ಶಾಲೆಗಳು ಸಾಮಾಜಿಕ ಉತ್ಥಾನದ ಕೇಂದ್ರಗಳಾಗಲಿ: ಭಯ್ಯಾಜಿ ಜೋಶಿ

ಪ್ರಚಲಿತ - 0 Comment
Issue Date : 14.04.2015

ಅಹಮದಾಬಾದ್: ಜಗತ್ತಿನ ಮುಂದೆ ವರ್ತಮಾನ ಕಾಲದಲ್ಲಿ ಎದುರಾಗಿರುವ ಹಲವು ಬಗೆಯ ಸವಾಲು ಗಳಿಗೆ ಭಾರತ ಪರಿಹಾರವನ್ನು ಒದಗಿಸುತ್ತಿದೆ. ಅನೇಕ ಬಗೆಯ ಸವಾಲುಗಳ ನಡುವೆಯೂ ನಾವು ನಮ್ಮ ಅಸ್ತಿತ್ವವನ್ನು ಉಳಿಸಿಕೊಳ್ಳುವಲ್ಲಿ ಸಫಲರಾಗಿದ್ದೇವೆ. ಇದಕ್ಕೆ ಕಾರಣ ನಮ್ಮ ವಿಕೇಂದ್ರಿತ ಸಾಮಾಜಿಕ ವ್ಯವಸ್ಥೆ. ನಮ್ಮ ಧಾರ್ಮಿಕ ಕ್ಷೇತ್ರಗಳ ಮೇಲೆ ಆಕ್ರಮಣಗಳು ನಡೆದಿವೆ. ಆದರೆ ನಮ್ಮ ಸಾಮಾಜಿಕ ಸಂರಚನೆಯ ಮೇಲೆ ಅದು ಯಾವುದೇ ದುಷ್ಪರಿಣಾಮ ಬೀರಿಲ್ಲ ಎಂದು ಆರೆಸ್ಸೆಸ್ ಸರಕಾರ್ಯವಾಹ ಭಯ್ಯಾಜಿ ಜೋಶಿ ಅವರು ಇಲ್ಲಿ ಸೇರಿದ್ದ ಸ್ವಯಂಸೇವಕರ ಸಮಾವೇಶವನ್ನುದ್ದೇಶಿಸಿ ಹೇಳಿದರು.
ಸಂಘ ಸಂಸ್ಥಾಪಕ ಡಾ. ಕೇಶವಬಲಿರಾಂ ಹೆಡಗೇ ವಾರ್ ಅವರ 126ನೇ ಜಯಂತಿ ಅಂಗವಾಗಿ ನಡೆದ ಸಮಾವೇಶದಲ್ಲಿ ಅವರು ಮಾತನಾಡಿದರು. ನಮ್ಮ ಶಾಲೆಗಳು ವ್ಯಕ್ತಿ ನಿರ್ಮಾಣದ ಕೇಂದ್ರಗಳಾಗಬೇಕು. ಶಿಕ್ಷಣ ಎನ್ನುವುದು ವ್ಯಾಪಾರೀಕರಣವಾಗದೆ ಮನುಷ್ಯ ನಿರ್ಮಾಣದಲ್ಲಿ ಪ್ರಮುಖ ಪಾತ್ರವಹಿಸಬೇಕು. ಶಿಕ್ಷಣ ಸಂಸ್ಥೆಗಳು ಕೇವಲ ವೈದ್ಯರು, ಇಂಜಿನಿಯರ್‌ಗಳ ನಿರ್ಮಾಣ ಕೇಂದ್ರವಾಗದೆ ಸಾಮಾಜಿಕ ಉತ್ಥಾನದ ಕೇಂದ್ರಗಳಾಗಬೇಕು ಎಂದರು.
ಜಾತಿ ಭಾವನೆಯನ್ನು ದೂರಗೊಳಿಸಿ: ಹೊಸಬಾಳೆ
ವರ್ಷಪ್ರತಿಪದ ದಿನವಾದ ಯುಗಾದಿಯಂದು ಭುವನೇಶ್ವರದಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದ ಸಂಘದ ಸಹ ಸರಕಾರ್ಯವಾಹ ದತ್ತಾತ್ರೇಯ ಹೊಸಬಾಳೆ ಅವರು, ಜಾತಿ ಭಾವನೆಯನ್ನು ತೊಲಗಿಸಲು ನಾವೆಲ್ಲರೂ ಶ್ರಮಿಸಬೇಕು. ಸಮಾಜದಲ್ಲಿ ಜಾತೀಯತೆ ಎಲ್ಲರ ಭಾವನೆಗಳನ್ನು ಘಾಸಿಗೊಳಿಸಿದೆ. ಕುಂಭಮೇಳ, ಹೋಟೆಲ್, ರೆಸ್ಟೋರೆಂಟ್‌ಗಳು, ಬಸ್ಸು, ರೈಲು ಅಥವಾ ಸಾಮಾಜಿಕ ಹಬ್ಬ ಹರಿದಿನಗಳ ಸಂದರ್ಭದಲ್ಲಿ ಜನರು ಯಾವುದೇ ಜಾತಿ ಭೇದ ತೋರದೆ ಪಾಲ್ಗೊಳ್ಳುತ್ತಾರೆ. ಆದರೆ ತಮ್ಮ ವೈಯಕ್ತಿಕ ಜೀವನದಲ್ಲಿ ಮಾತ್ರ ತದ್ವಿರು ದ್ಧವಾಗಿ ವರ್ತಿಸುತ್ತಾರೆ. ಈ ಆಷಾಢಭೂತಿತನ ಕೊನೆಗೊ ಳ್ಳಬೇಕು ಎಂದರು. ಸಂಘದಲ್ಲಿ ಜಾತಿ ಭಾವನೆಗೆ ಅವಕಾಶ ಇಲ್ಲ. ಸಮಾಜದಲ್ಲಿ ಅಂತಹ ಭಾವನೆಯನ್ನು ದೂರಗೊಳಿಸಲು ಸಂಘ ಶ್ರಮಿಸುತ್ತಿದೆ ಎಂದ ಅವರು, ಇಲ್ಲಿ ಬ್ರಿಟಿಷರ ರಾಜ್ಯವಿದ್ದಾಗ, ಜನರನ್ನು ಒಡೆದಾಳಲು ಅವರು ಈ ಜಾತಿಭಾವನೆಯನ್ನು ಎತ್ತಿ ಕಟ್ಟಿದರು ಎಂದು ದೂರಿದರು.
ಸಾಮಾಜಿಕ ಸಾಮರಸ್ಯ ನಿರ್ಮಾಣ ನಮ್ಮ ಹೊಣೆ
ಸೂರತ್ತಿನಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಾತನಾ ಡಿದ ಸಹ ಸರಕಾರ್ಯವಾಹ ಡಾ. ಕೃಷ್ಣಗೋಪಾಲ್ ಅವರು, ಸಮಾಜದಲ್ಲಿ ಸಾಮಾಜಿಕ ಸಾಮರಸ್ಯ ನಿರ್ಮಾಣದ ಹೊಣೆ ಸ್ವಯಂಸೇವಕರದ್ದು ಎಂದರು. ಡಾ. ಹೆಡಗೇವಾರ್ ಅವರು ಸಾಮರಸ್ಯ ಭರಿತ ಸಮಾಜದ ನಿರ್ಮಾಣಕ್ಕೆ ಬುನಾದಿ ಹಾಕಿದರು. ಅವರು ಯಾವುದೇ ಶಾಲೆ, ಕಾಲೇಜು ಅಥವಾ ಅನಾಥಾಲ ಯಗಳನ್ನು ಪ್ರಾರಂಭಿಸಲಿಲ್ಲ. ಕೇವಲ ಕೆಲವು ದೇಶ ಭಕ್ತರು ಅಥವಾ ಮಹಾಪುರುಷರಿದ್ದ ಮಾತ್ರಕ್ಕೆ ದೇಶದ ಭವಿಷ್ಯ ಬದಲಾಗುವುದಿಲ್ಲ ಎಂದು ಡಾ. ಹೆಡಗೇವಾರ್ ಹೇಳುತ್ತಿದ್ದರು. ದೇಶಭಕ್ತರ ಸೈನ್ಯವನ್ನು ನಿರ್ಮಿಸಲು ಅವರು ಪಣತೊಟ್ಟರು. ತನ್ಮೂಲಕ ಸಂಘಟನೆಯನ್ನು ಕಟ್ಟಿದರು ಎಂದು ಕೃಷ್ಣಗೋಪಾಲ್ ನುಡಿದರು.

   

Leave a Reply