ಶಹೀದ್‌ ಭಗತ್‌ಸಿಂಗ್‌ ದಿನಾಚರಣೆ

ಹುಬ್ಬಳ್ಳಿ - 0 Comment
Issue Date : 21.10.2013

ವಿಶ್ವ ಹಿಂದೂ ಪರಿಷತ್‌, ಬಜರಂಗದಳದ ವತಿಯಿಂದ ಹಳೆ ಹುಬ್ಬಳ್ಳಿಯ ಕೋಟಾರಗೇರಿ ಓಣಿಯಲ್ಲಿ ಹುತಾತ್ಮ ಭಗತ್‌ಸಿಂಗ್‌ ಅವರ 107ನೇ ಜಯಂತಿಯನ್ನು ಆಚರಿಸಲಾಯಿತು. ಅಧ್ಯಕ್ಷತೆಯನ್ನು ಸಿದ್ದಾರೂಢ ನಿಂಬಣ್ಣ ಶೆಟ್ಟರ್ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಮಾಜಿ ಮಹಾಪೌರ ಡಾ.ಪಾಂಡುರಂಗ ಪಾಟೀಲ್‌ ಅವರು ಭಗತ್‌ಸಿಂಗ್‌ ಜೀವನದ ರೋಚಕ ಘಟನೆಗಳನ್ನು ಮನಮುಟ್ಟುವಂತೆ ಹೇಳಿದರು.

ಈಗಿನ ಯುವಜನತೆ ಭಗತ್‌ಸಿಂಗ್‌ ಅವರ ಆದರ್ಶಗಳನ್ನು ಪಾಲಿಸಬೇಕೆಂದು ಶ್ರೀಮತಿ ರಾಧಾಬಾಯಿ ನಂದು ಸಪಾರೆ ಅವರು ಕರೆ ನೀಡಿದರು. ವಿಹಿಂಪ ಕರ್ನಾಟಕ ಉತ್ತರಪ್ರಾಂತ ಕಾರ್ಯದರ್ಶಿ ರಮೇಶ್‌ ಕುಲಕರ್ಣಿ, ಗಣು ಜರತಾರಘರ್, ಶ್ರೀರಾಮ ಬದ್ರನಜೀ, ಜಯತೀರ್ಥಕಟ್ಟಿ, ಸುಲಕೇಶ ಸಿಂಗ್‌, ದಾಮೋದರ ಕೋಸ್ಮಿ, ಮಹೇಶ್‌ ಮೋರೆ ಮೊದಲಾದವರು ಪಾಲ್ಗೊಂಡಿದ್ದರು. ಪ್ರತೀಕ ಮುತಾಲಿಕ್‌ ಕಾರ್ಯಕ್ರಮ ನಿರೂಪಿಸಿದರು. ಕು.ಜೀವನ ಪಟದಕಲ್ಲ ವಂದಿಸಿದರು.

   

Leave a Reply