, ಮಂಜುನಾಥ, ಸುಬ್ರಮಣ್ಯ, ಇಂತಹ ಸಾವಿರಾರು ದೇವರ ಪೂಜೆ ನಿಲ್ಲಿಸಿಬಿಡುವಿರಾ. ವಿನಯ(ಕು) ಮಲ್ಲಣ್ಣ(ಪಾ) ಸಿದ್ರಾಮಣ್ಣ ನೀವು ಬಸವ ಭಕ್ತರಾ! ಲಿಂಗ ಪೂಜೆ ಮಾಡುತ್ತೀರಾ? ನಿಮ್ಮದಲ್ಲದ ಧರ್ಮವನ್ನು ವಿಭಾಗಿಸಲು ಏಕೆ ಪ್ರಯತ್ನಿಸುವಿರಿ?

 

   

Leave a Reply