ಶ್ರದ್ಧೆ  ವಿನಾಶದಿಂದ ವಿಕಾಸದೆಡೆಗೆ ಸಾಗುವ ರಾಜಮಾರ್ಗ

ಲೇಖನಗಳು - 0 Comment
Issue Date :

-ಎಸ್. ಆನಂದ್

ಅದೊಂದು ಊರು. ಮೇ ತಿಂಗಳ ಉರಿಬಿಸಿಲು. ಸುಡುವ ಟಾರ್ ರಸ್ತೆ. ಒಬ್ಬ ತಾಯಿ ಕೈಯಲ್ಲಿ ಪೂಜಾ ಸಾಮಗ್ರಿಗಳನ್ನು ಹಿಡಿದುಕೊಂಡು ದೇವಸ್ಥಾನಕ್ಕೆ ಹೊರಟಿದ್ದಾಳೆ. ಜೊತೆಗೆ ಆಕೆಯ ಪುಟ್ಟ ಮಗುವೂ ಇದೆ. ಸುಡುವ ರಸ್ತೆ, ಮಗುವಿಗೆ ಕಾಲಿಡಲಾಗುತ್ತಿಲ್ಲ. ಅಮ್ಮ ಎತ್ತಿಕೊ ಒಂದೇ ಹಠ. ಅಮ್ಮ ಹೇಳ್ತಾಳೆ- ಮಗೂ ನಾವು ದೇವರ ಬಳಿ ಹೊರಟಿದ್ದೇವೆ ತಾನೇ? ನಡೆದುಕೊಂಡೇ ಹೋಗಬೇಕು. ಮಮತೆಯ ಮಡಿಲಿನಿಂದ ಬಂದ ಮಾತು ಅದು. ಅಮ್ಮ ಚಪ್ಪಲಿಯನ್ನಾದರೂ ಹಾಕಿಕೊಳ್ತೀನಿ. ಅಮ್ಮ, ಮಗೂ ದೇವರಿಗೆ ಹೋಗುವಾಗ ಬರಿಗಾಲಲ್ಲಿ ಹೋಗಬೇಕಲ್ವೇನಪ್ಪ. ಚಪ್ಪಲಿ ಹಾಕಿಕೊಳ್ಳಬಾರದು. ಅಮ್ಮನ ಮಾತು ಚಮತ್ಕಾರದಂತೆ ಕೆಲಸ ಮಾಡಿತು. ಅದುವರೆಗೆ ಸುಡುಸುಡುವ ರಸ್ತೆಯಲ್ಲಿ ಕಾಲಿಡಲಾರದೇ ಕುಣಿದಾಡುತ್ತಿದ್ದ ಮಗು, ಶಾಂತವಾಗಿ ನಡೆಯಲಾರಂಭಿಸಿತು. ಶ್ರೃದ್ಧೆ ಜಾಗೃತವಾದಾಗ ಕಂಡುಬರುವ ಚಮತ್ಕಾರ ಇದು. ಈ ಚಮತ್ಕಾರದ ಹಿಂದೆ ಬರಿಗಾಲಿನಲ್ಲಿ ನಡೆಯುತ್ತಿದ್ದ ತಾಯಿಯ ಆದರ್ಶದ ಬಲವೂ ಇದೆ.

 ಇನ್ನೊಂದು ಊರು. ಬರಗಾಲದಿಂದ ಕಂಗೆಟ್ಟ ಊರು ಅದು. ಭರವಸೆಯನ್ನೇ ಕಳೆದುಕೊಂಡು ಹತಾಶೆ, ನಿರಾಶೆಯೇ ಸುತ್ತಲೂ ಆವರಿಸಿದ್ದ ದಿನಗಳು. ಶಿವನಿಗೆ ಅಭಿಷೇಕ ಮಾಡಿ. ಮಳೆ ಬರುತ್ತದೆ ಎಂದು ತಿಳಿದವರೊಬ್ಬರು ಆಡಿದ ಭರವಸೆಯ ನುಡಿ. ನಿರಾಶೆಯ ಕಾರ್ಮೋಡಗಳ ನಡುವೆಯೂ ಬೆಳ್ಳಿಯ ಒಂದು ರೇಖೆ ಗೋಚರಿಸಿದ ಅನುಭವ ಹಳ್ಳಿಗರಿಗೆ. ಸರಿ, ಸಿದ್ಧತೆ ಆರಂಭವಾಯಿತು. 4 ಕಿ.ಮೀ ದೂರದ ಶಿವನ ದೇವಸ್ಥಾನಕ್ಕೆ ಜನ ದೂರ ದೂರದಿಂದ ಅಭಿಷೇಕಕ್ಕಾಗಿ ನೀರನ್ನು ಹೊತ್ತು ತಂದರು. ಮನೆ-ಮನೆಗಳಿಂದ ಎಲ್ಲರೂ ಅಂದು ಶಿವಾಲಯದೆಡೆಗೆ ಹೊರಟರು. ಒಂದು ಮನೆ. ಮನೆಯ ಮುಂದೆ ಅಪ್ಪ, ಅಮ್ಮ, ಅಜ್ಜ, ಅಜ್ಜಿ ಎಲ್ಲರೂ ಹೊರಟುನಿಂತಿದ್ದಾರೆ. ಮಗ-ಬಾಲಕ, ಬೇಗ ಬರಲಿಲ್ಲ. ಏನ್ ಮಾಡ್ತಾ ಇದೀಯಾ, ಬೇಗ ಬಾ ಮಗಾ, ತಡವಾಯಿತು. ತಾಯಿಯ ಕೂಗಿಗೆ ಏದುಸಿರು ಬಿಡುತ್ತ ಬಂದ ಪುಟ್ಟ ಮಗನ ಕೈಯಲ್ಲಿ ಛತ್ರಿ. ಏನಿದು? ಛತ್ರಿ ಏಕೆ ತಂದೆ? ಅಮ್ಮನ ಪ್ರಶ್ನೆಗೆ, ಅಮ್ಮ, ಇಂದು ಮಳೆಗಾಗಿ ಅಭಿಷೇಕ ಅಲ್ವೇನಮ್ಮ. ಅಭಿಷೇಕ ಆದ ಮೇಲೆ ಮಳೆ ಬರುತ್ತೆ ಅಲ್ವಾ. ಅದಕ್ಕೆ ಛತ್ರಿ ತಂದೆ. ಎಂದ ಮಗ. ಅಬ್ಬಾ ! ಎಂಥ ನಂಬಿಕೆ ಇದು. ನಂಬಿ ಕೆಟ್ಟವರಿಲ್ಲವೋ, ಹೇ ಮನುಜಾ! ನಂಬಿ ಕೆಟ್ಟವರಿಲ್ಲವೋ ಎನ್ನುವ ಮಾತಿನಂತೆ ನಡೆದೇ ಹೋಯಿತು. ಪುಟ್ಟ ಬಾಲಕನ ನಂಬಿಕೆ ಹುಸಿಯಾಗಲಿಲ್ಲ. ಶಿವನಿಗೆ ಅಭಿಷೇಕವಾಗುತ್ತಿದ್ದಂತೆ ಧೋ ಎಂದು ಮಳೆ ಸುರಿಯಿತು. ಎಲ್ಲರ ಕಣ್ಣುಗಳು ಆ ಮಳೆಯಲ್ಲೂ ತುಂಬಿ ಬಂದಿದ್ದವು.

 ಹೌದು. ಶ್ರದ್ಧೆ ಮನುಷ್ಯನನ್ನು ಎತ್ತುರ್ಕೆ ಕೊಂಡೊಯ್ಯುತ್ತುದೆ. ಸಾಮಾನ್ಯನು ಅಸಾಮಾನ್ಯನಾಗಿ, ಮಾನವನು ಮಹಾಮಾನವನಾಗಿ, ಪುರುಷನು ಪುರುಷೋತ್ತುಮನಾಗಿ ಬೆಳೆಯಲು ಶ್ರದ್ಧೆ ಬೇಕೇ ಬೇಕು.

 ಶ್ರದ್ಧೆ ಇಲ್ಲದೇ ಬದುಕಿಲ್ಲ. ಪ್ರೃತಿಯೊಬ್ಬ ವ್ಯೃಕ್ತಿಯೂ ಒಂದಲ್ಲ ಒಂದು ಶ್ರದ್ಧೆಯನ್ನು ಹೊಂದಿರುತ್ತಾನೆ.

 ಶ್ರದ್ಧೆಯ ಆಧಾರ ಬಲವಾಗಿರಬೇಕು. ಅದು ಸ್ವಚ್ಛ, ಸುಂದರ ಮತ್ತು ಪವಿತ್ರುವಾಗಿರಬೇಕು. ಶುದ್ಧವಾದ ನೀರನ್ನು ತುಂಬಿಡಲು ಅಗತ್ಯವಾದ ಪ್ರಾತ್ರೆ ಸ್ವಚ್ಛವಾಗಿಯೇ ಇರಬೇಕು. ಒಂದು ಸಾಧಾರಣ ಬಟ್ಟೆಯನ್ನು ತಗುಲಿಹಾಕುವ ಮೊಳೆಯೂ ಭದ್ರವಾಗಿರಬೇಕು, ಇಲ್ಲವಾದರೇ ಬಟ್ಟೆ ಬಿದ್ದು ಹೋಗುತ್ತುದೆ. ಮೇಲಿನಿಂದ ಹಾರಬೇಕೆಂದಾಗಲೂ ಕೆಳಗೆ ನೆಲ ಗಟ್ಟಿಯಾಗಿದೆ ಎಂಬ ವಿಶ್ವಾಸವಿರಬೇಕು.

 ಶ್ರದ್ಧೆ, ನಿಷ್ಠೆ ಬೆಳೆಯುವುದು ಪವಿತ್ರು ಆಚರಣೆಯಿಂದ ಮಾತ್ರು. ಸತ್ಯುದ ಬಗ್ಗೆ ನ್ಠಿೆ ಮತ್ತು ನಿಃಸ್ವಾರ್ಥ ಆಚರಣೆಗಳೇ ಶ್ರೃದ್ಧೆಯ ಮೂಲ. ಸಮರ್ಥರಾಮದಾಸರ ಶಿಷ್ಯನಾಗಿದ್ದ ಒಬ್ಬ ಸಾಮಾನ್ಯ ವ್ಯಕ್ತಿ ಶ್ರೃದ್ಧೆಯಿಂದ ಕಲ್ಯಾಣನಾದ, ಭಗವಂತನ ಸಾಕ್ಷಾತ್ಕಾರ ಮಾಡಿಕೊಂಡ. ಎಲ್ಲರ ಅಪಹಾಸ್ಯಕ್ಕೆ ಗುರಿಯಾಗಿದ್ದ, ಮೂಢನೆಂದೇ ಹೆಸರಾದ ಶಂಕರರ ಶಿಷ್ಯ ಶ್ರೃದ್ಧೆಯಿಂದಾಗಿ ಜ್ಞಾನಿಯಾದ. ತೋಟಕಾಚಾರ್ಯನೆಂದೇ ಪ್ರೃಸಿದ್ಧನಾದ.

 ಪವಿತ್ರು ಆಚರಣೆಗೆ ಇನ್ನೊಂದು ನಿಬಂಧನೆ ಇದೆ. ಮನ-ವಚನ-ಕರ್ಮಗಳಲ್ಲಿ ಏಕರೂಪತೆ ಇರಬೇಕು. ಮನಸ್ಸಿನಲ್ಲಿದ್ದದ್ದೇ ಮಾತಿನಲ್ಲಿ ಪ್ರೃಕಟವಾಗಬೇಕು. ಮಾತಿನಲ್ಲಿ ಪ್ರೃಕಟವಾದದ್ದೇ ಕೃತಿಯಲ್ಲಿ ಕಾಣಬೇಕು. ಗೀತೆಯಲ್ಲಿ ಭಗವಂತ ಇದನ್ನೇ ಈ ರೀತಿ ಹೇಳಿದ್ದಾನೆ.

 ಮನಸ್ಯೇಕಂ ವಚಸ್ಯೇಕಂ ಕರ್ಮಣ್ಯೇಕಂ ಮಹಾತ್ಮನಃ ಹೀಗಾದಾಗ ಮಾತ್ರು ಆಚರಣೆಗಳು ಪವಿತ್ರುವಾಗುತ್ತವೆ. ಇಂಥವರೇ ಮಹಾತ್ಮುರಾಗುತ್ತಾರೆ. ದೇವರನ್ನು ನಂಬುವುದೇ ಅಂಧಶ್ರೃದ್ಧೆ ಎನ್ನುವವರು ನಮ್ಮಲ್ಲಿ ಇದ್ದಾರೆ. ದೇವರಿಲ್ಲ ಎನ್ನುವುದು, ದೇವರಿದ್ದಾನೆ ಎನ್ನುವುದಕ್ಕಿಂತ ಹೆಚ್ಚಿನ ಅಂಧಶ್ರೃದ್ಧೆ ಎನ್ನಬಹುದು. ನಾನು ಯಾರು?. ಎಲ್ಲಿಂದ ಬಂದೆ? ಎಂಬಿತ್ಯಾದಿ ತನ್ನ ಬಗ್ಗೆ ಮತ್ತು ವಿಶಾಲವಾದ ಈ ವಿಶ್ವೃ ಮತ್ತು ಬ್ರಹ್ಮಾಂಡವನ್ನು ತೃಣಮಾತ್ರುವೂ ಅರಿಯದವನು ಇಡೀ ಬ್ರಹ್ಮಾಂಡವನ್ನು ನಿಯಂತ್ರಿಸುವ ಶಕ್ತಿಯ ಅರಿವೇ ಇಲ್ಲದವನು ದೇವರಿಲ್ಲ ಎಂದರೆ ಅದಕ್ಕಿಂತ ಅಂಧಶ್ರೃದ್ಧೆ ಇನ್ನಾವುದಿರಬಲ್ಲದು.

 ಶ್ರೃದ್ಧಾವಾನ್ ಲಭತೇ ಜ್ಞಾನಂ ಇದು ಗೀತೆಯಲ್ಲಿ ಭಗವಂತನ ಇನ್ನೊಂದು ಮಾತು. ಶ್ರೃದ್ಧೆಯಿಂದ ಜ್ಞಾನ, ಜ್ಞಾನದಿಂದ ಶಾಂತಿ ಲಭಿಸುತ್ತುದೆ. ಆದ್ದರಿಂದ ಶ್ರೃದ್ಧೆಯನ್ನು ಬಾಲ್ಯದಿಂದಲೇ ಬೆಳೆಸಬೇಕು. ಶ್ರದ್ಧೆಯಿಂದಲೇ ಸಂಸ್ಕಾರ, ಶ್ರದ್ಧೆಯಿಂದಲೇ ಎಲ್ಲ ಸದ್ಗುಣಗಳು ಅರಳುತ್ತುವೆ. ವ್ಯಕ್ತಿತ್ವ ವಿಕಾಸದ ಅಡಿಗಲ್ಲೇ ಶ್ರದ್ಧೆ.

 ಶ್ರದ್ಧೆಯಿಂದಲೇ ಎಲ್ಲ ಶಕ್ತಿ ಸಾಮಥ್ಯರ್ಗಳು ಪ್ರಾಪ್ತೃವಾಗುತ್ತುವೆ. ಶ್ರೃದ್ಧೆಯ ಕಾರಣದಿಂದಲೇ ಮನುಷ್ಯ ಈ ಎಲ್ಲವನ್ನೂ ತನ್ನ ಸ್ವಪ್ರಯತ್ನದಿಂದ ಕಲಿಯುತ್ತಾನೆ, ಮೇಲೇರುತ್ತ ಹೋಗುತ್ತಾನೆ.

 ಶ್ರದ್ಧೆ ಮತ್ತ್ತು ಬುದ್ಧಿ ಎರಡೂ ಪರಸ್ಪರ ಪೂರಕ. ಬುದ್ಧಿಯಿಂದ ಶ್ರೃದ್ಧೆ ಇನ್ನಷ್ಟ್ಟು ದೃಢವಾಗುತ್ತುದೆ. ಶ್ರದ್ಧೆಯಿಂದ ಕೂಡಿದ ಬುದ್ಧಿ ಲೋಕಕಲ್ಯಾಣ್ಕೆ ಕಾರಣವಾದರೆ – ಶ್ರದ್ಧೆ ಇಲ್ಲದ ಬುದ್ಧಿ ವಿನಾಶಕಾರಿಯಾಗುತ್ತುದೆ. ಶಂಕರಾಚಾರ್ಯ, ವಿವೇಕಾನಂದ ಪ್ರಖರ ಬುದ್ಧಿಮ್ತೆ ಉಳ್ಳವರಾಗಿದ್ದರೂ ಸಾಜದಲ್ಲಿ ಶ್ರದ್ಧೆಯನ್ನು ಬೆಳೆಸುವಲ್ಲಿ ಮಹತ್ವುದ ಪಾತ್ರ ವಹಿಸಿದರು. ಗೀತೆಯ 3ನೇ ಅಧ್ಯಾಯದಲ್ಲಿ ಶ್ರೀಕೃಷ್ಣ, ನಬುದ್ಧಿಭೇದಂ ಜನಯೇತ್…. ಎಂದು ತಿಳಿಸುತ್ತಾ

 ಇನ್ನೊಬ್ಬರ ನಂಬಿಕೆಯನ್ನು ಕಂಡು ಅಪಹಾಸ್ಯ ಮಾಡಬಾರದು, ನಗಬಾರದು ಎಂಬ ಎಚ್ಚರಿಕೆಯನ್ನೂ ಕೊಟ್ಟಿದ್ದಾನೆ. ದುರ್ಬಲ ಶ್ರೃದ್ಧೆಯೂ ಅಶ್ರದ್ಧೆಯೆಂದೇ ಪರಿಗಣಿಸಲ್ಪಡುತ್ತದೆ. ಶರೀರದ ಮೇಲಿನ ಮೋಹ ಮತ್ತು ಆತ್ಮುತತ್ವುದ ಉಪೇೆಯಿಂದ ಅಶ್ರದ್ಧೆ ಹುಟ್ಟುತ್ತದೆ. ಅಶ್ರದ್ಧೆಯ ಮೂಲ ಅಹಂಕಾರ. ಅಹಂಕಾರದಿಂದ ಇಂದ್ರಿಯ ಮೋಹ. ಈ ಇಂದ್ರಿಯ ಮೋಹವು ಮನುಷ್ಯನನ್ನು ಇಂದ್ರಿಯಗಳ ದಾಸನನ್ನಾಗಿ ಮಾಡುತ್ತದೆ.

 ಇಂದ್ರಿಯಗಳ ದಾಸ್ಯ ಪುನಃ ಅಶ್ರದ್ಧೆಯನ್ನೇ ಹೆಚ್ಚಿಸುತ್ತುದೆ. ಈ ರೀತಿಯ ವಿಷಚಕ್ರೃದೊಳಗೆ ಸಿಲುಕಿದವನು ದುರ್ಗುಣಗಳ ಆಗರವೇ ಆಗಿಹೋಗುತ್ತಾನೆ. ಪರಿಣಾಮ ವಿನಾಶ. ಮತ್ತೆ ಗೀತೆಯಲ್ಲಿ ಶ್ರೀಕೃಷ್ಣ, ಸಂಶಯಾತ್ಮಾ ವಿನಶ್ಯತಿ ಎಂದು ಹೇಳಿರುವುದು ಇದೇ ಕಾರಣಕ್ಕಾಗಿ.

 ಈ ಸಂಶಯ ಪ್ರವೃತ್ತಿಯ ಕಾರಣದಿಂದಲೇ ಸಮಾಜದಲ್ಲಿಂದು ಕುಟುಂಬಗಳು ಒಡೆಯುತ್ತಿವೆ. ವಿವಾಹ ವಿಚ್ಛೇದನಗಳು ಹೆಚ್ಚುತ್ತಿವೆ. ಸಂಸ್ಥೆಗಳಲ್ಲಿ ಒಡಕು ಮೂಡುತ್ತಿದೆ. ಈ ವಿನಾಶದಿಂದ ಸಮಾಜವನ್ನು ಉಳಿಸಲು ಇರುವ ಒಂದೇ ದಾರಿ – ಶ್ರದ್ಧೆಯನ್ನು ಬೆಳೆಸುವುದು.

 ತನ್ನ ಮೇಲೆ ತನಗೆ ಶ್ರೃದ್ಧೆ, ಪರಮಾತ್ಮನ (ಅಥವಾ ಅವ್ಯಕ್ತೃ ಶಕ್ತಿ) ಬಗ್ಗೆ ಶ್ರೃದ್ಧೆ, ತಂದೆತಾಯಿಗಳು ಹಾಗೂ ಗುರು ಹಿರಿಯರ ಬಗ್ಗೆ ಶ್ರೃದ್ಧೆ, ಪೂರ್ವಜರ ಬಗ್ಗೆ ಶ್ರದ್ಧೆ, ಸಮಾಜದ ಬಗ್ಗೆ ಶ್ರದ್ಧೆ – ಭಾರತದ ಬಗ್ಗೆ ಶ್ರೃದ್ಧೆ, ಗಿಡ ಮರ, ಪಶು ಪಕ್ಷಿಗಳ ಬಗ್ಗೆ ಶ್ರೃದ್ಧೆ ಹೀಗೆ ಎಲ್ಲದರ ಬಗ್ಗೆ ಶ್ರದ್ಧೆ ಬೆಳೆಸಬೇಕು.

 ಭಗವಂತ ಎಲ್ಲವನ್ನೂ ನನ್ನಿಂದ ಮಾಡಿಸುತ್ತಿದ್ದಾನೆ, ನಾನು ಅವನ ಕೈಯೊಳಗಿನ ಒಂದು ಉಪಕರಣ ಮಾತ್ರ.  ನಾನು ಮಾಡುವುದೆಲ್ಲವೂ ಅವನ ಪೂಜೆ ಎಂಬ ಶ್ರದ್ಧೆಯನ್ನು ಇಂದು ಬೆಳೆಸಬೇಕಾಗಿದೆ. ನಾನು ನಡೆದಾಡುವುದೆಲ್ಲವೂ ಪ್ರೃದಕ್ಷಿಣೆ, ನಾನಾಡುವ ಮಾತು ನಿನ್ನ ಕುರಿತ ಸ್ತುತಿ, ನಾನು ಸ್ವೀಕರಿಸುವ ಆಹಾರ ನಿನಗೆ ಸಲ್ಲಿಸುವ ನೈವೇದ್ಯ, ನಾ ಮಾಡುವ ನಿದ್ದೆ ನಿನ್ನನ್ನು ಕುರಿತು ನಾ ಮಾಡುವ ಧ್ಯಾನ.

‘ನನ್ನೊಳು ನನ್ನದು ಏನೂ ಇಲ್ಲ, ಇರುವುದೆಲ್ಲ ನೀನೇ’ ಎಂಬ ಶ್ರದ್ಧೆೆಯೇ ಭಾರತವನ್ನು ಸ್ವರ್ಗವಾಗಿ ಮಾಡುವ ಸುಂದರ ಮಾರ್ಗ.

 

   

Leave a Reply