ವೀರೇಂದ್ರ ಹೆಗ್ಗಡೆಯವರಿಗೆ ಹಿಂ.ಜಾ.ವೇ ಅಭಿನಂದನೆ

ದಕ್ಷಿಣ ಕನ್ನಡ - 0 Comment
Issue Date : 13.05.2015

ಮಂಗಳೂರು(ಧರ್ಮಸ್ಥಳ):ಹಿಂದು ಜಾಗರಣ ವೇದಿಕೆ ವತಿಯಿಂದ ಶ್ರೀಧರ್ಮಸ್ಥಳದ ಧರ್ಮಾಧಿಕಾರಿಗಳಾದ ಡಾ. ವೀರೇಂದ್ರ ಹೆಗ್ಗಡೆಯವರಿಗೆ ಭಾರತ ಸರ್ಕಾರ ಪದ್ಮವಿಭೂಣ ಪ್ರಶಸ್ತಿ ನೀಡಿದ ನೆನಪಿಗಾಗಿ ಹಾಗೂ ಅವರು ಸಾಮಾಜಿಕ ಕಾರ್ಯ, ದೇವಸ್ಥಾನಗಳ ಜೀರ್ಣೋದ್ಧಾರ, ಹಿಂದು ಸಂಘಟನೆಗಳಿಗೆ ಬೆಂಬಲ, ದೀನದಲಿತ ಸೇವೆಯಲ್ಲಿ ತಮ್ಮನ್ನು ತಮ್ಮ ಸಂಸ್ಥೆಯನ್ನು ತೊಡಗಿಸಿದ್ದಕ್ಕೆ ಏ. 27ರಂದು ಅಭಿನಂದಿಸಿ ಬಿನ್ನವತ್ತಳೆಯನ್ನು ಅರ್ಪಿಸಲಾಯಿತು.
ಈ ಸಂದರ್ಭದಲ್ಲಿ ಹೆಗ್ಗಡೆಯವರು ಮಾತನಾಡಿ, ‘ಶ್ರೀಕ್ಷೇತ್ರ ಧರ್ಮಸ್ಥಳ ಟ್ರಸ್ಟ್ ವತಿಯಿಂದ ಸಾವಿರಾರು ಸ್ವಸಹಾಯ ಕೇಂದ್ರದ ಸಹಾಯದಿಂದ ಹೆಣ್ಣುಮಕ್ಕಳು ತಮ್ಮ ಕುಟುಂಬವನ್ನು ಗೌರವಯುತವಾಗಿ ನಡೆಸುವಂತಾಗಿದೆ. ಕರ್ನಾಟಕದ ನೂರಾರು ಗ್ರಾಮಗಳಲ್ಲಿ ಜೀರ್ಣವಾಗಿದ್ದ ಪುರಾತನ (ಸಣ್ಣದಿರಲಿ – ದೊಡ್ಡದಿರಲಿ) ದೇವಾಲಯಗಳನ್ನು ದೇವಾಲಯ ಟ್ರಸ್ಟ್ ಮೂಲಕ ಜೀಣೋದ್ಧಾರ ಮಾಡಿಸಿದ್ದೇವೆ. ಅದೇ ರೀತಿ ಆರೋಗ್ಯಕ್ಕೆ ಕೇಂದ್ರ ಶಾಲಾ, ಕಾಲೇಜು ನಡೆದಿವೆ’ ಎಂದರು.
ಹಿಂದು ಜಾಗರಣ ವೇದಿಕೆ ಕರ್ನಾಟಕದಲ್ಲಿ ಹಿಂದು ಜಾಗೃತಿ, ಸಂಘಟನೆ ಮೂಲಕ ಧರ್ಮ ರಕ್ಷಣೆ ಮಾಡುತ್ತಿದೆ. ಈ ಕಾರ್ಯವನ್ನು ಧರ್ಮಸ್ಥಳ ಶ್ರೀಕ್ಷೇತ್ರ ಮರೆಯುವುದಿಲ್ಲ ಎಂದರು. ಈ ಸಂದರ್ಭದಲ್ಲಿ ವೇದಿಕೆ ರಾಜ್ಯ ಸಂಚಾಲಕರಾದ ಜಗದೀಶ್ ಕಾರಂತ, ರಾಜ್ಯ ಕೋಶಾಧ್ಯಕ್ಷರಾದ ನಾಗೇಂದ್ರ ಪ್ರಸಾದ್, ಕರ್ನಾಟಕ ಉತ್ತರ ಪ್ರಾಂತ ಸಂಘಟನಾ ಕಾರ್ಯ ಸೂ. ಕೃಷ್ಣಮೂರ್ತಿ ಮುಂತಾದ ವೇದಿಕೆಯ ಪದಾಧಿಕಾರಿಗಳು ಭಾಗಹಿಸಿ ವೀರೇಂದ್ರ ಹೆಗ್ಗಡೆ ಅವರಿಗೆ ಅಭಿನಂದಿಸಿ ಆಶೀರ್ವಾದ ಪಡೆದರು.

   

Leave a Reply